ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಇಲ್ಲಿನ ಸುರಭಿ ಕಲಾ ಸಂಸ್ಥೆಯ ರಂಗಸುರಭಿಯ ಆಶ್ರಯದಲ್ಲಿ ಬೈಂದೂರಿನ ರೋಟರಿ ಕ್ಲಬ್ ಮತ್ತು ‘ಹಂಬಲ’ ಥೀಯೆಟರ್‌ನ ಸಹಕಾರದೊಂದಿಗೆ ‘ವಿಶ್ವ ರಂಗಭೂಮಿ’ ದಿನಾಚರಣೆಯನ್ನು ಆಚರಿಸಲಾಯಿತು. ಉದ್ಘಾಟನೆಯನ್ನು ಬೈಂದೂರು ರೋಟರಿ ಕ್ಲಬ್‌ನ ಅಧ್ಯಕ್ಷ ಶ್ರೀ ಕೃಷ್ಣಪ್ಪ ಶೆಟ್ಟಿಯವರು ಉದ್ಘಾಟಿಸಿ ರಂಗಕರ್ಮಿಗಳಿಗೆ ಶುಭ ಹಾರೈಸಿದರು. ಸುರಭಿ ಕಲಾವಿದ ಶಿಕ್ಷಕ ಶ್ರೀ ರಾಘು ಮುದ್ರ ಕಾಲ್ತೋಡು ಸ್ವಾಗತಿಸಿ ರಂಗ ನಿರ್ದೇಶಕ ಶ್ರೀ ಗಣೇಶ ಮೊಂಡಾಡಿ ರಂಗಭೂಮಿ ಸಂದೇಶ ವಾಚಿಸಿದರು. ಈ ಸಂದರ್ಭದಲ್ಲಿ ಕಲಾವಿದ ಶ್ರೀನಾದ (ಭಾಸ್ಕರ) ಮಣಿ ನಾಲ್ಕೂರು ಬಂಟ್ವಾಳ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರೋಟರಿಯ ಖಜಾಂಚಿ ಶ್ರೀ ವೆಂಕಟೇಶ ಕಾರಂತ್ ಹಾಗೂ ‘ಹಂಬಲ’ ಥೀಯೆಟರ್‌ನ ಶ್ರೀ ಯೋಗಿಶ್ ಬಂಕೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದು ಸುರಭಿಯ ಶ್ರೀ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಿಶೇಷ ಕಾರ್ಯಕ್ರಮವಾಗಿ ಕಲಾವಿದ ನಾದಮಣಿ ನಾಲ್ಕೂರುರವರ ‘ನಾದ-ಅರಿವಿನ ಗೀತೆಗಳು’ ಕಾರ್ಯಕ್ರಮ ಮೂಡಿ ಬಂದಿತು. ಡೋಲಕ್‌ನಲ್ಲಿ ಕಲಾವಿದ ಸಂತೋಷ ಸಹಕರಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಕಿಶೋರ್ ಶೆಟ್ಟಿ ಮತ್ತು ಸಚಿನ್ ಶೆಟ್ಟಿ ಸ್ಮರಣಾರ್ಥ ಕುಂದಾಪುರದ ಓಂ ಫ್ರೆಂಡ್ಸ್ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಸಿದ್ದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮರವಂತೆಯ ಗುರುರಾಜ ಬಿಲ್ಲವ ಮತ್ತು ಕುಂದಾಪುರದ ಚೈತ್ರಾ ಜೋಡಿ ಮೊದಲ ಸ್ಥಾನ ಗಳಿಸಿ ನಗದು 20,000 ಮತ್ತು ಪಾರಿತೋಷಕ ಹಾಗೂ ದ್ವಿತೀಯ ಬಹುಮಾನ 10,000 ಮತ್ತು ಪಾರಿತೋಷಕವನ್ನು ತೆಂಕನಿಡಿಯೂರಿನ ಶಾಲಿನಿ ಶೆಟ್ಟಿ ಮತ್ತು ಚೇರ್ಕಾಡಿಯ ಪ್ರಜೇಶ ನಾಯ್ಕ್ ಜೋಡಿ ಪಡೆಯಿತು. ಮೊದಲ ಹಂತದ ಸ್ಪರ್ಧೆಯಲ್ಲಿ ಅಂಕ ಗಳಿಕೆಯ ಆಧಾರದಲ್ಲಿ ಮೊದಲ ಐವರು ಪುರುಷರನ್ನು ಮತ್ತು ಐವರು ಮಹಿಳೆಯರನ್ನು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಮಾಡಲಾಗಿತ್ತು, ಅವರನ್ನು ತಲಾ ಒಬ್ಬ ಪುರುಷ ಹಾಗೂ ಮಹಿಳೆ ಇರುವ ಐದು ತಂಡಗಳಾಗಿ ಮಾಡಿ ಅಂತಿಮ ಸ್ಪರ್ಧೆ ನಡೆಸಲಾಯಿತು. ಭಾನುವಾರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ ಮಲ್ಲಿ ಬಹುಮಾನ ವಿತರಿಸಿದರು. ತೆಕ್ಕಟ್ಟೆಯ ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಗ್ರಾಮೀಣ ಭಾಗದಲ್ಲಿ ಕಲಾತಂಡವನ್ನು ಕಟ್ಟಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನೂ ಮೂಡಿಸಿರುವ ಲಾವಣ್ಯ ಸಂಸ್ಥೆಯೂ ರಾಜ್ಯ ರಾಜಧಾನಿಯಲ್ಲಿಯೂ ಅಪಾರ ಪ್ರೇಕ್ಷಕವರ್ಗದವರನ್ನು ಹೊಂದಿದೆ. ಇದು ಸಂಸ್ಥೆಯ ಪ್ರಬುದ್ಧ ಕಲಾಭಿನಯವನ್ನು ಸೂಚಿಸುತ್ತದೆ ಎಂದು ಬೈಂದೂರು ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ ಹೇಳಿದರು. ಅವರು ಲಾವಣ್ಯ ಬೈಂದೂರು ಇದರ ನೂತನ ಮೇಲಂತಸ್ತಿನ ಕಟ್ಟಡ ಉದ್ಘಾಟಿಸಿದ ಬಳಿಕ ರಂಗಪಂಚಮಿ2018 ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾವಣ್ಯ ಅಧ್ಯಕ್ಷ ಗಿರೀಶ್ ಬೈಂದೂರು ಇವರು ವಹಿಸಿದ್ದರು. ಬೈಂದೂರು ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ ಇವರು ನೂತನ ಕಟ್ಟಡ ಉದ್ಘಾಟಿಸಿದರು. ಸಂದೀಪನ್ ಆಂಗ್ಲಮಾಧ್ಯಮ ಶಾಲೆ, ನಾಗೂರು ಇದರ ಮುಖ್ಯೋಪಾಧ್ಯಾಯರಾದ ಬಿ.ವಿಶ್ವೇಶ್ವರ ಅಡಿಗ ಬಿಜೂರು ರಂಗ ಪಂಚಮಿ ಉದ್ಘಾಟನೆ ಮಾಡಿದರು. ಭೂಮಿಕಾ ಹಾರಾಡಿ ಇದರ ಸಂಚಾಲಕರಾದ ಬಿ.ಎಸ್.ರಾಮ ಶೆಟ್ಟಿ ಶುಭಶಂಸನೆ ಹೇಳಿದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಮುಂಬೈ ಉದ್ಯಮಿ ಗೋವಿಂದ ಬಾಬು ಪೂಜಾರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಂಡಾರ್‌ಕಾರ‍್ಸ್ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ ತೃತೀಯ ಬಿಎಸ್ಸಿ ವಿದ್ಯಾರ್ಥಿಗಳ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಸ್ಪರ್ಧೆಯಲ್ಲಿ ವಿವಿಧ ತರಗತಿಗಳ 8 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಗೂ ಮೊದಲು ಕಾಲೇಜಿನ ಆಡಳಿತ ಮಂಡಳಿಯ ಅದ್ಯಕ್ಷರಾದ ಡಾ.ಹೆಚ್.ಶಾಂತಾರಾಮ್ ಕಾರ‍್ಯಕ್ರಮವನ್ನು ಉದ್ಘಾಟಿಸಿದರು. ಅಲ್ಲದೇ ಕಾಲೇಜಿನ ಕುರಿತು ವಿದ್ಯಾರ್ಥಿ ಸಜಿತ್ ನಿರ್ಮಾಣದ ಸಮನ್ವಯ ಮತ್ತು ವಿದ್ಯಾರ್ಥಿಗಳಾದ ಶಿವರಾಜ್ ಮತ್ತು ಕೀರ್ತನ್ ನಿರ್ಮಾಣದ ಸೆಕ್ಟ್ರಮ್ 2ಕೆ18 ಎಂಬ ಎರಡು ಸಾಕ್ಷ್ಯಚಿತ್ರಗಳನ್ನು ಉದ್ಘಾಟಿಸಿದರು. ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ ವಿವಿಧ ತರಗತಿಗಳ 8 ತಂಡಗಳು ಭಾಗವಹಿಸಿದ್ದವು. ಬಹುಮಾನ ವಿತರಣಾ ಸಮಾರಂಭದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ . ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಉದಯ ಗಾಂವಂಕರ, ಸುಬ್ರಮಣ್ಯ ಶೆಟ್ಟಿ ಮತ್ತು ಡಾ.ರಜನಿ ರಾವ್ ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಅರುಣಾಚಲ ಮಯ್ಯ ಮತ್ತು ಲಲಿತಕಲಾ ಸಂಘದ ಸಂಚಾಲಕರಾದ ಮಮತಾ ಕೆ.ಎಸ್ ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘದ ಅದ್ಯಕ್ಷರಾದ ರಾಜೀವ ಶೆಟ್ಟಿ ಮಾತನಾಡಿ, ಮೊದಲು ಜೀವನವೆಂಬ ಪರೀಕ್ಷೆಯಲ್ಲಿ ಪಾಸಾಗುವುದರೊಂದಿಗೆ ಮಾನವೀಯರಾಗಬೇಕು. ಇಂದಿನ ಗ್ರಾಮೀಣ ಭಾರತದ ಕನಸು ನನಸಾಗಬೇಕಿದ್ದರೆ ವಿದ್ಯಾವಂತರೆನಿಸಿಕೊಂಡವರು ಗ್ರಾಮೀಣ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕು. ತಮ್ಮ ಜ್ಞಾನದ ನೆಲೆಗಳನ್ನು ಬಳಸಿಕೊಂಡು ಉತ್ತಮ ಮಾನವ ಸಂಪನ್ಮೂಲಗಳಾಗಿ ದೇಶಕ್ಕೆ ಆಸ್ತಿಯಾಗಬೇಕು.ಇದಕ್ಕೆಲ್ಲ ಇಚ್ಛಾಶಕ್ತಿ. ನಿಶ್ಚಿತ ಗುರಿಸಾಧನೆ ಸಾಧಿಸುವ ಛಲ ಮತ್ತು ಒಳ್ಳೆಯ ಸಂಸ್ಕಾರಗನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶಕ್ಕೆ ಸಮಾಜಕ್ಕೆ ಕೊಡುಗೆಯಾಗಿರಬೇಕು. ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅದ್ಯಕ್ಷರಾದ ಡಾ.ಹೆಚ್.ಶಾಂತಾರಾಮ್ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಅರುಣಾಚಲ ಮಯ್ಯ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಯುಕೆಜಿ ಮಕ್ಕಳ ಪದವಿ ಪ್ರದಾನ ಸಮಾರಂಭ ಮಂಗಳವಾರ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ರಶ್ಮಿ ಕುಂದಾಪುರ ಪ್ರೊಫೆಸರ್.ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಮಂಗಳೂರು ಇವರು ಆಗಮಿಸಿದ್ದರು. ಈ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಭಯವಿಲ್ಲದೇ ಎಲ್ಲರ ಮುಂದೆ ಬಂದು ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಳ್ಳುವುದು ನಿಜಕ್ಕೂ ಪ್ರಶಂಸನೀಯ. ಅದರಲ್ಲೂ ಅವರ ನಿಷ್ಕಲ್ಮಶ ನಗು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದೆ. ಅದೇ ರೀತಿ 5 ವರ್ಷದೊಳಗಿನ ಮಕ್ಕಳಿಗೆ ಬೇಕಿರುವುದು ಕೇವಲ ನಮ್ಮ ಪ್ರೀತಿ ಅದನ್ನು ಮಕ್ಕಳು ತಮ್ಮ ಮನೆಯ ಸದಸ್ಯರಿಂದ ಪಡೆಯಬಹುದು ಆದರೆ ಮಕ್ಕಳು ಶಾಲೆಗೆ ಬಂದಾಗ ಸಮಾಜದ ಜೊತೆ ಹೇಗೆ ಬೆರೆಯಬೇಕು ಎಂಬುವುದನ್ನು ಕಲಿಯುವುದರ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಹೊರ ಹಾಕಲು ಶಾಲೆ ಅವರಿಗೆ ವೇದಿಕೆಯನ್ನು ರೂಪಿಸುತ್ತದೆ. ನಂತರ 5ರಿಂದ 10 ವರ್ಷದ ಮಕ್ಕಳಿಗೆ ಪ್ರೀತಿಯ ಜೊತೆಗೆ ಶಿಸ್ತುಬದ್ದ ಜೀವನದ ಕುರಿತು ಸಮರ್ಪಕ ರೀತಿಯಲ್ಲಿ ಮಾಹಿತಿಕೊಟ್ಟಾಗ ಮುಂದೆ ಮಕ್ಕಳು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ದಲಿತರ ಅಭಿವೃದ್ಧಿಯ ಸ್ಲೋಗನ್ ಅಡಿಯಲ್ಲಿ ಸಾಕಷ್ಟು ಸಂಘಟನೆಗಳು ಇದ್ದರೂ ದಲಿತರೂ ಇನ್ನೂ ಮುಖ್ಯವಾಹಿನಿಗೆ ಯಾಕೆ ಬರಲಾಗುತ್ತಿಲ್ಲ ಎನ್ನುವುದನ್ನು ಪ್ರತಿಯೊಬ್ಬ ದಲಿತನೂ ಅರಿತುಕೊಳ್ಳಬೇಕಾಗಿದೆ. ನಾಯಕರ ಹಿಂದೆ ಹೋಗುವ ಸಂಪ್ರದಾಯವನ್ನು ಬಿಟ್ಟು, ಸಮಗ್ರ ಶಿಕ್ಷಣವನ್ನು ಮೈಗೂಡಿಸಿಕೊಂಡು ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಜೀವನ ಶಿಕ್ಷಣವನ್ನು ಪಡೆದುಕೊಂಡಾಗ ದಲಿತರು ತಮ್ಮನ್ನು ತಾವು ಮುಖ್ಯವಾಹಿನಿಯತ್ತ ಸಾಗಲು ಸಾಧ್ಯ ಎಂದು ಕಾಳಾವರ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಮೋಹನಚಂದ್ರ ಕಾಳಾವರ ಹೇಳಿದ್ದಾರೆ. ಕಾಳಾವರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಲಿತ ಜಾಗೃತ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಮೇಣದ ಬತ್ತಿ ಬೆಳಗಿಸಿ ಮಾನಾಡಿದ ಉಪನ್ಯಾಸಕ ಪತ್ರಕರ್ತ ಸುಧಾಕರ ವಕ್ವಾಡಿ, ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುವುದಕ್ಕೆ ಮೊದಲು ಅಂಬೇಡ್ಕರವರನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಈ ಮೂರು ಪ್ರಮುಖ ಅಂಶಗಳಾದರೆ ಅಂಬೇಡ್ಕರ್ ಅವರ ಪಂಚ ಸೂತ್ರಗಳನ್ನು ದಲಿತ ನಾಯಕರು ದಲಿತರಿಗೆ ತಿಳಿಸಿ ಹೇಳಬೇಕು. ಸಂವಿಧಾನಬದ್ಧವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಪಡುವರಿ ಗ್ರಾಪಂನ 2017-18ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಕೋಟೆಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಮಾರ್ಗದರ್ಶಿ ಅಧಿಕಾರಿ ಪ್ರಕಾಶ್ ಉಪಸ್ಥಿತಿಯಲ್ಲಿ ನಡೆಯಿತು. ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸದಾಶಿವ ಪಡುವರಿ ಗ್ರಾಮಸಭೆಯ ಮಹತ್ವ ಹಾಗೂ ಗ್ರಾಮದ ಅಭಿವೃದ್ಧಿಯ ಸಾಧನೆ ಮತ್ತು ಮುಂದಿನ ದಿನಗಳಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈಪಂ ಸದಸ್ಯ ಸುರೇಶ್ ಬಟ್ವಾಡಿ, ತಾಪಂ ಸದಸ್ಯೆ ಗಿರಿಜಾ ಖಾರ್ವಿ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಶೇ.25ರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ವಿಶೇಷ ಸವಲತ್ತು ವಿತರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ:ದೇಶದ ಅತಿ ದೊಡ್ಡ ತರಬೇತಿ ಸೊಸೈಟಿ ಎಂಬ ಹೆಗ್ಗಳಿಕೆಯಿರುವ ಇಂಡಿಯನ್ ಸೊಸೈಟಿ ಆಫ್ ಟ್ರೈನಿಂಗ್ ಎಂಡ್ ಡೆವಲಪ್ಮೆಂಟ್ನ 53 ನೇ ಶಾಖೆಯು (ಮಂಗಳೂರು-ಉಡುಪಿ) ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು . ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಐಎಸ್ಟಿಡಿ ಬೆಂಗಳೂರು ಶಾಖೆಯ ಅಧ್ಯಕ್ಷೆ ಡಾ.ಮೀರಾ ವೆಂಕಟ್ ಭಾಗವಹಿಸಿ, ಆಳ್ವಾಸ್ನಲ್ಲಿ ಐಎಸ್ಟಿಡಿ ಶಾಖೆ ಪ್ರಾರಂಭವಾಗುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಟಿ.ಸಿ ಸುಜಿತ್ ಮಾತನಾಡಿ , ವಿದ್ಯಾರ್ಥಿಗಳು ಮಾನವ ಸಂಬಂಧಗಳನ್ನು ಬಲಪಡಿಸುವತ್ತ ವಿಶೇಷ ಗಮನ ಹರಿಸಬೇಕೆಂದರು.ಐಎಸ್ಟಿಡಿ ಸಲಹೆಗಾರ ವರಹಸ್ವಾಮಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ ಶುಭ ಹಾರೈಸಿದರು. ಮಂಗಳೂರು – ಉಡುಪಿ ಶಾಖೆಯ ಅಧ್ಯಕ್ಷ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಡೀನ್ ಪೆÇ್ರ. ಪಿ ರಾಮಕೃಷ್ಣ ಚಡಗ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುದತ್ತ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು. ಧರ್ಮಾನಂದ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಟುಗಳಿಗೆ ಉಪನಯನ ದೀಕ್ಷೆ ಅತ್ಯಂತ ಪವಿತ್ರ ಕಾರ್ಯವಾಗಿದೆ.ಈ ದೀಕ್ಷೆ ಪಡೆದ ವಟುಗಳು ಜೀವನ ಧರ್ಮಗಳ ಮೌಲ್ಯವನ್ನು ಅರಿತು ನಡೆಯಬೇಕು.ಆಚಾರ-ವಿಚಾರಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಕುಂದಾಪುರ ವ್ಯಾಸರಾಜ ಮಠದ ಪುರೋಹಿತ ವಿಜಯ ಪೇಜತ್ತಾಯ ಹೇಳಿದರು. ಅವರು ಭಾನುವಾರ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಕುಂದಾಪುರ ವ್ಯಾಸರಾಜ ಮಠದಲ್ಲಿ ನಡೆದ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನ,ಸಾಮೂಹಿಕ ಸತ್ಯನಾರಾಯಣ ಪೂಜೆ,ಶ್ರೀ ರಾಮ ನವಮಿ ಆಚರಣೆಯ ಸಂದರ್ಭದಲ್ಲಿ ಧಾರ್ಮಿಕ ಸಂದೇಶ ನೀಡಿ ಮಾತನಾಡಿದರು. ಶ್ರೀ ರಾಮ ಒಬ್ಬ ಆದರ್ಶ ಪುರುಷ.ಶ್ರೀ ರಾಮ ತನಗೆ ಬಂದ ಕಷ್ಟವನ್ನು ನಗುಮೊಗದಿಂದ ಸ್ವೀಕರಿಸಿ,ನಂಬಿದ ಮೌಲ್ಯಗಳನ್ನು ಕಾಯ್ದುಕೊಂಡು ಬಂದವ.ಶ್ರೀ ರಾಮ ನವಮಿ ಆಚರಣೆಯ ಮೂಲಕ ಅವನ ಆದರ್ಶವನ್ನು ಪಾಲಿಸಬೇಕು ಎಂದರು.ಸಮಾಜದ ೩೬ ವಟುಗಳಿಗೆ ಉಪನಯನ ಮಾಡಲಾಯಿತು.ಇದೇ ಸಂದರ್ಭದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಕೊಗ್ಗ ಗಾಣಿಗ,ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ್,ಕೋಶಾಧಿಕಾರಿ ಪರಮೇಶ್ವರ…
