Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಯುವ ಸಂಸತ್ತು ವಿಭಾಗೀಯ ಮಟ್ಟದ ಭಾಷಣ ಸ್ಪರ್ಧೆಯು ಜಿಲ್ಲಾಧಿಕಾರಿಯವರ ಕಛೇರಿಯ, ವಿಡೀಯೊ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಿತು. ಉಡುಪಿ ಜಿಲ್ಲೆಯು ನೊಡೆಲ್ ಕೇಂದ್ರವಾಗಿದ್ದು, ಇದರ ಆಶ್ರಯದಲ್ಲಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಹಾಗೂ ಉಡುಪಿ ಜಿಲ್ಲೆಯ 18 ರಿಂದ 25 ವರ್ಷದೊಳಗಿನ 38 ಯುವ ಜನರು ಆನ್‌ಲೈನ್ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಜಿಲ್ಲೆಯಿಂದ ಶ್ರೇಯಸ್ ಜಿ ಕೋಟ್ಯಾನ್ ಹಾಗೂ ಶೆರ್ಲಿನ್ ಡಿ ಆಲ್‌ಮೇಡಾ ವಿಜೇತರಾಗಿದ್ದು, ಜನವರಿ 5 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಫರ್ದೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸ್ಪರ್ಧೆಯ ತೀರ್ಪುಗಾರರಾಗಿ ಉಡುಪಿ ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವಿಜಯ್, ಕುಂದಾಪುರ ಭಂಡಾರ್‌ರ‍್ಸ್ ಕಲೆ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎ ಪ್ರವರ್ಗದ ಅಧಿಸೂಚಿತ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಜನವರಿ 15 ರಂದು ಬೆಳಗ್ಗೆ 10.30 ರಿಂದ 11.15 ರ ವರೆಗೆ ನಡೆಯಲಿದ್ದು, ಅರ್ಜಿ ಸಲ್ಲಿಸಲು ಜನವರಿ 7 ಕೊನೆಯ ದಿನ ಹಾಗೂ ಜನವರಿ 20 ರಂದು ಬೆಳಗ್ಗೆ 10.15 ರಿಂದ 10.45 ರ ವರೆಗೆ ವಿವಾಹ ನಡೆಯಲಿದ್ದು, ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದೆ. ಫೆಬ್ರವರಿ 17 ರಂದು ಬೆಳಗ್ಗೆ 12 ರಿಂದ 12.30 ರ ವರೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 8 ಕೊನೆಯ ದಿನ ಹಾಗೂ ಫೆಬ್ರವರಿ 25 ರಂದು ಬೆಳಗ್ಗೆ 10.30 ರಿಂದ 11ರ ವರೆಗೆ ಸಾಮೂಹಿಕ ವಿವಾಹ ನಡೆಯಲಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ. ಜಿಲ್ಲೆಯ ಎ ಪ್ರವರ್ಗದ ಅಧಿಸೂಚಿತ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮಹಿಳೆಯರು ಸಬಲರಾದಾಗ ಸಮಾಜದಲ್ಲಿ ಮಹಿಳೆಯರು ಉನ್ನತ ಮಟ್ಟಕ್ಕೇರಲು ಸಾಧ್ಯವಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸ್ವ ಉದ್ಯೋಗ ಮತ್ತಿತರ ಚಟುವಟಿಕೆಗಳಿಂದ ತೊಡಗಿಸಿಕೊಳ್ಳುವುದು ಅಗತ್ಯ. ಸರಕಾರ ಮಹಿಳೆಯರ ವಿವಿಧ ಕಾರ್ಯಕ್ರಮ, ತರಬೇತಿಗಳನ್ನು ಹಮ್ಮಿಕೊಂಡು ವಿವಿಧ ಯೋಜನೆಗಳ ಮೂಲಕ ಅನುದಾನ ನೀಡುತ್ತಿದೆ. ಇದರ ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮಹಿಳೆಯರು ಮುಂದಾಗಬೇಕು ಎಂದು ಉಡುಪಿ ನೆಹರು ಯುವಕೇಂದ್ರದ ಯುವ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಹೇಳಿದರು. ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಮತ್ತು ಮಾರಿಕಾಂಬಾ ಮಹಿಳಾ ಸಹಕಾರಿ ಸಂಘ ಗುಜ್ಜಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿದ ಉಚಿತ ಟೈಲರಿಂಗ್ ತರಬೇತಿ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಮಾರಿಕಾಂಬಾ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್, ಚೈತನ್ಯ ಸ್ತ್ರೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರು ಗುಡ್ಡೆಯಂಗಡಿಯ 17 ವರ್ಷದ ಬಾಲಕಿಗೆ 28 ವರ್ಷದ ಹುಡುಗನೊಂದಿಗೆ ತ್ರಾಸಿ ಮಹಾಗಣಪತಿ ಸಭಾಭವನದಲ್ಲಿ ಮದುವೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ, ಪೊಲೀಸ್ ಇಲಾಖೆ ಗಂಗೊಳ್ಳಿ, ಗ್ರಾಮ ಪಂಚಾಯತ್ ತ್ರಾಸಿಯ ಅಧಿಕಾರಿಗಳ ತಂಡ ಸುಮಾರು 200 ಮಂದಿ ಸೇರಿದ್ದ ಮದುವೆ ಹಾಲಿಗೆ ಹಠಾತ್ ಭೇಟಿ ನೀಡಿ ಬಾಲ್ಯವಿವಾಹವನ್ನು ತಡೆದಿದ್ದಾರೆ. ಈ ಸಂದರ್ಭ ಎರಡೂ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಬಾಲ್ಯವಿಹಾಹ ನಿಷೇದ ಮತ್ತು ತಡೆಗಟ್ಟುವಿಕೆ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು. ಕುಟುಂಬಿಕರಿಂದ ಮತ್ತು ಹಾಲ್ ಮಾಲಿಕರು ಮತ್ತು ಪುರೋಹಿತರಿನಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು. ಮದುವೆಗೆ ಬಂದವರೆನ್ನೆಲ್ಲಾ ವಾಪಸು ಮನೆಗೆ ಕಳುಹಿಸಿ ಕೊಡಲಾಯಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿಯ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ 13 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಕಿರಿಮಂಜೇಶ್ವರ ಶೇಖರ ಖಾರ್ವಿ ತಿಳಿಸಿದ್ದಾರೆ. ಹಿಂದಿನ ಅವಧಿಯಲ್ಲಿ ನೀಡಿದ ಉತ್ತಮ ಆಡಳಿತದ ಫಲವಾಗಿ ವಿರೋಧ ಪಕ್ಷಗಳ ಅಪಪ್ರಚಾರದ ನಡುವೆಯೂ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆಮಾಡಿದ ಮತದಾರರಿಗೂ ಹಾಗೂ ಶ್ರಮಿಸಿದ ಕಾರ್ಯಕರ್ತರಿಗೂ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದರು. ನಮ್ಮ ತಂಡದ ಎಸ್. ಪ್ರೀತಿ ಶೆಟ್ಟಿ, ರಾಜು ಎನ್ ದೇವಾಡಿಗ, ಗೀತಾ, ಕೃಷ್ಣ,  ಸುಶೀಲಾ, ಸಂತೋಷ, ವಿಶಾಲಾಕ್ಷಿ, ರಮೇಶ ಖಾರ್ವಿ, ಸರಸ್ವತಿ ನಾಯರಿ, ಜಯಲಕ್ಷ್ಮಿ ದೇವಾಡಿಗ, ಶೇಖರ ಖಾರ್ವಿ, ವಸಂತಿ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ ► ಬೈಂದೂರು ತಾಲೂಕಿನ 15 ಗ್ರಾಮ ಪಂಚಾಯತಿಗಳ ವಿಜೇತರ ವಿವರ – https://kundapraa.com/?p=43731 . ► ಕುಂದಾಪುರ ತಾಲೂಕು 43 ಗ್ರಾಮ ಪಂಚಾಯತಿಯ ವಿಜೇತ ಅಭ್ಯರ್ಥಿಗಳ ವಿವರ – https://kundapraa.com/?p=43738 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮ ಪಂಚಾಯತ್ ಚುಣಾವಣೆಯಲ್ಲಿ ವಿಜೇತರಾದ ಕುಂದಾಪುರ ತಾಲೂಕಿನ 43 ಗ್ರಾಮ ಪಂಚಾಯತಿಗಳ ವಿಜೇತರ ಸಂಪೂರ್ಣ ವಿವರ ಆಲೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ) 14 ಸ್ಥಾನಗಳಲ್ಲಿ ಸಿಂಗಾರಿ (288), ರಾಘವೇಂದ್ರ (309), ಶ್ರೀಮತಿ (405), ಸುಬ್ಬಣ್ಣ ಶೆಟ್ಟಿ (476), ಗಂಗೆ (412), ಮಂಜುಳಾ (364), ರಾಜೇಶ್ ಎನ್ ದೇವಾಡಿಗ (436), ಜಲಜಾ ಶೆಡ್ತಿ(331), ರವಿ ಶೆಟ್ಟಿ (402), ರಾಜೇಂದ್ರ (244), ಪ್ರಮೋದ್ ಕೆ. ಶೆಟ್ಟಿ (201), ಪ್ರಸನ್ನಕುಮಾರ್ (178), ಜಯಲಕ್ಷ್ಮೀ (285), ಸುಧಾಕರ ಶೆಟ್ಟಿ (320) ವಿಜಯಿಶಾಲಿಯಾಗಿದ್ದಾರೆ. ಕೆರಾಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ) 14 ಸ್ಥಾನಗಳಲ್ಲಿ ಸುಜಾತ ನಾಯಕ್ (325), ರಾಘವೇಂದ್ರ (444), ದಿನೇಶ್ ನಾಯಕ್ (435), ಮಂಜು ಕೊಠಾರಿ (317), ಗಿರಿಜಾ ಶೆಡ್ತಿ (286), ಕುಸುಮಾ (303), ಸಂದೀಪ್ ಕುಮಾರ್ ಶೆಟ್ಟಿ (304), ಗೋವಿಂದ (360), ಸುಜಾತ (323), ಲಕ್ಷ್ಮೀ (345), ಶಶಿಕಲಾ ಮೊಗವೀರ (343), ಸುದರ್ಶನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ತಾಲೂಕಿನ 15  ಗ್ರಾಮ ಪಂಚಾಯತಿಗಳ ಅಭ್ಯರ್ಥಿಗಳ ಸಂಪೂರ್ಣ ವಿವರ ಶಿರೂರು ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ) ರಮೇಶ ಮೇಸ್ತ (242), ಲಿಂಗಪ್ಪ ಆರ್. ಮೇಸ್ತ (408), ಭಾರತಿ(344), ಮಹಮ್ಮದ್ ಶೋಯಿಬ್(390), ಮಹಮ್ಮದ್ ಅನ್ವರ್ ಹಸನ್ (467), ಶಕೀಲಾ ಅಹಮದ್ (522), ಚಂದು ಹಣಬರಕೇರಿ (247), ರವೀಂದ್ರ ಶೆಟ್ಟಿ ಪಟೇಲರಮನೆ (276), ಸಂಧ್ಯಾ ವಿಶ್ವನಾಥ (235), ಕಾವೇರಿ ಉದಯ ಪೂಜಾರಿ (220), ಆರ್ಮಕ್ಕಿ ರವೀಂದ್ರ ಶೆಟ್ಟಿ (391), ದಿ ಯು ದಿಲ್ಸಾದ್ ಬೆಗಂ (369), ಬಿಬಿ ಸಮೀನಾ (317), ಮಹಮ್ಮದ್ ಗೌಸ್ (417), ಬಾವು ಬಿಬಿ ಪಾತೀಮಾ (243), ಅಲ್ ದಿದಾ (233), ಮೌಲನ್ ಅಬ್ದುಲ್ ಸತ್ತಾರ್ (295), ರಘುರಾಮ ಮೇಸ್ತ(224), ಗೀತಾ ಮೇಸ್ತ(193), ಶಂಕರ ಮೇಸ್ತ (224), ಉಷಾ (245), ಪ್ರೇಮ (232), ನಾಗಯ್ಯ ಶೆಟ್ಟಿ (312), ಪದ್ಮಾವತಿ (437), ಪ್ರಭಾವತಿ (434), ಪ್ರಸನ್ನ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಆಳ್ವಾಸ್ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆವಹಿಸಿ ಮಾತಾನಾಡಿದ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ನಾವು ಯಾವಾಗ ಸಹಬಾಳ್ವೆಯನ್ನು ಮರೆತು ಜೀವಿಸಲು ಆರಂಭಿಸುತ್ತವೆಯೋ ಅಂದು ಪರಿಸರದ ಜತೆಗೆ ನಮ್ಮ ಸ್ಪರ್ಧೆ ಪ್ರಾರಂಭವಾಗುತ್ತದೆ. ಆ ಸ್ಪರ್ಧೆಯಲ್ಲಿ ನಮ್ಮ ಸೋಲು ಖಚಿತವಾಗಿರುತ್ತದೆ ಎಂದು ಹೇಳಿದರು. ಕೊರೊನಾ ಒಂದು ವೈರಸ್ ಇದರಿಂದ ಹೊರಬರುವ ಮಾರ್ಗಗಳು ನಮಗೆ ಇಗಾಗಲೇ ತಿಳಿದಿದೆ, ಆದರೆ ಜಗತ್ತು ಮಾರ್ಚ್ತಿಂ ಗಳನಲ್ಲೆ ಉಳಿದುಬಿಟ್ಟಿದೆ. ಪ್ರಸ್ತುತ ಪರಿಸ್ಥಿತಿ ಬದಲಾಗಿದೆ ಇದನ್ನು ನಾವೆಲ್ಲರೂ ಅರಿತು ನಮ್ಮ ಸುತ್ತಮುತ್ತಲಿನವರನ್ನು ಜಾಗೃತಗೊಳಿಸಬೇಕು. ಸಿನಿಮಾ ನೋಡಬೇಕು ಆದರೆ ಸಿನಿಮಾದಲ್ಲಿ ನಮ್ಮನ್ನು ನಾವು ನೋಡಬಾರದು ಆದರೆ ಇಂದಿನ ಯುವಪೀಳಿಗೆ ಸಿನಿಮಾ ಪಾತ್ರಗಳಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು. ಸಿನಿಮಾ ಮನುಷ್ಯನ ಜೀವನದ ಒಂದು ಭಾಗವಾಗಿರಬೇಕೇ ಹೊರತು ಅದೇ ಜೀವನವಾಗಿರಬಾರದು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲ್ಲೂಕಿನ 43 ಗ್ರಾಮ ಪಂಚಾಯಿತಿಗಳ ಒಟ್ಟು 554 ಸ್ಥಾನಗಳ ಪೈಕಿ 24 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿರುವುದರಿಂದ ಉಳಿದ 530 ಸ್ಥಾನಗಳಿಗಾಗಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇದೀಗ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆರಂಭಗೊಂಡಿದೆ. ಬೈಂದೂರು ತಾಲೂಕಿನ 259 ಸ್ಥಾನಗಳ ಪೈಕಿ 7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 252 ಸ್ಥಾನಗಳಿಗೆ ಮತ ಎಣಿಕೆ ಕಾರ್ಯ ಬೈಂದೂರು ಜ್ಯೂನಿಯರ್ ಕಾಲೇಜಿನಲ್ಲಿ ಆರಂಭಗೊಂಡಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ ಉಪಸ್ಥಿತಿಯಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಮೂಲಕ ಭದ್ರತಾ ಕೊಠಡಿಯ ಬಾಗಿಲು ತೆರೆದು ಮತ ಎಣಿಕೆ ಕಾರ್ಯ ನಡೆಯುವ ವಿವಿಧ ಕೊಠಡಿಗಳಿಗೆ ಮತ ಪೆಟ್ಟಿಗೆಯನ್ನು ಸಾಗಿಸಲಾಗಿದೆ. ಇದೀಗ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಕುಂದಾಪುರ ತಾಲೂಕಿನ 530 ಅಭ್ಯರ್ಥಿಗಳು ಹಾಗೂ ಬೈಂದೂರು ತಾಲೂಕಿನ 252 ಅಭ್ಯಥರ್ಿಗಳ ಭವಿಷ್ಯ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ಸಹಕಾರಿ ಧುರೀಣ, ಕುಂದಾಪುರ ತಾ.ಪಂ.ಮಾಜಿ ಅಧ್ಯಕ್ಷ ಎಸ್.ದಿನಕರ ಶೆಟ್ಟಿ (66) ಅವರು ಮಂಗಳವಾರ ನಿಧನರಾಗಿದ್ದಾರೆ. ಅವರು ಡಿ.29ರಂದು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಅವರು ಉಡುಪಿ ಜಿಲ್ಲೆಯ ಸಹಕಾರಿ ವ್ಯವಸ್ಥೆಯಲ್ಲಿ ಸಕ್ರಿಯರಾಗಿದ್ದರು. 25 ವರ್ಷಗಳ ಕಾಲ ಭೂ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ರಾಜ್ಯ ನಿರ್ದೇಶಕರಾಗಿ, ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಇವರು ಕಳೆದ ವರ್ಷ ಕಬ್ಬು ಬೆಳೆಗಾರರನ್ನು ಪ್ರೇರೆಪಿಸುವ ಸಲುವಾಗಿ ಹುಣ್ಸೆಮಕ್ಕಿಯಲ್ಲಿ ಆಲೆಮನೆ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದರು. ಮಾಜಿ ಶಾಸಕ ಕಾಪು ಸಂಜೀವ ಶೆಟ್ಟಿಯವರ ಪುತ್ರರಾಗಿದ್ದ ಇವರು ಶಿಕ್ಷಣ, ಸಾಮಾಜಿಕ ಕ್ಷೇತ್ರಕ್ಕೂ ವಿಶೇಷ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Read More