ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುರಭಿ ರಿ. ಬೈಂದೂರು ಮತ್ತು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಏಳು ದಿನಗಳ ಕಾರ್ಯಕ್ರಮ ರಂಗ ಸುರಭಿ – 2020 ’ಶಿಶಿರ ನಾಟಕೋತ್ಸವ’ ಆಯೋಜಿಸಿದೆ. ಸುರಭಿ ಸಂಸ್ಥೆಯು ವಿಂಶತಿ ಸಂಭ್ರಮದೊಂದಿಗೆ ಪ್ರತಿವರ್ಷದಂತೆ ಫೆಬ್ರವರಿ 8 ರಿಂದ ಫೆಬ್ರವರಿ 14ರ ತನಕ ಪ್ರತಿದಿನ ಸಂಜೆ 6:30ಕ್ಕೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ. ಫೆಬ್ರವರಿ 08 ಶನಿವಾರ ರಂಗಾಯಣ ಮೈಸೂರು ಅಭಿನಯದ, ರಮಾನಾಥ ಎಸ್. ರಚಿಸಿ, ಚಂದ್ರಹಾಸ್ ಕೇರಳ ನಿರ್ದೇಶಿಸಿದ ನಾಟಕ ’ಆರ‍್ಕೇಡಿಯಾದಲ್ಲಿ ಪಕ್’ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 09 ರವಿವಾರ ರಂಗಾಯಣ ಮೈಸೂರು ಅಭಿನಯದ, ಗಿರೀಶ್ ಕಾರ್ನಾಡ್ ರಚನೆ, ಚಿದಂಬರ್ ರಾವ್ ಜಂಬೆ ನಿರ್ದೇಶನದ ನಾಟಕ ’ಬೆಂದಕಾಳು ಆನ್ ಟೋಸ್ಟ್’ ಪ್ರದರ್ಶನಗೊಳ್ಳಲಿದ್ದು, ಫೆಬ್ರವರಿ 10 ಸೋಮವಾರ ರಂಗಾಯಣ ಮೈಸೂರು ಅಭಿನಯದ, ಶರವಣ್ ಕುಮಾರ್ ರಚಿಸಿ, ನಿರ್ದೇಶಿಸಿದ ನಾಟಕ ’ರೆಕ್ಸ್ ಆವರ್ಸ್’ ಡೈನೋ ಏಕಾಂಗಿ ಪಯಣ ಪ್ರದರ್ಶನ ಕಾಣಲಿದೆ. ಫೆಬ್ರವರಿ 11 ಮಂಗಳವಾರ ಸ್ವಂದನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತ ಸೇವಾದಳ ಕೇಂದ್ರ ಸಮಿತಿ ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಇತ್ತಿಚಿಗೆ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದಲ್ಲಿ ಏಳಜಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಜ್ಯೋತಿ ಹೆಚ್. ಎಸ್ ಅವರನ್ನು ‘ಅತ್ಯುತ್ತಮ ಶಾಖಾನಾಯಕಿ’ ಎಂದು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜ್ಯೋತಿ ಅವರು ಹಲವು ವರ್ಷಗಳಿಂದ ಭಾರತ ಸೇವಾದಲವನ್ನು ಶಾಲೆಯಲ್ಲಿ ಪ್ರಾರಂಭಿಸಿ ಮಕ್ಕಳಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಭಾವೈಕ್ಯತೆ ಮುಂತಾದ ಸದ್ಗುಣಗಳನ್ನು ಮೂಡಿಸಿರುವುದಲ್ಲದೇ, ಸೇವಾದಲ ಬೈಂದೂರು ವಲಯದ ಅಧಿನಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸೇವಾದಳ ಕೇಂದ್ರ ಸಮಿತಿ ಆಯೋಜಿಸಿದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಈರ್ವರನ್ನು ಈ ಪ್ರಶಸ್ತಿ ಆಯ್ಕೆ ಮಾಡಲಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಪ್ರತಿಷ್ಠಿತ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ಉಪಾಧ್ಯಕ್ಷರಾಗಿ ಚಂದ್ರ ನಾಯ್ಕ್ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಆನಂದ್ ಪಿ.ಎಚ್, ಅಂತೋನಿ ಲೂಯಿಸ್, ಚಂದ್ರ ಪೂಜಾರಿ, ಸಂತೋಷ ಕುಮಾರ್ ಶೆಟ್ಟಿ ತೋಟಬೈಲು, ಚಂದ್ರಶೇಖರ ಪೂಜಾರಿ, ಹಿಂದುಳಿದ ವರ್ಗ ಎಚ್. ರಾಜೀವ ದೇವಾಡಿಗ, ಮಹಿಳಾ ಮೀಸಲು ಚಂದ್ರಮತಿ ಹೆಗ್ಡೆ, ಸಾಧು ಎಸ್ ಬಿಲ್ಲವ, ಪರಿಶಿಷ್ಟ ಜಾತಿ ಮೀಸಲು ಅನಂತ ಮೋವಾಡಿ, ಪರಿಶಿಷ್ಟ ಪಂಗಡ ಶಾರದಾ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಾಗೂ ದಕ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘ ನಿರ್ದೇಶಕ ರಾಜು ಪೂಜಾರಿ, ಮೊಳಹಳ್ಳಿ ಸಹಕಾರಿ ಸಂಘ ಅಧ್ಯಕ್ಷ ಮೊಳಹಳ್ಳಿ ಮಹೇಶ್ ಹೆಗ್ಡೆ, ಎಸ್.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ, ಮಾಜಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಂಘ ಸಂಸ್ಥೆಗಳು ಸೇವೆ, ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ಕಲಿಸುವ ಕೇಂದ್ರಗಳಾಗುವ ಜತೆಗೆ ಮಾನವೀಯತೆಯನ್ನು ಮೂಲ ಸೆಲೆಯನ್ನಾಗಿಸಿ ಕಾರ್ಯವೆಸಗುವುದು ಅತ್ಯವಶ್ಯ ಎಂದು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಹೆಚ್. ವಸಂತ ಹೆಗ್ಡೆ ಹೇಳಿದರು. ಅವರು ಮಂಗಳವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ಬೈಂದೂರು ಸಂಸ್ಥೆಯು ವಿಂಶತಿ ಸಂಭ್ರಮದೊಂದಿಗೆ ಆಯೋಜಿಸಲಾಗಿದ ಮೂರು ದಿನಗಳ ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿ ಸಮಾಜವನ್ನು ಸದೃಢವಾಗಿ ಕಟ್ಟಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಹಿರಿಯಾಗಿದ್ದು, ಈ ನೆಲೆಯಲ್ಲಿ ಎಲ್ಲಾ ಸಂಸ್ಥೆಗಳು ಎಚ್ಚರಿಕೆಯಿಂದ ತೊಡಗಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚನ್ನಕೇಶವ ಉಪಾಧ್ಯಾಯ, ಸುರಭಿ ಅಧ್ಯಕ್ಷ ಸತ್ಯನಾ ಕೊಡೇರಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ಸಲಹೆಗಾರ ಜಿ. ತಿಮ್ಮಪ್ಪಯ್ಯ ಮಯ್ಯಾಡಿ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕತಾರ್: ಫನ್ ಡೇ ಕ್ಲಬ್ ವತಿಯಿಂದ ’ಜನಾನಮನ ಮಹಾತ್ಮ ಪುರಸ್ಕಾರ ಸಮರ್ಪಣಾ ಹಾಗೂ ಕಲಾ ಸಂಧ್ಯ’ ಕಾರ್ಯಕ್ರಮ ಭಾರತೀಯ ಸಾಂಸ್ಕೃತಿಕ ಕೇಂದ್ರದ ’ಅಶೋಕ’ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತ ಚಲನಚಿತ್ರ ನಿರ್ದೇಶಕ, ಅಡೂರು ಗೋಪಾಲಕೃಷ್ಣ ಅವರನ್ನು ’ಜನಾನಮನ ಮಹಾತ್ಮ’ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು. ಈ ಸಂದರ್ಭ ಭಾರತೀಯ ಸಮುದಾಯ ಹಿತನಿಧಿ ಸಂಘದ ಜಂಟಿ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ’ಜನಾನಮನ ಕಾರುಣ್ಯ ಸ್ಪರ್ಷ’ ಪುರಸ್ಕಾರ ನೀಡಿ ಗೌರವಿಸಿದರು. ಕೇರಳ ಮೂಲದ ಪ್ರತಿಷ್ಠಾನವು ಕರ್ನಾಟಕದ ಜನಸೇವಕನಿಗೆ, ಅವರ ಸಹೃದಯ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಕತಾರಿನಲ್ಲಿ ಇದೇ ಮೊದಲ ಭಾರಿಯಾಗಿದೆ. ಗಾಯನ, ಕುಚುಪುಡಿ ನೃತ್ಯ ಪ್ರದರ್ಶನಗೊಂಡವು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ:ತಾಲೂಕಿನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ರಿ. ಪ್ರವರ್ತಿತ ನಾರಾಯಣ ವಿಶೇಷ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಹಾಗೂ ನೂತನ ತರಗತಿ ಕೊಠಡಿ ಮತ್ತು ಅಡುಗೆ ಕೋಣೆಯ ಉದ್ಘಾಟನಾ ಸಮಾರಂಭ ಭಾನುವಾರ ಶಾಲೆಯ ಬಯಲು ಆಂಗಣದಲ್ಲಿ ಜರುಗಿತು. ಶಾಲೆಯ ಮಧ್ಯಾಹ್ನದೂಟದ ಅಡುಗೆ ಕೋಣೆ ಹಾಗೂ ಅಡುಗೆ ಸಲಕರಣೆಗಳನ್ನು ಒದಗಿಸಿದ ಗೋವಿಂದ ಬಾಬು ಪೂಜಾರಿ ಅವರ ಹೆತ್ತವರಾದ ಬಾಬು ಪೂಜಾರಿ – ಮಂಜಮ್ಮ ದಂಪತಿಗಳು ಉದ್ಘಾಟಿಸಿದರು. ನೂತನ ಶಾಲಾ ಕೊಠಡಿಗಳನ್ನು ಸೆಲ್ಕೊ ಜನರಲ್ ಮ್ಯಾನೇಜರ್ ಜಗದೀಶ್ ಪೈ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸೆಲ್ಕೊ ಇಂಡಿಯಾದ ಜನರಲ್ ಮ್ಯಾನೆಜರ್ ಜಗದೀಶ ಪೈ ಮಾತನಾಡಿ, ವಿಕಲಚೇತನರಿಗೆ ಕರುಣೆಯ ಅಗತ್ಯವಿಲ್ಲ. ಬದಲಿಗೆ ಅವಕಾಶಗಳು ಬೇಕಿದೆ. ಅವರಿಗೂ ತರಬೇತಿ ನೀಡುವುದು, ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಎಲ್ಲರಂತೆ ಬದುಕುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಬದುಕಿನಲ್ಲಿ ಕಷ್ಟಪಟ್ಟು ಬೆಳೆದು ಬಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮನುಷ್ಯನ ವ್ಯಕ್ತಿಯನ್ನು ಗುರುತಿಸುವುದು ಹಣಬಲ, ಜನಬಲ ಅಥವಾ ಬೇರಾವುದೇ ಬಲಗಳಿಂದಲ್ಲ, ಬದಲಾಗಿ ಆತನಲ್ಲಿರುವ ಸಜ್ಜನಿಕೆ, ಪ್ರಾಮಾಣಿಕತೆ, ಮಮತೆ ಹಾಗೂ ಎಲ್ಲರನ್ನೂ ಗೌರವಿಸುವ ಗುಣಗಳಿಂದ. ಅದಕ್ಕೆ ಅನ್ವರ್ಥವೆಂಬಂತೆ ಬದುಕುತ್ತಿರುವವರು ಹರೇಕಳ ಹಾಜಬ್ಬ ಎಂದು ರಾಜ್ಯ ಮುಜರಾಯಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ವೀಡಿಯೋ ನೋಡಿ ಅವರು ಸೋಮವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಜರುಗುತ್ತಿರುವ ಮೂರು ದಿನಗಳ ’ಸುರಭಿ ಜೈಸಿರಿ’ ಕಾರ್ಯಕ್ರಮದಲ್ಲಿ ಅಕ್ಷರಸಂತ ಹರೇಕಳ ಹಾಜಬ್ಬ ಅವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನಿಸಿ ಮಾತನಾಡಿ ಯಾವ ಸ್ವಾರ್ಥ, ದುರಾಲೋಚನೆ, ಫಲಾಪೇಕ್ಷೆ ಇಲ್ಲದೇ ಬದುಕೇ ಕಾಯಕ ಎಂದು ತಿಳಿದು ಬಸ್ ನಿಲ್ದಾಣದಲ್ಲಿ ಕಿತ್ತಲೆ ಮಾರಿ ಬದುಕು ಸಾಗಿಸುತ್ತಿದ್ದ ಒಬ್ಬ ಮನುಷ್ಯ ಶಾಲೆ ಕಟ್ಟಿ ನೂರಾರು ಮಕ್ಕಳ ವಿದ್ಯಾರ್ಜನೆಗೆ ದಾರಿ ಮಾಡಿಕೊಡುತ್ತಾರೆಂದರೆ ಅದಕ್ಕಿಂತ ದೊಡ್ಡ ಸಾಧನೆ ಯಾವುದಿದೆ ಎಂದರು. ಅಟಲ್ ಬಿಹಾರಿ ವಾಜಪೇಯಿ ಅವರು ಪದ್ಮವಿಭೂಷಣ ಪ್ರಶಸ್ತಿ ಪಡೆಯುವ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ವತ್ತಿನಕಟ್ಟೆ ತ್ರಿಶಕ್ತಿ ಸ್ವರೂಪಿಣಿ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಇದೇ 16 ರಿಂದ 19 ರವರೆಗೆ ಅಷ್ಟಬಂಧಪೂರ್ವಕ ಬ್ರಹ್ಮಕಲಶೋತ್ಸವ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮಹಾಸತಿ ಅಮ್ಮನವರನ್ನು ಆರಾಧಿಸುವ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಈ ಸಂದರ್ಭ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾಲ್ಕು ದಿನ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ 35-40 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದಕ್ಕೆ ಪೂರಕವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದರು. ಕಾರ್ಯಕ್ರಮಗಳ ವಿವರ: ಇದೇ 16ರ ಬೆಳಿಗ್ಗೆ ಸೇನೇಶ್ವರ ದೇವಸ್ಥಾನ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಬಳಿಕ ವತ್ತಿನಕಟ್ಟೆಗೆ ಮೆರವಣಿಗೆ ನಡೆಯುವುದು. ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಬೈಂದೂರು ತಾಲ್ಲೂಕು ಘಟಕ, ಯೋಜನೆಯ ಬಿ. ಸಿ. ಟ್ರಸ್ಟ್ ಮತ್ತು ಹಿರಿಯ ಭಜನಾ ಹಾಡುಗಾರರ ಸಹಯೋಗದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಸೂಕ್ತ ಸಮಯದಲ್ಲಿ ಗುರುತಿಸಿ, ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಅವರು ಉತ್ತಮ ವೇದಿಕೆಯನ್ನು ರೂಪಿಸಿಕೊಂಡು, ಬದುಕಿನ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ರವಿವಾರ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ವಿಂಶತಿ ಸಂಭ್ರಮದೊಂದಿಗೆ ಆಯೋಜಿಸಲಾದ ಸುರಭಿ ಜೈಸಿರಿ 2020 ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ ಕಲೆ, ಸಾಹಿತ್ಯ, ಸಂಗೀತ ಎಲ್ಲವೂ ಮನುಷ್ಯನ ಬದುಕನ್ನು ಉತ್ತಮಗೊಳಿಸುತ್ತವೆ. ಎಂತಹ ಸನ್ನಿವೇಶವನ್ನೂ ಎದುರಿಸುವ ಗಟ್ಟಿತನ ರೂಪಿಸುತ್ತವೆ. ಇಂತಹ ಚಟುವಟಿಕೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ನಡೆಯಬೇಕು ಮತ್ತು ಇವೆಲ್ಲವನ್ನೂ ಸಂಘಟಿಸುವ ಸಂಸ್ಥೆಗಳಿಗೆ ಬಲ ತುಂಬುವ ಕೆಲಸವನ್ನು ಊರಿನವರು ಮಾಡಬೇಕು ಎಂದು ಆಶಿಸಿದರು. ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಎಂ. ಬಾಲಕೃಷ್ಣ ಶೆಟ್ಟಿ ಮಾತನಾಡಿ ದೀಪವೊಂದನ್ನು ಪ್ರಜ್ವಲಿಸುವ ಬತ್ತಿ ತನ್ನನ್ನು ತಾನೇ ದಹಿಸಿಕೊಂಡು ಬೆಳಕು ನೀಡುವಂತೆ, ಸಂಘ ಸಂಸ್ಥೆಗಳು ಉಳಿದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮ ಬಿಗ್ ಬಾಸ್ ಸೀಸನ್-7ರ ವಿನ್ನರ್ ಆಗಿ ಕುಂದಾಪುರ ಮೂಲದ ನಟ ಶೈನ್ ಶೆಟ್ಟಿ ಅವರು ಮೂಡಿಬಂದಿದ್ದಾರೆ. ವಿಜೇತ ಶೈನ್ ಶೆಟ್ರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಟ್ರೋಫಿ ಹಾಗೂ 50 ಲಕ್ಷ ರೂ. ನಗದು ಬಹುಮಾನವನ್ನು ವಿತರಿಸಿದರು. ಶೈನ್ ಶೆಟ್ಟಿ ಅವರು ಬಿಗ್‌ಬಾಸ್‌ನಲ್ಲಿ ತಮ್ಮ ಆಟ, ಚಟುವಟಿಕೆ, ಅವರ ಜಂಟಲ್‌ಮ್ಯಾನ್ ಅಟಿಟ್ಯೂಡ್‌ಗಳಿಂದಾಗಿ ಜನರಿಗೆ ದಿನದಿಂದ ದಿನಕ್ಕೆ ಇಷ್ಟವಾಗುತ್ತಾ ಹೋಗಿದ್ದರು. ಹಾಗಾಗಿ ಅವರನ್ನು ಕೊನೆಯವರೆಗೆ ಉಳಿಸಿಕೊಂಡು ಬಂದಿದ್ದು, ಅಂತಿಮವಾಗಿ ಜನರು ತಮ್ಮ ವೋಟಿಂಗ್ ಮೂಲಕ ಶೈನ್ ಶೆಟ್ಟಿಗೆ ಜಯ ತಂದುಕೊಟ್ಟಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಮಜಾ ಟಾಕೀಸ್ ಖ್ಯಾತಿಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ. ಪ್ರತಿಭಾವಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ವಾಸುಕಿ ವೈಭವ್ ಅವರು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಬಿಗ್ ಬಾಸ್ ನಲ್ಲಿ 18 ಜನ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದರು. ಅಂತಿಮವಾಗಿ ಶೈನ್…
