ಉಡುಪಿ ಜಿಲ್ಲೆ: ಶನಿವಾರ 121 ಕೊರೋನಾ ಪಾಸಿಟಿವ್ ದೃಢ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜೂ.6ರ ಶನಿವಾರದ ಹೆಲ್ತ್ ಬುಲೆಟಿನ್ ಪ್ರಕಾರ ಒಟ್ಟು 121 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.

Call us

Click Here

Click here

Click Here

Call us

Visit Now

Click here

ಈವರೆಗೆ ಕೋವಿಡ್-19ನ ಪಾಸಿಟಿವ್ ಬಂದಿರುವ ಪ್ರಕರಣಗಳಲ್ಲಿ ಶೇ.98 ಮಂದಿಗೆ ರೋಗ ಲಕ್ಷಣಗಳು ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.  ಜಿಲ್ಲೆಯಲ್ಲಿ ಸದ್ಯ ಒಟ್ಟು 889 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 108 ಮಂದಿ ಬಿಡುಗಡೆಯಾಗಿದ್ದು, 781 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ನಾಳೆ(ಜೂನ್ 7) ಸಂಪೂರ್ಣ ಲಾಕ್ ಡೌನ್ ಇರಲ್ಲ:
ಬಹುತೇಕ ಎಲ್ಲಾ ಲಾಕ್ ಡೌನ್ ನಿರ್ಬಂಧಗಳು ಸಡಿಲವಾಗಿರುವ ಕಾರಣ ಇನ್ನೂ ಈ ಭಾನುವಾರದ ಲಾಕ್ ಡೌನ್ ಮುಂದುವರಿಯುವುದು ಅನುಮಾನ ಎನ್ನಲಾಗಿದೆ. ಆದರೆ ರಾತ್ರಿಯ ವೇಳೆಯ ಕರ್ಫ್ಯೂ ಯಥಾಸ್ಥಿತಿಯಂತೆ ಮುಂದುವರಿಯಲಿದೆ. ಭಾನುವಾರ ಲಾಕ್ ಡೌನ್ ರದ್ದಾಗಿರುವ ಬಗ್ಗೆ ಅಧಿಕೃತ ಆದೇಶ ಇಂದು ಸಂಜೆಯ ವೇಳೆಗೆ ಮುಖ್ಯಮಂತ್ರಿ ಸಚಿವಾಲಯದಿಂದ ಬರುವ ನಿರೀಕ್ಷೆಯಿದೆ. ಈ ನಿಯಮ ಕಂಟೈನ್ಮೆಂಟ್ ವಲಯಗಳಿಗೆ ಅನ್ವಯಿಸುವುದಿಲ್ಲ. ವೈದ್ಯಕೀಯ ತುರ್ತು ಸೇವೆಗಳು ಮತ್ತು ಅಗತ್ಯ ವಸ್ತುಗಳು ಮತ್ತು ಸೇವೆಗಳ ಪೂರೈಕೆಗೆ ಅನುಮತಿಯನ್ನು ನೀಡಲಾಗಿದೆ. ಇವುಗಳ ಹೊರತು ಕಂಟೈನ್ಮೆಂಟ್ ವಲಯ ಒಳಗೆ ಹಾಗೂ ಹೊರಗೆ ಜನರ ಚಲನ ವಲನಗಳನ್ನು ನಿಷೇಧಿಸಲಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಜೂ.8 ರಿಂದ ಜಿಲ್ಲೆಯಲ್ಲಿ ದೇವಾಲಯಗಳ ಆರಂಭ. ಇವಿಷ್ಟು ನಿಯಮ ಪಾಲನೆ ಕಡ್ಡಾಯ – https://kundapraa.com/?p=38342 .
ಪಾಸಿಟಿವ್ ಬರುವವರಲ್ಲಿ ರೋಗದ ಲಕ್ಷಣಗಳಿಲ್ಲ: ಡಾ. ಪ್ರಶಾಂತ್ ಭಟ್ – https://kundapraa.com/?p=38333 .

Call us

Leave a Reply

Your email address will not be published. Required fields are marked *

2 × one =