ಕುಂದಾಪುರ: ಸಮೀಪದ ಕಂದಾವರ ಗ್ರಾಮದ ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾವಿನಮನೆ ಕನ್ನಂತ ಕುಟುಂಬಸ್ಥರು ನಡೆಸಿದ ಏಕಪವಿತ್ರ ನಾಗಮಂಡಲೋತ್ಸವ sಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಅಚ್ಚುಕಟ್ಟಾಗಿ ನೆರವೇರಿತು. ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ, ಏಕಪವಿತ್ರ ನಾಗಮಂಡಲೋತ್ಸವ ಮದ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಿತು. ರಾತ್ರಿ ಹಾಲಿಟ್ಟು ಸೇವೆ, ರಂಗಪೂಜೋತ್ಸವ, ಮಂಡಲ ಪೂಜೆ, ಮಂಡಲೋತ್ಸವ, ಮಂಡಲ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಮಾವಿನಮನೆ ವಿಶ್ವನಾಥ ಕನ್ನಂತ, ಎಂ. ವೆಂಕಟಾಚಲ ಕನ್ನಂತ, ಎಂ. ಶ್ರೀಕಾಂತ ಕನ್ನಂತ, ಪದ್ಮಾಕ್ಷಿ ಕನ್ನಂತ, ಜಯಶ್ರೀ ಕನ್ನಂತ, ವಾಣಿ ಕನ್ನಂತ ಕುಟುಂಬಸ್ಥರು, ದೇವಳದ ಪ್ರಮುಖರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಲೋಕಸಭಾ ಚುನಾವಣೆಯಲ್ಲಿ ಕಂಡ ಬಿಜೆಪಿ ಅಲೆ ಪಂಚಾಯತ್ ಚುನಾವಣೆಯಲ್ಲೂ ಮುಂದುವರಿದಿದೆ: ಬಿಎಂಎಸ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲೋಕಸಭಾ ಚುನಾವಣೆಯಲ್ಲಿ ಆರಂಭವಾದ ಬಿಜೆಪಿ ಅಲೆ ನಂತರ ನಡೆದ ಗ್ರಾಪಂ ಚುನಾವಣೆ ಹಾಗೂ ಜಿಪಂ, ತಾಪಂ ಚುನಾವಣೆಯಲ್ಲಿ ಮುಂದುವರಿದ ಪರಿಣಾಮ ಬೈಂದೂರು ಕ್ಷೇತ್ರದಿಂದ ಐವರು ಜಿಪಂ ಮತ್ತು 15 ಜನ ತಾಪಂ ಸದಸ್ಯರು ಆಯ್ಕೆ ಆಗಲು ಕಾರಣವಾಗಿದೆ. ಬೈಂದೂರಿನಲ್ಲಿ ಇದ್ದ ಬಿಜೆಪಿ ಅಲೆ ಮುಂದಿನ ವಿಧಾನಸಭಾ ಚುನಾವಣೆ ವರೆಗೂ ಮುಂದುವರಿಸಿ ಕೊಂಡು ಹೋಗುವಂತೆ ಕಾರ್ಯಕರ್ತರಿಗೆ ಬೈಂದೂರು ಬ್ಲಾಕ್ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಕರೆ ನೀಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಪಕ್ಷದ ಆಶ್ರಯದಲ್ಲಿ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ನಡೆದ ಜಿಪಂ ಹಾಗೂ ತಾಪಂ ವಿಜಯಿ ಅಭ್ಯರ್ಥಿಗಳಿಗೆ ಅಭಿನಂದನೆ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಜಾತ್ಯಾತೀತ ಪಕ್ಷವಾಗಿದ್ದು, ಮುಸ್ಲಿಂ ವರ್ಗಕ್ಕೂ ಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದು, ಮುಸ್ಲಿಂ ಜನರಲ್ಲೂ ಬಿಜೆಪಿ ಕಡೆ ಒಲವು ಮೂಡುತ್ತಿದೆ ಎಂದರು. ಉಡುಪಿ ಜಿಲ್ಲಾ ಬಿಜೆಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಿಂದೂ ಸಮಾಜದ ಸಾಮರಸ್ಯ, ದೇಶಪ್ರೇಮವನ್ನು ಸಾರುವ, ಸ್ವಾಭಿಮಾನಿ ಯುವಕರನ್ನು ರೂಪಿಸುವ ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೆಕ್ಕಟ್ಟೆ ಘಟಕದ ಆಶ್ರಯದಲ್ಲಿ ವಿರಾಟ ಹಿಂದೂ ಸಮಾಜೋತ್ಸವ ಮಾ.6 ಭಾನುವಾರ ಮಧ್ಯಾಹ್ನ ತೆಕ್ಕಟ್ಟೆ ಹೈಸ್ಕೂಲ್ ಮುಂಭಾಗದಲ್ಲಿ ಆಯೋಜಿಸಲಾಗಿದ್ದು ಸುಮಾರು ೫ ಸಾವಿರಕ್ಕೂ ಅಧಿಕ ಹಿಂದೂ ಭಾಂದವರು ಸಮಾರಂಭಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ, ಬೈಕ್ ರ್ಯಾಲಿ ನಡೆಯಲಿದ್ದು ಪ್ರತಿ ಗ್ರಾಮಗಳಿಂದಲೂ ಯುಕವರು, ವಿದ್ಯಾರ್ಥಿಗಳು, ಹಿಂದೂ ಸಮಾಜ ಭಾಂದವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರ ಆನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿವಿಧ ಹಿಂದೂ ಸಂಘಟನೆಯ ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಮಾಜೋತ್ಸವದ ಹಿನ್ನೆಲೆಯಲ್ಲಿ ತೆಕ್ಕಟ್ಟೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಮೈದುನ ಹಾಗೂ ಆಕೆಯ ಪತ್ನಿಯಿಂದ ಕೊಲೆಯಾದ ಗಂಗೊಳ್ಳಿಯ ಉಪ್ಪಿನಕುದ್ರು ಕಳವಿನಬಾಗಿಲು ನಿವಾಸಿ ಜ್ಯೋತಿ ಖಾರ್ವಿ ಮನೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಭೇಟಿ ನೀಡಿ ಸಾಂತ್ವನ ಹೇಳಿದರು. ಘಟನೆ ಬಗ್ಗೆ ಆಕೆಯ ಪತಿ, ತಂಗಿ ಹಾಗೂ ಮನೆಯವರಿಂದ ವಿವರ ಪಡೆದ ಎಸ್ಪಿಯವರು, ಘಟನೆಯ ಆರೋಪಿಗಳ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ. ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದವರು ಇರುವುದರಿಂದ ಪ್ರಕರಣದ ತನಿಖೆಗೆ ಸಹಕಾರಿಯಾಗಲಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಬಗ್ಗೆ ಆಕೆಯ ಮನೆಯವರು ಮಾಡಿದ ಮನವಿಗೆ ಉತ್ತರಿಸಿದ ಅವರು, ಪ್ರಕರಣ ಕೂಲಂಕೂಷ ತನಿಖೆ ನಡೆದು ಆರೋಪ ಸಾಬೀತಾದರೆ ಆರೋಪಿಗಳಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶಗಳಿವೆ. ಜೀವಾವಧಿ ಶಿಕ್ಷೆ ವಿಧಿಸುವ ಬಗ್ಗೆ ನ್ಯಾಯಾಧೀಶರು ಸೂಕ್ತ ತೀರ್ಮಾನ ಪ್ರಕಟಿಸಲಿದ್ದಾರೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಇಲಾಖೆ ಎಲ್ಲಾ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಕಳೆದ ಕೆಲವಾರು ದಿನಗಳಿಂದ ಭಾರಿ ಗದ್ದಲ ಎಬ್ಬಿಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸೇವಾ ಕೌಂಟರ್ನ ತಿಜೋರಿ ಚಿನ್ನ ಕಳವು ಪ್ರಕರಣವನ್ನು ಭೇದಿಸುವಲ್ಲಿ ಎಸ್ಪಿ ಅಣ್ಣಾಮಲೈ ನೇತೃತ್ವದ ತಂಡ ಯಶಸ್ವಿಯಾಗಿದ್ದು ಪ್ರಕರಣದ ಪ್ರಮುಖ ಆರೋಪಿ ಶಿವರಾಮ ಮಡಿವಾಳ ಸೇರಿದಂತೆ ಇತರೇ ನಾಲ್ವರನ್ನು ಬಂಧಿಸಿದ್ದು, ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣದ ಭಾಗಿಗಳಾದ ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದು ಕಳವುಗೈಯಲಾದ ದೇವಿಯ ಬಹುಪಾಲು ಚಿನ್ನವನ್ನು ಮರಳಿ ವಶಕ್ಕೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಕೊಲ್ಲೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರಕರಣ ಬೆಳಕಿಗೆ ಬಂದದ್ದು ಹೇಗೆ? ದೇವಳದ ಒಂದನೇ ನಂಬರಿನ ಸೇವಾ ಕೌಂಟರ್ನಲ್ಲಿ ಕಳೆದ ಹದಿನೈದು ವರ್ಷಗಳಿಂದ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಶಿವರಾಮ ಮಡಿವಾಳ ಕಳೆದ ಫೆ.15ರಿಂದ ತಿಜೋರಿಯ ಕೀಲಿಕೈಯೊಂದಿಗೆ ನಾಪತ್ತೆಯಾಗಿರುವ ಸುದ್ದಿ ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಅಲ್ಲಿಂದಲೇ ಚಿನ್ನ ಕಳವಿನ ಸಂಶಯ…
ಕುಂದಾಪುರ: ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರ, ಕೋಟೇಶ್ವರ, ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಮತ್ತು ರುಡ್ಸೆಟ್ ಸಂಸ್ಥೆ ಬ್ರಹ್ಮಾವರ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗ ಮಾಹಿತಿ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಗಾರದಲ್ಲಿ ರುಡ್ ಸೆಟ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಕರುಣಾಕರ ಜೈನ್ ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಅವರು ತಮ್ಮ ಉಪನ್ಯಾಸದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ವ ಉದ್ಯೋಗಿಗಳಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವಂತೆ ಕರೆನೀಡಿದರು. ಉದ್ಘಾಟನಾ ಭಾಷಣ ಮಾಡಿದ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್ ಸೇರಿಗಾರ್, ಯುವಕರನ್ನು ಸ್ವ ಉದ್ಯೋಗಿಗಳಾಗುವಂತೆ ಮಾಡಿ ಅವರಲ್ಲಿ ಉತ್ಸಾಹ ತುಂಬಿ ದೇಶದ ಜ್ವಲಂತ ಸಮಸ್ಯೆಯಾಗಿರುವ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ನಾವು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು. ಈ ಕಾರ್ಯಗಾರದಲ್ಲಿ ಪ್ರಾಂಶುಪಾಲರಾದ ಶ್ರೀ ನಿತ್ಯಾನಂದ ವಿ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕುಂದಾಪುರ ಸನ್ ರೈಸ್ ಅಧ್ಯಕ್ಷರಾದ ದಿನಕರ ಪಾಟೇಲ…
ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ೧೦೦೮ ತೆಂಗಿನಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ಮತ್ತು ನವಚಂಡೀ ಹವನ ಋತ್ವಿಜರ ವೇದ ಮಂತ್ರ ಘೋಷಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಗವಾಗಿ ನೆರವೇರಿತು. ನವಗ್ರಹ ಹವನ, ಧನ್ವಂತರಿ ಹವನ, ಗಣಸೂಕ್ತ ಹವನ, ದುರ್ಗಾ ಹೋಮ, ಚಂಡಿಕಾ ಪಾರಾಯಣ ಸೇರಿದಂತೆ ಮೊದಲಾದ ಹವನಗಳು ವಿವಿಧ ಧಾರ್ಮಿಕ ವಿಧಿ ವಿಧಾನಗಳು ಅಚ್ಚುಕಟ್ಟಾಗಿ ಜರುಗಿತು. ೧೦೦೮ ತೆಂಗಿನ ಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ಮತ್ತು ನವಚಂಡೀ ಹವನ, ಅಧಿವಾಸ ಹವನ, ಕಲಾ ತತ್ವ ಹವನ, ಶ್ರೀ ಸ್ವಾಮಿಗೆ ೧೦೮ ಕಲಶಾಭಿಷೇಕ, ಕನಕಾಭೀಷೇಕ, ಮಹಾ ಪೂಜೆ ವಿದ್ಯುಕ್ತವಾಗಿ ನಡೆಯಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಂದು ರಾತ್ರಿ ಸಂಕಷ್ಟ ಚತುರ್ಥಿ ಮಹಾಪೂಜೆ ನಡೆಯಿತು. ದೇವಳವನ್ನು ಸಂಪೂರ್ಣ ಪುಷ್ಪಲಂಕಾರಗಳಿಂದ ಅಲಂಕರಿಸಲಾಗಿತ್ತು. ದೇವಳದ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್, ಬಾಲಚಂದ್ರ…
ಕುಂದಾಪುರ : ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರ ಸಂಘದಿಂದ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸುದೀರ್ಘ 34 ವರುಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸದಾನಂದ ನಾಯಕ್ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ನಾಗರತ್ನ ಹವಾಲ್ದಾರ್, ಖಜಾಂಜಿ ಶೋಭಾ ಕುಂಬ್ರಿ, ಸದಸ್ಯರಾದ ದಾಕ್ಷಾಯಿಣಿ, ಇಂದಿರಾ, ಭಾಗೀರಥಿ, ಅನುಸೂಯ, ಸಾವಿತ್ರಿ, ಲೋಲಾಕ್ಷಿ,ಪದ್ಮಾವತಿ, ಶೋಭಾ ಕೊರವಡಿ, ಭವಾನಿ ಮತ್ತಿತರರು ಉಪಸ್ಥಿತರಿದ್ದರು. ವರದಿ : ನರೇಂದ್ರ ಎಸ್ ಗಂಗೊಳ್ಳಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರದ ಸಹಭಾಗಿತ್ವದಲ್ಲಿ ನಡೆದ ತಿಂಗಳ ಕಾರ್ಯಕ್ರಮದಲ್ಲಿ ನಮ್ಮ ಕಲಾಕೇಂದ್ರದ ಮೂಲಕ ಅನುಪಮ ಕಲಾ ಸೇವೆಯನ್ನು ಸಲ್ಲಿಸುತ್ತಿರುವ ರಂಜಿತ್ಕುಮಾರ್ ಶೆಟ್ಟಿ ವಕ್ವಾಡಿ, ಶ್ರೀಮತಿ ಪಲ್ಲವಿ ರಂಜಿತ್ ಶೆಟ್ಟಿಯವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಂಜಿತ್ಕುಮಾರ್ ಶೆಟ್ಟಿ ವಕ್ವಾಡಿ, ಗ್ರಾಮೀಣ ಭಾಗದಲ್ಲಿ ಯಕ್ಷಗಾನ ಗೊಂಬೆಯಾಟ ಅಕಾಡಮಿಯನ್ನು ತೆರೆದು ನಿರಂತರ ಪರಂಪರಾಗತ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಶ್ರಮಿಸುತ್ತಿರುವುದು ಪ್ರಶಂಸನೀಯ. ಯಾವುದೇ ವಿಶ್ವವಿದ್ಯಾನಿಲಯಗಳು ಮಾಡದ ಸಾಧನೆಯನ್ನು ಭಾಸ್ಕರ ಕೊಗ್ಗ ಕಾಮತ್ರು ಉಪ್ಪಿನಕುದ್ರುವಿನಲ್ಲಿ ಗೊಂಬೆಯಾಟ ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ಮಾಡಿ ತೋರಿಸಿದ್ದಾರೆ. ಅವರ ಕಲೆಯ ಕುರಿತಾದ ಕಾಳಜಿ ಅಪಾರವಾದುದು ಎಂದು ಕೋಟೇಶ್ವರದ ನಮ್ಮ ಕಲಾಕೇಂದ್ರದ ಸಂಚಾಲಕ ರಂಜಿತ್ಕುಮಾರ್ ಶೆಟ್ಟಿ ವಕ್ವಾಡಿ ಹೇಳಿದರು. ಫೆಬ್ರವರಿ ತಿಂಗಳ ಗೊಂಬೆಮನೆ ಅತಿಥಿಯಾಗಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಭಾಗವಹಿಸಿ ಶುಭಹಾರೈಸಿದರು. ಹಿರಿಯ ಗೊಂಬೆಯಾಟ ಕಲಾವಿದ ವಾಮನ ಪೈ, ಮಂಜುನಾಥ ಮೈಪಾಡಿ, ರೋಟರಿ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಗೊಂಬೆಯಾಟ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಅಲ್ಲಿ ನೂರಾರು ಜನ ಸೇರಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳೂ ಸಹ ಬಿಡದೇ ಹುಡುಕಾಡುತ್ತಿದ್ದರು. ಕೆಲವರು ನೋಡಿದ್ದೇನೆ ಎನ್ನುತ್ತಾರೆ. ಕೆಲವರು ಇದೇ ಹೆಜ್ಜೆಗುರುತು ನೋಡಿ ಅನ್ನುತ್ತಿದ್ದಾರೆ. ಕಂಡದ್ದು ಚಿರತೆಯೋ ಇನ್ನೇನೊ ತಿಳಿಯದು. ಆದರೆ ಹುಡುಕಾಟ ನಡೆಸುತ್ತಿದ್ದಾರೆ. ಬೈಂದೂರು ಶಾಸಕರ ಕಛೇರಿಯ ಸುತ್ತಮುತ್ತ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಹೀಗೆ ಒಂದಿಷ್ಟು ಹೊತ್ತು ಎಲ್ಲರನ್ನೂ ಆತಂಕಕ್ಕೆ ನೂಕಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ ಈ ಪರಿಸರದ ಸುತ್ತಲೂ ಸರ್ಕಾರಿ ಕಚೇರಿ, ಶಾಲೆ, ಹಾಸ್ಟೆಲ್ ಇದ್ದುದರಿಂದ ಶಾಲಾ ಮಕ್ಕಳೂ, ಸಾರ್ವಜನಿಕರೂ ಓಡಾಡುತ್ತಾರೆ. ಇನ್ನು ಅಡಗಿ ಕುಳಿತ ಚಿರತೆ ಹೊರಬರುತ್ತದೆಂದು ಕಾಯೋದು ಬೇಡವೆಂದ ಕೆಲವರು ಒಂದು ಪಟಾಕಿ ಸಿಡಿಸಿಯೇ ಬಿಟ್ಟರು. ತಕ್ಷಣ ಪೊದೆಯಿಂದ ಹೊರಬಂದ ಒಂದು ಕಾಡು ಬೆಕ್ಕು ಓಟ ಶುರುವಿಟ್ಟುಕೊಂಡಿತು. ಕ್ಷಣಾರ್ಧದಲ್ಲಿ ರಸ್ತೆ ದಾಟಿ ಮಾಯವಾಯಿತು. ಚಿರತೆ ಎಂದು ಉಸಿರು ಬಿಗಿಹಿಡಿದು ಕುತೂಹಲದಿಂದ ಕಾದು ಕುಳಿತವರು ಬೆಕ್ಕನ್ನು ನೋಡಿ ಬಿದ್ದು ಬಿದ್ದು ನಗಲಾರಂಬಿಸಿದರು. ಸಶಸ್ತ್ರರಾಗಿ ಬಂದಿದ್ದ ಅರಣ್ಯ ಇಲಾಖೆಯವರಿಗೆ ನಿಶ್ಚಿಂತೆಯಿಂದ ಹಿಂದಿರುಗಿದರು.…
