Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮರವಂತೆಯ ಸಮುದ್ರದಲ್ಲಿ ಭಾನುವಾರ ಮಧ್ಯಾಹ್ನದ ಬಳಿಕ ತೀವ್ರ ಗಾತ್ರದ ಉಬ್ಬರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವುದರಿಂದ ಮೀನುಗಾರರ ಮನೆಗಳಿಗೆ ಅಪಾಯ ಉಂಟಾಗಿದೆ. ನಿರ್ಮಾಣ ಹಂತದಲ್ಲಿರುವ ಮೀನುಗಾರಿಕಾ ಹೊರಬಂದರಿನ ಎರಡು ತಡೆಗೋಡೆಗಳ ನಡುವಿನ ಪ್ರದೇಶದಲ್ಲಿರುವ ಕರಾವಳಿ ಮಾರ್ಗದ ಒಂದು ಕಡೆ ಕೊರೆತ ಉಂಟಾಗಿದ್ದು, ರಸ್ತೆ ಕಡಿದು ಹೋಗುವ ಹಂತದಲ್ಲಿದೆ. ಅಲೆಗಳು ಚೆಲ್ಲುವ ನೀರು ರಸ್ತೆಯನ್ನು ದಾಟಿ ವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಆ ಪ್ರದೇಶದಲ್ಲಿರುವ ಬುದ್ಧಿವಂತ ಮಂಜುನಾಥ ಖಾರ್ವಿ, ಸುಬ್ರಹ್ಮಣ್ಯ ಖಾರ್ವಿ, ಅಣ್ಣಪ್ಪ ಖಾರ್ವಿ, ಶೇಷಿ ಖಾರ್ವಿ ಮತ್ತು ಬೊಬ್ಬರ್ಯನಕೊಡಿ ರಾಮಚಂದ್ರ ಖಾರ್ವಿ ಮನೆಯ ಅಂಗಳಕ್ಕೆ ನೀರು ಹರಿಯುತ್ತಿದೆ. ಇದರಿಂದ ಮನೆಯಲ್ಲಿ ರಾತ್ರಿ ಕಳೆಯುವುದು ಅಪಾಯಕಾರಿ ಆದುದರಿಂದ ನೆರೆಹೊರೆಯವರ ಸಹಾಯದಿಂದ ಮನೆಯವರನ್ನು ಮತ್ತು ಸಾಮಗ್ರಿಗಳನ್ನು ಅನ್ಯರ ಮನೆಗೆ ಸ್ಥಳಾಂತರಿಸಲಾಗುತ್ತಿದೆ. ರಸ್ತೆ ಪೂರ್ತಿಯಾಗಿ ಕಡಿದುಹೋದಲ್ಲಿ ಹಲವು ಮನೆಗಳಿಗೆ ಅಪಾಯ ತಟ್ಟಲಿದೆ. ಸುದ್ದಿ ತಿಳಿದು ಬಿ. ಎಂ. ಸುಕುಮಾರ ಶೆಟ್ಟಿ, ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ‘ವೇಂದಾತ ವಿಚಾರಗಳು ಅತ್ಯಂತ ತರ್ಕಬಧ್ಧವಾಗಿದ್ದು ಆಧುನಿಕ ವೈಜ್ಞಾನಿಕ ಅವ್ವೇಷಣೆಗಳಿಗೂ ಮೀರಿದ ಸತ್ಯವಾಗಿದೆ. ಸನಾತನ ಧರ್ಮದ ”ಏಕಂ ಸತ್ ವಿಪ್ರಾ ಬಹುಧಾವದಂತಿ”ಎನ್ನುವ ಮಾತನ್ನು ಆಚಾರ್ಯ ಶಂಕರ ಭಗವತ್ಪಾದರು ಒತ್ತಿ ತಿಳಿಸಿದರು. ಜ್ಞಾನದ ಅತ್ಯುತ್ತಮ ಸ್ತರದಲ್ಲಿನ ಅನುಭವವನ್ನು ಸರ್ವರಿಗೂ ತಲುಪುವಂತೆ ಅನೇಕ ಭಕ್ತಿ ಸ್ತೋತ್ರಗಳನ್ನು ರಚಿಸಿದರು. ಅವರ ಸ್ತೋತ್ರ ಸಾಹಿತ್ಯವು ಕಾವ್ಯಾತ್ಮಕವಾಗಿಯೂ ಶ್ರೇಷ್ಠವಾಗಿದ್ದು ಭಾವ ಪೂರ್ಣ ಹಾಡುವಿಕೆಯಿಂದ ಕೇಳುಗರು ತನ್ಮಯರಾಗುತ್ತಾರೆ’ ಎಂದು ಬೆಂಗಳೂರಿನ ಓಪ್ಟೀವ್ ಇಂಡಿಯಾದ ಉಪಾಧ್ಯಕ್ಷ ಶ್ರೀ ಜಗದೀಶ ಮಯ್ಯ ಇವರು ಸುವಿಚಾರ ಬಳಗ ಟ್ರಸ್ಟ್ ರಿ. ಮತ್ತು ಶಾಂಕರ ತತ್ತ್ವ ಪ್ರಸಾರ ಸಮಿತಿಯ ಆಶ್ರಯದಲ್ಲಿ ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ಏರ್ಪಡಿಸಿದ ಸರಣಿ ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡುತ್ತಾ ನುಡಿದರು. ನಾಗೂರು ಸಂದೀಪನ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಬಿ. ವಿಶ್ವೇಶ್ವರ ಅಡಿಗರು ದೀಪ ಬೆಳಗಿಸಿ ಉದ್ಘಾಟಿಸಿ ‘ನಹಿಜ್ಞಾನೇನ ಸದೃಶಂ’ ಶುದ್ಧ ಜ್ಙಾನ ಪ್ರಾಪ್ತಿಯಿಂದ ಭ್ರಮೆಯ ಬಂಧನ ಹರಿದು ಈ ಬದುಕಿನಲ್ಲಿಯೇ ಸಹಜ ಆನಂದಾನುಭೂತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೆಳಗಾವಿಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಭಾರತಿ ಎಂಬ ಹೆಸರಿನ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೈಂದೂರು ಬೈಪಾಸ್ ಬಳಿಯ ರಾ.ಹೆ 66ರಲ್ಲಿ ಪಲ್ಟಿಯಾಗಿದ್ದು ಬಸ್ಸಿನಲ್ಲಿದ್ದ ಸುಮಾರು 15 ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿಕಡೆಯಿಂದ ಬರುತ್ತಿದ್ದ ಬಸ್ಸು ಬೈಂದೂರು ಬೈಪಾಸ್ ಬಳಿ ಡಿವೈಡರ್ ಕಾಮಗಾರಿಗೆ ಹಾಕಲಾಗಿದ್ದ ಪ್ರತಿಬಂಧಕವನ್ನು ದಾಟುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಲ್ಲಿಯೇ ಮಗುಚಿದೆ. ಬಸ್ಸಿನ ಗಾಜುಗಳು ಸಂಪೂರ್ಣ ಪುಡಿಯಾಗಿದ್ದ, ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿ ಒಟ್ಟು 30 ಪ್ರಯಾಣಿಕರಿದ್ದರು ಎನ್ನಲಾಗಿದೆ. ಸ್ಥಳೀಯರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಬೈಂದೂರು ಪೋಲಿಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿರುವ ಬಿ.ಎಂ ಸುಕುಮಾರ ಶೆಟ್ಟಿ ಅವರು ಬೈಂದೂರು ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ ಸದಸ್ಯ ಶಂಕರ ಪೂಜಾರಿ, ಟಿ.ಬಿ ಶೆಟ್ಟಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮೊದಲಾದವರು ಉಪಸ್ಥಿತರಿದ್ದರು. ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ನಾಮಪತ್ರ ಸಲ್ಲಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲಾ ಸಮೀಕ್ಷೆಗಳು ಬಿಜೆಪಿ ವಿರುದ್ಧವಾಗಿದ್ದರೂ, ರಾಜ್ಯದಲ್ಲಿ ಅಧಿಕಾರಿ ಹಿಡಿಯುತ್ತೇವೆ ಎಂಬ ಭ್ರಮಾಲೋಕದಲ್ಲಿ ಬಿಜೆಪಿ ನಾಯಕರಿದ್ದಾರೆ. ನಾಲ್ಕು ಬಾರಿ ಕುಂದಾಪುರದಿಂದ ಆಯ್ಕೆಯಾದ ಶಾಸಕರೇ ತನ್ನ ಜವಾಬ್ದಾರಿ ನಿಭಾಯಿಸದೆ ಶಾಸಕರಿಲ್ಲದ ಕ್ಷೇತ್ರಕ್ಕೆ ಮಲ್ಲಿಯಂತಾ ಸಮರ್ಥ ನಾಯಕನ ನಿಲ್ಲಿಸಿದೆ. ಮಾಜಿ ಶಾಸಕರ ಮನೆಯಲ್ಲಿ ಕುರೋದಕ್ಕೆ ಲಾಯ್ಕಾಗಿದ್ದು, ಮಲ್ಲಿ ಶಾಸಕರ ಕರ್ತವ್ಯ ನಿಭಾಯುಸುವ ತಾಕತ್ತಿದ್ದರಿಂದ ಅವರನ್ನು ಗೆಲ್ಲಿಸಬೇಕು ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ. ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಕ್ಕೆ ಕಳೆದ ಐದು ವರ್ಷದಲ್ಲಿ ಕೋಟ್ಯಾಂತರ ರೂ. ಅನುದಾನ ತಂದು ಅಭಿವೃದ್ಧಿ ಮಾಡಿದರೆ, ಕುಂದಾಪುರ ಶಾಸಕರು ಮನೆಯಲ್ಲಿ ಕೂತು ಕಲಾಹರಣ ಆಡಿದ್ದು, ಬಿಟ್ಟರೆ ಮತ್ತೇನು ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು. ಅಭ್ಯರ್ಥಿ ರಾಕೇಶ್ ಮಲ್ಲಿ ಮಾತನಾಡಿ, ಕುಂದಾಪುರ ವಿಧಾನ ಸಭೆ ಅಭಿವೃದ್ಧಿ ನನ್ನ ಕನಸಾಗಿದ್ದು, ಸಮಗ್ರ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ಈ ಬಾರಿ ಮತದಾರರು ಕಾಂಗ್ರೆಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರಿನ ಅಧಿದೇವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಮನ್ಮಹಾ ರಥೋತ್ಸವಕ್ಕೆ ಇಂದು ಜರುಗಿತು. ಚಾರಿತ್ರಿಕ ಹಿನ್ನೆಲೆಯುಳ್ಳ ಬೈಂದೂರು ರಥೋತ್ಸವದಲ್ಲಿ ಊರ ಪರವೂರ ಸಾವಿರಾರು ಭಕ್ತಸಮೂಹ ಪಾಲ್ಗೊಂಡು ಪುನೀತರಾಗುತ್ತಾರೆ. ಕಲಾವೈಭವಗಳಿಂದ ಕಂಗೊಳಿಸುವ ದೇವಾಲಯಕ್ಕೆ ವಾರ್ಷಿಕ ರಥೋತ್ಸವ ಇನ್ನಷ್ಟು ಮೆರಗನ್ನು ನೀಡಿತು. ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇಡಿ ನಗರವೇ ಸಜ್ಜಾಗಿದೆ. ಮಧ್ಯಾಹ್ನ ರಥೋತ್ಸವಕ್ಕೆ ಚಾಲನೆ ನೀಡಿದರೆ, ಸಂಜೆಯ ವೇಳೆಗೆ ರಥವನ್ನು ರಥಬೀದಿಯ ಉದ್ದಕ್ಕೂ ಏಳೆಯಲಾಗುತ್ತದೆ. ರಥಕ್ಕೆ ಗರ್ನಪಟ್ಟೆ ಕಟ್ಟಿದ ಹನ್ನೊಂದು ದಿನಗಳಿಗೆ ರಥೋತ್ಸವ ನಡೆಯುವುದೆಂಬ ಸೂಚನೆ ದೊರೆಯುತ್ತದೆ. ಒಟ್ಟು ಏಳು ದಿನಗಳ ಕಾಲ ನಡೆಯುವ ಉತ್ಸವವು ಧಾರ್ಮಿಕ ಕಾರ್ಯಗಳಿಂದ ಆರಂಭಗೊಳ್ಳುತ್ತದೆ. ಈ ಮಧ್ಯೆ ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ ನಡೆದ ಬಳಿಕ ರಥೋತ್ಸವ, ಅವಭೃಥೋತ್ಸವ ಕೊನೆಯಲ್ಲಿ ನಗರೋತ್ಸವ ನಡೆಯುತ್ತದೆ. ರಥೋತ್ಸವದ ಪೂರ್ವದಲ್ಲಿ ಮುಸ್ಲಿಂ ಭಾಂದವರನ್ನು ಆಹ್ವಾನಿಸುವ, ರಥೋತ್ಸವದ ಆರಂಭದಲ್ಲಿ ಬೈಂದೂರಿನ ಪೊಲೀಸ್ ಠಾಣಾಧಿಕಾರಿಯನ್ನು ಕರೆತಂದು ಚಾಲನೆ ದೊರಕಿಸುವ ಸಂಪ್ರದಾಯ ಇಂದಿಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ (ಎಂ) ಪಕ್ಷದ ಅಭ್ಯರ್ಥಿ ಸುರೇಶ್ ಕಲ್ಲಾಗಾರ ಅವರು ಬೈಂದೂರು ಚುನಾವಣಾಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಶ್ರೀನಿವಾಸ ನಾಮಪತ್ರ ಸ್ವೀಕರಿಸಿದರು. ಈ ಸಂದರ್ಭ ಸಿಪಿಐ(ಎಂ) ಪಕ್ಷದ ಬಾಲಕೃಷ್ಣ ಶೆಟ್ಟಿ, ವೆಂಕಟೇಶ ಕೋಣಿ,ದಾಸ ಭಂಡಾರಿ, ಗಣೇಶ ತೊಂಡೆಮಕ್ಕಿ ಮುಂತಾದವರು ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರವಿ ಶೆಟ್ಟಿ ಬೈಂದೂರು ಚುನಾವಣಾ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಜೆ.ಡಿ.ಎಸ್ ಪಕ್ಷದ ಕೆಂಚನೂರು ಶಾಲನಿ ಶೆಟ್ಟಿ, ಸಂದೇಶ್ ಭಟ್ ಉಪ್ಪುಂದ, ಯೋಗೀಶ ಶೆಟ್ಟಿ, ಮಂಜಯ್ಯ ಶೆಟ್ಟಿ, ಮನ್ಸೂರ್ ಇಬ್ರಾಹಿಂ ಹಾಜರಿದ್ದರು. ಚುನಾವಣಾಧಿಕಾರಿ ಶ್ರೀನಿವಾಸ ನಾಮಪತ್ರ ಸ್ವೀಕರಿಸಿದರು. ಈ ಸಂದರ್ಭ ಬೈಂದೂರು ತಹಶೀಲ್ದಾರ ಪುರಂದರ ಹೆಗಡೆ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ವಿಧಾನ ಸಭಾಕ್ಷೇತ್ರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ಚುನಾವಣೆ ಅಧಿಕಾರಿ ಕಚೇರಿಯಲ್ಲಿ ಕಳೆದ ಬಾರಿಯಂತೆ ಸಿಂಪಲ್ಲಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸೂಚಕರೊಂದಿಗೆ ಮಧ್ಯಾಹ್ನ 12ಕ್ಕೆ ಚುನಾವಣೆ ಅಧಿಕಾರಿ ಕಚೇರಿಗೆ ಆಗಮಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣೆ ಅಧಿಕಾರಿ ಟಿ.ಭೂಬಾಲನ್ ಅವರಿಗೆಮೂರು ಸೆಟ್ ನಾಮಪತ್ರ ಸಲ್ಲಿಸಿದರು. ಮೊದಲೆರಡು ಚುವಾವಣೆಯಲ್ಲಿಅದ್ದೂರಿಯಾಗಿ ನಾಮಪತ್ರ ಸಲ್ಲಿಸಿದ ಹಾಲಾಡಿ ಕಳೆದ ಬಾರಿ ಪಕ್ಷೇತರರಾಗಿ ಸಿಂಪಲ್ಲ್ಲಾಗಿ ನಾಮಪತ್ರ ಸಲ್ಲಿಸಿದ್ದು, ಈ ಬಾರಿ ಕೂಡಾ ಆಡಂಬರವಿಲ್ಲದೆ ನಾಮಪತ್ರ ಸಲ್ಲಿಸಿದರು. ನ್ಯಾಯವಾದಿ ಟಿ.ಬಿ. ಶೆಟ್ಟಿ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷಕಾಡೂರು ಸುರೇಶ ಶೆಟ್ಟಿ, ಕುಂದಾಪುರತಾಪಂ ಮಾಜಿ ಸದಸ್ಯ ಮಂಜು ಬಿಲ್ಲವ, ಬಿಜೆಪಿ ಕಾರ್ಯಕಾರಿಣಿ ಸದದ್ಯ ಕಿರಣ್ಕುಮಾರ್ ಕೊಡ್ಗಿ, ಯುವ ಮೋರ್ಚಾಅಧ್ಯಕ್ಷ ಸತೀಶ್ ಪೂಜಾರಿ, ಮೀನುಗಾರಿಕ ಪ್ರಕೋಷ್ಠ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ಕುಂದಾಪುರತಾಪಂ ಮಾಜಿಅಧ್ಯಕ್ಷ ಭಾಸ್ಕರ ಬಿಲ್ಲವ, ಪ್ರಧಾನ ಕಾರ್ಯದರ್ಶಿ ಶಂಕರಅಂಕದಕಟ್ಟೆ, ಸಾಮಾಜಿಕ ಕಾರ್ಯಕರ್ತ ಶರತ್ ಶೆಟ್ಟಿಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಾಮನ್‌ವೆಲ್ತ್ ಗೇಮ್ಸ್‌ನ ಪಂದ್ಯಾಟದಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿಯ ಸ್ಥಾನ ಪಡೆದುಕೊಂಡು ಹುಟ್ಟೂರಿಗೆ ಹಿಂತಿರುಗಿದ ವಂಡ್ಸೆ ಜಡ್ಡಿನ ಗುರುರಾಜ್ ಪೂಜಾರಿ ಅವರಿಗೆ ಕುಂದಾಪುರ , ವಂಡ್ಸೆ ಹಾಗೂ ಕೊಲ್ಲೂರಿನ ನಾಗರೀಕರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಕುಂದಾಪುರ ತಾಲೂಕು ಆಡಳಿತ ಕೊಲ್ಲೂರು ದೇವಸ್ಥಾನದ ವತಿಯಿಂದ ಗುರುರಾಜ್ ಪೂಜಾರಿ ಅವರನ್ನು ಗೌರವಿಸಲಾಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ಫ್ರೌಡಶಾಲೆ ಹಾಗೂ ಕಾಲೇಜಿನಲ್ಲಿ 5 ವರ್ಷ ವಿದ್ಯಾಭ್ಯಾಸ ಕಲಿಕೆಯ ಜತೆಗೆ ಇಲ್ಲಿನ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಗಂಜಿ ಊಟಮಾಡಿ ಕುಸ್ತಿ, ಕಬಡ್ಡಿ ಹಾಗೂ ಇತರ ಕ್ರೀಡೆ ಕಲಿತಿರಿರುವುದರಿಂದ ಇಂದು ಈ ಮಟ್ಟಕ್ಕೇರಲು ಸಹಕಾರಿಯಾಯಿತು. ತಾಯಿ ಮೂಕಾಂಬಿಕೆಯ ಆಶೀರ್ವಾದ ಹಾಗೂ ಧರ್ಮಸ್ಥಳದ ಮಂಜುನಾಥನ ಕೃಪೆಯಿಂದ ಮುಂದಿನ ಒಲಿಂಪಿಕ್ಸ್‌ನಲ್ಲಿಯೂ ಪದಕದ ಬೇಟೆ ಮುಂದುವರಿಸುತ್ತೇನೆ. ಮನದಿಂಗಿತ ವ್ಯಕ್ತಪಡಿಸಿದ ಕ್ರೀಡಾಪಟು: ಹಿಂದೆ ನಾನು ಮೂರು ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮೂರು ಪದಕಗಳನ್ನು ಪಡೆದುಕೊಂಡಾಗ ಯಾವುದೆ ಅಭಿಮಾನವನ್ನು ಪ್ರಕಟಿಸದೆ ಇದ್ದ ಹಲವಾರು ಮಂದಿ ಇದೀಗ ಅಭಿಮಾನವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗೆದ್ದ…

Read More