ನಾಗೂರಿನಲ್ಲಿ ಶಂಕರ ತತ್ತ್ವ ಪ್ರಸಾರ – ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ‘ವೇಂದಾತ ವಿಚಾರಗಳು ಅತ್ಯಂತ ತರ್ಕಬಧ್ಧವಾಗಿದ್ದು ಆಧುನಿಕ ವೈಜ್ಞಾನಿಕ ಅವ್ವೇಷಣೆಗಳಿಗೂ ಮೀರಿದ ಸತ್ಯವಾಗಿದೆ. ಸನಾತನ ಧರ್ಮದ ”ಏಕಂ ಸತ್ ವಿಪ್ರಾ ಬಹುಧಾವದಂತಿ”ಎನ್ನುವ ಮಾತನ್ನು ಆಚಾರ್ಯ ಶಂಕರ ಭಗವತ್ಪಾದರು ಒತ್ತಿ ತಿಳಿಸಿದರು. ಜ್ಞಾನದ ಅತ್ಯುತ್ತಮ ಸ್ತರದಲ್ಲಿನ ಅನುಭವವನ್ನು ಸರ್ವರಿಗೂ ತಲುಪುವಂತೆ ಅನೇಕ ಭಕ್ತಿ ಸ್ತೋತ್ರಗಳನ್ನು ರಚಿಸಿದರು. ಅವರ ಸ್ತೋತ್ರ ಸಾಹಿತ್ಯವು ಕಾವ್ಯಾತ್ಮಕವಾಗಿಯೂ ಶ್ರೇಷ್ಠವಾಗಿದ್ದು ಭಾವ ಪೂರ್ಣ ಹಾಡುವಿಕೆಯಿಂದ ಕೇಳುಗರು ತನ್ಮಯರಾಗುತ್ತಾರೆ’ ಎಂದು ಬೆಂಗಳೂರಿನ ಓಪ್ಟೀವ್ ಇಂಡಿಯಾದ ಉಪಾಧ್ಯಕ್ಷ ಶ್ರೀ ಜಗದೀಶ ಮಯ್ಯ ಇವರು ಸುವಿಚಾರ ಬಳಗ ಟ್ರಸ್ಟ್ ರಿ. ಮತ್ತು ಶಾಂಕರ ತತ್ತ್ವ ಪ್ರಸಾರ ಸಮಿತಿಯ ಆಶ್ರಯದಲ್ಲಿ ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ಏರ್ಪಡಿಸಿದ ಸರಣಿ ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡುತ್ತಾ ನುಡಿದರು.

Call us

Click Here

ನಾಗೂರು ಸಂದೀಪನ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಬಿ. ವಿಶ್ವೇಶ್ವರ ಅಡಿಗರು ದೀಪ ಬೆಳಗಿಸಿ ಉದ್ಘಾಟಿಸಿ ‘ನಹಿಜ್ಞಾನೇನ ಸದೃಶಂ’ ಶುದ್ಧ ಜ್ಙಾನ ಪ್ರಾಪ್ತಿಯಿಂದ ಭ್ರಮೆಯ ಬಂಧನ ಹರಿದು ಈ ಬದುಕಿನಲ್ಲಿಯೇ ಸಹಜ ಆನಂದಾನುಭೂತಿ ಹೊಂದಲು ಸಾಧ್ಯ ಎಂದು ವಿವರಿಸಿದ ಶಂಕರ ಭಗವತ್ಪಾದಕರ ಕುರಿತ ಅರಿವಿನ ಪ್ರಸರಣವು ವರ್ತಮಾನದ ಅವಶ್ಯಕತೆಯಾಗಿದೆ. ಎಂದರು.

ಶಂಕರ ತತ್ತ್ವ ಪ್ರಸಾರ ಅಭಿಯಾನಮ್‌ನ ಬೈಂದೂರು ತಾಲೂಕು ಸಂಚಾಲಕ ಉಪ್ಪುಂದ ಚಂದ್ರಶೇಖರ ಹೊಳ್ಳರು ‘ಆದಿ ಶಂಕರ ಭಗವತ್ಪಾದರು ಸ್ಥಾಪಿಸಿದ ಪ್ರಮುಖ ಆಮ್ನಾಯ ಪೀಠಗಳಲ್ಲಿ ಋಗ್ವೇದವನ್ನು ಪ್ರತಿನಿಧಿಸುವ ಪುರಿಪೀಠದ ಸಂಸ್ಥಾಪಕರು ಕುಂದ ನಾಡಿನ ಮೂಲದವರು. (ಶಿವಳ್ಳಿ.) ಭಗವತ್ಪಾದರು ಭಾರತ ವರ್ಷದ ಸಂಚಾರ ಕಾಲದಲ್ಲಿ ಮೂರು ಬಾರಿ ಈ ಪ್ರದೇಶದಲ್ಲಿ ಹಾದು ಹೊದಂತೆ ಕಂಡುಬರುತ್ತದೆ. ಕೊಲ್ಲೂರು, ಕೊಟಚಾದ್ರಿ, ಕ್ಷೇತ್ರದಲ್ಲಿ ಅವರ ಸಾಧನೆಯ ಪ್ರಭೆ ಇಂದಿಗೂ ಜಾಗ್ರತವಾಗಿದೆ’ ಎಂದು ತಿಳಿಸಿದರು.

ಸುವಿಚಾರ ಬಳಗ ಟ್ರಸ್ಟ್ ರಿ. ನ ಅಧ್ಯಕ್ಷ ಬಿ. ರಾಮಕೃಷ್ಣ ಸೇರೆಗಾರರು ಅಧ್ಯಕ್ಷತೆ ವಹಿಸಿ ‘ಪ್ರಜ್ಞಾವಂತ ಜನರು ಇಂಥ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶಕರಾಗಿ ಭಾಗವಹಿಸಿದರೆ ಸಮಾಜದ ಪರಿವರ್ತನೆಗೆ ಸಹಕಾರಿಯಾಗುತ್ತದೆ’ ಎಂದರು.

ಹವ್ಯಕ ಮಹಾಸಭಾದ ಅಧ್ಯಕ್ಷ ಯು. ಮಂಜುನಾಥ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಶ್ರೀಮತಿ ಯು. ವರಮಲಕ್ಷ್ಮೀ ಹೊಳ್ಳರ ಮಾರ್ಗದರ್ಶನಲ್ಲಿ ವಿಪ್ರರಂಜಿನಿ ಬಳಗದ ಸದಸ್ಯೆಯರಿಂದ ಆದಿ ಶಂಕರರು ರಚಿಸಿದ ‘ಭಜಗೋವಿಂದಮ್’, ‘ಗೋವಿಂದ ಅಷ್ಟಕ’, ‘ ಗುರು ಪಾದುಕಾಸ್ತೋತ್ರ’, ‘ರಂಗನಾಥ ಅಷ್ಟಕ’ ಇತ್ಯಾದಿಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯ್ತು.

Click here

Click here

Click here

Click Here

Call us

Call us

ವೇ.ಮೂ. ಚಂದ್ರಶೇಖರ ಭಟ್ಟರು ಶಂಕರ ಭಗವತ್ಪಾದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಂಕರ ಆಚಾರ್ಯ ಅಷ್ಟೋತ್ತರ ಶತನಾವಳಿಯನ್ನು ಪಠಿಸಲಾಯ್ತು.

ಯು. ಗಣೇಶ ಪ್ರಸನ್ನ ಮೈಯ್ಯರು ಕಾರ್ಯಕ್ರಮ ನಿರೂಪಿಸಿದರು. ಯು. ಸಂದೇಶ್ ಭಟ್ ಸ್ವಾಗತಿಸಿದರು. ವಿ.ಹೆಚ್ ನಾಯಕ ವಂದಿಸಿದರು. ರತ್ನಾಕರ ಉಡುಪ ಆತಿಥ್ಯ ವಹಿಸಿದ್ದರು.

 

Leave a Reply