Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದೇವಸ್ಥಾನಗಳ ಜೀರ್ಣೋದ್ಧಾರವಾದ ನಂತರ ದೇವಳದಲ್ಲಿ ಮುಖ್ಯವಾಗಿ ನಡೆಯಬೇಕಾದ ಪೂಜೆ, ಪುನಸ್ಕಾರ, ಯಜ್ಞ ಯಾಗಾದಿಗಳು, ಉತ್ಸವಗಳು ಭಜನೆ ಹಾಗೂ ಅನ್ನಸಂತರ್ಪಣೆ ಮುಂತಾದ ಕಾರ್ಯಗಳನ್ನು ಕ್ರಮಬದ್ಧವಾಗಿ ಮುಂದುವರಿಸಿಕೊಂಡು ಹೋಗಬೇಕು. ದೇವಳಗಳು ಧಾರ್ಮಿಕ ಶೃದ್ಧಾಕೇಂದ್ರವಾಗಿರಬೇಕೆ ಹೊರತು ವ್ಯವಹಾರ ಕೇಂದ್ರವಾಗಬಾರದು ಎಂದು ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಚಂದ್ರ ಬಿ. ಶಿರೂರಕರ್ ಹೇಳಿದರು. ಶಿರೂರು ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಿಯ ಸಾನಿಧ್ಯದಲ್ಲಿ ನಡೆದ 28ನೇ ಪುನರ್‌ಪ್ರತಿಷ್ಠಾ ವರ್ಧಂತ್ಯೋತ್ಸವದ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಕ್ತರು ತಮ್ಮ ವರ್ಷದ ದುಡಿಮೆಯಲ್ಲಿ ಒಂದು ದಿನದ ಗಳಿಕೆಯನ್ನು ದೇವಳದ ಧಾರ್ಮಿಕ ಕಾರ್ಯಗಳಿಗೆ ಮೀಸಲಿಟ್ಟರೆ ಸನ್ನಿಧಿಯಲ್ಲಿ ಇನ್ನೂ ಹೆಚ್ಚಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು. ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಅಧ್ಯಕ್ಷ ಕೆ.ಎನ್. ಆಚಾರ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಗೋಪಾಲ ಭೂಸೇನಹಳ್ಳಿ. ನಿವೃತ್ತ ಯೋಧ ರುಕ್ಮಾನಂದ ಮತ್ತವರ ಪತ್ನಿ ಶಿಕ್ಷಕಿ ಲತಾ, ಹಿರಿಯ ಪುರೋಹಿತ ಶ್ಯಾಮ ಅವಭೃತ್ ಅಳ್ವೆಗದ್ದೆ ಹಾಗೂ ಸಮಾಜದ ಹಿರಿಯರಿಗೆ ಸನ್ಮಾನಿಸಲಾಯಿತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕೂಡು ಕುಟುಂಬದಿಂದ ಒಂಟಿ ಕುಟುಂಬ ಆಯ್ತು. ಕೃಷಿಯಿಂದ ಸ್ವಾಪ್ಟ್ ವೇರ್ ಬಂತು. ಹೀಗೆ ಕುಟುಂಬದಿಂದ ಬೇರೆ ಬೇರೆ ಕಾರಣದಿಂದ ಹೊರ ಬಂದು ವಿಶ್ವದಾದ್ಯಂತ ಹಂಚಿಹೋದ ಕುಟುಂಬ ಸದಸ್ಯರಲ್ಲಿ ಸಂಬಂಧಗಳೇ ಶಿಥಿಲಗೊಳ್ಳುತ್ತಿರುವ ಆಧುನಿಕ ಯುಗ ಇದು. ಹೀಗಿರುವಾಗ ದೂರ ದೂರ ಹಂಚಿಹೋದ ಸುಮಾರು 200 ವರ್ಷದ ಹಿಂದಿನ ತಮ್ಮ ಪೂರ್ವಜರ ಸಂತತಿಯನ್ನು ಅರಸಿ ಸುಮಾರು ಎಂಟು ತಲೆಮಾರಿನ ಸಹೋದರ ಸಹೋದರಿಯರ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು ಒಂದಾಗಿ ತಮ್ಮ ಕಟುಂಬೋತ್ಸವವನ್ನು ಆಚರಿಕೊಂಡ ಅಪರೂಪದ ಆದರ್ಶ ಕಾರ್ಯಕ್ರಮ ಒಂದು ಇತ್ತೀಚೆಗೆ ಉಪ್ಪುಂದದ ಪ್ರಭು ಮನೆತನದಲ್ಲಿ ಜರುಗಿತು. ಯಾವುದೇ ಧಾರ್ಮಿಕ ಹಿನ್ನೆಲೆ ಇರದೇ ಕುಟುಂಬದ ಹಿರಿಯ ಸದಸ್ಯರ ಮನೆ ಅಂಗಳದಲ್ಲೇ ಆಯೋಜನೆ ಗೊಂಡ ಒಂದು ದಿನದ ಈ ಸಮ್ಮೇಳನವನ್ನು ಇಂದಿನ ತಲೆಮಾರಿನ ಹಿರಿಯರಾದ ಉಪ್ಪುಂದದ ಶ್ರೀಧರ ಪ್ರಭುರವರು ಉದ್ಗಾಟಿಸಿದರು. ಅವರು ಮಾತನಾಡಿ ‘ಗೋವಾದಿಂದ ವಲಸೆ ಬಂದು ಹಲವು ಕಡೆ ನೆಲೆನಿಂತ ನಮ್ಮ ಕುಟುಂಬದ ಪೂರ್ವಜರ ಸಂಪೂರ್ಣ ಇತಿಹಾಸ ಇನ್ನೂ ಸಿಗದಿದ್ದರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಇವರ ಆಶ್ರಯದಲ್ಲಿ 505 ಕಲಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಜರಗಿತು. ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್, ಹಿಂಜಾವೇ ಜಿಲ್ಲಾ ಸಹಸಂಚಾಲಕ ವಾಸುದೇವ ದೇವಾಡಿಗ, ರಾಘವೇಂದ್ರ ಗಾಣಿಗ, ರತ್ನಾಕರ ಗಾಣಿಗ, ಎನ್.ನರೇಶ ಕಿಣಿ, ಯಶವಂತ ಖಾರ್ವಿ, ಹಿಂಜಾವೇ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿ ತೌಹೀದ್ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಜರಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಕೋ.ಶಿವಾನಂದ ಕಾರಂತ್, ಮನುಷ್ಯನಿಗೆ ಕಣ್ಣುಗಳು ಅತ್ಯವಶ್ಯಕವಾಗಿದ್ದು, ಕಣ್ಣುಗಳ ಆರೈಕೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕಾಲ ಕಾಲಕ್ಕೆ ಕಣ್ಣುಗಳ ತಪಾಸಣೆ ನಡೆಸಿಕೊಂಡು ಬೇಕಾದ ಅಗತ್ಯ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು. ಕಣ್ಣಿನ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಜೀವನ ಅಂಧಕಾರದಲ್ಲಿ ಕಳೆಯಬೇಕಾಗುತ್ತದೆ ಎಂದು ಹೇಳಿದರು. ಗಂಗೊಳ್ಳಿ ಸೋಷಿಯಲ್ ವೆಲ್ಫೇರ್ ಫೆಡರೇಶನ್‌ನ ಅಧ್ಯಕ್ಷ ಅಯೂಬ್ ಬೆದ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್‌ನ ಅಧ್ಯಕ್ಷ ಮಡಿ ನಾಗರಾಜ ಖಾರ್ವಿ, ಉಡುಪಿ ಪ್ರಸಾದ್ ನೇತ್ರಾಲಯದ ತಜ್ಞವೈದ್ಯ ಡಾ.ರೋಹಿತ್, ತೌಹೀದ್ ಎಜ್ಯುಕೇಶನಲ್ ಟ್ರಸ್ಟ್‌ನ ಉಪಾಧ್ಯಕ್ಷ ಎಂ.ಇನಾಯತುಲ್ಲಾ, ಜಾಮಿಯಾ ಫಾತಿಮಾತುಝೋಹರಾ ಇಸ್ಲಾಹುಲ್ ಬನಾತ್‌ನ ಆಡಳಿತಾಧಿಕಾರಿ ಮಹಮ್ಮದ್ ಮತೀನ್ ಸಿದ್ಧಿಕಿ, ತೌಹೀದ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಖ್ತರ್ ಅಹಮ್ಮದ್ ಖಾನ್ ಮತ್ತಿತರರು ಉಪಸ್ಥಿತರಿದ್ದರು. ಕೇಶವ ಖಾರ್ವಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಗು ತನ್ನ ಸುತ್ತಲಿನ ಜನರರೊಂದಿಗೆ ಮುಕ್ತವಾಗಿ ಬೆರೆಯಲು ಭಾಷೆ ಅನಿವಾರ್ಯ. ವೈಜ್ಞಾನಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಮಾತೃಭಾಷೆ ದಾರಿದೀಪವಾಗುತ್ತದೆ. ಯಾವುದೇ ಭಾಷೆಯನ್ನು ಕಲಿಯಬೇಕಾದರೂ ಮಾತೃಭಾಷೆಯಲ್ಲಿ ಗಟ್ಟಿತನ ಅಗತ್ಯ. ಆದ್ದರಿಂದ ತಾಯಿಭಾಷೆಯ ಮೇಲೆ ಹಿಡಿತ ಸಾಧಿಸದೇ ಇನ್ನೊಂದು ಭಾಷೆಯನ್ನು ಕಲಿತರೂ ಅದು ನಿಷ್ಪ್ರಯೋಜಕ. ಆದ್ದರಿಂದ ಮಾತೃಭಾಷೆಯ ಮೇಲೆ ಹಿಡಿತ ಸಾಧಿಸಲು ಮಕ್ಕಳಿಗೆ ಎಳವೆಯಲ್ಲೇ ಅನೇಕ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಈ ದಿಸೆಯಲ್ಲಿ ಬಿದ್ಕಲ್‌ಕಟ್ಟೆ ಶಾಲೆಯಲ್ಲಿ ಹಮ್ಮಿಕೊಂಡಿರುವ ಚಾರಣ ಮಾಸಪತ್ರಿಕೆಯ ಅನಾವರಣ ಕಾರ್ಯಕ್ರಮ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಒಂದು ಅತ್ಯುತ್ತಮ ಸೃಜನಶೀಲ ಚಟುವಟಿಕೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತೀಶ ಅಡಿಗ ಮತ್ಯಾಡಿ ಇವರು ತಮ್ಮ ಮಗ ವಿಕಾಸನ ಹುಟ್ಟುಹಬ್ಬದ ಪ್ರಯುಕ್ತ ಪ್ರಾಯೋಜಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಮಾಸ ಪತ್ರಿಕೆ ಹಾಗೂ ವಿಜ್ಞಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸೈನಿಕರು ನಮ್ಮ ದೇಶಕ್ಕಾಗಿ ಊರು, ಕುಟುಂಬಗಳನ್ನು ತ್ಯಜಿಸಿ ಸೇವೆ ಸಲ್ಲಿಸುತ್ತಾರೆ. ಅವರ ಕುಟುಂಬಗಳಿಗೆ ಸಮಸ್ಯೆಯಾದಗ ಅದನ್ನು ವಿಚಾರಿಸಲು ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಅಗತ್ಯ ಎಂದು ಕರ್ನಾಟಕ ಪಶ್ಚಿಮ ವಲಯ ಐ.ಜಿ.ಪಿ. ಅರುಣ್ ಚಕ್ರವರ್ತಿ ಹೇಳಿದರು. ಅವರು ಮೂಡುಗಿಳಿಯಾರು ಹಿ.ಪ್ರಾ.ಶಾಲೆ ಮೈದಾನದಲ್ಲಿ ಪತ್ರಕರ್ತ ವಿಷ್ಣು ವಕ್ವಾಡಿ ವೇದಿಕೆಯಲ್ಲಿ ಜರಗಿದ ಗಿಳಿಯಾರು ಜನಸೇವಾ ಟ್ರಸ್ಟ್ ಅನಾವರಣ ಹಾಗೂ ಅಭಿಮತ ದಶಮಾನೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಜನಸೇವಾ ಟ್ರಸ್ಟ್ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಲಿ ಹಾಗೂ ಸಮಾಜಮುಖಿ ಕಾರ‍್ಯದಲ್ಲಿ ಮುಂದುವರಿಯಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಪ್ರಸನ್ನ ಗಣಪತಿ ದೇಗುಲದ ಧರ್ಮದರ್ಶಿ ಬೆಳ್ಳಿಪಾಡಿ ಹರಿಪ್ರಸಾದ್ ರೈ ಮಾತನಾಡಿ, ವಸಂತ್ ಗಿಳಿಯಾರ್ ನೇತೃತ್ವದಲ್ಲಿ ಉದ್ಘಾಟನೆಗೊಂಡಿರುವ ಜನಸೇವಾ ಟ್ರಸ್ಟ್ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತದೆ ಎನ್ನುವುದು ಉದ್ಘಾಟನೆಯ ಸಂದರ್ಭದಲ್ಲೇ ಕೈಗೊಂಡಿರುವ ಸಮಾಜಮುಖಿ ಕಾರ‍್ಯಗಳಿಂದ ತಿಳಿದುಬಂದಿದೆ ಎಂದರು. ದುಬೈನ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಟ್ರಸ್ಟ್ ಉದ್ಘಾಟಿಸಿ ಶುಭ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸತತ ಪ್ರಯತ್ನ ಮತ್ತು ಕ್ರೀಯಾಶೀಲತೆ ಒಬ್ಬ ವ್ಯಕ್ತಿಯನ್ನು ಉನ್ನತ ಮಟ್ಟ ಏರಲು ಸಹಾಯ ಮಾಡುತ್ತದೆ. ಪ್ರಯತ್ನ ನಿರಂತರವಾಗಿ ನಡೆಯುತ್ತಿರಬೇಕು ಅಲ್ಲದೇ ಅವಕಾಶಗಳು ಸಿಕ್ಕಾಗ ಗುಣಾತ್ಮಕವಾಗಿ ಬಳಸಿಕೊಳ್ಳಬೇಕು ವಿದ್ಯಾರ್ಥಿಗಳು ಇಂತಹ ಗುಣಗಳನ್ನು ತಮ್ಮ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ರೂಢಿಸಿಕೊಂಡರೆ, ತಮ್ಮ ಮುಂದಿನ ಜೀವನದಲ್ಲಿ ವಿಶೇಷ ಕೀರ್ತಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿಯ ೬ನೇ ತರಗತಿಯಲ್ಲಿ ಓದುತ್ತಿರುವ ಕುಮಾರ್ ರಕ್ಷಣ್ ಕುಂದಾಪುರ್ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ. ಪ್ರತಿಷ್ಠಿತ ಅಂತರಾಷ್ಟ್ರೀಯ ಒಲಂಪಿಯಾಡ್ ಸಂಸ್ಥೆ ನಡೆಸುವ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇಕಡಾ 99.77 ಅಂಕಗಳನ್ನು ಪಡೆದು ಪ್ರಥಮ ರ‍್ಯಾಂಕ್‌ನ್ನು ಪಡೆದನಲ್ಲದೇ , ನವದೆಹಲಿಯಲ್ಲಿ ನಡೆಯುವ ಅಂತಿಮ ಹಂತದ ಪರೀಕ್ಷೆಗೆ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾನೆ. ಈ ಪ್ರತಿಷ್ಠಿತ ಸಂಸ್ಥೆಯು ಈ ವಿದ್ಯಾರ್ಥಿಗೆ 15,000/- ರೂಪಾಯಿ ವಿಶೇಷ ಬಹುಮಾನವನ್ನು ನೀಡಿದೆ. ರಾಜ್ಯದಿಂದ ಆಯ್ಕೆಯಾಗುವ 3 ವಿದ್ಯಾರ್ಥಿಗಳಲ್ಲಿ ರಕ್ಷಣ್ ಮೊದಲಿಗನಾಗಿದ್ದಾನೆ. ಈ ಸಾಧನೆಯ ಬಗ್ಗೆ ವಿದ್ಯಾರ್ಥಿಯ ಪಾಲಕರು, ಶಾಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಸಂಭ್ರಮದ ಈಸ್ಟರ್ ಹಬ್ಬವನ್ನು ಚರ್ಚಿನ ಧರ್ಮಗುರು-ವಂದನೀಯ ರೊನಾಲ್ಡ್ ಮಿರಾಂದ, ರಾಕ್ಣೊಂ ಪತ್ರಿಕೆಯ ಸಂಪಾದಕರಾದ ವಂದನೀಯ ವೆಲೇರಿಯನ್ ಫೆರ್ನಾಂಡೀಸ್, ವಂದನೀಯ ರಿಚರ್ಡ್ ಸಲ್ದಾನ ರವರ ನೇತೃತ್ವದಲ್ಲಿ ಆಚರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಪಡುವಣ ಪ್ರೆಂಡ್ಸ್ ರಿ. ಪಡುವರಿ ಇದರ 9 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ನಾಟ್ಯೋತ್ಸವ ಸೋಮೇಶ್ವರ ಬೀಚ್ ರೋಡ್ ಪಡುವರಿಯಲ್ಲಿ ನಡೆಯಿತು. ಕಾರ್ಪೋರೇಶನ್ ಬ್ಯಾಂಕ್ ಕೊಲ್ಲೂರು ಉದ್ಯಮಿ ಚಂದ್ರಶೇಖರ ನಾವಡ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದು ಊರಿನ ಅಭಿವೃದ್ದಿಯನ್ನು ಬಿಂಬಿಸುವಂತದ್ದು ಅಲ್ಲಿನ ಯುವಕರ ಕ್ರಿಯಾಶೀಲತೆಯಾಗಿದೆ. ಪಡುವಣ ಪ್ರೆಂಡ್ಸ್ ಸಂಸ್ಥೆ ಸಮಾಜಮುಖಿ ಚಿಂತನೆಗಳಿಂದ ಹಲವು ಜನಪರ ಕಾರ್ಯಗಳನ್ನು ರೂಪಿಸಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದರು. ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಮದನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಹಾಪ್ರಬಂಧಕ ಎನ್.ಕೃಷ್ಣ ಬಿಲ್ಲವ, ಶಾರದಾ ಕಾಲೇಜು ಬಸ್ರೂರು ಉಪನ್ಯಾಸಕ ಪಾಂಡುರಂಗ ಮೊಗೇರ್,ಎಲ್.ಐ.ಸಿ.ಚೇರ್‌ಮನ್ ಕ್ಲಬ್ ಮೆಂಬರ್ ಈಶ್ವರ ಕೆ.ಜಿ, ಶಿವಸೇನಾ ಮುಖಂಡ ಹರೀಶ್ ತೋಳಾರ್,ನಾಗರಾಜ ತಾಂಡೇಲ್ ಅಧ್ಯಕ್ಷರು ರಾಮಕ್ಷತ್ರೀಯ ಯುವಕ ಸಮಾಜ ಬಂದೂರು, ಭರತ್‌ಸಿಂಗ್, ಪಡುವಣ ಪ್ರೆಂಡ್ಸ್ ಪಡುವರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಇಲ್ಲಿನ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ಹನುಮ ಜಯಂತಿ ಕಾರ್ಯಕ್ರಮ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಜರಗಿತು. ದೇವಸ್ಥಾನದಲ್ಲಿ ಶ್ರೀ ಮುಖ್ಯಪ್ರಾಣ ದೇವರಿಗೆ ವಿಶೇಷ ಅಭಿಷೇಕ, ಪವಮಾನ ಅಭಿಷೇಕ, ರುದ್ರಾಭಿಷೇಕ ಸಹಿತ ವಿವಿಧ ಪೂಜೆಗಳನ್ನು ಸಲ್ಲಿಸಲಾಯಿತು. ಸಾವಿರಾರು ಮಂದಿ ಭಕ್ತರು ದೇವಳಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಜರಗಿದವು. ಹನುಮಜ್ಜಯಂತಿ ಪ್ರಯುಕ್ತ ರಾತ್ರಿ ಗಂಗೊಳ್ಳಿ ಬೀದಿಯಲ್ಲಿ ಶ್ರೀದೇವರ ಪಲ್ಲಕಿ ಉತ್ಸವ, ವಸಂತ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿತು ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಅನುಷ್ಠಾನಗಳು ಸಂಪನ್ನಗೊಂಡಿತು.

Read More