ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಗ್ದರ ಮೇಲೆ ಗಧಾಪ್ರಹಾರ ಒಳ್ಳೆಯ ಬೆಳವಣಿಗೆಯಲ್ಲ. ಬಿಜೂರು ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ ವಿರುದ್ದ ಅವಿಶ್ವಾಸ ಮಂಡನೆ ಶಾಸಕ ಕೆ. ಗೋಪಾಲ ಪೂಜಾರಿಯವರ ಷಡ್ಯಂತ್ರದ ಒಂದು ಭಾಗ. ಅವರ ಈ ನಡೆಯಿಂದ ಹಿಂದುಳಿದ ದೇವಾಡಿಗ ಸಮುದಾಯಕ್ಕೆ ಮಾಡಿದ ಅಪಚಾರವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ ಆರೋಪಿಸಿದರು. ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಕ್ಕೆ ಎಂದಿಗೂ ಜಯವಿದೆ ಎಂಬುವುದು ಇಂದಿನ ಈ ಪ್ರಕರಣದಿಂದ ಸಾಬೀತಾಗಿದೆ. ಯಾವುದೇ ತೊಡಕಿಲ್ಲದೇ ಸಸೂತ್ರವಾಗಿ ಆಡಳಿತ ನಡೆಸುತ್ತಿರುವವ ಅಧ್ಯಕ್ಷೆಯನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಇಲ್ಲಿನ ಶಾಸಕರು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವ ಸಂಚು ರೂಪಿಸಿರುವುದು ವಿಷಾದನೀಯ. ಬೈಂದೂರು ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ೫ ನದಿಗಳು ಹರಿಯುತ್ತಿದ್ದರೂ, ಇನ್ನೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವುದು ಈ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಕಳೆದ ಮೂರು ತಿಂಗಳಿಂದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರಲ್ಲಿ ಕಳೆದ 20 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಬದಲಿಗೆ ಕ್ಷೇತ್ರದಲ್ಲಿ ಮೊದಲಿದ್ದ ಮಹಿಳಾ ಪೋಲಿಸ್ ಠಾಣೆ ಇಲ್ಲಿಂದ ಸ್ಥಳಾಂತರಗೊಂಡಿದೆ. ಜಿಲ್ಲೆಯಲ್ಲಿ ಉಡುಪಿ ಬಿಟ್ಟರೆ ಅತೀ ಹೆಚ್ಚು ವಾಹನ ನೋಂದಣಿಯಾಗುವ ಕುಂದಾಪುರದಲ್ಲಿ ಬಹು ವರ್ಷಗಳಿಂದ ಎಆರ್‌ಟಿಓ ಕಛೇರಿ ಬೇಡಿಕೆ ಇದೆ. ಆದರ ಈ ಕುರಿತು ಕನಿಷ್ಠ ಕಾಳಜಿಯನ್ನು ಕೂಡಾ ಇಲ್ಲಿನ ಶಾಸಕರು ಹಾಗೂ ಸಂಸದರು ಹೊಂದಿಲ್ಲ. ಸರಕಾರಿ ಕಛೇರಿಗಳು ಇರುವುದು ಜನರಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸಲೇ ಹೊರತು ಅಧಿಕಾರಿಗಳ ಸಂಪತ್ತು ಹೆಚ್ಚಿಸಿಕೊಳ್ಳಲು ಅಲ್ಲ. ಕುಂದಾಪುರ ಕ್ಷೇತ್ರದಾದ್ಯಂತ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾಗಿದ್ದ ಜನಪ್ರತಿನಿಧಿಗಳು ಪರೋಕ್ಷವಾಗಿ ಅದನ್ನು ಬೆಂಬಲಿಸುತ್ತಿದ್ದಾರೆ. ಇಲ್ಲಿನ ಮೂಲಭೂತ ಸಮಸ್ಯೆಗಳಾದ ಸಿಆರ್‌ಝಡ್, ಡೀಮ್ಡ್ ಫಾರೆಸ್ಟ್, ಕಸ್ತೂರಿರಂಗನ್ ವರದಿ ಜಾರಿಯ ಕುರಿತು ಕುಂದಾಪುರ ಕಾಂಗ್ರೆಸ್ ಸಮಿತಿ ಆತಂಕಿತವಾಗಿದೆ. ಈ ಬಾರಿ ಕುಂದಾಪುರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಇಲ್ಲಿನ ಅಭಿವೃದ್ಧಿ ಕುರಿತಾದ ಮತ್ತು ಭ್ರಷ್ಟಾಚಾರದ ವಿರುದ್ಧದ ಕೆಲಸ ಮಾಡಲು ಅನುವು ಮಾಡಿಕೊಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಪ್ಪುಂದ: ಇಲ್ಲಿನ ಶಂಕರ ಕಲಾಮಂದಿರದ ವ್ಯವಸ್ಥಾಪಕ, ಕಾರಂತ್ ಡೆಕೊರೇಟರ‍್ಸ್ ಮಾಲಕ ಬೈಂದೂರು ಅಣ್ಣಪ್ಪಯ್ಯ ಕಾರಂತ್(೫೦) ಸೋಮವಾರ ಮಧ್ಯಾಹ್ನ ೩ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರಂತ್, ಪತ್ನಿ, ಪುತ್ರ ಹಾಗೂ ಪುತ್ರಿಯನ್ನ ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸಿಟಿ ಪಾಯಿಂಟ್‌ನಲ್ಲಿ ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸೋಮವಾರ ಉದ್ಘಾಟನೆಗೊಂಡಿತು. ಯಳಜಿತ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕರಾದ ಮಂಗೇಶ್ ಶೆಣೈ ಅವರು ಸಹಕಾರಿಯನ್ನು ಉದ್ಘಾಟಿಸಿದರು. ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿಯ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ ಎಸ್.ಕೆ, ಉಪಸ್ಥಿತರಿದ್ದರು. ವೇದಿಕೆಯಿಲ್ಲಿ ನಿರ್ದೇಶಕರುಗಳಾದ ಬೀಮೇಶ್ ಕುಮಾರ್ ಎಸ್. ಜಿ, ಬಾಲಕೃಷ್ಣ ಪ್ರಭು, ರಾಜೇಶ್ ಪೈ, ಬಿ. ರಾಜಶ್ರೀ, ಮೋಹಿನಿ ಜಿ. ಶೆಟ್ಟಿ, ಟಿ. ನಾಗರತ್ನಮ್ಮ ಉಪಸ್ಥಿತರಿದ್ದರು. ನಿವೃತ್ತ ಕಾರ್ಯನಿರ್ವಾಹಕ ಜಗನ್ನಾಥ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಕಾರಿಯ ಉಪಾಧ್ಯಕ್ಷ ಗೋಪಾಲಕೃಷ್ಣ ಕೆ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕಾರಂತ್ ವಂದಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸೇವಾ ಸಂಗಮ ಶಿಶು ಮಂದಿರ ಮತ್ತು ಕಿರಿ ಭಜನಾ ಮಂಡಳಿಯ ಆಶ್ರಯದಲ್ಲಿ ಯೋಗ ಶಿಕ್ಷಕಿ ಕುಮಾರಿ ಗಗನಾ ಅವರಿಂದ ಮಹಿಳೆಯರಿಗೆ 21 ದಿನಗಳ ಯೋಗ ತರಭೇತಿ ಶಿಬಿರವನ್ನು ಪ್ರಾರಂಭಿಸಲಾಯಿತು. ಇದರ ಉದ್ಘಾಟನೆಯನ್ನು ಸೇವಾ ಸಂಗಮ ಶಿಶು ಮಂದಿರ ಬೈಂದೂರು ಇದರ ವ್ಯವಸ್ಥಾಪಕರಾದ ದಿನೇಶ್ ಕೆ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಶಿಶು ಮಂದಿರದ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಯೋಗ ಎಂದರೆ ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುವ ಕ್ರಿಯೆ. ನಾವು ಸದಾ ಕ್ರೀಯಾಶೀಲರಾಗಿರ ಬೇಕಾದರೆ ಮತ್ತು ನಿರೋಗಿಯಾಗಿರ ಬೇಕಾದರೆ ಪ್ರತಿನಿತ್ಯ ಯೋಗ ಮಾಡುವುದರಿಂದ ಮಾತ್ರ ಸಾಧ್ಯ. ಎಂದು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಡಿದರು. ಭಜನಾ ಮಂಡಳಿಯ ಅಧ್ಯಕ್ಷರಾದ ಸುಜಾತಾ ರಾವ್ ಸ್ವಾಗತಿಸಿದರು. ಕಾರ್ಯದರ್ಶಿಯವರಾದ ಆಶಾ ದಿನೇಶ್ ವಂದಿಸಿದರು ಮತ್ತು ಶಿಶು ಮಂದಿರದ ಉಪಾಧ್ಯಕ್ಷರಾದ ರವೀಂದ್ರ ಶಾನುಭೋಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಶು ಮಂದಿರದ ಮಾತಾಜೀ ಕುಮಾರಿ ನಯನ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ಷೇತ್ರ ಪುರಾಣ ಇತಿಹಾಸವನ್ನು ಸಂಗ್ರಹಿಸಿ ರಂಗದಲ್ಲಿ ಸಾಕ್ಷಾತ್ಕಾರಗೊಂಡಾಗ ಕ್ಷೇತ್ರದ ಮಹಿಮೆ ಸಾರುವ ಜೊತೆಗೆ ನಮ್ಮ ಕಲೆ ಮತ್ತು ಸಂಸ್ಕೃತಿ ಭದ್ರವಾಗಿ ನೆಲೆಗೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಶ್ಲಾಘನೀಯ ಎಂದು ಡಾ.ರಾಜೇಶ್ ಕುಮಾರ ಶೆಟ್ಟಿ ಹೇಳಿದರು. ಅವರು ಕಾಳಾವರ ಶ್ರೀ ದೇವಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹರಿದಾಸ ಕೆ.ಕೆ.ಕಾಳಾವರ್‌ಕಾರ್ ಅವರ ಕಥಾ ಚಿಂತನ‘ ಸಂಧ್ಯಾಶ್ರಯ’ ಮತ್ತು ಅವರು ರಚಿಸಿದ ಕಚ್ಚೂರು ಶ್ರೀ ಮಾಲ್ತಿ ದೇವಿ ಮಹಿಮೆ ಯಕ್ಷಗಾನ ಕೃತಿ ಬಿಡುಗಡೆ ಮತ್ತು ಪ್ರದರ್ಶನದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡಿದರು. ಉಪನ್ಯಾಸಕ ಸುಧಾಕರ ವಕ್ವಾಡಿ ಪ್ರಸಂಗ ಪ್ರದರ್ಶನ ಉದ್ಘಾಟಿಸಿದರು. ಕುಂದಾಪುರದ ವಕೀಲರಾದ ಸತೀಶ್ಚಂದ್ರ ಕಾಳಾವರ್‌ಕಾರ್ ಪ್ರಸಂಗ ಕೃತಿ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಹಟ್ಟಿಯಂಗಡಿ ಮೇಳದ ಯಜಮಾನ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ, ವಾದ್ಯ ವೃಂದ ಕಲಾತಂಡದ ಮಂಜುನಾಥ ದೇವಾಡಿಗ ಪ್ರಸಂಗ ಕರ್ತ ಹರಿದಾಸ್.ಕೆ.ಕೆ ಕಾಳಾವರ್‌ಕಾರ್ ಇವರನ್ನು ಊರಿನ ನಾಗರಿಕರು ಮತ್ತು ಮೇಳದ ವತಿಯಿಂದ ಸನ್ಮಾನಿಸಲಾಯಿತು. ಕೆ.ಕೆ.ಕಾಳಾವರ್‌ಕಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ನಾವುಂದ: ಜಯ ಕರ್ನಾಟಕ ಜಿಲ್ಲಾ ಯುವ ಘಟಕ ಮತ್ತು ಬೈಂದೂರು ತಾಲೂಕು ಯುವ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಪದಗ್ರಹಣ ಸಮಾರಂಭ ನಾವುಂದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆಯಿತು. ಜಯ ಕರ್ನಾಟಕದ ಸಂಘಟನೆಯ ರಾಜಾಧ್ಯಕ್ಷ ಎಚ್.ಎಸ್.ದೀಪಕ್ ಉದ್ಘಾಟಿಸಿ ಮಾತನಾಡಿ, ಯುವ ಘಟಕವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಎಚ್.ಎಸ್.ದೀಪಕ್, ನಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಸಂಘಟನೆ ಬಲಿಷ್ಠವಾಗಿರಬೇಕು. ಜಯ ಕರ್ನಾಟಕ ಸಂಘಟನೆ ಉತ್ತಮ ಸಂಘಟನೆಯಾಗಿದ್ದು, ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು. ಸರಕಾರಿ ಆಸ್ಪತ್ರೆಗಳಲ್ಲಿ ಗರಿಷ್ಠ ಸೌಲಭ್ಯಕ್ಕಾಗಿ ಹೋರಾಟ ನಡೆಸಿದ ಪರಿಣಾಮ ಇಂದು ಸರಕಾರ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ವಿಶೇಷ ಆರೋಗ್ಯ ಪ್ಯಾಕೆಜ್ ಒದಗಿಸಿದೆ. ಈ ಸಂಘಟನೆಯ ಶಾಲನ್ನು ನೋಡಿದರೆ ಭ್ರಷ್ಟ ಅಧಿಕಾರಿ ವರ್ಗದವರು ಭಯಪಡುತ್ತಿದ್ದಾರೆ ಇದು ನಮ್ಮ ಸಂಘಟನೆಯಿಂದ ಸಾಧ್ಯವಾಗಿದೆ. ರಾಜ್ಯದ ಯಾವುದೇಪ್ರದೇಶದಲ್ಲಿ ನಮ್ಮ ಸದಸ್ಯರಿಗೆ ಅನ್ಯಾಯವಾದಲ್ಲಿ ತ್ವರಿತವಾಗಿ ಸ್ಪಂದಿಸುತ್ತೇವೆ ಎಂದರು. ಸಮಾರಂಭ ಅಧ್ಯಕ್ಷತೆಯನ್ನು ಜಯಕರ್ನಾಟಕ ಜಿಲ್ಲಾಧ್ಯಕ ಅಧ್ಯಕ್ಷ ಹಾಗೂ ಆಶ್ರಯದಾತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಂದು ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಯಾಗಿ ಉಳುವವನೇ ಹೊಲದೊಡೆಯ ಖಾಯಿದೆಯನ್ನು ಜಾರಿಗೊಳಿಸಿ ಭೂಮಿಯ ಹಕ್ಕನ್ನು ಬಡ ಗೇಣಿದಾರರಿಗೆ ನೀಡುವ ಮೂಲಕ ಆ ವರ್ಗಕ್ಕೆ ಭೂಮಾಲೀಕರ ಶೋಷಣೆಯಿಂದ ಮುಕ್ತಿ ಕೊಡಿಸಿ ಸ್ವಾವಲಂಭಿ ಬದುಕು ಬದುಕಲು ಹಾದಿ ಮಾಡಿಕೊಟ್ಟರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಅನಾಥ ವೃದ್ಧರು, ಅಂಗವಿಕಲರು, ಖಾಯಿಲೆ ಪೀಡಿತರು, ಮಕ್ಕಳಿಲ್ಲದ ವಿಧವೆಯರು ಮುಂತಾದವರು ತಮ್ಮ ಹಸಿವು ನೀಗಿಸಿಕೊಳ್ಳಲು ಇನ್ನೊಬ್ಬರ ಮುಂದೆ ಕೈ ಚಾಚದೇ ಸ್ವಾಭಿಮಾನಿ ಬದುಕು ಬದುಕಲು ಹಾದಿ ಮಾಡಿಕೊಟ್ಟಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದುವ ಬಡವರ್ಗದ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದೆಂದು ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತ ಸತತ ಭರದಿಂದ ಕಂಗೆಟ್ಟು ಆತ್ಮಹತ್ಯೆಗೆ ತೊಡಗಿದಾಗ ಅವರ ೫೦,೦೦೦ ತನಕದ ಕೃಷಿ ಸಾಲ ಮನ್ನಾ ಮಾಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಶೋಷಿತರ, ಧಮನಿತರ ಪರ ಯೋಜನೆಗಳನ್ನು ನೀಡಿದ ಏಕೈಕ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮತದಾನವೆಂಬುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂಬ ಅರಿವು ಮಾಯವಾಗಿದೆ. ದೂರವಾಗುತ್ತಿದೆ. ಚುನಾವಣೆ ಅಭ್ಯಥಿಯಾಗಬೇಕಾದರೇ ಹಣ ಬೇಕು ಎಂಬ ಭಾವನೆ ಎಲ್ಲರಲ್ಲಿಯೂ ಇದ್ದು, ಜನರಲ್ಲಿನ ಈ ಮನಸ್ಥಿತಿ ಬದಲಾಗಬೇಕಿದೆ. ಹಣದ ಬದಲಿಗೆ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆರಿಸುವ ಕೆಲಸವಾದಾಗ ಪ್ರಜಾಪ್ರಭುತ್ವಕ್ಕೊಂದು ಅರ್ಥ ಬರುತ್ತದೆ ಎಂದು ನಿರ್ದೇಶಕ, ನಟ ರಾಜ್ ಬಲ್ಲಾಳ್ ಹೇಳಿದರು. ಅವರು ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಮತದಾನವೆಂಬುದು ಅಮೂಲ್ಯವಾದ ಕರ್ತವ್ಯ. ಒಂದು ಮತದಿಂದ ಏನೂ ಆಗದು ಎನ್ನುವ ಬದಲು ಅದೇ ಒಂದು ಮತ ಒಬ್ಬ ಅರ್ಹ ಅಭ್ಯರ್ಥಿಯನ್ನು ಗೆಲ್ಲುವಂತೆ ಇಲ್ಲವೇ ಸೋಲುವಂತೆ ಮಾಡಬಹುದು ಎಂಬ ಅರಿವೂ ಜನಸಾಮಾನ್ಯರಲ್ಲಿಯೂ ಮೂಡಬೇಕು. ಹಣ ಹಾಗೂ ಇತರೇ ಆಮಿಷಗಳಿಗೆ ಬಲಿಯಾಗದೇ ಅರ್ಹರು ಆಯ್ಕೆಯಾಗುವಂತೆ ಆಗಬೇಕು ಎಂಬ ಉದ್ದೇಶದಿಂದ ಮತದಾರರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ರಾಜ್ಯದ ವಿವಿಧೆಡೆಗಳಲ್ಲಿ ಮತದಾರರ ಜಾಗೃತಿ ಅಭಿಯಾನ ಕೈಗೊಳ್ಳುವ ಉದ್ದೇಶವಿದ್ದು ಬೈಂದೂರು ವಿಧಾನಸಭಾ ಕ್ಷೇತ್ರದಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವೇಗದ ಹಾಗೂ ತಾಂತ್ರಿಕ ಬದುಕಿನ ನಡುವೆ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಕುರಿತು ನೈತಿಕವಾದ ಮಾರ್ಗದರ್ಶನ ನೀಡಬೇಕಾದ ಅನಿವಾರ್ಯತೆಯಿದೆ. ಶಾಲೆಯಲ್ಲಿ ದೊರೆಯುವ ಸರಕಾರಿ ಸೌಲಭ್ಯಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಸದಸ್ಯ ಶಂಕರ ಪೂಜಾರಿ ಹೇಳಿದರು. ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಕಪ್ಪಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಸಭಾಧ್ಯಕ್ಷತೆವಹಿಸಿದ್ದ ಜಿಪಂ ಶಿಕ್ಷಣ ಹಾಗೂ ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಮಾತನಾಡಿ, ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ದಿ ಶಿಕ್ಷಣದ ಗುರಿಯೆನಿಸಿದೆ. ಅದರ ಸಾಧನೆಗೆ ವಿದ್ಯಾರ್ಥಿ, ಶಿಕ್ಷಕ, ಪೋಷಕರ ಸಂಯೋಜಿತ ತ್ರಿಕೋನ ಸ್ಪಂದನೆ ಜತೆಗೆ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಶಿಕ್ಷಣಾಭಿಮಾನಿಗಳು ಕೂಡಾ ಆಸಕ್ತಿವಹಿಸಿದರೆ ಮಾತ್ರ ಶಿಕ್ಷಣ ಸಂಸ್ಥೆಗಳು ಸುಸ್ಥಿತಿಯಲ್ಲಿ ಮುಂದುವರಿಯಲು ಸಾಧ್ಯ. ಪೋಷಕರು ಮಕ್ಕಳ ಭವಿಷ್ಯವನ್ನು ಶಾಲೆ ಮತ್ತು ಶಿಕ್ಷಕರಿಗೆ ಒಪ್ಪಿಸಿ ನಿಶ್ಚಿಂತರಾಗುವಂತಿಲ್ಲ. ಅವರು ಮಕ್ಕಳಿಗೆ ಒಳ್ಳೆಯ…
