ಬೈಂದೂರು ಸೇವಾ ಸಂಗಮ ಶಿಶು ಮಂದಿರದಲ್ಲಿ ಯೋಗ ತರಭೇತಿ ಶಿಬಿರ ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸೇವಾ ಸಂಗಮ ಶಿಶು ಮಂದಿರ ಮತ್ತು ಕಿರಿ ಭಜನಾ ಮಂಡಳಿಯ ಆಶ್ರಯದಲ್ಲಿ ಯೋಗ ಶಿಕ್ಷಕಿ ಕುಮಾರಿ ಗಗನಾ ಅವರಿಂದ ಮಹಿಳೆಯರಿಗೆ 21 ದಿನಗಳ ಯೋಗ ತರಭೇತಿ ಶಿಬಿರವನ್ನು ಪ್ರಾರಂಭಿಸಲಾಯಿತು.

Call us

Click Here

ಇದರ ಉದ್ಘಾಟನೆಯನ್ನು ಸೇವಾ ಸಂಗಮ ಶಿಶು ಮಂದಿರ ಬೈಂದೂರು ಇದರ ವ್ಯವಸ್ಥಾಪಕರಾದ ದಿನೇಶ್ ಕೆ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಶಿಶು ಮಂದಿರದ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಯೋಗ ಎಂದರೆ ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುವ ಕ್ರಿಯೆ. ನಾವು ಸದಾ ಕ್ರೀಯಾಶೀಲರಾಗಿರ ಬೇಕಾದರೆ ಮತ್ತು ನಿರೋಗಿಯಾಗಿರ ಬೇಕಾದರೆ ಪ್ರತಿನಿತ್ಯ ಯೋಗ ಮಾಡುವುದರಿಂದ ಮಾತ್ರ ಸಾಧ್ಯ. ಎಂದು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಡಿದರು. ಭಜನಾ ಮಂಡಳಿಯ ಅಧ್ಯಕ್ಷರಾದ ಸುಜಾತಾ ರಾವ್ ಸ್ವಾಗತಿಸಿದರು. ಕಾರ್ಯದರ್ಶಿಯವರಾದ ಆಶಾ ದಿನೇಶ್ ವಂದಿಸಿದರು ಮತ್ತು ಶಿಶು ಮಂದಿರದ ಉಪಾಧ್ಯಕ್ಷರಾದ ರವೀಂದ್ರ ಶಾನುಭೋಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಶು ಮಂದಿರದ ಮಾತಾಜೀ ಕುಮಾರಿ ನಯನ ಕಾರ್ಯಕ್ರಮ ನಿರೂಪಿಸಿದರು.

Leave a Reply