Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ೨೦೧೭ರ ಜುಲೈನಲ್ಲಿ ನಡೆಸಿದ ಸ್ನಾತಕೋತ್ತರ ಪರೀಕ್ಷೆಯ ಎಮ್.ಟೆಕ್ ಕಂಪ್ಯೂಟರ್ ಸಾಯನ್ಸ್ ವಿಭಾಗದಲ್ಲಿ ಆರ್.ಎನ್.ಎಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾದ ಬೈಂದೂರಿನ ಸ್ವಾತಿ. ಬಿ. ಶೆಟ್ಟಿ 3ನೇ ರ‍್ಯಾಂಕ್ ಪಡೆದಿರುತ್ತಾರೆ. ಪ್ರಸ್ತತ ಇವರು ಕಾಲೇಜಿನ ಕ್ಯಾಂಪಸ್ ಆಯ್ಕೆಯ ಮೂಲಕ ಬೆಂಗಳೂರಿನ ಪ್ರತಿಷ್ಠಿತ IBM ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೈಂದೂರಿನ ಶ್ರೀ ಮಂಜುನಾಥ ಮೆಡಿಕಲ್ಸ್‌ನ ಮಾಲೀಕರಾದ ಮಂಜುನಾಥ ಶೆಟ್ಟಿ ಮತ್ತು ನಾಗರತ್ನ ಎಮ್. ಶೆಟ್ಟಿಯವರ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀದುರ್ಗಾ ನೃತ್ಯ ಅಕಾಡೆಮಿ ಮೈಸೂರು ಇವರು ಏರ್ಪಡಿಸಿದ ರಾಷ್ಟ್ರ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ 4 ವಿಭಾಗಗಳಲ್ಲಿ ಕೇರಳ, ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 200ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದು, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಸಂಸ್ಥೆಯಿಂದ ಸ್ಪರ್ಧಿಸಿದ 8 ಮಕ್ಕಳು ಬಹುಮಾನ ಗಳಿಸಿ ಅಚ್ಚರಿಗೊಳಿಸಿದ್ದಾರೆ. ಸಬ್ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿದ ಕುಮಾರಿ ಗಾರ್ಗಿದೇವಿ ಪ್ರಥಮ ಸ್ಥಾನ ಪಡೆದು ನಾಟ್ಯ ಮಯೂರಿ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಜೂನಿಯರ್ ವಿಭಾಗದಲ್ಲಿ ನಿಯತಿ.ಎಚ್.ಕೆ ಪ್ರಥಮ ಸ್ಥಾನಿಯಾಗಿ ನಾಟ್ಯವರ್ಷಿಣಿ ಪ್ರಶಸ್ತಿ ಗಳಿಸಿದ್ದಾಳೆ. ಸೀನಿಯರ್ ವಿಭಾಗದಲ್ಲಿ ಭಾಗವಹಿಸಿದ ಬಿ.ಯುಕ್ತಿ ಉಡುಪ ತೃತೀಯ ಸ್ಥಾನ ಗಳಿಸಿದ್ದಾಳೆ. ಓಪನ್ ಕ್ಯಾಟಗರಿಯಲ್ಲಿ ಭಾಗವಹಿಸಿದ ಮೈತ್ರಿ ಪಿ.ಆರ್ ಪ್ರಥಮ ಸ್ಥಾನ ಪಡೆದು ನಾಟ್ಯ ರತ್ನ ಪ್ರಶಸ್ತಿಗಳಿಸಿರುತ್ತಾರೆ. ಎಲ್ಲ್ಲಾ ವಿಭಾಗಗಳಲ್ಲಿ ಕಠಿಣ ಸ್ಪರ್ಧೆ ಇದ್ದು ವಿಶೇಷವೆಂದರೆ ಜೂನಿಯರ್ ವಿಭಾಗದಲ್ಲಿ ೮೫ ಸ್ಪರ್ಧಿಗಳಿದ್ದು ನೃತ್ಯ ವಸಂತ ನಾಟ್ಯಾಲಯದಿಂದ ಸ್ಪರ್ಧಿಸಿದ 5 ವಿದ್ಯಾರ್ಥಿಗಳು ಪ್ರಥಮ ದ್ವಿತೀಯ, ತೃತೀಯ, ಚತುರ್ಥ, ಪಂಚಮ ಸ್ಥಾನಿಯಾಗಿ ಹೊರಹೊಮ್ಮಿರುವುದು ವಿಶೇಷವಾಗಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವಕರನ್ನು ಆಕರ್ಷಿಸಿ, ಅವರಲ್ಲಿ ಸ್ಫೂರ್ತಿ ಪ್ರೇರಣೆ ತುಂಬಿ ಉತ್ತಮ ವ್ಯಕ್ತಿತ್ವ ರೂಪಿಸುವ ಏಕೈಕ ಸಂಸ್ಥೆ ಜೇಸಿಯಾಗಿದೆ ಎಂದು ಜೇಸಿ ವಲಯಾದ್ಯಕ್ಷ ರಾಕೇಶ್ ಕುಂಜೂರು ಹೇಳಿದರು. ಅವರು ಕೋಟೇಶ್ವರದ ಸಹನ ಕನ್‌ವೆನ್‌ಶನ್ ಸೆಂಟರ್‌ನ ಸುಮೇದಾ ಒಪನ್ ಪಾರ್ಕ್‌ನಲ್ಲಿ ನಡೆದ ಜೇಸಿಐ ಕುಂದಾಪುರ ಸಿಟಿಯ ೨೦೧೮ನೇ ಸಾಲಿನ ಪದ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜೇಸಿ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ನೂತನ ಅಧ್ಯಕ್ಷ ಪಿ.ಜಯಚಂದ್ರ ಶೆಟ್ಟಿ ಮತ್ತು ತಂಡದವರಿಗೆ ಪದಪ್ರದಾನ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಜೇಸಿಐ ಇಂಡಿಯಾ ಫೌಂಡೇಶನ್‌ನ ನಿರ್ದೇಶಕ ವೈ.ಸುಕುಮಾರ್, ರೋಟರಿ ಕ್ಲಬ್ ಕುಂದಾಪುರದ ಪೂರ್ವಾಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ, ಜೇಸಿ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ಕಾರ್ತಿಕೇಯ ಮಧ್ಯಸ್ಥ, ಜೇಸಿರೆಟ್ ಅಧ್ಯಕ್ಷೆ ಗೀತ ಸುವರ್ಣ, ಜೆಜೇಸಿ ಅಧ್ಯಕ್ಷ ಕಾರ್ತಿಕ್, ನಿರ್ಗಮನ ಕಾರ್ಯದರ್ಶಿ ಪ್ರಶಾಂತ್ ಹವಲ್ದಾರ್, ನಿರ್ಗಮನ ಜೆಜೇಸಿ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಶಾಖೆ ಆಶ್ರಯದಲ್ಲಿ ಇಲ್ಲಿನ ಆರ್.ಎನ್. ಶೆಟ್ಟಿ ಭವನದಲ್ಲಿ ಸ್ವಾಮಿ ವಿವೇಕಾನಂದ 155ನೇ ಜನ್ಮದಿನದ ಅಂಗವಾಗಿ ಯುವಜಾಗೃತಿ ವಿದ್ಯಾರ್ಥಿ ಸಮಾವೇಶ ಜರುಗಿತು. ಎಬಿವಿಪಿ ಕ್ಷೇತ್ರೀಯ ಸಹ ಸಂಘಟನಾ ಕಾರ‍್ಯದರ್ಶಿ ವಿನಯ ಬಿದರೆ ಮಾತನಾಡಿ ಲವ್ ಜಿಹಾದ್ ಸತ್ಯ. ನೆರೆಯ ಕೇರಳರಾಜ್ಯದಲ್ಲಿ 990ಯುವತಿಯರು ಲೌವ್‌ ಜಿಹಾದಿಗೆ ಬಲಿಯಾಗಿದ್ದು, ಅವರಲ್ಲಿ 960 ಯುವತಿಯರ ಕತೆ ಏನಾಯಿತು ಎನ್ನೋದು ಗೊತ್ತಿಲ್ಲ. ಐಸಿಸ್ ಸೇರಿದರಾ? ಭಯೋತ್ಪಾಕರ ವಶವಾದರಾ? ಮಾರಾಟ ಮಾಡಲಾಯಿತಾ ಎನ್ನೋದು ಇನ್ನೂ ನಿಗೂಢ. ಲವ್ ಜಿಹಾದ್ ಮೂಲಕ ಮತಾಂತರವಷ್ಟೇ ಅಲ್ಲಾ ರಾಷ್ಟ್ರಾಂತರ ಕೃತ್ಯ. ಮತಾಂತರಗೊಂಡವರು ಮಾತೃಭೂಮಿಗೆ ದ್ರೋಹ ಬಗೆಯುವ ಮಟ್ಟಕ್ಕೆ ಮೈಡ್‌ವಾಶ್ ಮಾಡಲಾಗುತ್ತದೆ ಎಂದರು. ರಾಷ್ಟ್ರೀಯತೆ ಕೆಲಸ ಮಾಡುತ್ತಿರುವ ಸಂಘಟನೆಗಳಿಗೆ ಉಗ್ರಗಾಮಿ ಪಟ್ಟಕಟ್ಟುತ್ತಿದ್ದು, ಲವ್ ಜಿಹಾದ್ ಜಾಲದಿಂದ ಯುವತಿಯರ ರಕ್ಷಣೆ, ರಾಷ್ಟ್ರ ವಿರೋಧ ಭಯೋತ್ಪಾದಕ ಕೃತ್ಯ ವಿರುದ್ಧ ನಿರಂತರ ಹೋಡಾಡುತ್ತಿರುವ ಸಂಘಟನೆಗಳ ಕೇಸರಿ ಉಗ್ರರೆಂದರೆ ನಾವು ಹಿಂಜರಿಯಲಾರೆವು. ಭಾರತೀಯ ಸನಾತನ ಸಂಸ್ಕೃತಿ ರಕ್ಷಣೆU…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮ ಕಾನೂನು ಮತ್ತು ನೀತಿ ನಿಯಮಗಳ ಬಗೆಗೆ ಪ್ರತೀ ನಾಗರಿಕರಲ್ಲಿಯೂ ಕನಿಷ್ಠ ಪ್ರಜ್ಞೆ ಇರಬೇಕು.ಮತ್ತು ಈ ಕುರಿತಂತೆ ಸಮಾಜದಲ್ಲಿನ ಜನರಲ್ಲೂ ಜಾಗೃತಿ ಮೂಡಿಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಗಂಗೊಳ್ಳಿ ಕರಾವಳಿ ಕಾವಲು ಪೋಲಿಸ್ ಠಾಣೆಯ ನಿರೀಕ್ಷಕರಾದ ಜಿ.ಎಮ್ ನಾಯ್ಕರ್ ಅಭಿಪ್ರಾಯಪಟ್ಟರು. ಅವರು ಅಪರಾಧ ತಡೆ ಮಾಸಾಚರಣೆ ಅ೦ಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಗಂಗೊಳ್ಳಿಯ ಕರಾವಳಿ ಕಾವಲು ಪೋಲಿಸ್ ಠಾಣೆಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ‍್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಅಪರಾಧ ಕೃತ್ಯಗಳ ಬಗೆಗೆ ಕೆಟ್ಟ ಕುತೂಹಲವನ್ನು ಬೆಳೆಸಿಕೊಳ್ಳಬೇಡಿ. ಈ ವಿಷಯದಲ್ಲಿ ಒಮ್ಮೆ ಇಡುವ ತಪ್ಪು ಹೆಜ್ಜೆ ನಮ್ಮ ಇಡೀ ಜೀವನವನ್ನೇ ಬಲಿತೆಗೆದುಕೊಳ್ಳಬಹುದು. ಸ್ನೇಹಿತರನ್ನು ಆರಿಸಿಕೊಳ್ಳುವಾಗಲೂ ಎಚ್ಚರಿಕೆಯಿರಲಿ. ಎಂದು ಅವರು ಕಿವಿಮಾತು ಹೇಳಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾ೦ಶುಪಾಲರಾದ ಥಾಮಸ್ ಪಿ ಎ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಗಂಗೊಳ್ಳಿ ಕರಾವಳಿ…

Read More

ಕನ್ನಡದ ಉಳಿವಿಗೆ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು: ಹರಿಕೃಷ್ಣ ಪುನರೂರು ಕುಂದಗನ್ನಡಕ್ಕೆ ಅಧ್ಯಯನ ಪೀಠ ಸ್ಥಾಪನೆಯಾಗಲಿ: ಸಮ್ಮೇಳನಾಧ್ಯಕ್ಷ ಡಾ. ಎಚ್. ಶಾಂತರಾಮ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದು ಕನ್ನಡ ಭಾಷೆ ಸಂದಿಗ್ದತೆಯಲ್ಲಿದೆ, ಅದರ ಉಳಿವಿಗಾಗಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಸರ್ಕಾರಕ್ಕೆ ಭಾಷೆಯ ಬಗ್ಗೆ ಕಾಳಜಿಯಿಲ್ಲದ ಕಾರಣದಿಂದಾಗಿ ದಿನಕ್ಕೊಂದು ಆಂಗ್ಲಮಾಧ್ಯಮ ಶಾಲೆ ತೆರೆಯಲು ಅನುಮತಿ ನೀಡುತ್ತಿದೆ. ಇದರಿಂದಾಗಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯ ಕೊರತೆಯಿಂದ ಮುಚ್ಚಲ್ಪಡುತ್ತಿದೆ. ಅಧಿಕಾರಿಗಳಿಗೆ ಕನ್ನಡದ ಅರಿವಿಲ್ಲ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಿಷಾದ ವ್ಯಕ್ತಪಡಿಸಿದರು. ಖಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜಿನ ಮೊಗೇರಿ ಗೋಪಾಲ ಕೃಷ್ಣ ವೇದಿಕೆಯ, ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ೧೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವರ್ಧಮಾನ ೨೦೧೮ನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕನ್ನಡದ ಉಸಿರುಗಟ್ಟುತ್ತಿದೆ ಎಂದ ಅವರು ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಯುವ ಪೀಳಿಗೆ ಮನಸ್ಸನ್ನು…

Read More

ಕುಂದಾಪ್ರ ಡಾಟ್ ಕಾಂ ಲೇಖನ. ಹಿಂದೂ ಧರ್ಮದ ನವೋನನ್ಯತೆಯನ್ನು ಜಗದುದ್ದಗಲಕ್ಕೆ ಪಸರಿಸಿದ, ಭಾರತ ಉಪಖಂಡದ ಯುವಚೈತನ್ಯವನ್ನೂ ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನ ಇಂದು. ಇದೇ ಹಿನ್ನೆಲೆಯಲ್ಲಿ ಜ.12ನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಯುವ ಶಕ್ತಿ, ಸಾಮರ್ಥ್ಯದ ಬಗ್ಗೆ ಅರಿವು ಹೊಂದಿದ್ದ ವಿವೇಕಾನಂದರು, ತಮ್ಮೆಲ್ಲ ಬೋಧನೆಗಳಲ್ಲಿ ಯುವಜನತೆ ಮತ್ತು ದೇಶವನ್ನು ಕೇಂದ್ರೀಕರಿಸುತ್ತಿದ್ದರು. ನರೇಂದ್ರ ದತ್ತ: ಇದು ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು ಜನನ: 1863 ಜನವರಿ 12. ಕಲ್ಕತ್ತಾ(ಬ್ರಿಟಿಷ್‌ ಇಂಡಿಯಾ) ಮರಣ: 1902 ಜುಲೈ 4. ಪಶ್ಚಿಮ ಬಂಗಾಳದ ಬೇಲೂರು ಮಠ. ಗುರು: ಶ್ರೀ ರಾಮಕೃಷ್ಣ ಪರಮಹಂಸರು ಫಿಲಾಸಫಿ: ಆಧುನಿಕ ವೇದಾಂತ ಮತ್ತು ರಾಜಯೋಗ ಸಂಸ್ಥೆ ಸ್ಥಾಪನೆ: ರಾಮಕೃಷ್ಣ ಮಿಷನ್‌, ರಾಮಕೃಷ್ಣ ಮಠ ಶಿಷ್ಯರು: ಅಶೋಕಾನಂದ, ವಿರಾಜಾನಂದ, ಪರಮಾನಂದ, ಅಳಸಿಂಗ ಪೆರುಮಾಳ್‌, ಅಭಯಾನಂದ, ಸಿಸ್ಟರ್‌ ನಿವೇದಿತಾ, ಸ್ವಾಮಿ ಸದಾನಂದ ಸಾಹಿತ್ಯ: ರಾಜ ಯೋಗ, ಕರ್ಮ ಯೋಗ, ಭಕ್ತಿ ಯೋಗ, ಜ್ಞಾನ ಯೋಗ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮೈಸೂರಿನ ಮಹಾಜನ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ ಅವರು ದ್ವಿತೀಯ ಸ್ಥಾನ ಗಳಿಸಿ ಬೆಂಗಳೂರಿನ ಬಸವನಗುಡಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಗಂಗೊಳ್ಳಿಯ ಗೋಪಾಲ ಚಂದನ್ ಮತ್ತು ಡಾ.ವೀಣಾ ಕಾರಂತ್ ದಂಪತಿಯ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆ ಸಮೀಪವಿರುವ ಗೋಪಾಲ ಶೇರುಗಾರ್‌ ಅವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ವಿರುವ ಬದ್ರುದ್ದೀನ್‌ ಅವರು ರಾತ್ರಿ ಕೆಲಸ ಮುಗಿಸಿ ಬಂದು, ಮನೆ ಪಕ್ಕ ನಿಲ್ಲಿಸಿದ್ದ ಪ್ಲಾಟಿನಾ ಬೈಕ್‌ಗೆ ಕಿಡಿಗೇಡಿಗಳು ಮಂಗಳವಾರ ಬೆಳಗ್ಗಿನ ಜಾವ 4.30ರ ಸುಮಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ರವಿವಾರ ತಡರಾತ್ರಿ ನಡೆದ ಬೈಕ್‌ಗೆ ಬೆಂಕಿಯಿಕ್ಕಿದ ಕೃತ್ಯದ ಬಳಿಕ ಮತ್ತೂಂದು ಬೈಕ್‌ಗೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ ಘಟನೆ ಮಂಗಳವಾರ ಬೆಳಗ್ಗಿನ ಜಾವ ಸಂಭವಿಸಿದೆ. ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆ ಸಮೀಪವಿರುವ ಗೋಪಾಲ ಶೇರುಗಾರ್‌ ಅವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ವಿರುವ ಬದ್ರುದ್ದೀನ್‌ ಅವರು ರಾತ್ರಿ ಕೆಲಸ ಮುಗಿಸಿ ಬಂದು, ಮನೆ ಪಕ್ಕ ನಿಲ್ಲಿಸಿದ್ದ ಪ್ಲಾಟಿನಾ ಬೈಕ್‌ಗೆ ಕಿಡಿಗೇಡಿಗಳು ಮಂಗಳವಾರ ಬೆಳಗ್ಗಿನ ಜಾವ 4.30ರ ಸುಮಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮನೆ ಮಾಲಕ ಗೋಪಾಲ ಶೇರು ಗಾರ್‌ ಮೂತ್ರ ವಿಸರ್ಜನೆಗೆಂದು ಎದ್ದಾಗ ಮನೆ ಹೊರಗಿನಿಂದ ಸುಟ್ಟ ವಾಸನೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ಷೇತ್ರದ ಬಗ್ಗೆ ಸದಾ ಚಿಂತಿಸುವ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುವ ಗೋಪಾಲ ಪೂಜಾರಿ ಅವರು ಕ್ರೀಯಾಶೀಲ ಹಾಗೂ ಜನಪರ ಕಾಳಜಿಯ ಶಾಸಕ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಬೈಂದೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿ ತಿಂಗಳಿಗೆ 3-4 ಭಾರಿಯಾದರೂ ನನ್ನನ್ನು ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಿಪಾರಸ್ಸು ಪಡೆದುಕೊಂಡು ಹೋಗುತ್ತಾರೆ. 20-30 ಸಮಸ್ಯೆಗಳ ಪಟ್ಟಿಯನ್ನು ತಂದು ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಕುಳಿತುಕೊಳ್ಳಿ ಎಂದರು ಕೇಳದೇ ಅಷ್ಟೂ ಕಡತಕ್ಕೆ ಸಹಿ ಹಾಕಿಸಿಕೊಳ್ಳುವ ತನಕವೂ ನಿಂತೇ ಇರುತ್ತಾರೆ. ಕ್ಷೇತ್ರದ ಅಭಿವೃದ್ಧಿಯ ವಿಚಾರ ಹೊರತುಪಡಿಸಿ ಬೇರೆ ಕಾರಣಕ್ಕೆ ಭೇಟಿಯಾದ ಸಂದರ್ಭವೇ ತನಗೆ ನೆನಪಿಲ್ಲ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಅವರ ಕಾರ್ಯವೈಖರಿಯನ್ನು ಸಿಎಂ ಶ್ಲಾಘಿಸಿದರು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಿಎಂಗೆ ಮನವಿ ಸಲ್ಲಿಸಿದರು. ಸನ್ಮಾನಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ:…

Read More