ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ ಬೈಂದೂರು ಆಶ್ರಯದಲ್ಲಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗ ಸುರಭಿ 2017 ರಾಜ್ಯ ಮಟ್ಟದ ನಾಟಕೋತ್ಸವವು ಡಿಸೆಂಬರ್ 23ರಿಂದ ಡಿಸೆಂಬರ್ 31ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಬೈಂದೂರಿನ ಶ್ರೀ ಶಾರದಾ ವೇದಿಕೆ ಜರುಗಿದೆ ಎಂದು ಸುರಭಿ ರಿ. ಬೈಂದೂರು ಇದರ ನಿರ್ದೇಶಕ ಸುಧಾಕರ ಪಿ. ಬೈಂದೂರು ತಿಳಿಸಿದರು. ಬೈಂದೂರಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾಟಕೋತ್ಸವದ ವಿವರ ನೀಡಿದರು. ಡಿಸೆಂಬರ್23 ಶನಿವಾರ ಭೂಮಿಕಾ ಹಾರಾಡಿ ಪ್ರಸ್ತುತಿಯ ನಾಟಕ ’ಮದುವೆ ಹೆಣ್ಣು’ ರಚನೆ ಡಾ. ಎಚ್. ಎಸ್ ಶಿವಪ್ರಕಾಶ್, ನಿರ್ದೇಶನ: ರೋಹಿತ್ ಎಸ್. ಬೈಕಾಡಿ, ಡಿಸೆಂಬರ್24 ಭಾನುವಾರ ಚಿತ್ತಾರ ಬೆಂಗಳೂರು ಪ್ರಸ್ತುತಿಯ ನಾಟಕ ’ಸಂಜೆ ಹಾಡು’ ರಚನೆ ಹಾಗೂ ನಿರ್ದೇಶನ ರಾಜೇಂದ್ರ ಕಾತಂತ್ ಬೆಂಗಳೂರು, ಡಿಸೆಂಬರ್25 ಸೋಮವಾರ ರಂಗಸೌರಭ ಬೆಂಗಳೂರು ಪ್ರಸ್ತುತಿಯ ನಾಟಕ ’ಮಾವಿನಗುಡಿ ಕಾಲೋನಿ’…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಶಾಲೆಗಳ ಉಳಿಸುವ ಜವಾಬ್ದಾರಿ ಸರ್ಕಾರಕ್ಕೆ ಸೀಮಿತವಲ್ಲ. ಸಾಹಿತ್ಯ ಪರಿಷತ್ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಉಳಿಸುವ ಸಾಹಸಕ್ಕೆ ಮುಂದಾಗದಿದ್ದರೆ, ಶಾಲೆ ಕಾಲಕ್ರಮೇಣ ಮುಚ್ಚಿಹೋಗಲಿದೆ. ಸರ್ಕಾರ ಎರಡು ಮಕ್ಕಳಿದ್ದರೂ ಶಾಲೆ ಮುಚ್ಚುವುದಿಲ್ಲ ಎನ್ನುತ್ತಿದ್ದರೂ ಮಕ್ಕಳೇ ಬಾರದಿದ್ದರೆ ಶಾಲೆ ನಡೆಯುವದಾದರೂ ಹೇಗೆ? ಇತರ ಭಾಷೆ ಜತೆ ಕನ್ನಡ ಉಳಿಸುವ ಪ್ರಯತ್ನ ಆಗಬೇಕಿದೆ ಎಂದು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ.ಕೊಡ್ಗಿ ಹೇಳಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಕ್ಲಾಡಿ ಎಸ್ಸೆಸ್ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸ್ಮಾರಕ ಪ್ರೌಢ ಶಾಲೆಯಲ್ಲಿ ನಡೆದ ೧೬ನೇ ತಾಲೂಕ್ ಕನ್ನಡ ಸಾಹಿತ್ಯ ಸಮ್ಮೇಳನ ಭೂಮಿಗೀತಾ ಸಮಾರೋಪದಲ್ಲಿ ಮಾತನಾಡಿ, ಕನ್ನಡ ಉಳಿವಿಗಾಗಿ ಏಕೀಕರಣಕ್ಕೆ ಹೋರಾಟ ಮಾಡಬೇಕಿದ್ದರೂ ಬಂದ್, ಆಸ್ತಿಪಾಸ್ತಿಗೆ ಹಾನಿ ಮಾಡದ ಹೋರಾಟದಿಂದ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಇಂದು ಭಾರತೀಯ ಸಂಸ್ಕೃತಿ ಮರೆಯಾಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ನಾವು ಒಲಸೆ ಹೋಗುತ್ತಿದ್ದೇವೆ. ಅಂಗ್ಲಾ ವ್ಯಾಮೋಹ ಕನ್ನಡ ಕಡೆಗಣಿಸಲಾಗುತ್ತಿದೆ. ಕನ್ನಡಕ್ಕೆ ಮೊದಲ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪುನರ್ ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶೆಟ್ಟಿಗಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ-ಬಸವರಾಜ ಶೆಟ್ಟಿಗಾರ್, ಶ್ರೀಧರ ನಾಯ್ಕ್, ಕೋಶಾಧಿಕಾರಿ- ರಾಜೇಶ ಪ್ರಭು ಹಾಗೂ ರಂಜನ್ ಉಡುಪ, ಕಾರ್ಯದರ್ಶಿ- ಗಣೇಶ ಶೆಟ್ಟಿ, ಜೊತೆ ಕಾರ್ಯದರ್ಶಿ- ನಿತೇಶ್ ಮೊಗವೀರ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ- ನರೇಶ್, ಉಪಾಧ್ಯಕ್ಷ- ಪುರುಷೋತ್ತಮ ಕಾಮತ್, ಕ್ರೀಡಾ ಸಮಿತಿ ಅಧ್ಯಕ್ಷ- ಧೀಕ್ಷಾ ಆಚಾರ್ಯ, ಉಪಾಧ್ಯಕ್ಷ- ಸುಬ್ರಹ್ಮಣ್ಯ ದೇವಾಡಿಗ, ಸಾಮಾಜಿಕ ಜಾಲತಾಣದ ಪ್ರಚಾರ ಸಮಿತಿ- ಶರತ್ ಮೆಂಡನ್, ಪ್ರಮೋದ ಶೆಟ್ಟಿಗಾರ್ ಆಯ್ಕೆಯಾದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿಗಳ ಕಲಿಕಾ ಮಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಕೌಶಲ್ಯದ ಕೊರತೆ ಕಂಡುಬಂದಿದ್ದು, ಆಧುನಿಕತೆಗೆ ತಕ್ಕಂತೆ ಬದಲಾವಣೆಗೆ ಹೊಂದುವ ಅವಶ್ಯಕತೆಯಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ್ತ ಶಿಕ್ಷಣ ನೀಡುವ ಉದ್ದೇಶದಿಂದ ಎಜ್ಯುಕೇನಲ್ ಟ್ರಸ್ಟ್ ಆರಂಭಿಸಲಾದ ಈ ಟ್ರಸ್ಟ್ ಉತ್ತಮ ಪ್ರಗತಿ ಸಾಧಿಸುವಂತಾಗಲಿ ಎಂದು ಉಪ್ಪುಂದ ಕುಂದ ಅಧ್ಯಯನ ಕೇಂದ್ರ ಅಧ್ಯಕ್ಷ ಯು. ಚಂದ್ರಶೇಖರ್ ಹೊಳ್ಳ ಹೇಳಿದರು. ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಪ್ಪುಂದ ಎಜ್ಯುಕೇಶನಲ್ ಸರ್ವೀಸ್ ಟ್ರಸ್ಟ್ ಇದರ ಉದ್ಘಾಟನಾ ಸಮಾರಂಭ ಹಾಗೂ ನೂತನ ವಿದ್ಯಾಂಗ ಉಪನಿರ್ದೇಶಕರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿ ಕನ್ನಡ ಶಾಲೆಗಳಿಲ್ಲಿ ಮಕ್ಕಳ ಕೊರತೆ ಕಂಡುಬರುತ್ತಿದೆ. ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗೆ ಬರಲಿ ಮಕ್ಕಳು ಕೇಳುತ್ತಿಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆಗೆ ಎಷ್ಟು ಮಹತ್ವಾ ನೀಡುತ್ತೇವೆ ಅಷ್ಟೇ ಮಹತ್ವವನ್ನು ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಿಗೆ ಒತ್ತು ನೀಡಬೇಕು. ನಾವು ಇದ್ದಾಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ 3 ಪ್ರಮುಖ ರಾಜಕೀಯ ಪಕ್ಷದ ಐವರು ಮುಖ್ಯಮಂತ್ರಿಗಳು ರಾಜ್ಯಭಾರ ಮಾಡಿದ್ದರೂ ಕೂಡ ಸುಂದರ ಕರ್ನಾಟಕದ ಬಗ್ಗೆ ಕನಸೇ ಕಂಡಿಲ್ಲ. ಬದಲಾಗಿ ಅಧಿಕಾರ ಉಳಿಸಿಕೊಳ್ಳುವ ಬಗ್ಗೆ ಚಿಂತೆ ಮಾಡಿರುವುದರಿಂದ ರಾಜ್ಯ ಅಭಿವೃದ್ಧಿ ವಿಚಾರದಲ್ಲಿ 25 ವರ್ಷ ಹಿಂದುಳಿದಿದೆ ಎಂದು ಯುವ ಬ್ರಿಗೇಡ್ನ ಮಾರ್ಗದರ್ಶಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರು ತಲ್ಲೂರಿನ ಕುಂತಿ ಅಮ್ಮ ದೇವಸ್ಥಾನದ ಆವರಣದಲ್ಲಿ ಯುವ ಬ್ರಿಗೇಡ್ ಕುಂದಾಪುರ ವತಿಯಿಂದ ಆಯೋಜಿಸಿದ ನನ್ನ ಕನಸಿನ ಕರ್ನಾಟಕ ಕುರಿತ ಬಹಿರಂಗ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿ ಶಿರಾಡಿ ಘಾಟ್ ಪ್ರತಿ ಮಳೆಗಾಲದಲ್ಲೂ ಸಂಚಾರ ಸ್ಥಗಿತವಾಗುತ್ತದೆ. ನಮ್ಮನ್ನಾಳುವ ವರ್ಗಕ್ಕೆ ಕನಿಷ್ಠ 10 ವರ್ಷಕ್ಕೆ ಬಾಳಿಕೆ ಬರುವ ರಸ್ತೆ ನಿರ್ಮಿಸಲು ಇಷ್ಟು ವರ್ಷದಲ್ಲಿ ಇನ್ನೂ ಸಾಧ್ಯವಾಗಿಲ್ಲ. ಕೃಷ್ಣ- ಗೋದಾವರಿ ನದಿ ನೀರಿನ ದೊಡ್ಡ ಯೋಜನೆಯನ್ನು ಆಂಧ್ರಪ್ರದೇಶದಲ್ಲಿ ಕೇವಲ ಒಂದೇ ವರ್ಷದಲ್ಲಿ ಪೂರ್ಣ ಮಾಡಿರುವ ಉದಾಹರಣೆಯಿದ್ದರೂ, ನಾನು ಹುಟ್ಟಿದ 3ನೇ ವರ್ಷಕ್ಕೆ ಆರಂಭವಾದ ಉಡುಪಿಯ ಅತಿ…
ಕುಂದಾಪ್ರ ಡಾಟ್ ಕಾಂ. ಬೈಂದೂರಿನಲ್ಲಿಯೇ ಪ್ರಥಮ ಭಾರಿಗೆ ಶ್ರೀ ಸೌಪರ್ಣಿಕಾ ಡೆವೆಲಪರ್ಸ್ ಹಾಗೂ ಮಹಾವೀರ ಕನ್ಸ್ಟ್ರಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಸರ್ವ ಸುಸಜ್ಜಿತವಾದ ವಸತಿ ಸಮುಚ್ಚಯದ ಒಂದನೇ ಹಂತದ ಅಪಾರ್ಟ್ಮೆಂಟ್ನ ಎಲ್ಲಾ ಪ್ಲಾಟ್ಗಳು ಮುಂಗಡವಾಗಿ ವಿಕ್ರಯಗೊಂಡಿದ್ದು, ಇದೀಗ ಎರಡನೇ ಹಂತದ ಅಪಾರ್ಟ್ಮೆಂಟ್ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದೆ. ಬೈಂದೂರು ಪಟ್ಟಣದಿಂದ ಅನತಿ ದೂರದಲ್ಲಿ ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗುತ್ತಿರುವ ಪೇಸ್-೧ ಹಾಗೂ ಪೇಸ್-೨ ಅಪಾರ್ಟ್ಮೆಂಟ್ ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದ್ದು ಕೈಗೆಟುಕುವ ದರದಲ್ಲಿ, ಗರಿಷ್ಠ ಸೌಲಭ್ಯದೊಂದಿದೆ ಗ್ರಾಹಕರಿಗೆ ಲಭ್ಯವಾಗಲಿದೆ. ೧ ಬಿಹೆಚ್ಕೆ ಹಾಗೂ ೨ ಬಿಹೆಚ್ಕೆ ಅಪಾರ್ಟ್ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ೫೦೦ಮೀಟರ್ ದೂರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ೭೦೦ ಮೀಟರ್ ದೂರದಲ್ಲಿ ಸೈಂಟ್ ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ ೧.೫ಕಿ.ಮೀ ದೂರದಲ್ಲಿ ಮುಖ್ಯ ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಇನ್ನಿತರ ಸೇವೆಗಳು ಲಭ್ಯವಾಗಲಿದೆ. ಬುಕ್ಕಿಂಗ್ ಪೂರ್ಣಗೊಂಡಿರುವ ಅಪಾರ್ಟ್ಮೆಂಟ್ ಪೇಸ್-೧ರಲ್ಲಿ ಮೂರು ಅಂತಸ್ತು ಈಗಾಗಲೇ ನಿರ್ಮಾಣಗೊಂಡಿದ್ದು, ಪೇಸ್-೨ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಪ್ರವಾಸೋಧ್ಯಮ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿರುವ ಉಡುಪಿ ಪರ್ಬ ಅಂಗವಾಗಿ ಕುಂದಾಪುರದ ಕೋಟೇಶ್ವರ ಕಿನಾರ ಬೀಚ್ನಲ್ಲಿ ಕೋಟೇಶ್ವರ ಕಿನರಾ ಬೀಚ್ ಉತ್ಸವ ಸಮಿತಿ ಆಯೋಜಿಸಿರುವ ಊರ್ಮನಿ ಹಬ್ಬದ ಪೂರ್ವಭಾವಿ ಸಭೆ ಕುಂದಾಪುರದ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿಗಳ ಕೋರ್ಟ್ ಸಭಾಂಗಣದಲ್ಲಿ ಜರುಗಿತು. ಸಭೆಯಲ್ಲಿ ಉತ್ಸವ ಸಮಿತಿ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯ ಲೋಕೋಪಯೋಗಿ ಇಲಾಖೆ, ಪುರಸಭೆ, ಪೊಲೀಸ್, ಗ್ರಾಮ ಪಂಚಾಯತ್ ಬೀಜಾಡಿ ಪಿ.ಡಿ.ಓ, ಕೊಲ್ಲೂರು ದೇವಳ ಅಧಿಕಾರಿ, ಅಗ್ನಿ ಶಾಮಕ ಠಾಣಾಧಿಕಾರಿ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ತಹಸೀಲ್ದಾರ್ ಇವರನ್ನು ಉದ್ದೇಶಿಸಿ ಮಾತನ್ನಾಡಿದ ಉಪವಿಭಾಗಧಿಕಾರಿ ಶಿಲ್ಪಾ ನಾಗ್ ಸಿ.ಟಿ ಅವರು ಕುಂದಾಪುರ ಪ್ರವಾಸೋಧ್ಯಮಕ್ಕೆ ಅತ್ಯಂತ ಸೂಕ್ತವಾದ ಪ್ರದೇಶ. ಇಲ್ಲಿ ನಿಸರ್ಗ ಸೌಂದರ್ಯ ಹಾಗೂ ಭಕ್ತಿ ಕೇಂದ್ರಗಳು ಜಗತ್ತಿನ ಜನರನ್ನು ಆಕರ್ಷಿಸುವಂತಾಗಬೇಕು. ಈ ಹಿನ್ನಲೆಯಲ್ಲಿ ಜಿಲ್ಲಾಡಿಳಿತ ಪ್ರವಾಸೋಧ್ಯಮಕ್ಕೆ ಪೂರಕವಾದ ಕಾರ್ಯಕ್ರಮಕ್ಕೆ ಸಹಕರಿಸುತ್ತಿದೆ ಎಂದರು. ಈ ಭಾಗದ ಸರ್ವರೂ ಇದೆ ಡಿ.29 ಮತ್ತು ಡಿ.30 ರಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಕ್ಷಿಣದ ಸುವರ್ಣ ನದಿಯಿಂದ ಉತ್ತರದ ಶಿರಾಲಿ ತನಕ, ಕರಾವಳಿಯಿಂದ ಮಲೆನಾಡಿನ ಮಾಸ್ತಿಕಟ್ಟೆಯ ತನಕ ವ್ಯಾಪಿಸಿಕೊಂಡಿರುವ ಸುಮಾರು ಹದಿನೈದು ಲಕ್ಷಕ್ಕೂ ಹೆಚ್ಚು ಜನರು ಮಾತನಾಡುವ ಕುಂದಾಪ್ರ ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ದೊರಕದಿರುವುದು ಬೇಸರದ ಸಂಗತಿ. ಅಪಾರ ಶಬ್ದ ಭಂಡಾರ ಹಾಗೂ ಸಾಹಿತ್ಯ ಶ್ರೀಮಂತಿಕೆಯನ್ನು ಹೊಂದಿರುವ ಕುಂದಗನ್ನಡಕ್ಕೆ ಅಕಾಡೆಮಿ, ಕುಂದಾಪುರ ಕೇಂದ್ರಿತವಾದ ಅಧ್ಯಯನ ಪೀಠದ ಅಗತ್ಯವಿದೆ ಎಂದು ೧೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಆಶ್ರಯದಲ್ಲಿ ಹಕ್ಲಾಡಿ ಎಸ್ಎಸ್ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆ ಬಾಳೆಮನೆ ಭಾಸ್ಕರ ಶೆಟ್ಟಿ ವೇದಿಕೆಯಲ್ಲಿ ಶನಿವಾರ ೧೬ನೇ ತಾಲೂಕು ಸಾಹಿತ್ಯ ಸಮ್ಮೇಳನ ಭೂಮಿಗೀತ ೨೦೧೭ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ತಾಲೂಕಿನ ಮೇಲೆ ತುಳುವಿನ ಪ್ರಭಾವ ಅಷ್ಟಾಗಿ ಇಲ್ಲದಿದ್ದರೂ, ಸಂಶೋಧಕರು ಆತುರದ ನಿರ್ಧಾರದಿಂದ ತುಳುನಾಡಿನ ಸಂಸ್ಕೃತಿಯೇ ಕುಂದಾನಾಡಿನ ಸಂಸ್ಕೃತಿಯೊಂದಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಜಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರ ಶ್ರೀಪತಿ ಹೆಗಡೆ ಹಕ್ಲಾಡಿ, ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ, ರಂಗಭೂಮಿ ಕಲಾವಿದ ಯೋಗೀಶ ಬಂಕೇಶ್ವರ ಸಹಿತ ಒಂಬತ್ತು ಜನ ಸಾಧಕರು ಹಾಗೂ ಒಂದು ಸಂಘ ಸಂಸ್ಥೆ ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನ ಸನ್ಮಾನ ಗೌರವಕ್ಕೆ ಪಾತ್ರರಾಗಿದ್ದಾರೆ. ಕುಂದಾಪುರ ತಾಲೂಕು ಹಕ್ಲಾಡಿ ಕೊಳ್ಳೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆಯಲ್ಲಿ ಡಿ.೧೬ ಶನಿವಾರ ಹಾಗೂ ಭಾನವಾರ ನಡೆಯುವ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ನಿವೃತ್ತ ಉಪನ್ಯಾಸಕ ಉಪೇಂದ್ರ ಸೋಮಯಾಜಿ ಸನ್ಮಾನಿಸಲಿದ್ದಾರೆ. ೧೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆಯಲ್ಲಿ ಎರಡು ದಿನ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿಗಳು, ಜನಪ್ರತಿನಿಧಿಗಳ ಪಾಲ್ಗೊಳ್ಳಲಿದ್ದು, ಗೋಷ್ಠಿ, ಕವಿಸಮಯ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಜರುಗಲಿದೆ. ಸನ್ಮಾನಿಸಲ್ಪಡುವವರು: ಕುಂದಾಪುರ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಾಳೆಮನೆ ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಆರ್. ಎನ್. ರೇವಣ್ಕರ್, ಯಕ್ಷಗಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ರಾಣಿಬಲೆ ಮೀನುಗಾರರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಬೆಳ್ಳಿರಥ ಸಮರ್ಪಿಸಲಿರುವ ನೂತನ ನೂತನ ಬೆಳ್ಳಿರಥವನ್ನು ಉಪ್ಪುಂದ ಅಂಬಾಗಿಲಿನಿಂದ ಭವ್ಯ ಪುರಮೆರವಣಿಗೆಯ ಮೂಲಕ ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಕೊಂಡೊಯ್ಯಲಾಯಿತು. ಡಿ. 20ರ ಬುಧವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಉಪ್ಪುಂದ ರಾಣಿಬಲೆ ಮೀನುಗಾರ ಒಕ್ಕೂಟದಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ನೀಡಲಾದ ಬೆಳ್ಳಿರಥವನ್ನು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಮರ್ಪಣೆ ಮಾಡಲಿದ್ದಾರೆ. ಪುರಮೆರವಣಿಗೆಯ ವೇಳೆ ರಥಶಿಲ್ಪಿ ಬಿ. ಲಕ್ಷ್ಮೀನಾರಾಯಣ ಆಚಾರ್ಯ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಶ್ರೀ ದುರ್ಗಾಪರಮೇಶ್ವರ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಜಯರಾಮ ಶೆಟ್ಟಿ, ರಾಣಿಬಲೆ ಮೀನುಗಾರರ ಒಕ್ಕೂಟ ರಿ. ಉಪ್ಪುಂದ ಇದರ ಅಧ್ಯಕ್ಷ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಸಲಹೆಗಾರರಾದ…
