Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ಮಂಜೂರಾದ ಒಟ್ಟು 14.81 ಕೋಟಿ ರೂ. ವೆಚ್ಚದ ರಸ್ತೆ, ಸೇತುವೆ ಹಾಗೂ ಕಿರು ಸೇತುವೆ ಕಾಮಗಾರಿಗಳಿಗೆ ಶಾಸಕ ಕೆ. ಗೋಪಾಲ ಪೂಜಾರಿ ಅವರು ಗುದ್ದಲಿಪೂಜೆ ನೆರವೇರಿಸಿದರು. ಬೆಳ್ಳಾಲ ಮೋರ್ಟು ಎಂಬಲ್ಲಿ 2.49ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ, ವಂಡ್ಸೆ ನಂದ್ರೋಳಿ ಬೆಳ್ಳಾಲ ರಸ್ತೆ 4.35 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ, ದೇವಲ್ಕುಂದ ಗ್ರಾಮದ ಬಾಳಿಕೆರೆ ದೈವದ ಮನೆ ರಸ್ತೆ 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ, ಕಟ್‌ಬೇಲ್ತೂರು ಗ್ರಾಮದ ಭದ್ರ ಮಹಾಂಕಾಳಿ ದೇವಸ್ಥಾನ ರಸ್ತೆ 65ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ, ಗುಜ್ಜಾಡಿ ಗ್ರಾಮದ ಮಂಕಿ ಮಯ್ಯರ ಮನೆಗೆ ಹೋಗುವ ರಸ್ತೆ ಹಾಗೂ ವಾಸು ಅಂಗಡಿಗೆ ಹೋಗುವ ರಸ್ತೆ 2.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ, ತ್ರಾಸಿ ಗ್ರಾಮದ ಮೊವಾಡಿ ಮುಖ್ಯರಸ್ತೆಯಿಂದ ದೇವಳಿ ರಸ್ತೆ, ತ್ರಾಸಿ ಚರ್ಚ್‌ನಿಂದ ಆನಗೋಡು ರಸ್ತೆ ಹಾಗೂ ಡಾನ್ ಬಾಸ್ಕೋ ಶಾಲೆ ರಸ್ತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕರಾವಳಿಯ ವಿಶಿಷ್ಟ, ವಿಶೇಷ ಪರಂಪರೆ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ರ ಹೆಸರಿನಲ್ಲಿ ನೀಡುವ 2017-18 ರ ಸಾಲಿನ ಪ್ರಶಸ್ತಿಯನ್ನು ಬೆಂಗಳೂರಿನ ನಾದೋಪಾಸಕ ವಿದ್ವಾನ್ ವಾಗೀಶ್ ಭಟ್ ರವರಿಗೆ ನೀಡಲು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಮಿತಿ ಆಯ್ಕೆ ಮಾಡಿದೆ. ವೇದಮೂರ್ತಿ ಗಣಪತಿ ಶರ್ಮಾ ದಂಪತಿಗಳ ಸುಪುತ್ರರಾದ ವಾಗೀಶ್ ಭಟ್‌ರು ಬಾಲ್ಯದಿಂದಲೇ ಸಂಗೀತವನ್ನು ಅಭ್ಯಸಿಸಿ ಮೇರು ಮಟ್ಟಕ್ಕೇರಿ ಸಂಗೀತವೇ ತನ್ನುಸಿರು ಎಂಬ ಧ್ಯೇಯವನ್ನಿರಿಸಿ ಮುನ್ನೆಡೆಯುತ್ತಿದ್ದಾರೆ. ಶ್ರೀಯುತರ ಅಜ್ಜ ವೇದಮೂರ್ತಿ ಜ್ಯೋತಿಷಿ ಅಪ್ಪಾ ಭಟ್ ರವರೇ ಇವರ ಮೊದಲ ಗುರು. ನಂತರ ಭಟ್ಟರು ಕುಂದಾಪುರದ ಸುಪ್ರಸಿದ್ಧ ಸದಾರಂಗ್ ಸಂಗೀತ ವಿದ್ಯಾಲಯದ ಪ್ರೊ. ಗೋವರ್ಧನ ಶ್ಯಾನುಭಾಗರಿಂದ ಸಂಗೀತದ ದೀಕ್ಷೆಯನ್ನು ಪಡೆದರು. ಮುಂದೆ ಬೆಂಗಳೂರಿನ ಸರಸ್ವತಿ ಸಂಗೀತ ವಿದ್ಯಾಲಯದ ಸಂಪರ್ಕ ಪಡೆದು ಗುರು ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸಿದರು. ಸುಮಾರು ಮೂರು ದಶಕಗಳ ಸುಧೀರ್ಘ ಸಾಧನೆಯನ್ನು ಸುಪ್ರಸಿದ್ಧ ಸಂಗೀತಕಾರರಾಗಿದ್ದ ದಿ. ವಿದುಷಿ ಲಕ್ಷ್ಮೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೃಷಿಯಲ್ಲಿ ಖುಷಿಯನ್ನು ಕಂಡವರಲ್ಲಿ ನಾನೂ ಒಬ್ಬ. ಕೃಷಿ ಮಾಡಬೇಕಾದರೆ ಎಕರೆಗಟ್ಟಲೆ ಭೂಮಿಯ ಅಗತ್ಯವಿಲ್ಲ.ಹತ್ತು ಸೆಂಟ್ಸ್ ಜಾಗದಲ್ಲಿಯೂ ಸಹ ಒಳ್ಳೆಯ ಕೃಷಿಯನ್ನು ಮಾಡಿ ಬದುಕು ನಡೆಸಬಹುದು. ಮಿತ್ರ ಸಂಗಮ ಸಂಸ್ಥೆ ಕೃಷಿಕನಾದ ನನ್ನನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಮೂಡುಗೋಪಾಡಿಯ ಪ್ರಗತಿಪರ ಕೃಷಿಕ ರಫೀಕ್ ಬ್ಯಾರಿ ಹೇಳಿದರು. ಅವರು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ ಗೋಪಾಡಿ ಮಿತ್ರ ಸಂಗಮದ 21ನೇಯ ವಾರ್ಷಿಕೋತ್ಸವದಲ್ಲಿ ಸಂಸ್ಥೆ ಕೊಡಮಾಡುವ ನಮ್ಮೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಗನ್ನಡದ ವಾಟ್ಸಪ್ ರಾಯಭಾರಿ ಮನು ಹಂದಾಡಿ ಮಾತನಾಡಿ,ಮಿತ್ರ ಸಂಗಮ ಅನ್ನ ನೀಡುವ ರೈತನನ್ನು ಸನ್ಮಾನಿಸಿ ಇತರ ಸಂಸ್ಥೆಗೆ ಮಾದರಿ ಎನಿಸಿದೆ. ಒಂದು ಸಂಸ್ಥೆ 21 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕಾದರೆ ಅದರ ಹಿಂದೆ ಒಂದಷ್ಟು ಸದಸ್ಯರ ಉತ್ಸಾಹ ಪೂರ್ಣವಾದ ದುಡಿಮೆ ಇದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಕೆ.ಆರ್.ನಾಯ್ಕ ವಹಿಸಿದ್ದರು.ಇದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಪುರಾತನ ಪ್ರಸಿದ್ಧ ಬಿಜೂರು ಮೂರ‍್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನದಲ್ಲಿ ಏ.14 ರಿಂದ 16ರ ವರೆಗೆ ನಡೆಯುವ ಶ್ರೀ ನಂದಿಕೇಶ್ವರ ಪರಿವಾರ ದೈವಗಳ ವಾರ್ಷಿಕೋತ್ಸವದ ಅಂಗವಾಗಿ ಚಪ್ಪರ ಮೂಹೂರ್ತ ಕಾರ್ಯಕ್ರಮ ನಡೆಯಿತು. ಉಪ್ಪುಂದ ಸಂದೇಶ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಏ.14ರಂದು ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಹಾಗೂ ನಾಗದೇವರ ವಾರ್ಷಿಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಏ.15ರಂದು ಏಕಾಹ ಅಖಂಡ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡು ಏ.15ರಂದು ಪ್ರದೀಪ ವಿಸರ್ಜನೆಯೊಂದಿಗೆ ಭಜನಾ ಮಂಗಲೋತ್ಸವ ನಡೆಯಲಿದೆ. ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ನಡೆಯಲಿದ್ದು, ರಾತ್ರಿ ೮ಗಂಟೆಗೆ ಗೆಂಡ ಸೇವೆ ಹಾಗೂ ಮಹಾಮಂಗಳಾರತಿ ನಡೆಯಲಿರುವುದು. ಮೂರು ದಿನದ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಈ ಸಂದರ್ಭ ದೈವಸ್ಥಾನದ ಅಧ್ಯಕ್ಷ ಕೃಷ್ಣಮೂರ್ತಿ ದೇವಾಡಿಗ ಮತ್ತು ಸಮಿತಿ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಮರವಂತೆಯ ಕಡಲು-ನದಿಗಳ ನಡುವಿನ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಮರವಂತೆಯ ಗ್ರಾಮಸ್ಥರು ಭಾನುವಾರ ಆಯೋಜಿಸಿದ್ದ ಆಭಾರಿ ಸೇವೆಯು ವಿವಿಧ ಧಾರ್ಮಿಕ ವಿಧಿ ಮತ್ತು ಮಹಾ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು. ವಿವಿಧೆಡೆಯ ಕೃಷಿಕರು ಮತ್ತು ಮೀನುಗಾರರು ಸಮೃದ್ಧ ಫಸಲಿಗಾಗಿ, ಪ್ರಕೃತಿ ವಿಕೋಪ ದೂರಮಾಡುವುದಕ್ಕಾಗಿ ಇಲ್ಲಿನ ಅಧಿದೇವತೆಯಾದ ವರಾಹನಿಗೆ ಹರಕೆ ಹೊತ್ತು ಸಲ್ಲಿಸುವ ವಿಶಿಷ್ಟ ಸೇವೆ ಆಭಾರಿ. ಇಂದಿನ ಆಭಾರಿಯ ಸಿದ್ಧತೆಗಳು ಸ್ವಯಂಸೇವಾ ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಡೆದಿದ್ದುವು. ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ತಯಾರಿ ನಡೆದಿದ್ದರೆ, ವರಾಹ ಮತ್ತು ಗಂಗಾಧರ ದೇವಸ್ಥಾನಗಳ ನಡುವೆ ಭಕ್ತರಿಗೆ ಅನ್ನಪ್ರಸಾದ ನೀಡುವುದಕ್ಕಾಗಿ ಬೃಹತ್ ಚಪ್ಪರವನ್ನು ಸಜ್ಜುಗೊಳಿಸಲಾಗಿತ್ತು. ದೇವಾಲಯದಲ್ಲಿ ಪೂಜೆಗೊಳ್ಳುವ ವರಾಹ, ವಿಷ್ಣು, ನಾರಸಿಂಹ ದೇವರಿಗೆ ಮತ್ತು ಸನಿಹದ ಗಂಗಾಧರೇಶ್ವರನಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಲಾಯಿತು. ದೇವಾಲಯದ ಮುಂದೆ ನವಗ್ರಹ ಪೂಜೆ, ವಿಷ್ಣು ಹವನ, ಕಲಾವೃದ್ಧಿ ಹೋಮ ಮತ್ತು ಚಂಡಿಕಾ ಹೋಮಗಳು ನಡೆದುವು. ಬಳಿಕ ವರಾಹ ದೇವಾಲಯದಲ್ಲಿ ಮೂರೂ ದೇವರಿಗೆ ಮಹಾ ಮಂಗಳಾರತಿ ಮಾಡಲಾಯಿತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಮಕ್ಕಳಿಗೆ ಬಾಲ್ಯದಲ್ಲಿ ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಲು ಪೋಷಕರು ಸಹಕರಿಸಬೇಕು. ಗುರುಹಿರಿಯರನ್ನು ಗೌರವಿಸುವ ಪ್ರವೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಬಾಲ್ಯದಲ್ಲಿ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಿ ಮಕ್ಕಳು ದಾರಿ ತಪ್ಪದಂತೆ ಎಚ್ಚರವಹಿಸಬೇಕು. ಮಕ್ಕಳಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ, ಭಾರತೀಯ ಸಂಸ್ಕೃತಿ ಸಂಸ್ಕಾರ ಬೆಳೆಸುವಂತಹ ಮಹತ್ಕಾರ್ಯವನ್ನು ಶಿಶು ಮಂದಿರಗಳು ನಡೆಸುತ್ತಿದ್ದು, ಶಿಶು ಮಂದಿರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಾತಾಜಿಯವರ ಸೇವೆ ಮತ್ತು ತ್ಯಾಗ ಅವಿಸ್ಮರಣೀಯ ಎಂದು ಶಿವಮೊಗ್ಗದ ಉದ್ಯಮಿ ವಿನೋದ ಭಂಡಾರಿ ಹೇಳಿದರು. ಅವರು ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಶ್ರೀ ವಿಜಯ ವಿಠಲ ಮಂಟಪದಲ್ಲಿ ಶನಿವಾರ ಜರಗಿದ ಗಂಗೊಳ್ಳಿ ಸೇವಾ ಸಂಗ ನಿವೇದಿತಾ ಶಿಶು ಮಂದಿರದ ೩೧ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 30 ವರ್ಷಗಳಿಂದ ನಿರಂತರವಾಗಿ ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಎಲ್ಲಾ ಬಾರ್ ಅಸೋಸಿಯೇಶನ್‌ಗಳಲ್ಲದೆ ಇತರ ತಂಡಗಳು ಸೇರಿದಂತೆ ೪೨ ಬಲಿಷ್ಠ ಕ್ರಿಕೆಟ್ ತಂಡಗಳು ಭಾಗವಹಿಸಿದ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಕುಂದಾಪುರ ಮತ್ತು ಉಡುಪಿ ವಕೀಲರ ಜಂಟೀ ತಂಡವು ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಹಾಸನ ಬಾರ್ ಅಸೋಸಿಯೇಶನ್ ನೇತೃತ್ವದಲ್ಲಿ ನಡೆದ ಪ್ರತಿಷ್ಠಿತ ವಕೀಲರ ಕ್ರೀಡಾಕೂಟದಲ್ಲಿ ವಕೀಲರಾದ ಸಚಿನ್ ಕುಮಾರ್ ಶೆಟ್ಟಿ ಮತ್ತು ರಾಘವೇಂದ್ರ ಚರಣ್ ನಾವುಡ ರ ನೇತೃತ್ವದ ಉಡುಪಿ-ಕುಂದಾಪುರ ವಕೀಲರ ತಂಡ ಎರಡು ದಿನಗಳ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯದ ಪ್ರತಿಷ್ಠಿತ ತಂಡಗಳನ್ನು ಸೋಲಿಸುವುದರ ಮುಖಾಂತರ ರಾಜ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕ್ರೀಡಾಕೂಟದಲ್ಲಿ ಕುಂದಾಪುರ-ಉಡುಪಿ ತಂಡವು ಗುಲ್ಬರ್ಗ, ಸಕಲೇಶಪುರ, ಗದಗ, ಬೆಳಗಾವಿ, ಯಾದಗೀರ್, ಬೆಂಗಳೂರು ತಂಡಗಳನ್ನು ಸೋಲಿಸಿ ಫೈನಲ್ ಹಂತಕ್ಕೆ ತಲುಪಿತ್ತು. ಈ ಪಂದ್ಯಾಟದಲ್ಲಿ ಕುಂದಾಪುರದ ವಕೀಲರಾದ ವಿಶ್ವನಾಥ ಶೆಟ್ಟಿ ಹಾಗೂ ಲಿಂಗಪ್ಪ ರವರುಗಳು ಪಂದ್ಯ ಪುರುಶೋತ್ತಮ ಪ್ರಶಸ್ತಿ ಮತ್ತು ಜಗದೀಶ ರಾವ್ ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿ ಪಡೆದರು. ಜವಾಬ್ದಾರಿಯುತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಗ್ದರ ಮೇಲೆ ಗಧಾಪ್ರಹಾರ ಒಳ್ಳೆಯ ಬೆಳವಣಿಗೆಯಲ್ಲ. ಬಿಜೂರು ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ ವಿರುದ್ದ ಅವಿಶ್ವಾಸ ಮಂಡನೆ ಶಾಸಕ ಕೆ. ಗೋಪಾಲ ಪೂಜಾರಿಯವರ ಷಡ್ಯಂತ್ರದ ಒಂದು ಭಾಗ. ಅವರ ಈ ನಡೆಯಿಂದ ಹಿಂದುಳಿದ ದೇವಾಡಿಗ ಸಮುದಾಯಕ್ಕೆ ಮಾಡಿದ ಅಪಚಾರವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ ಆರೋಪಿಸಿದರು. ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಕ್ಕೆ ಎಂದಿಗೂ ಜಯವಿದೆ ಎಂಬುವುದು ಇಂದಿನ ಈ ಪ್ರಕರಣದಿಂದ ಸಾಬೀತಾಗಿದೆ. ಯಾವುದೇ ತೊಡಕಿಲ್ಲದೇ ಸಸೂತ್ರವಾಗಿ ಆಡಳಿತ ನಡೆಸುತ್ತಿರುವವ ಅಧ್ಯಕ್ಷೆಯನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಇಲ್ಲಿನ ಶಾಸಕರು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವ ಸಂಚು ರೂಪಿಸಿರುವುದು ವಿಷಾದನೀಯ. ಬೈಂದೂರು ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ೫ ನದಿಗಳು ಹರಿಯುತ್ತಿದ್ದರೂ, ಇನ್ನೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವುದು ಈ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಕಳೆದ ಮೂರು ತಿಂಗಳಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರಲ್ಲಿ ಕಳೆದ 20 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಬದಲಿಗೆ ಕ್ಷೇತ್ರದಲ್ಲಿ ಮೊದಲಿದ್ದ ಮಹಿಳಾ ಪೋಲಿಸ್ ಠಾಣೆ ಇಲ್ಲಿಂದ ಸ್ಥಳಾಂತರಗೊಂಡಿದೆ. ಜಿಲ್ಲೆಯಲ್ಲಿ ಉಡುಪಿ ಬಿಟ್ಟರೆ ಅತೀ ಹೆಚ್ಚು ವಾಹನ ನೋಂದಣಿಯಾಗುವ ಕುಂದಾಪುರದಲ್ಲಿ ಬಹು ವರ್ಷಗಳಿಂದ ಎಆರ್‌ಟಿಓ ಕಛೇರಿ ಬೇಡಿಕೆ ಇದೆ. ಆದರ ಈ ಕುರಿತು ಕನಿಷ್ಠ ಕಾಳಜಿಯನ್ನು ಕೂಡಾ ಇಲ್ಲಿನ ಶಾಸಕರು ಹಾಗೂ ಸಂಸದರು ಹೊಂದಿಲ್ಲ. ಸರಕಾರಿ ಕಛೇರಿಗಳು ಇರುವುದು ಜನರಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸಲೇ ಹೊರತು ಅಧಿಕಾರಿಗಳ ಸಂಪತ್ತು ಹೆಚ್ಚಿಸಿಕೊಳ್ಳಲು ಅಲ್ಲ. ಕುಂದಾಪುರ ಕ್ಷೇತ್ರದಾದ್ಯಂತ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾಗಿದ್ದ ಜನಪ್ರತಿನಿಧಿಗಳು ಪರೋಕ್ಷವಾಗಿ ಅದನ್ನು ಬೆಂಬಲಿಸುತ್ತಿದ್ದಾರೆ. ಇಲ್ಲಿನ ಮೂಲಭೂತ ಸಮಸ್ಯೆಗಳಾದ ಸಿಆರ್‌ಝಡ್, ಡೀಮ್ಡ್ ಫಾರೆಸ್ಟ್, ಕಸ್ತೂರಿರಂಗನ್ ವರದಿ ಜಾರಿಯ ಕುರಿತು ಕುಂದಾಪುರ ಕಾಂಗ್ರೆಸ್ ಸಮಿತಿ ಆತಂಕಿತವಾಗಿದೆ. ಈ ಬಾರಿ ಕುಂದಾಪುರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಇಲ್ಲಿನ ಅಭಿವೃದ್ಧಿ ಕುರಿತಾದ ಮತ್ತು ಭ್ರಷ್ಟಾಚಾರದ ವಿರುದ್ಧದ ಕೆಲಸ ಮಾಡಲು ಅನುವು ಮಾಡಿಕೊಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಪ್ಪುಂದ: ಇಲ್ಲಿನ ಶಂಕರ ಕಲಾಮಂದಿರದ ವ್ಯವಸ್ಥಾಪಕ, ಕಾರಂತ್ ಡೆಕೊರೇಟರ‍್ಸ್ ಮಾಲಕ ಬೈಂದೂರು ಅಣ್ಣಪ್ಪಯ್ಯ ಕಾರಂತ್(೫೦) ಸೋಮವಾರ ಮಧ್ಯಾಹ್ನ ೩ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರಂತ್, ಪತ್ನಿ, ಪುತ್ರ ಹಾಗೂ ಪುತ್ರಿಯನ್ನ ಅಗಲಿದ್ದಾರೆ.

Read More