ಬೈಂದೂರು ಶಾಸಕರಿಂದ 14.81 ಕೋಟಿ ರೂ. ಕಾಮಗಾರಿಗಳಿಗೆ ಗುದ್ದಲಿಪೂಜೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ಮಂಜೂರಾದ ಒಟ್ಟು 14.81 ಕೋಟಿ ರೂ. ವೆಚ್ಚದ ರಸ್ತೆ, ಸೇತುವೆ ಹಾಗೂ ಕಿರು ಸೇತುವೆ ಕಾಮಗಾರಿಗಳಿಗೆ ಶಾಸಕ ಕೆ. ಗೋಪಾಲ ಪೂಜಾರಿ ಅವರು ಗುದ್ದಲಿಪೂಜೆ ನೆರವೇರಿಸಿದರು.

Call us

Click Here

ಬೆಳ್ಳಾಲ ಮೋರ್ಟು ಎಂಬಲ್ಲಿ 2.49ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ, ವಂಡ್ಸೆ ನಂದ್ರೋಳಿ ಬೆಳ್ಳಾಲ ರಸ್ತೆ 4.35 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ, ದೇವಲ್ಕುಂದ ಗ್ರಾಮದ ಬಾಳಿಕೆರೆ ದೈವದ ಮನೆ ರಸ್ತೆ 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ, ಕಟ್‌ಬೇಲ್ತೂರು ಗ್ರಾಮದ ಭದ್ರ ಮಹಾಂಕಾಳಿ ದೇವಸ್ಥಾನ ರಸ್ತೆ 65ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ, ಗುಜ್ಜಾಡಿ ಗ್ರಾಮದ ಮಂಕಿ ಮಯ್ಯರ ಮನೆಗೆ ಹೋಗುವ ರಸ್ತೆ ಹಾಗೂ ವಾಸು ಅಂಗಡಿಗೆ ಹೋಗುವ ರಸ್ತೆ 2.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ, ತ್ರಾಸಿ ಗ್ರಾಮದ ಮೊವಾಡಿ ಮುಖ್ಯರಸ್ತೆಯಿಂದ ದೇವಳಿ ರಸ್ತೆ, ತ್ರಾಸಿ ಚರ್ಚ್‌ನಿಂದ ಆನಗೋಡು ರಸ್ತೆ ಹಾಗೂ ಡಾನ್ ಬಾಸ್ಕೋ ಶಾಲೆ ರಸ್ತೆ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ, ಕುಂದಬಾರಂದಾಡಿ ಬೆಳ್ಳಿಗದ್ದೆ ಹತ್ತಿರ 10 ಲಕ್ಷ ರೂ. ವೆಚ್ಚದಲ್ಲಿ ಕಿರು ಸೇತುವೆ, ಹೆರೂರು ಗ್ರಾಮದ ಗೋಪಾಲ ಹೆಬ್ಬಾರ ಮನೆ ಹತ್ತಿರ 10 ಲಕ್ಷ ರೂ. ವೆಚ್ಚದಲ್ಲಿ ಕಿರು ಸೇತುವೆ, ಹೆರೂರು ಗ್ರಾಮದ ಮರ್ಲಿ ಪ.ಪಂಗಡದ ಮನೆಗೆ ಹೋಗುವ ರಸ್ತೆ ಹಾಗೂ ಎಸ್.ಟಿ ಕಾಲನಿಗೆ ಹೋಗುವ ರಸ್ತೆ 40 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ, ಬೈಂದೂರು ತಗ್ಗರ್ಸೆ ಗ್ರಾಮದ ಮೂಡನಗದ್ದೆಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕಾಲು ಸಂಕ, ಶಿರೂರು ಮೇಲ್ಪಂಕ್ತಿ ರಸ್ತೆ 27 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಗುದ್ದಲಿಪೂಜೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿದರು.

Leave a Reply