Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಜೆಟ್ ಮಂಡನೆಯ ಮಹತ್ವದ ಸಂದರ್ಭದಲ್ಲಿ ಕುಂದಾಪುರ ಕ್ಷೇತ್ರಕ್ಕೆ ಅಗತ್ಯದ ಅನುದಾನ ಮಂಜೂರು ಮಾಡಿಸುವ ಮತ್ತು ಕ್ಷೇತ್ರದ ಹಲವಾರು ಜ್ವಲಂತ ಸಮಸ್ಯೆ ಇತ್ಯರ್ಥ ಪಡಿಸುವ ಅಪೂರ್ವ ಅವಕಾಶ ಇದ್ದರೂ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕ್ಷೇತ್ರ ಅನಾಥಗೊಳಿಸಿದ್ದಾರೆ. ೨೨೪ ಶಾಸಕರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿವೃದ್ದಿ ಕೆಲಸಗಳಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ ಎಂದು ರಾಜ್ಯ ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ ಆರೋಪಿದ್ದಾರೆ. ಇಲ್ಲಿನ ಶಾಸ್ತ್ರೀ ವೃತ್ತದ ಬಳಿ ಅವಧಿಗೂ ಮುನ್ನ ರಾಜಿನಾಮೆ ಸಲ್ಲಿಸಿದ ಕುಂದಾಪುರ ನಿಕಟಪೂರ್ವ ಶಾಸಕರ ನಿಲವು ಖಂಡಿಸಿ ಕುಂದಾಪುರ, ಕೋಟ, ಹಾಗೂ ವಿವಿಧ ಮಹಿಲಾ ಮೋರ್ಚಾ, ಯುವ ಕಾಂಗ್ರೆಸ್ ಕಾರ‍್ಯಕರ್ತರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಕ್ಷೇತ್ರದ ಅಭಿವೃದ್ದಿಗಳ ಶಂಕುಸ್ಥಾಪನೆ, ವಿವಿಧಯೋಜನೆ, ಅಗತ್ಯವಿರುವ ದೊಡ್ಡ ದೊಡ್ಡ ಕಾನೂನುಗಳ ಅನುಷ್ಠಾನವಿರಬಹುದು ಇದರಲ್ಲಿ ಯಾವುದನ್ನೂ ಕುಂದಾಪುರ ಶಾಸಕರು ಮಾಡಿಲ್ಲ. ಕುಂದಾಪುರ ಶಾಸಕರ ಚಟುವಟಿಕೆಗಳು ಕಾಣಸಿಗುವುದಿಲ್ಲ ಎಂದು ಅವರು ಟೀಕಿಸಿದರು. ಯುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರೋಟರಿ ಕ್ಲಬ್ ಕುಟುಂಬ ಸದಸ್ಯರ ದುಬೈ ಪ್ರವಾಸದ ಸಂದರ್ಭದಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ದುಬೈ ಸಂಸ್ಥೆಯು ಬರ್‌ದಯಬೈನ ರಿಜೆಂಟ್ ಪ್ಯಾಲೆಸ್ ಹೋಟೆಲ್‌ನಲ್ಲಿ ಸಹಮಿಲನ, ಸನ್ಮಾನ ಹಾಗೂ ವಿಶೇಷ ಔತಣಕೂಟವನ್ನು ಏರ್ಪಡಿಸಿತ್ತು. ಸಹಮಿಲನ ಕಾರ್ಯಕ್ರಮದಲ್ಲಿ ಕುಂದಾಪುರ ರೋಟರಿ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ ಅವರ ನೂತನ ವೆಬ್ಸೈಟನ್ನು ದಿನೇಶ್ ದೇವಾಡಿಗ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ರೋಟರಿ ಕ್ಲಬ್‌ನಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕ್ರೀಯಾಶೀಲ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಬೈಂದೂರು ರೋಟರಿ ಕ್ಲಬ್‌ನ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ (ಅಪ್ಪು ಮಾಸ್ತರ್) ದಂಪತಿಗಳನ್ನು ನ್ಮಾನಿಸಲಾಯಿತು. ಬೈಂದೂರಿನ ಹಿರಿಯ ರೋಟರಿ ಸದಸ್ಯರಾದ ಡಾ. ಎಮ್.ಎಸ್. ಶೆಟ್ಟಿ ಹಾಗೂ ಚಂದ್ರಕಲಾ ದಂಪತಿಗಳನ್ನು ಗೌರವಿಸಲಾಯಿತು. ಈ ಸಂದರ್ಭ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾಧನ್ ದಾಸ್, ಉಪಾಧ್ಯಕ್ಷ ದಿನೇಶ್ ದೇವಾಡಿಗ, ಕಾರ್ಯದರ್ಶಿ ಸುಧಾಕರ ಪೂಜಾರಿ ಮತ್ತು ಚಂದ್ರಶೇಖರ್, ದುಬೈನಲ್ಲಿ ನೆಲೆಸಿರುವ ಕರುಣಾಕರ ಶೆಟ್ಟಿ, ರಿತೇಶ್ ಶೆಟ್ಟಿ, ವಾಸು ದೇವಾಡಿಗ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅನುಮಾನದ ದೃಷ್ಟಿಯೇ ಅಶಾಂತಿಗೆ ಕಾರಣವಾಗುತ್ತಿದೆ. ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಒಂದೇ ರಾಗದಿಂದ ಹಾಡುವ ಕಾಲ ಬರಬೇಕು. ಎಲ್ಲರನ್ನೂ ಗೌರವದೃಷ್ಟಿಯಲ್ಲಿ ನೋಡಬೇಕು, ಮಾನವ ಗುಣ ಕಾಣಬೇಕು. ಈ ಎಲ್ಲಾ ಬದಲಾವಣೆಯಿಂದ ರಾಗದ್ವೇಷವಿಲ್ಲದ ಬದುಕು ಸಾಧ್ಯ. ಎಲ್ಲರೂ ವಿಶ್ವ ಮಾನವರಾಗೋಣ ಎಂದು ಕನ್ನಡದ ಖ್ಯಾತ ಸಾಹಿತಿ ವೈದೇಹಿ ಹೇಳಿದರು. ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ವಿವಿಧ ಸಂಘಟನೆ ಆಶ್ರಯದಲ್ಲಿ ಮಂಗಳವಾರ ನಡೆದ ಸೌಹಾರ್ದತೆಗಾಗಿ ಮಾನವ ಸರಪಳಿ ಕಾರ‍್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿ, ಮಹಾತ್ಮ ಗಾಂಧಿ ಕೂಡಾ ಎಲ್ಲರಲ್ಲೂ ಮಾನವೀಯ ಗುಣ ಕಂಡಿದ್ದರಿಂದ ಮಹಾತ್ಮರಾದರು. ಹಂತಕರ ಗುಂಡಿಗೆ ಬಲಿಯಾದ ದಿನ ಮಾನವ ಸರಪಳಿ ಮೂಲಕ ಗಾಂಧಿ ಆಶಯ ಈಡೇರಿಸಬೇಕಾಗಿದೆ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್, ಮುಖಂಡರಾದ ವಿನೋದ್ ಕ್ರಾಸ್ತಾ, ಸುರೇಶ್ ಕಲ್ಲಾಗರ, ವಿ.ನರಸಿಂಹ, ಪುರಸಭೆ ಸದಸ್ಯೆ ಕಲಾವತಿ, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ವಿ.ನರಸಿಂಹ, ಹಿರಿಯ ಕಾಂಗ್ರೆಸಿಗ ಮಾಣಿ ಗೋಪಾಲ, ಕಾಂಗ್ರೆಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದು ನಿಚ್ಚಳವಾಗಿದ್ದು ಸ್ಪೀಕರ್ ಕೆ. ಬಿ. ಕೋಳಿವಾಡ ಅವರನ್ನು ರಾಣಿಬೆನ್ನೂರಿನಲ್ಲಿ ಭೇಟಿಯಾಗಿ ರಾಜಿನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆಗೊಂಡು ಮುಂದಿನ ವಿಧಾನಸಭಾ ಚುವಾವಣೆಯಲ್ಲಿ ಮತ್ತೆ ಸ್ವರ್ಧಿಸುವ ಆಕಾಂಕ್ಷೆ ಹೊಂದಿದ್ದ ಶಾಸಕ ಶ್ರೀನಿವಾಸ ಶೆಟ್ಟಿ ಅವರು ಪಕ್ಷಾಂತರ ನಿಷೇಧ ಕಾಯ್ದೆಯಿಂದಾಗಿ ಬಿಜೆಪಿ ಸೇರ್ಪಡೆಯಿಂದ ಈ ತನಕ ದೂರ ಉಳಿಸಿದ್ದರು. ಈ ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ವರ್ಷದ ಹಿಂದೆ ಬಿಜೆಪಿ ಸಭೆಯಲ್ಲಿ ಸಭಿಕರ ಸಾಲಿನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ಪಕ್ಷೇತರ ಶಾಸಕ ಶ್ರೀನಿವಾಸ ಶೆಟ್ಟಿ ಅವರು ಮತ್ತೆ ಬಿಜೆಪಿಗೆ ಮರಳುವ ಸೂಚನೆ ನೀಡಿದ್ದರಾದರೂ ತಾಂತ್ರಿಕ ಕಾರಣಗಳಿಂದಾಗಿ ಸುಮ್ಮನುಳಿದಿದ್ದರು. ಬಿಜೆಪಿ ಪರಿವರ್ತನಾ ಯಾತ್ರೆಯ ವೇಳೆ ಹಾಲಾಡಿ ಬಣ ಹಾಗೂ ಮೂಲ ಬಿಜೆಪಿಗರ ಬಣದ ನಡುವೆ ಜಟಾಪಟಿ ಉಂಟಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀನಿಧಿ ಟ್ರಸ್ಟ್ ಕೆರ್ಗಾಲು, ಕರ್ನಾಟಕ ಕಾರ್ಮಿಕ ವೇದಿಕೆ ಉಪ್ಪುಂದ, ಅಂಜಲಿ ಆಸ್ಪತ್ರೆ ಬಂದೂರು ಇವರ ಸಹಯೋಗದೊಂದಿಗೆ ಉಪ್ಪುಂದ ಸಪಪೂ ಕಾಲೇಜಿನಲ್ಲಿ ನಡೆದ ಉಚಿತ ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ ಮತ್ತು ಸಂಪೂರ್ಣ ಉಚಿತ ಕಣ್ಣು ಮತ್ತು ದಂತ ಹಾಗೂ ಆರೋಗ್ಯ ತಪಾಸಣೆ ಶಿಬಿರ ಜರುಗಿತು. ಶಿಬಿರವನ್ನು ಉದ್ಘಾಟಿಸಿದ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ ಪ್ರತಿಯೊಂದು ಜೀವಗಳು ಅಮೂಲ್ಯವಾಗಿದ್ದು, ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ಅತೀ ಮುಖ್ಯವಾಗಿರುತ್ತದೆ. ತತ್‌ಕ್ಷಣ ಅಂಬ್ಯುಲೆನ್ಸ್ ಸೇವೆ ಲಭ್ಯವಾದರೆ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಲು ಸಾಧ್ಯವಾಗುತ್ತದೆ. ನಾನು ಮತ್ತು ನನ್ನ ಸಂಸಾರ ಎಂಬ ತತ್ವವನ್ನು ಬಿಟ್ಟು ಪರರ ಸುಖ, ಕಷ್ಟಗಳಿಗೂ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಾನು ದುಡಿದ ಸ್ವಲ್ಪ ಭಾಗವನ್ನು ಇಂತಹ ಸಾಮಾಜಿಕ ಸೇವೆಗೆ ಮಿನಿಯೋಗಿಸಿದಾಗ ಮನುಷ್ಯ ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಸ್ವಾರ್ಥ ಹಾಗೂ ಮಾನವೀಯತೆಯಿಂದ ಇಂತಹ ಮಹತ್ಕಾರ್ಯಗಳನ್ನು ಮಾಡುವುದರಿಂದ ದೇವರು ಕೂಡಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನ ಎಸ್‌ಜಿಎಸ್ ಇಂಟರ್‌ನ್ಯಾಶನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರವು ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಆಯೋಜಿಸಿದ್ದ ೬ನೇ ಅಂತರರಾಷ್ಟ್ರೀಯ ಯೋಗೋತ್ಸವ ಸ್ಪರ್ಧೆಯಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಿದ್ದ ಮರವಂತೆಯ ಯೋಗಪಟು ಕುಶ ಪೂಜಾರಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಬಾಲ್ಯದಿಂದಲೇ ಯೋಗ ತರಬೇತಿ ಪಡೆದು ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿರುವಾಗ ನಡೆದ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದ ಸಾಧನೆ ಕುಶ ಅವರದು. ಬಿ. ಕಾಂ ಪದವಿ ಮುಗಿಸಿರುವ ಅವರು ಪ್ರಸಕ್ತ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಯೋಗವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಅಧ್ಯಯನ ನಡೆಸುತ್ತಿದ್ದಾರೆ.  ಕುಶ ಪೂಜಾರಿ ಮರವಂತೆ ಗುಳದಾಳಿಬೆಟ್ಟು ರಾಮಚಂದ್ರ ಪೂಜಾರಿ, ಲೀಲಾವತಿ ಪೂಜಾರಿ ದಂಪತಿಯ Also read: ► ಅಂತರರಾಷ್ಟ್ರೀಯ ಯೋಗೋತ್ಸವ ಸ್ಪರ್ಧೆಗೆ ಕುಶ ಪೂಜಾರಿ – http://kundapraa.com/?p=27277

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲೆಯಲ್ಲಿ ದಲಿತರಿಗಾಗಿ ಮೀಸಲಿರಿಸಿರುವ ಸುಮಾರು 800 ಏಕ್ರೆ ಡಿಸಿ ಮನ್ನಾ ಭೂಮಿಯಿದ್ದು, ಯಾವ ಪ್ರಮಾಣದಲ್ಲಿ ಯಾವ ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು ಎನ್ನುವುದರ ಬಗ್ಗೆ ಸರ್ಕಾರ ಮಾನದಂಡದ ಅಗತ್ಯವಿದೆ. ಈ ಬಗ್ಗೆ ಶೀಘ್ರ ಹೊಸನೀತಿ ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ರಾಜ್ಯದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಆಶ್ರಯದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಭೂಹಿತ ಶೋಷಿತ ಸಮುದಾಯಗಳಿಗೆ ಡಿಸಿ ಮನ್ನಾ ಭೂಮಿ ಹಂಚಿಕೆ ಆಗ್ರಹಿಸಿ ನಡೆದ ಜನಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಡಿ.ಸಿ. ಮನ್ನಾ ಭೂಮಿಯಲ್ಲಿ ಬಹುತೇಕ ಭೂಮಿ ಹಡಿಲು ಬಿದ್ದಿದೆ, ಇದನ್ನು ಶೀಘ್ರ ದಲಿತರಿಗೆ ಹಂಚಿದ್ದರೆ ಅವರು ಅದನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಸ್ವಾವಲಂಬಿ ಜೀವನ ನಡೆಸುವಂತಾಗುತ್ತದೆ. ದಲಿತರು ತಮ್ಮಲ್ಲಿರುವ ಕೀಳರಿಮೆ ಬದಿಗೊತ್ತಿಗೆ ನಾನಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಆ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಕೋಟಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೌಖಿಕ ಪರಂಪರೆಯಲ್ಲಿ ಹುಟ್ಟಿಕೊಂಡ ಜಾನಪದ, ಸಂಸ್ಕೃತಿಯ ಭಾಗವಾಗಿ ಬದುಕಿನೊಂದಿಗೆ ಬೆಸೆದುಕೊಂಡಿದೆ. ಕರ್ನಾಟಕದ ಕರಾವಳಿಯಲ್ಲಿ ದೈವಾರಾಧನೆಯಂತಹ ಜಾನಪದ ಆಚರಣೆಗಳು ನಂಬಿಕೆ ಹಾಗೂ ಭಯದ ತಳಹದಿಯಲ್ಲಿ ಇಂದಿಗೂ ಉಳಿದುಕೊಂಡಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಇದರ ಉಡುಪಿ ಜಿಲ್ಲಾಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಹೇಳಿದರು. ಅವರು ಇಲ್ಲಿನ ಉಪ್ಪುಂದದ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ಸುವಿಚಾರ ಬಳಗ, ಕುಂದ ಅಧ್ಯಯನ ಕೇಂದ್ರ ಉಪ್ಪುಂದ ನೇತೃತ್ವದಲ್ಲಿ ಆಯೋಜಿಸಲಾಗಿದ ತಿಂಗಳ ಕಾರ್ಯಕ್ರಮದಲ್ಲಿ ’ಕರಾವಳಿ ಜಾನಪದದ ವಿಶಿಷ್ಟತೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಜಾನಪದರಲ್ಲಿ ಭಾಷೆ, ಆಚರಣೆ ಹಾಗೂ ಸಂಪ್ರದಾಯದ ವಿಶಿಷ್ಟತೆಯನ್ನು ಕಾಣುತ್ತೇವೆ. ಕಂಬಳ, ಹೂವಿನಕೋಲು, ಪಾಣರಾಟ ಮುಂತಾದ ಸಾಂಪ್ರದಾಯಿಕ ಕಲೆಗಳು ಅಳಿವಿನಂಚಿನಲ್ಲಿದ್ದರೇ, ಯಕ್ಷಗಾನದಲ್ಲಿ ಹೊಸ ಪ್ರಯೋಗಗಳ ನಡೆಯುತ್ತಿದೆ. ಅಳಿನಂಚಿನಲ್ಲಿರುವ ಕಲೆಗಳನ್ನು ಯುವ ತಲೆಮಾರಿಗೆ ಪರಿಚಯಿಸಿ ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಸುವಿಚಾರ ಬಳಗ ಅಧ್ಯಕ್ಷ ಬಿ. ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸತತ ಪರಿಶ್ರಮದಿಂದ ಉತ್ತಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸಮಾಜ ಸೇವೆ, ದೇಶಭಕ್ತಿಯ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಅಗತ್ಯವಿದೆ. ಅಂಕಗಳಿಸಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿನ ಪ್ರಾವೀಣ್ಯತೆಯ ತೋರಿದಂತೆ ತಾವು ಬೆಳೆದ ಸಮಾಜಕ್ಕೆ ಏನಾದರೂ ಸೇವೆಯನ್ನು ಸಲ್ಲಿಸಬೇಕೆಂಬ ಬದ್ಧತೆ ಇದ್ದರೆ ಶಿಕ್ಷಣದ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಟಿ. ನಾರಾಯಣ ಹೆಗ್ಡೆ ಹೇಳಿದರು. ಅವರು ಶುಕ್ರವಾರ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನಿರ್ಮಿಸಲಾದ ನೂತನ ಧ್ವಜಸ್ಥಂಭವನ್ನು ಉದ್ಘಾಟಿಸಿ, ಗಣರಾಜ್ಯೋತ್ಸವದ ಧ್ವಜಾರೋಹಣಗೈದು ಬಳಿಕ ಮಾತನಾಡಿದರು. ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ತಿದ್ದಿ ಉತ್ತಮ ಶಿಕ್ಷಣವನ್ನು ನೀಡಲು ಶಿಕ್ಷಕರ ಶ್ರಮ ಶ್ಲಾಘನೀಯವಾದ್ದು. ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಶಿಕ್ಷಕರೊಂದಿಗೆ, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳಿಗೂ ಇದೆ ಎಂದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟರಮಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯ ಶಂಕರ ಪೂಜಾರಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಶೇ.೧೦೦ರಷ್ಟು ಕೃಷಿಸಾಲವನ್ನು ಮರುಪಾವತಿ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಜನರ ಅಗತ್ಯಕ್ಕೆ ತಕ್ಕಂತೆ ಹತ್ತಾರು ಸಹಕಾರಿ ಸಂಸ್ಥೆಗಳು ಅವಿಭಜಿತ ಜಿಲ್ಲೆಯಲ್ಲಿ ಹುಟ್ಟಿಕೊಳ್ಳುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಸಹಕಾರಿ ರಂಗದಲ್ಲೂ ಪೈಪೋಟಿ ಇದ್ದಾಗಲೇ ಉತ್ತಮವಾಗಿ ಜನಸೇವೆ ಮಾಡಲು ಸಾಧ್ಯವಾಗಲಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಅವರು ಇಲ್ಲಿನ ಸಾಯಿ ಸೆಂಟರ್‌ನಲ್ಲಿ ಗುರುವಾರ ಸಾಗರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕುಂದಾಪುರ ಶಾಖೆಯ ನೂತನ ಸ್ವಂತ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಬಳಿಕ ಮಾತನಾಡಿದರು. ಬ್ಯಾಂಕಿಂಗ್ ಕ್ಷೇತ್ರದ ನಿಯಮಗಳು ವಾಣಿಜ್ಯ ಬ್ಯಾಂಕುಗಳು ಹಾಗೂ ಸಹಕಾರಿ ಸಂಸ್ಥೆಗಳಿಗೆ ಒಂದೇಯಾಗಿದ್ದರೂ, ಬ್ಯಾಂಕುಗಳಿಗೆ ಸಮನಾಗಿ ಸಹಕಾರಿ ಸಂಸ್ಥೆಗಳು ಬೆಳೆದಿದ್ದರೂ ಕೇಂದ್ರ ಸರಕಾರ ಸಹಕಾರಿ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದೆ. ನಬಾರ್ಡ್‌ನ ಹಣ ಸಹಕಾರಿ ಸಂಸ್ಥೆಗಳಿಗೆ ಶೇ.೪೦ರಷ್ಟು ಮಾತ್ರ ದೊರೆಯುತ್ತಿದೆ. ಆದರೆ ಶೇ.೬೦ರಷ್ಟನ್ನು ಸಹಕಾರಿ ಸಂಸ್ಥೆಯ ಸ್ವಂತ ಠೇವಣಿಯನ್ನು ಹೊಂದಿ ಸಾಲ…

Read More