ನಂಬಿಕೆ ಹಾಗೂ ಭಯದ ತಳಹದಿಯಲ್ಲಿ ಕರಾವಳಿಯಲ್ಲಿ ಜಾನಪದ ಆಚರಣೆಗಳು ಉಳಿದುಕೊಂಡಿದೆ: ಅಂಪಾರು ನಿತ್ಯಾನಂದ ಶೆಟ್ಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೌಖಿಕ ಪರಂಪರೆಯಲ್ಲಿ ಹುಟ್ಟಿಕೊಂಡ ಜಾನಪದ, ಸಂಸ್ಕೃತಿಯ ಭಾಗವಾಗಿ ಬದುಕಿನೊಂದಿಗೆ ಬೆಸೆದುಕೊಂಡಿದೆ. ಕರ್ನಾಟಕದ ಕರಾವಳಿಯಲ್ಲಿ ದೈವಾರಾಧನೆಯಂತಹ ಜಾನಪದ ಆಚರಣೆಗಳು ನಂಬಿಕೆ ಹಾಗೂ ಭಯದ ತಳಹದಿಯಲ್ಲಿ ಇಂದಿಗೂ ಉಳಿದುಕೊಂಡಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಇದರ ಉಡುಪಿ ಜಿಲ್ಲಾಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಹೇಳಿದರು.

Call us

Click Here

ಅವರು ಇಲ್ಲಿನ ಉಪ್ಪುಂದದ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ಸುವಿಚಾರ ಬಳಗ, ಕುಂದ ಅಧ್ಯಯನ ಕೇಂದ್ರ ಉಪ್ಪುಂದ ನೇತೃತ್ವದಲ್ಲಿ ಆಯೋಜಿಸಲಾಗಿದ ತಿಂಗಳ ಕಾರ್ಯಕ್ರಮದಲ್ಲಿ ’ಕರಾವಳಿ ಜಾನಪದದ ವಿಶಿಷ್ಟತೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಜಾನಪದರಲ್ಲಿ ಭಾಷೆ, ಆಚರಣೆ ಹಾಗೂ ಸಂಪ್ರದಾಯದ ವಿಶಿಷ್ಟತೆಯನ್ನು ಕಾಣುತ್ತೇವೆ. ಕಂಬಳ, ಹೂವಿನಕೋಲು, ಪಾಣರಾಟ ಮುಂತಾದ ಸಾಂಪ್ರದಾಯಿಕ ಕಲೆಗಳು ಅಳಿವಿನಂಚಿನಲ್ಲಿದ್ದರೇ, ಯಕ್ಷಗಾನದಲ್ಲಿ ಹೊಸ ಪ್ರಯೋಗಗಳ ನಡೆಯುತ್ತಿದೆ. ಅಳಿನಂಚಿನಲ್ಲಿರುವ ಕಲೆಗಳನ್ನು ಯುವ ತಲೆಮಾರಿಗೆ ಪರಿಚಯಿಸಿ ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸುವಿಚಾರ ಬಳಗ ಅಧ್ಯಕ್ಷ ಬಿ. ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಿದ್ದು ನಿರಂತರ ಪ್ರಯತ್ನಶೀಲರಾಗುವ ಅಗತ್ಯವಿದೆ. ಕರಾವಳಿ ಭಾಗದ ನಶಿಸುತ್ತಿರುವ ಜಾನಪದ ಕಲೆಗಳನ್ನು ಮತ್ತೆ ಮುನ್ನೆಲೆಗೆ ತಂದು ಮರುಜೀವ ತುಂಬಬೇಕಾಗಿದೆ ಎಂದರು.

ಅಂಪಾರು ನಿತ್ಯಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮೀನುಗಾರಿಕಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಸಿ. ಸುಬ್ಬಯ್ಯ ಖಾರ್ವಿ ತಮ್ಮ ಅನುಭವ ವಿನಿಮಯ ಮಾಡಿಕೊಂಡರು. ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ ಉಪ್ಪುಂದ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಉಪ್ಪಂದ ವಿಪ್ರರಂಜಿನಿ ತಂಡದಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. ಬೈಂದೂರು ಶ್ರೀ ರಾಮಕ್ಷತ್ರಿಯ ಮಾತೃಮಂಡಳಿಯ ಸದಸ್ಯರು ಪ್ರಾರ್ಥಿಸಿದರು. ಸುವಿಚಾರ ಬಳಗದ ಪ್ರಧಾನ ಸಂಚಾಲಕ ವಿ. ಹೆಚ್. ನಾಯಕ್ ಧನ್ಯವಾದಗೈದರು. ಶೋಭಾ ಪಟವಾಲ್ ಕಾರ್ಯಕ್ರಮ ನಿರೂಪಿಸಿದರು.

 

Leave a Reply