ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೂಕ್ಷ್ಮ, ಪ್ರಾವೀಣ್ಯ ಮತ್ತು ಪ್ರಬುದ್ಧತೆಯಿಂದ ಯುವಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ, ಅವರ ವರ್ತನೆಗಳಲ್ಲಿ ಅಡಕವಾಗಿರುವ ವಿಷಯಗಳ ಅತ್ಯಂತ ಕಾಳಜಿಯಿಂದ ಗ್ರಹಿಸಿ, ಸಂವೇದನಾಶೀಲರಾಗಿ ಪರಿಹರಿಸುವ ಅನಿವಾರ್ಯತೆ ಇದೆಎಂದು ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಮನೋವೈದ್ಯಡಾ. ವಿರೂಪಾಕ್ಷ ದೇವರಮನೆ ಹೇಳಿದರು. ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜ್ ಅಧ್ಯಾಪಕರ ಸಂಘದ ಆಶ್ರಯದಲ್ಲಿ ಕಾಲೇಜ್ ವೇದಿಕೆಯಲ್ಲಿ ಇತ್ತೀಚೆಗೆ ನಡೆದ ಯುವ ವಿದ್ಯಾರ್ಥಿಗಳ ಸಮಸ್ಯೆಗಳು ಹಾಗೂ ಸಂವಾದದಲ್ಲಿ ಮಾತನಾಡಿದರು. ಕಾಲೇಜ್ ಪ್ರಾಂಶುಪಾಲಪ್ರೊ.ದೋಮ ಚಂದ್ರಶೇಖರ್, ಉಪಪ್ರಾಂಶುಪಾಲ ಚೇತನ್ ಕುಮಾರ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ಜ್ಯೋತಿ ಮೊಗವೀರಸ್ವಾಗತಿಸಿದರು.ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಸುಧಾಕರ್ ಪಾರಂಪಳ್ಳಿ ಅತಿಥಿಗಳ ಪರಿಚಯಿಸಿದರು. ವಾಣಿಜ್ಯಶಾಸ್ತ್ರ ಮುಖ್ಯಸ್ಥ ರಾಜೇಶ್ ಶೆಟ್ಟಿನಿರೂಪಿಸಿ, ವಂದಿಸಿದರು. ಉಡುಪಿ ಬಾಳಿಗಾ ಆಸ್ಪತ್ರೆ ಮನೋವೈದ್ಯ ಡಾ.ಡಾ. ವಿರೂಪಾಕ್ಷ ದೇವರಮನೆ ಸಂವಾದ ಕಾರ‍್ಯಕ್ರಮದಲ್ಲಿ ಮಾತನಾಡಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಭೆ, ಸಮಾರಂಭ, ವಾರ್ಷಿಕೋತ್ಸವ, ಭಾಷಣಗಳಿಂದ ಸಮಾಜದ ಬದಲಾವಣೆ ಸಾಧ್ಯವಿಲ್ಲ. ಸಮುದಾಯದ ಪ್ರತಿಯೊಬ್ಬ ಸದಸ್ಯರು ತಮ್ಮೊಡನೆ ಇತರರನ್ನು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ರೀತಿ ಒಗ್ಗಟ್ಟಿನಿಂದ ಎಲ್ಲರೂ ಬೆಳೆದಾಗ ಮಾತ್ರ ಸಮುದಾಯ ಬಲಿಷ್ಠವಾಗಲು ಸಹಕಾರಿಯಾಗುತ್ತದೆ. ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಕೆ, ಗೋಪಾಲ ಪೂಜಾರಿ ಹೇಳಿದರು. ನಾಗೂರಿನ ಮಹಾಲಸಾ ಕಲ್ಚರಲ್ ಹಾಲ್‌ನಲ್ಲಿ ನಡೆದ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಇದರ ಅರ್ಧವಾರ್ಷಿಕ ಪ್ರಾದೇಶಿಕ ಮಹಾಸಭೆಯಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು. ಸಮಾಜದಲ್ಲಿ ನಡೆಯುವ ಕೆಟ್ಟ ಚಟುವಟಿಕೆಗಳಲ್ಲಿ ಸಮುದಾಯದ ಯುವ ಜನತೆ ಪಾಲ್ಗೋಳುತ್ತಿರುವುದು ಆತಂಕಕಾರಿಯಾಗಿದೆ. ಹೆತ್ತವರು ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳು ದಾರಿ ತಪ್ಪುತ್ತಿರುವ ಕಾರಣದ ಬಗ್ಗೆ ಸಂಘದ ಹಿರಿಯರು ಚರ್ಚಿಸಬೇಕು ಇಲ್ಲದಿದ್ದರೆ ಸಮುದಾಯ ಅಭಿವೃದ್ದಿಗೆ ಮಾರಕವಾಗಲಿದೆ. ಯುವಕರು ವಿವಿಧ ವೃತ್ತಿಗಲ್ಲಿ, ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಆ ಮೂಲಕ ಸಮುದಾಯಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪೋಷಕರ ವಿರೋಧ ಹಿನ್ನೆಲೆಯಲ್ಲಿ ಅಂತರ್ಜಾತಿ ಪ್ರೇಮಿಗಳಿಗೆ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಶುಕ್ರವಾರ ಗಣ್ಯರ ಸುಮ್ಮುಖದಲ್ಲಿ ವಿವಾಹ ನೆರವೇರಿಸಲಾಯಿತು. ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ನಾಗಸಂಪಿಗೆ ಜನಾಂಗಕ್ಕೆ ಸೇರಿದ ಮಂಜುನಾಥ ಎಂಬವರ ಪುತ್ರ ಶ್ಯಾಮ ಪ್ರಸಾದ್ ಹಾಗೂ ಶಿಕಾರಿಪುರ ಎಸ್ಸಿ ಜನಾಂಗಕ್ಕೆ ಸೇರಿದ ಗೋಣಿ ಬಸಪ್ಪ ಎಂಬವರ ಪುತ್ರಿ ರೇಖಾ (೨೦) ಸತಿ,ಪತಿಗಳಾದ ಪ್ರೇಮಿಗಳು. ಶ್ಯಾಮ್ ಪ್ರಸಾದ್ ಹಾಗೂ ರೇಖಾ ಒಂದೇ ಊರಿನವರಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದು, ಒಂದೂವರೆ ವರ್ಷದಿಂದ ಒಬ್ಬರೂ ಪ್ರೀತಿ ಪಾಶಕ್ಕೆ ಬಿದ್ದಿದ್ದರು. ಶ್ಯಾಮ್‌ಪ್ರಸಾದ್ ಕೊಟೇಶ್ವರ ಬಳಿ ಬಾಡಿಗೆ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಈ ಇಬ್ಬರ ಮದುವೆಗೆ ಎರಡೂ ಮನೆಯವರ ಕಡೆಯಿಂದ ವಿರೋಧವಿತ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರ ಸಂಪರ್ಕಿಸಿದ ಯುವ ಜೋಡಿ ತಮ್ಮ ಮದುವೆ ಮಡುವಂತೆ ಅಧ್ಯಕ್ಷೆ ರಾಧಾದಾಸ್ ಅವರಲ್ಲಿ ವಿನಂತಿಸಿತ್ತು. ಮಹಿಳಾ ಸಾಂತ್ವಾನ ಕೇಂದ್ರ ದಿಂದ ಧಾರೆ ಸೀರೆ ಕಾಲುಂಗುರು, ಹಾಗೂ ಕರಿಮಣಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಉಪವಿಭಾಗಾಧಿಕಾರಿಯಾಗಿ ಟಿ.ಭೂಬಾಲನ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಕುಂದಾಪುರ ಎಸಿಯಾಗಿದ್ದ ಶಿಲ್ಪಾ ನಾಗ್ ಸಿ.ಟಿ, ಪದೋನ್ನತಿಹೊಂದಿ ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಓ ಆಗ ವರ್ಗಾವಣೆ ಗೊಂಡಿದ್ದರಿಂದ ಕುಂದಾಪುರ ಉಪವಿಭಾಗಾಧಿಕಾರಿ ಸ್ಥಾನ ತೆರವಾಗಿತ್ತು. ತಮಿಳುನಾಡು ಮೂಲದ ಟಿ. ಭೂಬಾಲನ್ ೨೦೧೫ರ ಪ್ರಥಮ ಬ್ಯಾಚ್ ಬೀದರ್‌ನಲ್ಲಿ ತರಬೇತಿ ಪಡೆದಿದ್ದು, ಮೂರು ತಿಂಗಳು ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆ ಇಲಾಖೆಯಲ್ಲಿದ್ದರು. ನಂತರ ಹರ್ಪನಹಳ್ಳಿಯಲ್ಲಿ ಮೂರು ತಿಂಗಳು ಎಸಿಯಾಗಿದ್ದು, ಪುತ್ತೂರಿಗೆ ಸರ್ಕಾರ ವರ್ಗಮಾಡಿತ್ತು. ಚಾರ್ಜ್ ತೆಗೆದುಕೊಳ್ಳುವ ದಿನವೇ ಅವರ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆ ಮಾಡಿತ್ತು. ಅಧಿಕಾರ ಸ್ವೀಕರಿಸಿದ ಎಸಿ ಟಿ.ಭೂಬಾಲನ್ ಅವರನ್ನು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಕೆ.ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಅಭಿನಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕುಂದಾಪುರ ಮೂಲದ ಕಾಶಿನಾಥ್ ಅವರು ಗುರುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಶಿನಾಥ್ ಅವರನ್ನು 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕುಂದಾಪುರ ಕೋಣಿ ಮೂಲದ ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದ ಕಾಶಿನಾಥ್ ಒಬ್ಬ ನಟನಾಗಿ, ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದಂತಹ ಪ್ರತಿಭಾವಂತ ವ್ಯಕ್ತಿ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ಅಸೀಮಾ ಎಂಬ ಚಿತ್ರತಂಡವನ್ನು ಸೇರಿಕೊಂಡ ಕಾಶಿನಾಥ್ ಅವರು ಸುರೇಶ್ ಹೆಬ್ಳೀಕರ್ ಅವರ ಗರಡಿಯಲ್ಲಿ ಪಳಗಿದರು. 1975 ರಲ್ಲಿ ಅಪರೂಪದ ಅತಿಥಿ ಚಿತ್ರವನ್ನು ನಿರ್ದೇಶಿಸಿ ಹೊಸತನವನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟರು. 1978 ರಲ್ಲಿ ಕಾಶಿನಾಥ್ ನಿರ್ದೇಶಿಸಿದ್ದ ಸಸ್ಪೆನ್ಸ್ ಥ್ರಿಲ್ಲರ್ ‘ಅಪರಿಚಿತ’ ಚಿತ್ರ ಭರ್ಜರಿ ಯಶಸ್ವಿಯಾಗಿತ್ತು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿತ್ತು. 1984 ರಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ದೇವಸ್ಥಾನದ ವಠಾರದಲ್ಲಿ ಕೊಂಚಾಡಿ ರಾಧಾ ಶೆಣೈ ವೇದಿಕೆಯಲ್ಲಿ ಶುಕ್ರವಾರ ಜರಗಿದ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿವೃತ್ತ ಸೈನಿಕ ರಾಜೇಶ ಮೊಗವೀರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ರಾಜೇಶ ಮೊಗವೀರ ಅವರನ್ನು ಸನ್ಮಾನಿಸಿದರು. ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಪ್ರಶಾಂತ ಅಡಿಗ, ಕುಂದಾಪುರ ವಿದ್ಯಾರಂಗ ಮಿತ್ರ ಮಂಡಳಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ದಿನಕರ ಪಟೇಲ್, ಮುಂಬೈನ ಉದ್ಯಮಿ ರವಿ ಟಿ.ನಾಯ್ಕ್, ಗಂಗೊಳ್ಳಿ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ರಮೇಶ ಕುಂದರ್, ಮತ್ಸ್ಯೋದ್ಯಮಿ ಜಿ.ಟಿ.ಮಂಜುನಾಥ, ಕೃಷ್ಣ ಪೂಜಾರಿ ಹೆಮ್ಮಾಡಿಮನೆ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ಕೋಟಾನ್, ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತ ಕೆ. ಶಾಲಾ ವಿದ್ಯಾರ್ಥಿ ನಾಯಕ ಶಶಿಕಾಂತ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಾಲಾಡಿಯ ಜೆಸಿಸಿ ಕ್ರಿಕೆಟ್ ಕ್ಲಬ್ ಜಾಲಾಡಿಯ ಜೆಸಿಸಿ ಮೈದಾನದಲ್ಲಿ ಆಯೋಜಿಸಿದ ಎರಡು ದಿನಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಥಳೀಯ ಈಗಲ್ಸ್ ಕುಂಭಾಶಿ ತಂಡವನ್ನು ೧೭ ರನ್‌ಗಳಿಂದ ಭರ್ಜರಿಯಾಗಿ ಸೋಲಿಸಿದ ಬೆಂಗಳೂರಿನ ಜೈ ಕರ್ನಾಟಕ ತಂಡ ‘ಜಟ್ಟಿಗೇಶ್ವರ ಕ್ರಿಕೆಟ್’ ಟ್ರೋಫಿಯನ್ನು ಗೆದ್ದುಕೊಂಡಿದೆ. ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಬೂನ್ ಸಾರಥ್ಯದ ಜೈ ಕರ್ನಾಟಕ ತಂಡವು ೬ ಓವರ್‌ಗಳ ಅಂತ್ಯಕ್ಕೆ ೩ ವಿಕೆಟ್ ಕಳೆದುಕೊಂಡು ೫೧ ರನ್ ಪೇರಿಸಿತು. ಗುರಿ ಬೆನ್ನತ್ತಿದ ಸುಧಾಕರ ನಾಯಕತ್ವದ ಈಗಲ್ಸ್ ಕುಂಭಾಶಿ ತಂಡ ನಿಗದಿತ ಓವರ್‌ಗಳ ಅಂತ್ಯಕ್ಕೆ ೩ ವಿಕೆಟ್ ಕಳೆದುಕೊಂಡು ೩೪ ರನ್ ಗಳಿಸಲಷ್ಟೇ ಶಕ್ತವಾಗಿ, ೧೭ ರನ್‌ಗಳಿಂದ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು. ವಿಜೇತ ಜೈ ಕರ್ನಾಟಕ ತಂಡ ೧.೨೫ ಲಕ್ಷ ರೂ., ರನ್ನರ್‌ಅಪ್ ಈಗಲ್ಸ್ ತಂಡ ೬೫ ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ಪಡೆಯಿತು. ೩೦ ತಂಡಗಳು ಭಾಗಿ ೪೦…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮನೆ ಮುಂದೆ ಬಸ್ ಹಾಗೂ ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದವರ ರಕ್ಷಣೆ ಧಾವಿಸಿದ ವಿದ್ಯಾರ್ಥಿ ಅಪಪಘಾತಕ್ಕೆ ಬಲಿಯಾದ ಘಟನೆ ಭಾನುವಾರ ರಾತ್ರಿ ಕೋಣಿ ಬಳಿ ನಡೆದಿದೆ. ಕುಂದಾಪುರ ಭಂಡಾರ್‌ಕಾರ‍್ಸ್‌ಕಾಲೇಜ್‌ಅಂತಿಮ ಪದವಿ ವಿದ್ಯಾರ್ಥಿ ವಡೇರಿ ಹೋಬಳಿ ಗ್ರಾಮ, ಬೆಟಗೇರಿ ನಿವಾಸಿ ಸಂಜೀವ ಮತ್ತುರೇವತಿದಂಪತಿಏಕೈಕ ಪುತ್ರ ನಿತಿನ್ ಪೂಜಾರಿ (೨೧) ಮೃತಪಟ್ಟವರು. ಅಪಘಾತದ ಸುದ್ದುಕೇಳಿ ಮನೆಯಿಂದ ಹೊರ ಬಂದುನಿತಿನ್ ಹಾಗೂ ಗಾರೆಕಾರ್ಮಿಕ ಅನಿಲ್ ರಕ್ಷಣೆಕಾರ‍್ಯದಲ್ಲಿನಿರತರಾಗಿದ್ದರು. ಇದೇ ಸಂದರ್ಭಬಂದಓಮ್ನಿಕಾರ್‌ನಿತಿನ್ ಹಾಗೂ ಅನಿಲ್ ಎಂಬವರಿಗೆಡಿಕ್ಕಿ ಹೊಡೆಯಿತು. ನಿತಿನ್‌ರಸ್ತೆ ಸಮೀಪದಗದ್ದೆಗೆ ಅಪ್ಪಳಿಸಿದ ಪರಿಣಾಮತಲೆ ಹಾಗೂ ಮುಖಕ್ಕೆಗಂಭೀರ ಗಾಯಗಳಾಗಿತ್ತು.ಕೂಡಲೇ ಗಾಯಾಳು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಕೊಡಿಸಿ ಹೆಚ್ಚಿನಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿತಿನ್ ಕೊನೆಯುಸಿರೆಳೆದಿದ್ದಾನೆ. ಗಾಯಗೊಂಡಿರುವ ಅನಿಲ್ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.ಕುಂದಾಪುರಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನವ್ಯ ಕವಿ ಪ್ರೋ. ಮೊಗೇರಿ ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದಿಯ ಅಂಗವಾಗಿ ಅವರ ಹುಟ್ಟೂರಾದ ಮೊಗೇರಿಯಲ್ಲಿ ಕಲಾಗ್ರಾಮ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಪ್ರೋ. ಎಸ್.ಜಿ. ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸರಕಾರಿ ಶಾಲೆಯ ಸಬಲೀಕರಣಕ್ಕಾಗಿ ೨೦೧೭ರಲ್ಲಿ ಅಸ್ತಿತ್ವಕ್ಕೆ ಬಂದ ೨೧ ಶಿಫಾರಸ್ಸುಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸುವಂತೆ ಕಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜಿನ ಪುಂಡಲೀಕ ಹಾಲಂಬಿ ಸಭಾಂಗಣ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನಡೆದ ೧೨ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವರ್ಧಮಾನ-೨೦೧೮ರಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ ಎ. ಈಶ್ವರಯ್ಯ, ಕನ್ನಡದಲ್ಲಿ ಪ್ರತಿಭಾವಂತ ಬರಹಗಾರರು, ಕಾದಂಬರಿಕಾರರು ಇದ್ದು, ಭಾಷೆ ಮುಳುಗೀತು ಎನ್ನುವುದರಲ್ಲಿ ಅರ್ಥವಿಲ್ಲ, ಆದರೂ ಇಂದು ಭಾಷೆ ಬೆಳೆಯಲು ಪೂರಕ ವಾತಾವರಣ ನಿರ್ಮಿಸುವ ಅಗತ್ಯವಿದೆ. ನವೋದಯ ಕಾಲದಲ್ಲಿದ್ದ ಶಿಸ್ತು ಈಗಿಲ್ಲ, ಆ ಕಾಲದಲ್ಲಿದ್ದ ಭಾಷೆಯ ಮೇಲಿನ ಪ್ರೀತಿ ಈಗ ಇದೆಯೇ ನಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿ ಮನೆಗಳಲ್ಲಿ ಸಂಸ್ಕಾರ, ಸಂಸ್ಕೃತಿ, ಪುರಾಣದ ಬಗ್ಗೆ ತಿಳಿವಳಿಕೆ ಮೂಡಿಸಬೇಕಲ್ಲದೇ, ಧಾರ್ಮಿಕ ಆರಾಧನ ಕೇಂದ್ರಗಳಲ್ಲೂ ಭಗವದ್ಗೀತೆ, ರಾಮಾಯಣ, ಮಹಾಭಾರತದ ಬಗ್ಗೆ ಅರಿವು ಮೂಡಿಸುವುದು ಅಗರ‍್ಯವಿದೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲ ಸ್ವಾಮೀಜಿ ಹೇಳಿದರು. ಮಕರ ಸಂಕ್ರಮಣದಂದು ನಾಗೂರು ಶ್ರೀ ವೀರ ಹನುಮಾನ್ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಶಬರಿಮಲೆ ಸಂರಕ್ಷಣಾ ಸಮಿತಿ ಮತ್ತು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಸಹಯೋಗದಲ್ಲಿ ಶ್ರೀ ಅಯ್ಯಪ್ಪ ಸ್ವಾಮೀ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು. ಸಂಸ್ಕೃತಿಯ ಕೇಂದ್ರ ಬಿಂದುವಾದ ತಾಯಿ, ತಮ್ಮ ಮಕ್ಕಳಿಗೆ ಏಳವೆಯಲ್ಲಿಯೇ ನೈತಿಕ ಶಿಕ್ಷಣ ನೀಡಬೇಕಾಗಿದ್ದು, ನಮ್ಮ ವೃತಗಳು ನೈತಿಕ ಬೆಳವಣೆಗೆಗೆ ಹಾಗೂ ಆತ್ಮಶಕ್ತಿಯನ್ನು ಜಾಗೃತರನ್ನಾಗಿ ಮಾಡುತ್ತದೆ ಎಂದರು. ಶಬರಿಮಲೆ ಸಂರಕ್ಷಣ ಸಮಿತಿಯ ಅಧ್ಯಕ್ಷ ಸಾಬು ಮಾಧವನ್ ಮಾತನಾಡಿ, ಇಂದು ಶಬರಿಮಲೆ ಯಾತ್ರೆ ನೈಜ ಸ್ವರೂಪ ಹೊರಟುಹೋಗಿ, ಆಡಂಬರ ಆಗಿದೆ. ಈ ಯಾತ್ರೆಯಿಂದ ಪುಣ್ಯ ಲಭಿಸಬೇಕಾದರೆ ಅಲ್ಲಿನ…
