ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನೆ ಮುಂದೆ ಬಸ್ ಹಾಗೂ ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದವರ ರಕ್ಷಣೆ ಧಾವಿಸಿದ ವಿದ್ಯಾರ್ಥಿ ಅಪಪಘಾತಕ್ಕೆ ಬಲಿಯಾದ ಘಟನೆ ಭಾನುವಾರ ರಾತ್ರಿ ಕೋಣಿ ಬಳಿ ನಡೆದಿದೆ.
ಕುಂದಾಪುರ ಭಂಡಾರ್‌ಕಾರ‍್ಸ್‌ಕಾಲೇಜ್‌ಅಂತಿಮ ಪದವಿ ವಿದ್ಯಾರ್ಥಿ ವಡೇರಿ ಹೋಬಳಿ ಗ್ರಾಮ, ಬೆಟಗೇರಿ ನಿವಾಸಿ ಸಂಜೀವ ಮತ್ತುರೇವತಿದಂಪತಿಏಕೈಕ ಪುತ್ರ ನಿತಿನ್ ಪೂಜಾರಿ (೨೧) ಮೃತಪಟ್ಟವರು.
ಅಪಘಾತದ ಸುದ್ದುಕೇಳಿ ಮನೆಯಿಂದ ಹೊರ ಬಂದುನಿತಿನ್ ಹಾಗೂ ಗಾರೆಕಾರ್ಮಿಕ ಅನಿಲ್ ರಕ್ಷಣೆಕಾರ‍್ಯದಲ್ಲಿನಿರತರಾಗಿದ್ದರು. ಇದೇ ಸಂದರ್ಭಬಂದಓಮ್ನಿಕಾರ್‌ನಿತಿನ್ ಹಾಗೂ ಅನಿಲ್ ಎಂಬವರಿಗೆಡಿಕ್ಕಿ ಹೊಡೆಯಿತು. ನಿತಿನ್‌ರಸ್ತೆ ಸಮೀಪದಗದ್ದೆಗೆ ಅಪ್ಪಳಿಸಿದ ಪರಿಣಾಮತಲೆ ಹಾಗೂ ಮುಖಕ್ಕೆಗಂಭೀರ ಗಾಯಗಳಾಗಿತ್ತು.ಕೂಡಲೇ ಗಾಯಾಳು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಕೊಡಿಸಿ ಹೆಚ್ಚಿನಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿತಿನ್ ಕೊನೆಯುಸಿರೆಳೆದಿದ್ದಾನೆ. ಗಾಯಗೊಂಡಿರುವ ಅನಿಲ್ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.ಕುಂದಾಪುರಠಾಣೆಯಲ್ಲಿ ಪ್ರಕರಣದಾಖಲಾಗಿದೆ.