ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಗೂರು ಕುಸುಮ ಫೌಂಡೇಶನ್ ಇವರ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಕುಸುಮಾಂಜಲಿ’ ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ಕುಸುಮಶ್ರೀ ಪ್ರಶಸ್ತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಡೀನ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ವಿ ನಾವಡ ಹಾಗೂ ಜಾನಪದ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಸಂಶೋಧಕರು ವಿಮರ್ಶಕರು ಆಗಿರುವ ಡಾ. ಗಾಯತ್ರಿ ನಾವಡ ಮಂಗಳೂರು ಇವರಿಗೆ ಪ್ರದಾನ ಮಾಡಲಾಗುತ್ತಿದೆ. ಡಿ.24 ಭಾನುವಾರ ರಾತ್ರಿ 8:30ಕ್ಕೆ ನಡೆಯುವ ‘ಕುಸುಮಾಂಜಲಿ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಬಳಿಕ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ‘ನಂದಗೋಕುಲ’ ತಂಡದವರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಕುಸುಮ ಸಂಸ್ಥೆಯ ಆಡಳಿತ ನಿರ್ದೇಶಕ ನಳಿನ್ ಕುಮಾರ್ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಸಂಸ್ಥೆಯ ಸಲಹೆಗಾರ ವೀಗನ್ ಶಂಕರನಾರಾಯಣ, ಕುಸುಮಾಂಜಲಿ ನಿರ್ದೇಶಕಿ ರೇಷ್ಮಾ ಉಪಸ್ಥಿತರಿದ್ದರು. ► ಡಿ.24ರಂದು ನಾಗೂರಿನಲ್ಲಿ ಸಾಂಸ್ಕೃತಿಕ ಉತ್ಸವ – ಕುಸುಮಾಂಜಲಿ 2017 -…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಹಿರಿಯ ಶಿಕ್ಷಣ ತಜ್ಞ, ಸಾಂಸ್ಕತಿಕ ಧುರೀಣ ಹಾಗೂ ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಷನ್ ಆಡಳಿತಾಧಿಕಾರಿ ಡಾ. ಎಚ್. ಶಾಂತರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. 2018ರ ಜನವರಿ 12, 13 ಮತ್ತು 14 ರಂದು ಕಂಬದಕೋಣೆಯ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜರಗುವ ಈ ನುಡಿಹಬ್ಬದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಸಂವಾದ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಈ ಮೂರು ದಿನಗಳ ನುಡಿ ಜಾತ್ರೆಗೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಸುತ್ತಲಿನ ರಮಣೀಯ ಸ್ಥಳಗಳನ್ನು ಪರಿಚಯ, ಮುಂದಿನ ಪೀಳಿಗೆಗೆ ಸ್ಥಳೀಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಲೆಗಳನ್ನು ಪರಿಚಯಿಸುವುದರೊಂದಿಗೆ ಈ ಭಾಗದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ಚಿಂತನೆಯೊಂದಿಗೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಉಡುಪಿ ಪರ್ಬ ಹಾಗೂ ಬೀಚ್ ಉತ್ಸವದ ಭಾಗವಾಗಿ ಡಿ.29 ಹಾಗೂ 30ರಂದು ಕೋಟೇಶ್ವರ ಬೀಜಾಡಿ ಕಡಲ ಕಿನಾರೆಯಲ್ಲಿ ’ಊರ್ಮನಿ ಹಬ್ಬ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕುಂದಾಪುರ ಕಂದಾಯ ಉಪವಿಭಾಗದ ಆಯುಕ್ತೆ ಶಿಲ್ಪಾ ನಾಗ್ ಹೇಳಿದರು. ಅವರು ಬುಧವಾರ ಮಿನಿ ವಿಧಾನಸೌಧದ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಜಿಲ್ಲಾಡಳಿತ ಹಾಗೂ ಕೋಟೇಶ್ವರ ಬೀಚ್ ಉತ್ಸವ ಸಮಿತಿ ನೇತೃತ್ವದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಉಡುಪಿ, ಪುರಸಭೆ ಕುಂದಾಪುರ, ಗ್ರಾಮ ಪಂಚಾಯತ್ ಬೀಜಾಡಿ, ಗ್ರಾಮ ಪಂಚಾಯತ್ ಕೋಟೇಶ್ವರಹಾಗೂ ಸ್ಥಳೀಯ ಯುವಕ ಮಂಡಲಗಳು ಸಹಕಾರದೊಂದಿಗೆ ಊರ್ಮನಿ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಊರ್ಮನಿ ಹಬ್ಬದಲ್ಲಿ ಗಾಳಿಪಟ ಉತ್ಸವ, ವಸ್ತು ಪ್ರದರ್ಶನ, ಮರಳುಶಿಲ್ಪ ರಚನೆ, ಮಾರಾಟ ಮಳಿಗೆಗಳು ಹಾಗೂ ವಿವಿಧ ಸಾಂಸ್ಕೃತಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಧರ್ಮ ಪಾಲನೆ, ಸತ್ಯದ ಹಾದಿ ಹಾಗೂ ಉತ್ತಮ ನಡೆ ನುಡಿಯ ಮೂಲಕ ನಮ್ಮೊಳಗಿನ ದೇವರನ್ನು ಶುದ್ಧವಾಗಿರಿಸಿಕೊಂಡರೆ ಬದುಕಿನಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯ. ನೆಮ್ಮದಿದ್ದರೆ ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಉಪ್ಪುಂದ ರಾಣಿಬಲೆ ಮೀನುಗಾರ ಒಕ್ಕೂಟದಿಂದ ಕೊಡಮಾಡಿದ ನೂತನ ಬೆಳ್ಳಿರಥವನ್ನು ಸಮರ್ಪಿಸಿದ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶಿರ್ವಚನವಿತ್ತರು. ತಂದೆ ತಾಯಿ ನಮ್ಮನ್ನು ಸಲಹಿದ ರೀತಿಯಲ್ಲಿಯೇ ಪ್ರಕೃತಿಯೂ ನಮ್ಮನ್ನು ಸಲಹುತ್ತದೆ. ನಮ್ಮ ಇತಿಮಿತಿಯ ಎಲ್ಲೆ ಮೀರಿ ವರ್ತಿಸಿದರೆ ಪ್ರಕೃತಿ ವಿಕೋಪದಂತಹ ಅವಘಡಗಳು ಸಂಭವಿಸುತ್ತವೆ. ನಮ್ಮ ಪರಿಧಿಯಲ್ಲಿ ಶ್ರದ್ಧೆ, ಸತ್ಯ, ಧರ್ಮದಿಂದ ನಡೆದಾಗ ಎಲ್ಲವೂ ನಮಗೆ ಪೂರಕವಾಗಿರುತ್ತದೆ ಎಂದರು. ಯೋಚನೆ ಮಾಡಿ ದಾನ ಮಾಡಿದರೆ ಅದರಿಂದ ದೊರೆಯಬೇಕಾದ ಪುಣ್ಯಫಲ ದೊರೆಯದು. ಶ್ರಿಮಂತರು ಕಟ್ಟಿದ ದೇವಸ್ಥಾನಗಳು ಹೆಚ್ಚು ಕಾಲ ಉಳಿಯದು. ಫಲಾಪೇಕ್ಷೆ ಇಲ್ಲದ ದಾನ, ಭಕ್ತರು ಕಟ್ಟಿದ ದೇವಸ್ಥಾನ ಎಂದಿಗೂ…
ಕುಂದಾಪ್ರ ಡಾಟ್ ಕಾಂ ಲೇಖನ. ಆಕಸ್ಮಿಕಗಳು ನಡೆಯುವುದೇ ಹಾಗೆ. ಆಕಸ್ಮಿಕವಾಗಿ! ಬಹುನಿರೀಕ್ಷಿತ ‘ಕತ್ತಲೆಕೋಣೆ’ ಕನ್ನಡ ಸಿನೆಮಾದ ಶೂಟಿಂಗ್ ವೇಳೆ ಸಂಭವಿಸಿದ ಆಕಸ್ಮಿಕ ಘಟನೆಗಳು ಇಡಿ ಚಿತ್ರತಂಡವನ್ನು ಆಶ್ಚರ್ಯಕ್ಕೆ ನೂಕಿರುವುದಲ್ಲದೇ ಒಂದಿಷ್ಟು ಭಯ ಹಾಗೂ ಆತಂಕವನ್ನುಂಟುಮಾಡಿದೆ. ಒಂದು ಹಂತದಲ್ಲಿ ಅಂದುಕೊಂಡಂತೆ ನಡೆಯುತ್ತಿದ್ದ ಚಿತ್ರೀಕರಣದ ನಡುವೆಯೇ ಹಲವು ಘಟನೆಗಳು ಕೈಮೀರಿ ಘಟಿಸಿವೆ. ಶೂಟಿಂಗ್ ವೇಳೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ನಡೆದ ಇಂತಹ ಘಟನೆಗಳು ಒಂದು ತೆರನಾದ ಭಯವನ್ನು ಸೃಷ್ಠಿಸಿಬಿಟ್ಟಿವೆ. ಘಟನೆ 1 ಅದು ಕುಂದಾಪುರದ ತಾಲೂಕಿನ ಒಂದು ಕಾಡುದಾರಿ. ಸೀನ್ ಒಂದರಲ್ಲಿ ಮರದ ಮೇಲಿರಿ ನಟಿಸುತ್ತಿದ್ದ ಕಲಾವಿದ. ಇನ್ನೇನು ಆತ ಕೆಳಕ್ಕಿಳಿಬೇಕು ಎಂಬಷ್ಟರಲ್ಲಿ ಹಠಾತ್ತನೆ ಮರದ ಕೊಂಬೆಯೇ ತುಂಡಾಯಿತು. ನೋಡನೋಡುತ್ತಿದ್ದಂತೆಯೇ ಕೊಂಬೆಯೊಂದಿಗೆ ೮ ಅಡಿ ಎತ್ತರದಿಂದ ಆತ ನೆಲಕ್ಕುರುಳಿದ. ಅಷ್ಟು ಮೇಲಿಂದ ಬಿದ್ದರೂ ಅದೃಷ್ಟವಶಾತ್ ಆತ ಅಪಾಯದಿಂದ ಪಾರಾಗಿದ್ದ! ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಂಡಿದ್ದರೂ ಇಂತಹದ್ದೊಂದು ಅವಘಡ ಸಂಭವಿಸಿಬಿಟ್ಟಿತ್ತು. ಎಲ್ಲವನ್ನೂ ಪರೀಕ್ಷಿಸಿದ ಬಳಿಕವಷ್ಟೇ ಮರವೇರಿದ್ದರೂ ಕೊಂಬೆ ಮುರಿದ್ದದ್ದು ಹೇಗೆ ಎಂಬುದು ಮಾತ್ರ ಚಿತ್ರತಂಡವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೂರಿಪ್ಪತ್ತೈದು ವರ್ಷದ ಹಿಂದೆ ಸ್ವಾಮೀ ವಿವೇಕಾನಂದರ ಸಿಂಹ ನುಡಿಯ ಮೂಲಕ ವಿದೇಶಿಯರು ಭಾರತ ನೋಡುವ ದೃಷ್ಟಿ ಬದಲಾಯಿತು. ಇದೇ ವಿವೇಕವಾಣಿಯ ಪ್ರೇರಣೆಯಿಂದ ಇಂದು ಭಾರತಕ್ಕೆ ಧಮ್ಕಿ ಹಾಕುವ ದೇಶಗಳಿಗೆ ತಿರುಗೇಟು ನೀಡುವಷ್ಟು ಸಾಮರ್ಥ್ಯ ದೇಶಹೊಂದಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು. ಮತ್ತೊಮ್ಮೆ ದಿಗ್ವಿಜಯ ವಿವೇಕಾನಂದರ ಭಾರತದಲ್ಲಿ ಕಾರ್ಯಾಚರಣೆ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ಮತ್ತೊಮ್ಮೆ ವಿವೇಕವಾಣಿಯಿಂದ ಯುವ ಸಮಾಜ ಜಾಗೃತವಾಗಿದೆ. ಇದರ ಹಿನ್ನೆಲೆಯಲ್ಲಿ ಈ ಬದುಕು ದೇಶಕ್ಕಾಗಿ ಎಂಬ ವಿವೇಕಾನಂದ ಜೀವನ ಮೌಲ್ಯವಿದೆ ಎಂದು ಹೇಳಿದರು. ಸ್ವಾತಂತ್ರ ಪೂರ್ವದ ಕ್ರಾಂತಿಕ್ರಾರಿಗಳ ಪಟ್ಟಿಯಲ್ಲಿ ವಿವೇಕಾನಂದ ಮೊದಲ ಸ್ಥಾನದಲ್ಲಿದ್ದು ಅವರಲ್ಲಿ ಒಬ್ಬ ಕ್ರಾಂತಿಕಾರಿ ಹುಟ್ಟಿಕೊಂಡಿದ್ದ. ದೇಶದ ದಾಸ್ಯ ಮುಕ್ತಿಗೆ ವಿವೇಕಾನಂದ ದೇಶ ಸುತ್ತಿ ಮಾಡಿದ ಭಾಷಣ ಜಾಗೃತಿ ಮೂಡಿಸಿ, ಸಮಾಜದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು ಎಂದು ಹೇಳಿದರು. ವಿವೇಕಾನಂದರನ್ನು ಶ್ರೇಷ್ಟ ಬುದ್ದಿವಂತ ಎಂದು ವಿಶ್ವವೇ ಒಪ್ಪಿಕೊಳ್ಳುವಂತೆ ಅವರ ಚಿಕಾಗೋ ಬಾಷಣ ಮಾಡಿದರೆ, ಸದಾ ದೇಶದ ಬಗ್ಗೆ ಚಿಂತಿಸುತ್ತಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜನ್ಮ ಶತಾಬ್ದಿ, ಸಿಲ್ವರ್ ಜೂಬಲಿ, ಗೋಲ್ಡನ್ ಜೂಬಲಿ ಆಚರಣೆ ನಡೆಯೋದು ಸಹಜ. ಆದರೆ ಒಬ್ಬ ವ್ಯಕ್ತಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ೧೨೫ನೇ ವರ್ಷ ಆಚರಣೆ ಮಾಡಲಾಗುತ್ತದೆ! ಇದಕ್ಕೆ ಕಾರಣ ಚಿಕಾಗೋ ಭಾಷಣ. ವಿವೇಕಾನಂದರು ಓದಿದ್ದು ಮಾತ್ರ ಅಲ್ಲ ಅಮೂಲಾಗ್ರ ಅಧ್ಯಯನದ ಮೂಲಕ ಭಾರತವನ್ನು ಅರಿತುಕೊಂಡರು. ಒಮ್ಮೆ ವಿವಾಕಾನಂದ ಹುಟ್ಟಿರದಿದ್ದರೆ ಎಂಬ ಕಲ್ಪನೆಯೇ ಭಯ ಹುಟ್ಟಿಸುತ್ತದೆ. ಭಾರತೀಯ ಸಂಸ್ಕೃತಿ, ಧರ್ಮ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ ಸ್ವಾಮಿ ವಿವೇಕಾನಂದರು ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠ ಧರ್ಮವೃತಾನಂದ ಸ್ವಾಮೀಜಿ ಹೇಳಿದರು. ಕುಂದಾಪುರ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಯುವ ಬ್ರಿಗೇಡ್ ಕುಂದಾಪುರ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಸಿಡಿಲ ಭಾಷಣಕ್ಕೆ ೧೨೫ ’ಮತ್ತೊಮೆ ದಿಗ್ವಿಜಯ’ ಕಾರ್ಯಕ್ರಮ ಉದ್ಘಾಟಿಸಿ ಮಾಡತಾಡುತ್ತಿದ್ದರು. ನಮ್ಮ ಧರ್ಮವೇ ಶ್ರೇಷ್ಠ ಎಂದು ವಿಶ್ವಕ್ಕೆ ತೋರಿಸುವ ಹಿನ್ನೆಲೆಯಲ್ಲಿ ನಡೆದ ಚಿಕಾಗೋ ಸರ್ಮಧರ್ಮ ಸಮ್ಮೇಳನದಲ್ಲಿ ವಿವೇಕಾನಂದರ ಭಾಗವಹಿಸದಿದ್ದರೆ ಏನಾಗುತ್ತಿತ್ತು ಎನೋದನ್ನ ಉಹಿಸುವುದು ಕಷ್ಟ. ಕೇವಲ ಎರಡೂವರೆ ನಿಮಿಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಗೂರು ಕುಸುಮ ಫೌಂಡೇಶನ್ ಇವರ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಕುಸುಮಾಂಜಲಿ-2017’ ಡಿ.24 ಭಾನುವಾರ ನಾಗೂರಿನಲ್ಲಿ ಸಂಜೆ ಗಂಟೆ 4ಕ್ಕೆ ನಡೆಯಲಿದೆ. ವಿಶೇಷ ಅಥಿತಿಯಾಗಿ ಕಟೀಲು ಎಸ್ಡಿಪಿಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲ ಪ್ರೊ. ಎಮ್. ಬಾಲಕೃಷ್ಣ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ‘ಕುಸುಮಾಂಜಲಿ 2017’ ರ ಪೂರ್ವಭಾವಿಯಾಗಿ ನಡೆದ ಸಂಗೀತ ಸ್ಪರ್ಧೆ ಗಾನಕುಸುಮ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳ ಸಂಗೀತ ಕಾರ್ಯಕ್ರಮ ಸಂಜೆ ಗಂಟೆ ೫ರಿಂದ ಆರಂಭವಾಲಿದ್ದು, ನಂತರ ಗಾನಕುಸುಮ ಪ್ರಶಸ್ತಿಯನ್ನು ನೀಡಲಾಗುವುದು. ಈ ಸಂದರ್ಭ ಕುಸುಮಾಂಜಲಿ 2017ರ ಚಾನಲ್ ಪಾರ್ಟನರ್ ಮುಂಬೈನ ಶುಭಸಾಗರ್ ಗ್ರೂಫ್ ಆಪ್ ಹೋಟೆಲ್ಸ್ನ ಆಡಳಿತ ನಿರ್ದೇಶಕ ಲಕ್ಷ್ಮಣ ಪೂಜಾರಿ ಕುಸುಮ ಫೌಂಡೇಶನ್ ಸಂಸ್ಥೆಯ ಒಂದು ಘಟಕವಾದ ‘ಬ್ಲೋಸಮ್ ಸ್ಕೂಲ್ ಆಪ್ ಮ್ಯೂಸಿಕ್ & ಡಾನ್ಸ್’ ಸ್ಕೂಲ್ ಉದ್ಘಾಟಿಸಲಿದ್ದಾರೆ. ಕುಸುಮಾಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ನಳಿನ್ ಕುಮಾರ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹುಮತದೊಂದಿಗೆ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಕುಂದಾಪುರ ಹಾಗೂ ಬೈಂದೂರಿನಲ್ಲಿ ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕುಂದಾಪುರದಲ್ಲಿ ನಡೆದ ವಿಜಯೋತ್ಸವದಲ್ಲಿ ಕುಂದಾಪುರ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಭಾಸ್ಕರ ಬಿಲ್ಲವ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಾನಕಿ ಬಿಲ್ಲವ, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯ ವಿಜಯ ಪೂಜಾರಿ, ರವಿರಾಜ ಖಾರ್ವಿ, ಮೀನುಗಾರರ ಪ್ರಕೋಷ್ಠದ ಸದಾನಂದ ಬಳ್ಕೂರು, ಯುವ ಮೊರ್ಚಾ ಅಧ್ಯಕ್ಷ ಸತೀಶ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು. ಬೈಂದೂರಿನಲ್ಲಿ ನಡೆದ ವಿಜಯೋತ್ಸವದಲ್ಲಿ ಜಿ.ಪಂ. ಸದಸ್ಯರಾದ ಸುರೇಶ್ ಬಟವಾಡಿ, ಕೆ. ಬಾಬು ಶೆಟ್ಟಿ, ಪಕ್ಷದ ಪ್ರಮುಖರಾದ ಸದಾಶಿವ ಡಿ.ಪಡುವರಿ, ಜಯಾನಂದ ಹೋಬಳಿದಾರ್, ಶಂಕರ ದೇವಾಡಿಗ ಬಂಕೇಶ್ವರ, ಗೋಪಾಲ ಗಾಣಿಗ ಬಂಕೇಶ್ವರ, ಸಸಿಹಿತ್ಲು ವೆಂಕಟ ಪೂಜಾರಿ, ದೀಪಕ್ ಕುಮಾರ್ ಶೆಟ್ಟಿ, ಕೃಷ್ಣಯ್ಯ ಮಯ್ಯಾಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೊನ್ನಾವರದ ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಕುಂದಾಪುರದ ಕೊಂಕಣಿ ಖಾರ್ವಿ ಸಮಾಜ ಭಾಂದವರು ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನ ಹಾಗೂ ವಿದ್ಯಾರಂಗ ಮಿತ್ರಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕೊಂಕಣ ಖಾರ್ವಿ ಸಮಾಜದ ಯುವಕನಾದ ಪರೇಶ್ ಮೇಸ್ತನ ಸಾವು ಅನುಮಾನ ಮುಡಿಸುತ್ತಿರುವುದಲ್ಲದೇ ಆತನ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆದಿರುವ ಬಗ್ಗೆ ಸಂಶಯವಿದೆ. ಈ ಬಗ್ಗೆ ಮರುಪರಿಶೀಲಿಸಿ ಆತನ ಒದಗಿಸಿಕೊಡಬೇಕೆಂದ ಅವರು ಆಗ್ರಹಿಸಿದರು. ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದಿಂದ ಮೌನ ಮೆರವಣಿಗೆ ಹೊರಟು ಶಾಸ್ತ್ರಿ ವೃತ್ತದಿಂದ ಕುಂದಾಪುರ ಮಿನಿವಿಧಾನಸೌಧಕ್ಕೆ ತೆರಳಿ ತಹಶಿಲ್ದಾರರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ಕೊಂಕಣ ಖಾರ್ವಿ ಸಮಾಜದ ಪ್ರಮುಖರು ಮೌನ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದರು.
