ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಗುರುವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕುಂದಾಪರ ನಗರದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕಿದ್ದ ವಿದ್ಯಾರ್ಥಿಗಳ ಬೆನ್ನುತಟ್ಟಿ ಹುರಿದುಂಬಿಸಿದರೆ, ಮಾಸ್ಕ್ ಧರಿಸದವರಿಗೆ ಫೈನ್ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ತಾಲೂಕು ಆಸ್ಪತ್ರೆಯಿಂದ ಶಾಸ್ತ್ರಿ ವೃತ್ತದವರಗೆ ತೆರಳಿದ ಡಿಸಿ ಜಿ. ಜಗದೀಶ್ ಮುಖ್ಯರಸ್ತೆ ಅಕ್ಕಪಕ್ಕ ಇರುವ ಎಲ್ಲಾ ಅಂಗಡಿಗೆ ಹೋಗಿ ಕರೋನಾ ಏರುಗತಿಯಲ್ಲಿರುವುದರಿಂದ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸೂಚಿಸಿ, ಪಾರಿಜಾತ ವೃತ್ತದ ಬಳಿ ಕಾರ್ ಪಾರ್ಕಿಂಗ್ಗೆ ಭೇಟಿ ನೀಡಿದಾಗ ಮಾಸ್ಕ್ ಧರಿಸದೆ ಇದ್ದ ಕಾರ್ ಚಾಲಕರಿಗೆ ಮಾಸ್ಕ್ ಎಲ್ಲಿ ಎಂದು ಗರಮ್ ಆದರು. ಕಿಸೆಯಲ್ಲಿರುವ ಮಾಸ್ಕ್ ತೆಗೆದು ಧರಿಸಿದ ಚಾಲಕರಿಗೆ ಮಾಸ್ಕ್ ಇರಬೇಕಿರುವುದು ಮುಖದ ಮೇಲೆ, ಕಿಸೆಯಲ್ಲಲ್ಲ. ಮಾಸ್ಕ್ ಹಾಕದೆ ಅಸಹಾಕರ ತೋರಿಸಿದರೆ ಕರೋನ ನಿಯಂತ್ರಣ ಹೇಗೆ ಎಂದು ಪ್ರಶ್ನಿಸಿ, ಬಾಡಿಗೆ ಮಾಡುವ ಕಾರ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಾವುದೇ ಸಮುದಾಯ ಶೈಕ್ಷಣಿಕವಾಗಿ ಪ್ರಗತಿಯಿಂದ ಸಾಧಿಸಿದಾಗ ಮಾತ್ರವೇ ಎಲ್ಲಾ ಸಾಮಾಜಿಕವಾಗಿ ಅಭ್ಯುದಯ ಸಾಧಿಸಲು ಸಾಧ್ಯವಿದೆ ಎಂದು ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ಹೇಳಿದರು. ಅವರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಇದರ ಗೋಳಿಹೊಳೆ ಶಾಖೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಖಾ ವ್ಯಾಪ್ತಿಯ ಕೊರಗ ಸಮುದಾಯದ ಮಕ್ಕಳಿಗೆ ವಸ್ತ್ರ ವಿತರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ರಾಜು ಪೂಜಾರಿ ಅವರು ಮಾತನಾಡಿ ಗೋಳಿಹೊಳೆ ಶಾಖೆಯಲ್ಲಿ ಪ್ರಾರಂಭದಿಂದಲೂ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಕೊರಗ ಸಮುದಾಯದ ಮಕ್ಕಳಿಗೆ ವಸ್ತ್ರ, ಪ್ರೋತ್ಸಾಹಧನವನ್ನು ನೀಡಲಾಗುತ್ತಿದ್ದು ಮುಂದಿನ ವರ್ಷಗಳಲ್ಲಿಯೂ ಈ ಯೋಜನೆಯನ್ನು ಮುಂದುವರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಸಹಕಾರಿಯ ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕರಾದ ರಾಮಕೃಷ್ಣ ಖಾರ್ವಿ ಉಪಸ್ಥಿತರಿದ್ದರು. ಎಸ್ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ ಸ್ವಾಗತಿಸಿ, ಸೌಹಾರ್ದದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ವಂದಿಸಿದರು. ಶಾಖಾ ವ್ಯವಸ್ಥಾಪಕ ರಾಘವೇಂದ್ರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮಂಗಳೂರು ವಿಭಾಗ 16 ವರ್ಷ ವಯೋಮಿತಿಯಲ್ಲಿ ಆಯೋಜಿಸಲಾಗಿರುವ ಹಾರ್ಡ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸನಿತ್ ಶೆಟ್ಟಿ ಉತ್ತಮ ಸಾಧನೆ ತೋರುವುದರ ಮೂಲಕ ಉಡುಪಿ ಜಿಲ್ಲೆಯಿಂದ ಮಂಗಳೂರು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಸಾಧನೆ ತೋರಿದ ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಜಯನಗರದ ಅರಸರು ಆಳ್ವಿಕೆ ನಡೆಸಿದ ಇತಿಹಾಸ ಇರುವ ಕುಂದಾಪುರ ತಾಲ್ಲೂಕಿನ ಬಸ್ರೂರಿನ 16ನೇ ಶತಮಾನದ ಪ್ರಸಿದ್ಧ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ವಿನಾಯಕ ದೇವರ ಕಂಚಿನ ದೀಪಸ್ತಂಭದಲ್ಲಿ ಶಾಸನ ಪತ್ತೆಯಾಗಿದೆ. ನೂರಾರು ವರ್ಷಗಳ ಕಾಲ ದೀಪವನ್ನು ಹಚ್ಚುವ ಮೂಲಕ ಈ ಕಂಚಿನ ದೀಪಸ್ತಂಭ ಕರಿ ಕಟ್ಟಿದ ಪರಿಣಾಮವಾಗಿ ಆಮೆಯ ಹಣೆಯ ಮೇಲ್ಭಾಗದಲ್ಲಿ ಇದ್ದ ನಾಲ್ಕು ಸಾಲಿನ ಶಾಸನ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ ಬಸ್ರೂರಿನ ಯುವ ಬ್ರಿಗೇಡ್ ತಂಡ ಕೈಗೊಂಡ ಶ್ರಮ ದಾನದ ಫಲಶೃತಿಯಾಗಿ ಕಂಚಿನ ಕಂಭದ ಕೆಳಭಾಗ ಇಂದು ಫಳ ಫಳವಾಗಿ ಹೊಳೆಯುತ್ತಿದ್ದು ಸ್ಥಳೀಯ ನಿವಾಸಿಯಾಗಿರುವ ಪ್ರದೀಪ್ ಕುಮಾರ್ ಬಸರೂರು ಅವರು ಈ ಶಾಸನವನ್ನು ಮೊಟ್ಟಮೊದಲ ಬಾರಿಗೆ ನೋಡಿ ಇದನ್ನು ಓದಿ ಜನರ ಗಮನಕ್ಕೆ ತರಲು ಸಫಲರಾಗಿದ್ದಾರೆ. ಈ ಅಪ್ರಕಟಿತ ಶಾಸನದಲ್ಲಿ ಇರುವ ನಾಲ್ಕು ಸಾಲುಗಳಿದ್ದು ಮೊದಲ ಸಾಲಿನಲ್ಲಿ “ವಿನಾಯಕ ದೇವರ”, ಎರಡನೆ ಸಾಲಿನಲ್ಲಿ “ಕಂಚಿನ ಕಂಬ ೧ಕ್ಕೆ “, ಮೂರನೇ ಸಾಲಿನಲ್ಲಿ”…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಾಡಿಗ ಅಕ್ಷಯ ಕಿರಣ ಸೇವಾ ಪೌಂಡೇಷನ್ನಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಕುಂದಾಪುರದ ನಾಗರತ್ನ ಅವರ ಮನೆಗೆ ತೆರಳಿ 2,600ರೂ. ವೈದ್ಯಕೀಯ ನೆರವು ನೀಡಲಾಯಿತು. ಈ ಸಂದರ್ಭದಲ್ಲಿ ಸೇವಾದಾರರಾದ ನಾಗರಾಜ ರಾಯಪ್ಪನ ಮಠ, ದಿನೇಶ್ ದೇವಾಡಿಗ, ಮಹಾಲಿಂಗ ದೇವಾಡಿಗ, ರಾಜ್ ದೇವಾಡಿಗ, ಗಿರೀಶ್ ದೇವಾಡಿಗ, ಪುರುಷೋತ್ತಮದಾಸ್, ಜಗದೀಶ್ ದೇವಾಡಿಗ, ಮದುಕರ ದೇವಾಡಿಗ, ರಾಜಾ ಮಠದ ಬೆಟ್ಟು ಮದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಲ್ಪೆಯ ದಿನೇಶ್ ತಿಂಗಳಾಯ ಇವರ ಮೀನುಗಾರಿಕಾ ‘ಶ್ರೀ ಶಿವರಕ್ಷ’ ಬೋಟ್ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಆಕಸ್ಮಿಕವಾಗಿ ಸಂಪೂರ್ಣ ಮುಳುಗಡೆಯಾದ ಪರಿಣಾಮ ಬಾಬ್ತು ವಿಮಾ ಪರಿಹಾರವಾಗಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ಪರವಾಗಿ ಕುಂದಾಪುರ ಶಾಖೆಯ ಶಾಖಾಧಿಕಾರಿ ಪಿ. ದಿನಕರ್ ಇವರು 40 ಲಕ್ಷದ ವಿಮಾ ಪರಿಹಾರವನ್ನು ಬೋಟಿನ ಮಾಲಕರಾದ ದಿನೇಶ್ ತಿಂಗಳಾಯ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಚೀಫ್ ಅಡ್ವೈಸರ್ ಹೆಚ್ ಸೀತಾರಾಮ ಹೆಗ್ಡೆ, ಬ್ಯುಸಿನೆಸ್ ಎಸೋಸಿಯೇಡ್ ವಿಲ್ಪ್ರೆಡ್ ಡಿ’ಸೋಜಾ ಸಿಬ್ಬಂದಿ ರಾಯಪುಡಿ ಜಗದೀಶ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಮಾತೃಭಾಷೆಯಿಂದ ವ್ಯಕ್ತಿಯ ವಿಕಾಸ ಸಾಧ್ಯ. ವ್ಯಕ್ತಿಯಲ್ಲಿರುವ ಆತ್ಮಜ್ಞಾನ ವಿಶಿಷ್ಟವಾದದ್ದು. ಅದನ್ನು ಬೇರೆಯವರು ಅಪಹರಿಸಲು ಸಾಧ್ಯವಿಲ್ಲ ಎಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಟಿ. ಎ. ಎನ್. ಖಂಡಿಗೆ ಹೇಳಿದರು. ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘ ಹಾಗೂ ಲಲಿತಕಲಾ ಸಂಘದ ವತಿಯಿಂದ ನಡೆದ ಕಲಾಕಿರಣ- 2021ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಆತ್ಮಜ್ಞಾನ ಮತ್ತು ಆತ್ಮಶಕ್ತಿಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಕಂಡುಕೊಳ್ಳಬೇಕಾದದ್ದು ವ್ಯಕ್ತಿಯ ವಿಕಾಸದ ದೃಷ್ಟಿಯಿಂದ ಮಹತ್ವವಾದದ್ದು. ಈ ಜ್ಞಾನಗಳನ್ನು ಮಾತೃಭಾಷೆಯು ಬೆಳೆಸುತ್ತದೆ. ಇಂತಹ ಕೆಲಸಗಳನ್ನು ಸಾಹಿತ್ಯ ಹಾಗೂ ಕಲಾ ಸಂಘಗಳು ಮಾಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ, ಭಾಷೆ ಅಭಿಮಾನವಿರಬೇಕು, ಆದರೆ ಅಂಧಾಭಿಮಾನವಿರಬಾರದು. ಯಾವುದೇ ಭಾ?ಯಾದರೂ ಅದು ವ್ಯಕ್ತಿಯ ಭಾವ ಬುದ್ಧಿಯನ್ನು ವಿಕಾಸಗೊಳಿಸುತ್ತದೆ. ಭಾ?ಗಳ ಬಗ್ಗೆ ಅನಗತ್ಯ ಮಡಿವಂತಿಕೆ ಇರಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಮಾವಿನಕಾರು ಗ್ರಾಮದ ಭರತ್ಕುಮಾರ್ ಶೆಟ್ಟಿ ಅವರಿಗೆ ಅವರ ಸಮಾಜಸೇವೆ ಗುರುತಿಸಿ ಬೀದರ್ನಲ್ಲಿ ಪ್ರತಿಷ್ಠಿತ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಪ್ರತಿಷ್ಠಾನ ಹಾಗೂ ಮಂದಾರ ಕಲಾ ವೇದಿಕೆಯಿಂದ ನಡೆದ ಸಮಾರಂಭದಲ್ಲಿ ಕಾಯಕ ಚೂಡಾಮಣಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಡಾ.ಎಂ.ಜಿ.ದೇಶಪಾಂಡೆ, ಮಕ್ಕಳತಜ್ಞ ಡಾ.ಸಿ.ಆನಂದ ರಾವ್, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿದೇರ್ಶಕ ಡಾ.ಸತೀಶ್ ಕುಮಾರ್ ಹೊಸಮನಿ ಬೆಂಗಳೂರು, ಡಾ.ಜಯಪ್ಪ ಹೊನ್ನಾಳಿ(ಜಯಕವಿ) ಮೈಸೂರು, ಲೇಖಕಿ ಪಾರ್ವತಿ ಸೋನಾಲೆ ಬೀದರ್, ಸಾಹಿತಿ ಗೋಪಾಲಕೃಷ್ಣ ವಂಡ್ಸೆ, ಸಂಘಟಕ ಡಾ. ನಿತೇಶ್ಕುಮಾರ್ ಬೀದರ್, ಕವಿ ವಿಶ್ವೇಶ್ವರ ಮೇಟಿ ಮುಂಬೈ ಮೊದಲಾದವರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಆಳ್ವಾಸ್ ಕಾಲೇಜಿನ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಹಾಗೂ ನ್ಯಾಚುರೋಪಥಿ ವಿದ್ಯಾರ್ಥಿಗಳಿಗೆ ‘ಬರ್ಡ್ ಫೀಡರ್ ಇನ್ಸ್ಟಾಲೇಶನ್’ ಕುರಿತು ಒರಿಯೆಂಟೇಶನ್ ಹಮ್ಮಿಕೊಳ್ಳಲಾಯಿತು. ಪ್ರಥಮ ಎಂಎಸ್ಸಿ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವಿನುತಾ ಹಕ್ಕಿಗಳ ಸ್ವಭಾವ ಹಾಗೂ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿ ಜೆನಿಫರ್ ಪಿಂಟೋ, ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಬರ್ಡ್ ಫೀಡರ್ಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದರು. ಜೊತೆಗೆ ಈ ಬರ್ಡ್ ಫೀಡರ್ಗಳ ಅಳವಡಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಆಳ್ವಾಸ್ ಇಂಜಿಯನಿಯರಿಂಗ್ ಹಾಗೂ ನ್ಯಾಚುರೋಪತಿ ಕಾಲೇಜಿನ 400ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಸಂಯೋಜಕಿ ಡಾ. ರಶ್ಮಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಭಾರತೀಯ ಜನತಾ ಪಕ್ಷದ ತ್ರಾಸಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ತ್ರಾಸಿ ಮಹಾಶಕ್ತಿ ಕೇಂದ್ರದ ಸಭೆ ತ್ರಾಸಿಯ ಅಣ್ಣಪ್ಪಯ್ಯ ಸಬಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ಬೂತ್ ಪ್ರಮುಖರನ್ನು, ಶಕ್ತಿ ಕೇಂದ್ರದ ಪ್ರಮುಖರನ್ನು ನೇಮಿಸಲಾಗುತ್ತಿದೆ. ರಾಜ್ಯ ಮತ್ತು ಜಿಲ್ಲಾ ಬಿಜೆಪಿ ಸೂಚನೆಯಂತೆ ಬೈಂದೂರು ಮಂಡಲದಲ್ಲಿ ಪಕ್ಷವನ್ನು ಸಂಘಟಿಸಿ ಬಲಪಡಿಸುವ ಕಾರ್ಯ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ವಿವಿಧ ಮೋರ್ಚಾ ಹಾಗೂ ಪ್ರಮುಖರ ಸಮಾವೇಶಗಳನ್ನು ನಡೆಸಿ ಮುಂಬರುವ ತಾಪಂ., ಜಿಪಂ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಮಾತನಾಡಿ, ಬಿಜೆಪಿ ಕಾರ್ಯಕರ್ತರು ಪಕ್ಷಕ್ಕಾಗಿ ಸ್ವಲ್ಪ ಸಮಯವನ್ನು ನೀಡಿ ಪಕ್ಷದ ಬೆಳವಣಿಗೆಗೆ ಮುಂದಾಗಬೇಕು. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಬಲವರ್ಧನೆಗೆ ಸಹಕರಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದರು. ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.…
