Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ಉಡುಪಿ ಆಯೋಜಿಸಿದ 38ನೇ ವರ್ಷದ ರಾಜ್ಯ ಮಟ್ಟದ ನಾಟಕ ಸ್ವರ್ಧೆಯಲ್ಲಿ ಬೈಂದೂರಿನ ಪ್ರತಿಷ್ಠಿತ ನಾಟಕ ಸಂಸ್ಥೆ ಲಾವಣ್ಯ ತಂಡ ಪ್ರಸ್ತುತಪಡಿಸಿದ ‘ಗಾಂಧಿಗೆ ಸಾವಿಲ್ಲ’ ನಾಟಕ ತೃತೀಯ ಸ್ಥಾನ ಪಡೆದುಕೊಂಡಿದೆ. ನಾಟಕದಲ್ಲಿ ಶ್ರೇಷ್ಠ ರಂಗಪರಿಕರಕ್ಕಾಗಿ ಹಾಗೂ ಪ್ರಸಾದನಕ್ಕಾಗಿ ಮೂರನೇ ಸ್ಥಾನ, ಶ್ರೇಷ್ಠ ಬೆಳಕಿಗಾಗಿ ಎರಡನೇ ಸ್ಥಾನ ಪಡೆದುಕೊಂಡಿದೆ. ಗೋಡ್ಸೆ ಪಾತ್ರಧಾರಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಮೆಚ್ಚಗೆ ಗಳಿಸಿದ್ದಾರೆ. ಅಸ್ಗರ್ ವಜಾಹತ್ ರಚನೆಯ ಹಸನ ನಯೀಂ ಸುರಕೋಡ ಕನ್ನಡಕ್ಕೆ ಭಾಷಾಂತರದ ನಾಟಕವನ್ನು ಗಿರೀಶ್ ಬೈಂದೂರು ನಿರ್ದೇಶಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಸುಮಾ ಫೌಂಡೇಶನ್ ನಾಗೂರು ಕುಸುಮಾಂಜಲಿ – 2017ರ ಪೂರ್ವಭಾವಿಯಾಗಿ ಆಯೋಜಿಸಿದ್ದ ಗಾನಕುಸುಮ ಸಂಗೀತ ಸ್ಪರ್ಧೆಯ ಅಂತಿಮ ಸುತ್ತು ಬ್ಲಾಸಮ್ ಸಂಗೀತ ನೃತ್ಯ ಶಾಲೆಯ ಕೆ.ಎ.ಎಸ್. ಆಡಿಟೊರಿಯಂನಲ್ಲಿ ನಡೆಯಿತು. ಗಾನಕುಸುಮ – 2017ರ ಅಂತಿಮ ಸುತ್ತಿನಲ್ಲಿ ೧೫ ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಸೀನಿಯರ್ ವಿಭಾಗದಲ್ಲಿ ಕುಂದಾಪುರ ಭಂಡಾರಕಾರ‍್ಸ್ ಕಾಲೇಜಿನ ವಿದ್ಯಾರ್ಥಿನಿ ಅನುಷಾ ಭಟ್ ಹಾಗೂ ಜೂನಿಯರ್ ವಿಭಾಗದಲ್ಲಿ ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವಿಶ್ವಜಿತ್ ಕಿಣಿ ತಮ್ಮದಾಗಿಸಿಕೊಂಡರು. ಕುಸುಮಾಂಜಲಿ 2017ರ ಚಾನಲ್ ಪಾರ್ಟ್ನರ್ ಮುಂಬಯಿ ಶುಭಸಾಗರ್ ಹೋಟೆಲ್ ಮಾಲಿಕರಾದ ಲಕ್ಷ್ಮಣ ಪೂಜಾರಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಸ್ಪರ್ಧಿಗಳಿಗೆ ಶುಭ ಹಾರೈಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಪ್ರಸಿದ್ಧ ಗಾಯಕ ಚಂದ್ರಶೇಖರ ಕೆದಿಲಾಯ, ಆಕಾಶವಾಗಿ ಕಲಾವಿದ ಗಣೇಶ ಗಂಗೊಳ್ಳಿ ಹಾಗೂ ಸಂಗೀತ ಪದವಿಧರೆ ಶ್ವೇತಾ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕುಸುಮ ಹೋಮ್ಸ್ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕರಾದ ಕುಸುಮಾವತಿ ಎಸ್. ಶೆಟ್ಟಿ, ಸುಧಾಕರ ಶೆಟ್ಟಿ ಹಾಗೂ ಯು. ಪ್ರಭಾಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೆಸುಗೆ ಫೌಂಡೇಶನ್ ಹಾಗೂ ಪಡುವರಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಬೈಂದೂರು ಸೋಮೇಶ್ವರದಲ್ಲಿ ಮೊದಲ ಭಾರಿಗೆ ಡಿ.೨೮ರಿಂದ ಜ.೧ರ ತನಕ ಜರುಗುತ್ತಿರುವ ’ಬೈಂದೂರು ಬೀಚ್ ಉತ್ಸವ’ದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ಪೋಸ್ಟರ್ ಹಾಗೂ ಸ್ಟಿಕ್ಕರ್‌ಗಳನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ಗೌರಿ ದೇವಾಡಿಗ, ತಾ.ಪಂ ಸದಸ್ಯೆ ಗಿರಿಜಾ ಖಾರ್ವಿ, ಪಡುವರಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಶಿರೂರು ಗ್ರಾಪಂ ಸದಸ್ಯ ರಘುರಾಮ ಪೂಜಾರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಪ್ರಮುಖರಾದ ಕೆ.ಜಿ. ನಾಗಪ್ಪ ಶೇರುಗಾರ್, ಸೊಡಿತಾರ್ ಸುಬ್ರಾಯ ಶೇರುಗಾರ್, ಪ್ರಸನ್ನಕುಮಾರ್ ಉಪ್ಪುಂದ, ಮುದಾಸಿರ್ ಬೈಂದೂರು, ಪ್ರಿಯದರ್ಶಿನಿ ಬೆಸ್ಕೂರು, ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬೈಂದೂರು, ರಾಮಕ್ಷತ್ರಿಯ ಮಾತೃ ಮಂಡಳಿ ಬೈಂದೂರು ಇದರ ಮಾಜಿ ಅಧ್ಯಕ್ಷ ಆಶಾ ಜಗದೀಶ ಪಟವಾಲ್, ಬೆಸುಗೆ…

Read More

ಕುಂದಾಪುರ ವಿಧಾನಸಭಾ ಕ್ಷೇತ್ರ ಇಂಟೆಕ್ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅಭಿಮತ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದು, ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದ ಮೂಲಕ ಸರಕಾರದ ಕಾರ್ಯಕ್ರಮ ಹಾಗೂ ಸಾಧನೆಗಳನ್ನು ಜನರ ಮುಂದೆ ತೆರೆದಿಡುವ ಜೊತೆಗೆ ಜನರ ಸಮಸ್ಯೆ ಹಾಗೂ ಅಭಿಪ್ರಾಯವನ್ನು ಕ್ರೊಢೀಕರಿಸುವ ಕೆಲಸ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು. ಅವರು ಇಲ್ಲಿನ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ಜರುಗಿದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂಟೆಕ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಕ್ಷ ಅಸ್ತಿತ್ವವನ್ನು ಕಂಡುಕೊಳ್ಳಬೆಕಿದ್ದರೆ ಅಭ್ಯರ್ಥಿ ಗೆಲ್ಲಬೇಕು. ಇಲ್ಲವೇ ಗೆಲ್ಲಿಸಬೇಕು, ಗೆಲ್ಲುವವರಿಗೆ ಬಿಟ್ಟುಕೊಡಬೇಕು. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲವ ಅಭ್ಯರ್ಥಿಗೆ ಜೊತೆಯಾಗಿ ನಿಂತು ಸಂಘಟಿತವಾಗಿ ಶ್ರಮಿಸಬೇಕಿದೆ ಎಂದವರು ಹೇಳಿದರು. ಕರ್ನಾಟಕ ರಾಜ್ಯ ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ ಮಾತನಾಡಿ ಇಂಟೆಕ್ ಸಂಘಟನೆ ಪ್ರಪಂಚದಲ್ಲಿಯೇ ಅತಿಹೆಚ್ಚು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನ್ಯಾಯಕ್ಕಾಗಿ ಬರುವ ಕಕ್ಷಿದಾರರಿಗೆ ಸರಿಯಾದ ನ್ಯಾಯಕೊಡಿಸುವ ಮೂಲಕ ನ್ಯಾಯವಾದಿಗಳು ತಮ್ಮ ವಕೀಲ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಹೇಳಿದರು. ಅವರು ಕುಂದಾಪುರ ವಕೀಲರ ಸಂಘ (ರಿ.) ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ಶಿಲ್ಪಾನಾಗ್ ಅವರು ಮಾತನಾಡಿ, ನ್ಯಾಯವಾದಿಗಳ ಮಾರ್ಗಸೂಚಿ ಹಾಗೂ ನಿರ್ದೇಶನಗಳ ಮೂಲಕ ಸ್ವತಂತ್ರ ಭಾರತದ ಬಡತನ ಮತ್ತು ಅನಕ್ಷರತೆಯ ಪ್ರಮಾಣ ಕಡಿಮೆಯಾಗಲು ಕಾರಣವಾಯಿತು. ಇಂದು ಭಾರತ ಸೂಪರ್ ಪವರ್ ದೇಶವಾಗಲು ನ್ಯಾಯವಾದಿಗಳ ಪಾತ್ರ ಮಹತ್ತರವಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯವಾದಿ ವಿಕಾಸ್ ಹೆಗ್ಡೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅತಿದೊಡ್ಡ ಸಮೂಹ ಎಂದರೆ ನ್ಯಾಯವಾದಿಗಳ ಸಮುದಾಯವಾಗಿದೆ. ಅಂತಹ ಸಮುದಾಯದ ಹೋರಾಟದಿಂದ ಸಿಕ್ಕಿದ ಸ್ವಾತಂತ್ರ್ಯವನ್ನು ಪ್ರಶ್ನಿಸಿಕೊಳ್ಳುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾನವ ಹಕ್ಕುಗಳ ಪ್ರತಿಪಾದನೆ ಮತ್ತು ಸಂಶೋಧನಾ ಪ್ರತಿಷ್ಠಾನವು ನವದೆಹಲಿಯ ಕಾನ್ಸ್ಟಿಟ್ಯೂಶನಲ್ ಕ್ಲಬ್‌ನಲ್ಲಿ ಈಚೆಗೆ ನಡೆಸಿದ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ದೇಶದ ಸ್ಥಳೀಯಾಡಳಿತಗಳ ಬಲವರ್ಧನೆಗಾಗಿ ಸಂವಿಧಾನ ತಿದ್ದುಪಡಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಗಳ ಮೇಲೆ ಒತ್ತಾಸೆ ತರುವ ನಿರ್ಧಾರ ಕೈಗೊಂಡಿತು. ಈ ಉದ್ದೇಶ ಸಾಧನೆಗಾಗಿ ಇದೇ ಗುರಿಹೊಂದಿರುವ ಸಂಸ್ಥೆಗಳ ಮತ್ತು ಸಮಾನ ಮನಸ್ಕ ವ್ಯಕ್ತಿಗಳ ಸಹಯೋಗ ಪಡೆದುಕೊಳ್ಳಲು ತೀರ್ಮಾನಿಸಿತು. ಪಂಚಾಯತ್ ರಾಜ್ ಮತ್ತು ಪೌರಾಡಳಿತ ಸಂಸ್ಥೆಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂವಿಧಾನದ ೭೩ ಮತ್ತು ೭೪ನೆಯ ತಿದ್ದುಪಡಿಗಳು ರಾಜ್ಯಗಳಿಗೆ ನೀಡಿದ ವಿವೇಚನಾಧಿಕಾರಗಳಲ್ಲಿ ಹಲವನ್ನು ಬಂಧನೀಯಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಮತ್ತು ಆ ದಿಸೆಯ ಕಾರ್ಯವಿಧಾನಗಳ ಕುರಿತು ವಿಸ್ತೃತ ಚರ್ಚೆ ನಡೆಸಿತು. ಅದಕ್ಕಾಗಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಜ್ಯವಾರು ಕಾರ್ಯಪಡೆಗಳನ್ನು, ಸಂವಿಧಾನ ತಿದ್ದುಪಡಿ ಪ್ರಸ್ತಾವನೆಯ ಕರಡು ಸಿದ್ಧಪಡಿಸಲು ಪರಿಣತರ ಸಮಿತಿಯನ್ನು ರೂಪಿಸಲು ನಿರ್ಣಯಿಸಿತು. ಬದಲಾವಣೆಯ ಸಂದರ್ಭದಲ್ಲಿ ತೃಣಮೂಲ ಮತ್ತು ಜನಸಹಭಾಗಿತ್ವ ಪ್ರಜಾತಂತ್ರ ವ್ಯವಸ್ಥೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಸಮಾಜದಲ್ಲಿರುವ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಅವರ ಕಾರ್ಯವನ್ನು ಸ್ಮರಿಸುವುದರ ಜೊತೆಗೆ ಇನ್ನಷ್ಟು ಪ್ರೇರೆಣೆ ನೀಡಿದಂತಾಗುತ್ತದೆ. ಸಾಧನೆಯೆಂಬುದು ಯಾರೊಬ್ಬರ ಸ್ವತ್ತಲ್ಲ, ಪ್ರತಿಯೊಬ್ಬರು ಶೃದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದರೆ ತಾವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಿದೆ. ನಾನು ಎಂಬುದು ಹೋಗಿ ನಾವು ಎಂಬ ಭಾವನೆ ಮೂಡಿದಾಗ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನುಡಿದರು. ಕಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವೇದನಾ ಟ್ರಸ್ಟ್ (ರಿ.) ನಾಯ್ಕನಕಟ್ಟೆಯವರ ಏಳನೇ ವಾರ್ಷಿಕೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಅಭಿಮಾನವಿರಬೇಕು. ಎಷ್ಟೇ ಎತ್ತರಕ್ಕೆ ಏರಿದರೂ ತಾಯ್ನೆಲದ ಋಣವನ್ನು ಮರೆಯಬಾರದು. ಸತ್‌ಚಿಂತನೆ ಹಾಗೂ ದೂರದೃಷ್ಟಿಯುಕ್ತ ಚಿಂತನೆಗಳಿಂದ ಕಂಡ ಕನಸನ್ನು ಸಾಕಾರಗೊಳಿಸಬಹುದು. ಅದಕ್ಕೆ ಹಿರಿಯರ ಸೂಕ್ತ ಮಾರ್ಗದರ್ಶನ ಹಾಗೂ ಸಹೃದಯರ ಸಂಪೂರ್ಣ ಸಹಕಾರ ಅಗತ್ಯ ಎಂದರು. ಸಂವೇದನಾ ಟ್ರಸ್ಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ‘ಸೇವೆಗೆ ಇನ್ನೊಂದು ಹೆಸರು ಸಹಕಾರಿಯಾಗಿದ್ದು, ಗ್ರಾಹಕರ ಅಭಿವೃದ್ಧಿಯೇ ನಮ್ಮ ಧ್ಯೇಯ. ಸೇವೆಯೇ ನಮ್ಮ ಮುಖ್ಯ ಧರ್ಮ. ನಾವು ನಿಮಗೆ- ನೀವು ನಮಗೆ ಇದು ಸಹಕಾರಿಯ ಘೋಷವಾಕ್ಯ. ಸಹಕಾರಿ ರಂಗದಲ್ಲಿ ಸಂಘದ ಸದಸ್ಯರೇ ಮಾಲಕರಾಗಿದ್ದು, ಹಲವಾರು ವರ್ಷಗಳಿಂದ ತನ್ನ ಸದಸ್ಯರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸಮಾಡುತ್ತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಭವನದಲ್ಲಿ ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ಹಾಗೂ ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಸಮಾರು ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಧಾನ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ (ಡಿ.೧೪) ಸಮಾರಂಭದ ಅಂಗವಾಗಿ ನವೋದಯ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಪ್ರವರ್ಧಮಾನದಲ್ಲಿದ್ದು, ಯಾವುದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ. ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಕ್ರೀಡಾಸ್ಫೂರ್ತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಹಿಡಿದಿಟ್ಟು ಅದನ್ನು ಸಮಾಜಕ್ಕೆ ತೋರಿಸಿದರೆ ಮಾತ್ರ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಬೈಂದೂರು ಗಾಂಧಿಮೈದಾನದಲ್ಲಿ ನಡೆದ ಸರಕಾರಿ ಪದವಿಪೂರ್ವ ಕಾಲೇಜಿನ ೨೦೧೭-೧೮ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯ ಹಾಗೂ ಸುಪ್ತ ಪ್ರತಿಭೆಯನ್ನು ಸ್ಪರ್ಧೆಯ ಮೂಲಕ ಹೊರಹೊಮ್ಮಿಸುವುದರ ಜತೆಗೆ ಅವರ ಅಭಿವೃದ್ಧಿಗಾಗಿ ಮತ್ತು ಗುಣಾತ್ಮಕ ಕಲಿಕೆಯನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಬಲ್ಲದು. ಕಾಳಜಿ ಹಾಗೂ ಪ್ರೀತಿಯಿಂದ ಮಕ್ಕಳಲ್ಲಿ ಅಡಗಿರುವ ಕ್ರೀಡಾಸ್ಪೂರ್ತಿಗೆ ಉತ್ತೇಜನ ದೊರೆತಾದ ಮಾತ್ರ ಅವು ಗುಣಾತ್ಮಕವಾಗಿ ಪ್ರಕಟಗೊಳ್ಳುತ್ತದೆ. ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಮಾತ್ರ ಸಾಧನೆಗೈಯಲು ಸಾಧ್ಯವಿದೆ. ಆಸಕ್ತರಿಗೆ ಸೂಕ್ತ ಸಮಯದಲ್ಲಿ ದೊರೆಯುವ ಅವಕಾಶದಿಂದ…

Read More

ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು ಭಾಗದ, ನೂರಾರು ವರ್ಷಗಳು ಇತಿಹಾಸ ಹೊಂದಿರುವ ಸಾಂಪ್ರದಾಯಿಕ ತಗ್ಗರ್ಸೆ ಕಂಬಳವು ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷ ಕಾರ್ಯದಂತೆ ವಿಧಿವತ್ತಾಗಿ, ವಿಜೃಂಭಣೆಯಿಂದ ನಡೆಯುತ್ತದೆ. ಹಲವಾರು ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ಕಂಬಳದ ಮೆರಗು ಹೆಚ್ಚಿಸಿದವು. ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯಿತು. ಕಂಬಳ ಗದ್ದೆಯಲ್ಲಿ ಖುರ್ಜು ನಿಲ್ಲಿಸಿ, ತೋರಣಗಳಿಂದ ಅಲಂಕರಿಸಲಾಗುತ್ತದೆ. ವಿಶೇಷ ವೇಷಭೂಷಣ, ವಾದ್ಯ ಮುಂತಾದವುಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ನೂರಾರು ಜೊತೆ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಕೆಲವರು ಹರಕೆಯ ಸಲುವಾಗಿ ಕೋಣಗಳನ್ನು ಓಡಿಸಿದರೇ, ಉಳಿದ ಕೋಣಗಳು ಸ್ವರ್ಧೆಯಲ್ಲಿ ಪಾಲ್ಗೊಂಡವು. ಕಂಠದಮನೆ ಕುಟುಂಬದ ನಾರಾಯಣ ಹೆಗ್ಡೆಯವರ ಸಾರಥ್ಯದಲ್ಲಿ ಸಾಂಪ್ರದಾಯಿಕ ಕಂಬಳ ಮುನ್ನಡೆಯುತ್ತಿದ್ದು ಊರಿನ ಜನ ಹಬ್ಬದಂತೆ…

Read More