ಸಂಭ್ರಮದಿ ಜರುಗಿದ ಪ್ರಸಿದ್ಧ ತಗ್ಗರ್ಸೆ ಕಂಬಳೋತ್ಸವ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು ಭಾಗದ, ನೂರಾರು ವರ್ಷಗಳು ಇತಿಹಾಸ ಹೊಂದಿರುವ ಸಾಂಪ್ರದಾಯಿಕ ತಗ್ಗರ್ಸೆ ಕಂಬಳವು ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷ ಕಾರ್ಯದಂತೆ ವಿಧಿವತ್ತಾಗಿ, ವಿಜೃಂಭಣೆಯಿಂದ ನಡೆಯುತ್ತದೆ. ಹಲವಾರು ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ಕಂಬಳದ ಮೆರಗು ಹೆಚ್ಚಿಸಿದವು.

Click Here

Call us

Click Here

ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯಿತು. ಕಂಬಳ ಗದ್ದೆಯಲ್ಲಿ ಖುರ್ಜು ನಿಲ್ಲಿಸಿ, ತೋರಣಗಳಿಂದ ಅಲಂಕರಿಸಲಾಗುತ್ತದೆ.

ವಿಶೇಷ ವೇಷಭೂಷಣ, ವಾದ್ಯ ಮುಂತಾದವುಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ನೂರಾರು ಜೊತೆ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಕೆಲವರು ಹರಕೆಯ ಸಲುವಾಗಿ ಕೋಣಗಳನ್ನು ಓಡಿಸಿದರೇ, ಉಳಿದ ಕೋಣಗಳು ಸ್ವರ್ಧೆಯಲ್ಲಿ ಪಾಲ್ಗೊಂಡವು. ಕಂಠದಮನೆ ಕುಟುಂಬದ ನಾರಾಯಣ ಹೆಗ್ಡೆಯವರ ಸಾರಥ್ಯದಲ್ಲಿ ಸಾಂಪ್ರದಾಯಿಕ ಕಂಬಳ ಮುನ್ನಡೆಯುತ್ತಿದ್ದು ಊರಿನ ಜನ ಹಬ್ಬದಂತೆ ಸಂಭ್ರಮಿಸುತ್ತಾರೆ. ವಿಶಾಲ ಗದ್ದೆಯ ಅಂಚುಗಳಲ್ಲಿ ನಿಂತು ಕಂಬಳದ ಸೊಬಗನ್ನು ಸವಿದವರು. ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ ಪೂಜಾರಿ, ಸುರೇಶ್ ಬಟವಾಡಿ, ಬಾಬು ಶೆಟ್ಟಿ ತಗ್ಗರ್ಸೆ, ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಕುಂದಾಪುರ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಬೈಂದೂರು ವಲಯ ಅಧ್ಯಕ್ಷ ವೆಂಕ್ಟ್ ಪೂಜಾರಿ ಸೇರಿದಂತೆ ವಿವಿಧ ಗಣ್ಯರು ಕಂಬಳೋತ್ಸವ ವೀಕ್ಷಣೆಗೆ ಆಗಮಿಸಿದ್ದರು.

ಸ್ವರ್ಧೆಯಲ್ಲಿ ಭಾಗವಹಿಸಿ ಗೆಲ್ಲುವ ಮೂರು ಜೋಡಿ ಕೋಣಗಳಿಗೆ, ಉತ್ತಮವಾಗಿ ಕೋಣಗಳನ್ನು ಓಡಿಸುವವರಿಗೆ ಬಹುಮಾನ ನೀಡಲಾಗುತ್ತದೆ. ಮನೋರಂಜನೆಗಾಗಿ ಕಂಬಳಗದ್ದೆ ಓಟ ನಡೆಯಿತು.

ತಗ್ಗರ್ಸೆ ಕಂಬಳೋತ್ಸವ ವಿಜೇತರು

Click here

Click here

Click here

Call us

Call us

ಹಲಗೆ ವಿಭಾಗ:
ಪ್ರಥಮ: ಧೀರಜ್ ಆತ್ಮಜ್ ಬಾರಕೂರು ಇವರ ಕೋಣ ಓಡಿಸಿದವರು ಗೋಪಾಲ ನಾಯ್ಕ್ ಮುದ್ದುಮನೆ
ದ್ವಿತೀಯ: ಪುಪ್ಪರಾಜ್ ಶೆಟ್ಟಿ ಶಿರೂರು ಇವರ ಕೋಣ ಓಡಿಸಿದವರು ಗೋಪಾಲ ನಾಯ್ಕ್ ಮುದ್ದುಮನೆ
ತೃತೀಯ: ದೊಟ್ಟಯ್ಯ ಪೂಜಾರಿ ಗುರನಮಕ್ಕಿ ಇವರ ಕೋಣ ಓಡಿಸಿದವರು ಭಾಸ್ಕರ ದೇವಾಡಿಗ

ಹಗ್ಗ ವಿಭಾಗ
ಪ್ರಥಮ: ಕಾರಿಕಟ್ಟೆ ದಿ. ಮಹಾಬಲ ಶೆಟ್ಟಮನೆ ಇವರ ಕೋಣ ಓಡಿಸಿದವರು ಮಂಜುನಾಥ ಗೌಡ
ದ್ವಿತೀಯ: ಗೋವಿಂದ ಶೇರುಗಾರಹಿತ್ಲು ಇವರ ಕೋಣ ಓಡಿಸಿದವರು ರಾಘವೇಂದ್ರ
ತೃತೀಯ: ನಾರಾಯಣ ದಏವಾಡಿಗ ಕಂಚಿಕಾನು ಇವರ ಕೋಣ ಓಡಿಸಿದವರು ರಾಘವೇಂದ್ರ

ಹಗ್ಗ ವಿಭಾಗ ಕಿರಿಯ:
ಪ್ರಥಮ: ಉಮೇಶ್ ಪೂಜಾರಿ ಅವರ ಕೋಣ
ದ್ವಿತೀಯ: ಪಂಜು ಪೂಜಾರಿ ನಾಗೂರು ಅವರ ಕೋಣ ಓಡಿಸಿದವರು ರಾಘವೇಂದ್ರ
ತೃತೀಯ: ವೆಂಕಟರಮಣ ಗಾಣಿಗ ಉಪ್ಪುಂದ ಇವರ ಕೋಣ ಓಡಿಸಿದವರು ರಾಘವೇಂದ್ರ

ಕೆಸರುಗದ್ದೆ ಓಟದಲ್ಲಿ ಪ್ರಥಮ ಮಂಜುನಾಥ ಗೌಡ, ದ್ವಿತೀಯ ವಸುಂಧರ ದೇವಾಡಿಗ, ತೃತೀಯ ಹರೀಶ್

 

Leave a Reply