Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಭಾಜನರಾಗಿದ್ದಾರೆ. ಪ್ರಸ್ತುತ ಕತಾರಿನಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಅವರು ಸಾಂಸ್ಕೃತಿಕ ರಂಗದಲ್ಲಿ ಸಲ್ಲಿಸಲಾಗುತ್ತಿರುವ ಸೇವೆಯನ್ನು ಗುರುತಿಸಿ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಕತಾರ್‌ನಲ್ಲಿ ಪಸರಿಸುತ್ತಿರುವ ಸುಬ್ರಹ್ಮಣ್ಯ ಅವರು ಕತಾರ್ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕತಾರ್ ಕರ್ನಾಟಕ ಸಂಘದ ಮೂಲಕ ಹತ್ತಾರು ಕನ್ನಡಪರ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ೨೦೧೩-೧೫ನೇ ಸಾಲಿನಲ್ಲಿ ಕರ್ನಾಟಕ ಸಂಘ ಕತಾರಿನ ಸದಸ್ಯತ್ವ ನೋಂದಣಿ ಸಂಚಾಲಕರಾಗಿ, ಕಾರ್ಯಕಾರಣಿ ಸಮಿತಿಯ ಖಜಾಂಜಿಯಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಕ್ರೀಯಾಶೀಲ ವ್ಯಕ್ತಿತ್ವ, ಸಮಾಜ ಸೇವೆಯಡೆಗಿನ ನಿರಂತರ ತುಡಿತ ಹಾಗೂ ಅತ್ಯುತ್ತಮ ಸಂಘಟನಾ ಕೌಶಲ್ಯದಿಂದ ಸುಬ್ರಹ್ಮಣ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಕತಾರ್ ಕರ್ನಾಟಕ ಸಂಘಕ್ಕೆ ಕನ್ನಡಿಗರನ್ನು ಸದಸ್ಯರನ್ನಾಗಿ ಸೇರಿಸುವಲ್ಲಿ ಹಾಗೂ ಈ ಭಾಗದಲ್ಲಿ ವಿವಿಧ ಸಂಘಟನೆಗಳ ಮೂಲಕ ನಿರಂತರವಾಗಿ ಅತ್ಯುತ್ತಮ ಕಾರ್ಯಕ್ರಮ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ೨೫ ವರ್ಷಗಳ ಹಿಂದೆ ೧೯೯೨ರಂದು ಸಾಮಾಜಿಕ ಚಿಂತನೆಗಳ ಕನಸನ್ನು ಹೊತ್ತು ಯುವ ಮನಸ್ಸುಗಳಿಂದ ರೂಪುಗೊಂಡು ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಮಧುರ ಯುವಕ ಮಂಡಲ ಸೌಡ(ರಿ) ಸಂಸ್ಥೆಯು ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ. ಸಾಮಾಜಿಕ ಕೈಂಕರ್ಯದ ತಳಹದಿಯ ಮೇಲೆ ರೂಪುಗೊಂಡ ಮಧುರ ಯುವಕ ಮಂಡಲ ಅನೇಕ ಸಾಮಾಜಿಕ ಜವಾಬ್ಧಾರಿಗಳನ್ನು ನಿರ್ವಹಿಸಿ ಜನರ ಗಮನ ಸೆಳೆದಿದೆ. ಸಂಸ್ಥೆಯು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗುರುತಿಸಿ ಗೌರವಿಸಿ ಯುವ ಮನಸ್ಸುಗಳಿಗೆ ಹುರುಪನ್ನು ತುಂಬುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಭಾಗದ ಧಾರ್ಮಿಕ ಕಾರ್ಯಕ್ರಮಗಳು, ಪರಿಸರ ಕಾಳಜಿಯ ಕಾರ್ಯಕ್ರಮಗಳು, ಸಾಮಾಜಿಕ ಹೊಣೆಗಾರಿಕೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸಂಸ್ಥೆಯು ಮೂಲಕ ಯುವಕರು ತೊಡಗಿಕೊಂಡಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾಗಿ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಅಧ್ಯಕ್ಷರಾಗಿ ಉದಯ ಐತಾಳ್, ಉಪಾಧ್ಯಕ್ಷರಾಗಿ ಉದಯ ದೇವಾಡಿಗ, ಕಾರ್ಯದರ್ಶಿಯಾಗಿ ರಂಜಿತ ಮೊಗವೀರ ಸೇರಿದಂತೆ ಯವಕರ ಪಡೆ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದೆ.

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಹೊರನಾಡ ಕನ್ನಡಿಗ, ಕುಂದಾಪುರ ತಾಲೂಕಿನ ಗೊಳಿಹೊಳೆ ಗ್ರಾಮ ಚುಚ್ಚಿಯ ದೀಪಕ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಪ್ರಸ್ತತ ಕತಾರ್‌ನಲ್ಲಿ ವಾಸಿಸುತ್ತಿರುವ ದೀಪಕ್ ಶೆಟ್ಟಿ ಅವರ ಸಾಮಾಜಿಕ ರಂಗದ ಸೇವೆ ಹಾಗೂ ವಿದೇಶದಲ್ಲಿನ ಕನ್ನಡ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಸಂಘ ಕತಾರ್‌ನ ಸಲಹಾ ಸಮಿತಿ ಅಧ್ಯಕ್ಷರಾಗಿರುವ ದೀಪಕ್ ಶೆಟ್ಟಿ, ೨೦೧೩-೧೫ರ ಸಾಲಿನಲ್ಲಿ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಅದಕ್ಕೂ ಹಿಂದಿನ ಅವಧಿಯಲ್ಲಿ ಸಂಘದ ಕಾರ್ಯದರ್ಶಿಯಾಗಿ, ಕ್ರೀಡಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ದಶಕಗಳಿಂದ ಕತಾರಿನಲ್ಲಿ ನೆಲೆಸಿರುವ ಇವರು ಉದ್ಯೋಗದೊಂದಿಗೆ ತುಳುಕೂಟ, ಬಂಟರ ಸಂಘ, ಭಾರತೀಯ ಸಾಂಸ್ಕ್ರತಿಕ ಕೇಂದ್ರ, ಇಂಡಿಯನ್ ಕಮ್ಯುನಿಟಿ ಬೆನವೊಲಂಟ್ ಪೋರಮ್ ಮುಂತಾದ ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡವರು. ಕುಂದಾಪ್ರ ಡಾಟ್ ಕಾಂ. ಬಡ ಮಕ್ಕಳ ಹೃದಯ ಚಿಕಿತ್ಸೆಗೆ ಸಹಕಾರ, ಶಾಲೆ, ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಸಹಾಯ ಧನ ಹೀಗೆ ಹಲವು ತೆರನಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಸಮಾಜಕ್ಕಾಗಿ ಬದುಕುವ ದೊಡ್ಡ ಪಡೆ ನಿರ್ಮಾಣವಾಗಿದ್ದು, ಜನರ ರಕ್ಷಣೆ ಮತ್ತು ಕುಂದು ಕೊರತೆಗಳನ್ನು ನೀಗಿಸುವಲ್ಲಿ ಪ್ರ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ದೇಶಕ್ಕೆ ಅನುಕೂಲವಾಗುವಂತಹ ನಿಲುವು ತಳೆದಿರುವ ಸಂಘದ ಪ್ರತಿಯೊಂದು ಕಾರ್ಯವೂ ಜನಾಂದೋಲನವಾಗಿ ರೂಪುಗೊಂಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗದ ಕಾರ್ಯಕಾರಿಣಿ ಸದಸ್ಯ ಗಜಾನನ ಪೈ ಹೇಳಿದರು. ಅವರು ಇಲ್ಲಿನ ಗಾಂಧಿ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪಥಸಂಚಲದ ಬಳಿಕ ಜರುಗಿದ ಸಭೆಯಲ್ಲಿ ಮಾತನಾಡಿದರು. ಸಂಘದ ಪ್ರತಿಯೊಬ್ಬರೂ ತಾನೊಬ್ಬ ವ್ಯಕ್ತಿಯಲ್ಲ ಸಮಷ್ಠಿಯ ಭಾಗ ಎಂದು ಅರಿಯುವುದು ಪಥ ಸಂಚಲನದ ಉದ್ದೇಶವಾಗಿದ್ದು, ಈ ಮೂಲಕ ಜನರಲ್ಲಿ ಸ್ಥೈರ್ಯ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ಸಮಾಜ ವೃಕ್ಷಕ್ಕೆ ಬೇರಿನ ರೀತಿಯಲ್ಲಿ ಸಂಘವಿದ್ದು, ಸಂಸ್ಕೃತಿಯ ಸಾರ ಸರ್ವಸ್ವವನ್ನು ಹೀರಿ ಬದುಕಿ ಸಮಾಜಕ್ಕೆ ಮಾದರಿಯಾಗುವುದನ್ನು ಇಲ್ಲಿ ಕಾಣಬಹುದಾಗಿದೆ ಎಂದರು. ದಿನದ ಕನಿಷ್ಠ ಒಂದು ಗಂಟೆಯನ್ನು ಶಾಖೆಗೆ ನೀಡುವ ಮೂಲಕ ಸಮಾಜಕ್ಕಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗ ತಮ್ಮ ಕವನಗಳಲ್ಲಿ ಸಮಾಜದ ಕೊಳೆ ತೊಲಗಿಸಿ ನವಸಮಾಜ ನಿರ್ಮಿಸುವ ಕನಸು ಬಿತ್ತಿದ್ದರು. ಹೊಸನಾಡು ಕಟ್ಟಲು ಮುಂದಾಗುವಂತೆ ಯುವಜನರಿಗೆ ಕರೆ ನೀಡಿದ್ದರು. ಅವರ ಜನ್ಮಭೂಮಿಯಾದ ಮೊಗೇರಿಯ ಯುವಜನರು ಅವರ ಆಶಯವನ್ನು ಮೈಗೂಡಿಸಿಕೊಂಡು ಕನಿಷ್ಠ ಹೊಸ ಮೊಗೇರಿ ಕಟ್ಟುವ ಕಾಯಕದಲ್ಲಿ ತೊಡಗಬೇಕು ಎಂದು ಹಿರಿಯ ಪತ್ರಕರ್ತ, ಬೆಂಗಳೂರಿನ ಮಾಧ್ಯಮ ಭಾರತಿಯ ಸಂಚಾಲಕ ಮೊಗೇರಿ ಜಯರಾಮ ಅಡಿಗ ಹೇಳಿದರು. ಮೊಗೇರಿಯ ಗೋಪಾಲಕೃಷ್ಣ ಅಡಿಗ ಯುವ ಅಭಿಮಾನಿ ಬಳಗವು ಸಿರಿಮೊಗೇರಿ ಸಮಷ್ಟಿ ವೇದಿಕೆ ಮತ್ತು ಓಂ ಕಲಾಬಳಗದ ಸಹಕಾರದೊಂದಿಗೆ ಈಚೆಗೆ ನಡೆಸಿದ್ದ ಎಂಟು ದಿನಗಳ ನೃತ್ಯ ವೈವಿಧ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇದಕ್ಕೆ ಮೊದಲು ಶಂಕರನಾರಾಯಣ ದೇವಸ್ಥಾನದ ಆವರಣದಲ್ಲಿ ಯುವ ಕಲಾಸಕ್ತರಿಗಾಗಿ ಯಕ್ಷಗಾನ, ಜಾನಪದ ನೃತ್ಯ ಮತ್ತು ಸೆಮಿ ಕ್ಲಾಸಿಕಲ್ ಡಾನ್ಸ್ ತರಬೇತಿ ನಡೆದಿತ್ತು. ಯಕ್ಷಗಾನ ಕಲಾವಿದ ಪ್ರಶಾಂತ ಮಯ್ಯ, ನೃತ್ಯ ನಿರ್ದೇಶಕಿ ಸರಿತಾ ಹೆಮ್ಮಾಡಿ ತರಬೇತಿ ನೀಡಿದ್ದರು. ಗೀತಾ ಹೊಸ್ಮನೆ ಸ್ವಾಗತಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ಗಂಗೊಳ್ಳಿ ಸುಗ್ಗಿಬೈಲು ಸಂಪೆಕಟ್ಟೆ ನಿವಾಸಿ ರಾಧಾ ಅವರ ಶಸ್ತ್ರ ಚಿಕಿತ್ಸೆಗಾಗಿ ಗಂಗೊಳ್ಳಿಯ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಿಲ್ಲವ ಸೇವಾ ಸಂಘದ ಸದಸ್ಯರು ೨೫ ಸಾವಿರ ರೂ.ಗಳನ್ನು ನೀಡಿದ್ದಾರೆ. ಗಂಗೊಳ್ಳಿಯ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಹಕಾರಿ ಸಂಘದ ವಠಾರದಲ್ಲಿ ಗುರುವಾರ ಜರಗಿದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಿಲ್ಲವ ಸೇವಾ ಸಂಘದ ಸದಸ್ಯರು ಸಂಗ್ರಹಿಸಿ ೨೫ ಸಾವಿರ ರೂ.ಗಳ ಚೆಕ್‌ನ್ನು ಸಂಘದ ಅಧ್ಯಕ್ಷೆ ಲಲಿತಾ ದುರ್ಗರಾಜ್ ಪೂಜಾರಿ ಅವರು ರಾಧಾ ಅವರ ಸಂಬಂಧಿ ಗಿರಿಜಾ ಅವರಿಗೆ ಗುರುವಾರ ಹಸ್ತಾಂತರಿಸಿದರು. ಸಂಘದ ಉಪಾಧ್ಯಕ್ಷೆ ಗೌರಿ ಅಣ್ಣಪ್ಪ ಬಿಲ್ಲವ, ಕಾರ್ಯದರ್ಶಿ ಸುಶೀಲಾ ನಾರಾಯಣ ಪೂಜಾರಿ, ಸದಸ್ಯರಾದ ಲೀಲಾವತಿ ಎಸ್.ಜತ್ತನ್, ಲಲಿತಾ ವಿಶ್ವೇಶ್ವರ, ಶೋಭಾ ಕೃಷ್ಣ, ವಸಂತಿ ಎಂ.ಕುಂದರ್, ರತ್ನಾವತಿ ಪೂಜಾರಿ, ಶಾರದಾ ಪೂಜಾರಿ, ಉಷಾ ಪೂಜಾರಿ, ಸುಜಾತಾ ವಿಶ್ವಕಿರಣ್, ಗಂಗೊಳ್ಳಿ ಗ್ರಾಪಂ ಸದಸ್ಯ ದುರ್ಗರಾಜ್ ಪೂಜಾರಿ, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಿಲ್ಲವ ಸೇವಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಬೈಂದೂರಿನ ಪ್ರತಿಷ್ಠಿತ ಕಲಾ ತಂಡ ‘ಲಾವಣ್ಯ ರಿ. ಬೈಂದೂರು’ ಪ್ರಸ್ತುತಿಯ ಹಾಸ್ಯಮಯ ನಾಟಕ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನವೆಂಬರ್ 4 ಶನಿವಾರ ಸಂಜೆ 5 .೦೦ ಗಂಟೆಗೆ ಬೆಂಗಳೂರು ಬಸವನಗುಡಿಯ ‘ಬೆಂಗಳೂರು ಗಾಯನ ಸಮಾಜ’ದಲ್ಲಿ ಪ್ರದರ್ಶನಗೊಳ್ಳಲಿದೆ. ಬೆಂಗಳೂರು ದೇವಾಡಿಗ ನವೋದಯ ಸಂಘವು ವಿದ್ಯಾನಿಧಿ ಸಹಾಯಾರ್ಥ ನಾಟಕ ಪ್ರದರ್ಶನ ಆಯೋಜಿಸಿದೆ. ದೇವಾಡಿಗ ಸಮುದಾಯದ ಅರ್ಹ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ “ವಿದ್ಯಾ ನಿಧಿ” ಸಂಗ್ರಹಿಸಲು ಸಂಕಲ್ಪ ಮಾಡಿದ್ದು ಈ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗುವಂತೆ ವಿದ್ಯಾನಿಧಿಯನ್ನು ಕಲಾಸಕ್ತರಿಂದ ಸಂಗ್ರಹಿಸಲಾಗುತ್ತಿದೆ. ಟಿಕೆಟ್ ಧರ: ಸಾಮಾನ್ಯ ಪ್ರವೇಶ: 250 ರೂಪಾಯಿ (ಒಬ್ಬರಿಗೆ ಪ್ರವೇಶ ) ಗೌರವ ಪ್ರವೇಶ: 1000 ರೂಪಾಯಿ (ಇಬ್ಬರಿಗೆ ಪ್ರವೇಶ )

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಐಪಿಲ್ ಕ್ರಿಕೆಟ್ ಪಂದ್ಯಾಟದ ಮಾದರಿಯಲ್ಲಿ ಕೋಟೇಶ್ವರ ಜಿಎಸ್‌ಬಿ ಸಮಾಜದ ೧೯ ವರ್ಷದ ಒಳಗಿನ ಯುವಕರಿಗಾಗಿ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟ ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಆದಿತ್ಯವಾರ ಅ ೮ ರಂದು ನಡೆಯಿತು. ಪ್ರಥಮ ಸ್ಥಾನವನ್ನು ಕೊಂಕಣ್ ಸ್ಮಾಶರ್ಸ್ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಮಹಾಮ್ಮಾಯ ಕ್ರಿಕೆಟರ್ಸ್ ಗಳಿಸಿತು. ಫೈನಲ್ ಪಂದ್ಯಾಟದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕಾರ್ತಿಕ್ ಕಾಮತ್, ಉತ್ತಮ ದಾಂಡಿಗ ಸಂದೀಪ ನಾಯಕ್, ಸೂಪರ್ ಸಿಕ್ಸ್ ಸಂದೀಪ ನಾಯಕ್, ಉತ್ತಮ ಎಸೆತಗಾರ ಕಾರ್ತಿಕ್ ಕಾಮತ್, ಸರಣಿ ಶ್ರೇಷ್ಟ ಶ್ರೀಶ ಕಾಮತ್ ಹಾಗೂ ಉದಯೋನ್ಮುಕ ಕಿರಿಯ ಆಟಗಾರ ಪ್ರಶಸ್ತಿಯನ್ನು ಶೇಷಗಿರಿ ಕಾಮತ್ ಪಡೆದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷರಾದ ಶಂಕರ ಕಾಮತ್ ವಿಜೇತ ತಂಡಕ್ಕೆ ಪ್ರಶಸ್ತಿ ನೀಡಿದರು. ನಂತರ ಮಾತನಾಡುತ್ತಾ ಕ್ರಿಕಟ್‌ನ ಮೈದಾನದಲ್ಲಿ ತೋರಿದ ಉತ್ಸಾಹವನ್ನು ಶಿಕ್ಷಣದಲ್ಲಿಯೂ ತೋರ್ಪಡಿಸಿ ಉತ್ತಮ ಅಂಕಗಳನ್ನು ಗಳಿಸಿ ಪೋಷಕರಿಗೆ, ಸಮಾಜಕ್ಕೆ ಕೀರ್ತಿಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ಜಂಟಿ ಆಶ್ರಯದಲ್ಲಿ ಉಪ್ಪುಂದ ಮತ್ತು ಬಿಜೂರು ಗ್ರಾಮಗಳ ಬಡನಿವೇಶನ ರಹಿತರಿಂದ – ನಿವೇಶನ ಸ್ಥಳ ಮಂಜೂರು ಮಾಡುವುದಕ್ಕೆ ಒತ್ತಾಯಿಸಿ ಸಾಮೂಹಿಕವಾಗಿ ಅರ್ಜಿ ಸ್ವೀಕಾರ ಕಾರ್ಯಕ್ರಮ ಕಾಸನಾಡಿ ಜಟ್ಟಿಗೇಶ್ವರ ದೈವಸ್ಥಾನದ ವಠಾರದಲ್ಲಿ ಜರಗಿತು. ಉಪ್ಪುಂದ ಮತ್ತು ಬಿಜೂರು ಗ್ರಾಮಗಳ ಬಡನಿವೇಶನ ರಹಿತರಿಂದ ಅರ್ಜಿಗಳನ್ನು ಹೋರಾಟ ಸಮಿತಿಗಳ ಮುಖಂಡರಾದ ಮಾಧವ ದೇವಾಡಿಗ, ಶ್ರೀಧರ ಉಪ್ಪುಂದ ಇವರು ಸ್ವೀಕರಿಸುವ ಮೂಲಕ ಚಾಲನೆ ನೀಡಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಪ್ರಸ್ತಾವಿಕರಾಗಿ ಮಾತನಾಡುತ್ತಾ ಅರ್ಜಿದಾರರನ್ನು ಸ್ವಾಗತಿಸಿದರು. ಹೋರಾಟ ಸಮಿತಿಯ ಮುಖಂಡರಾದ ಚಂದ್ರ ಉಪ್ಪುಂದ, ಅಮ್ಮಯ್ಯ ಪೂಜಾರಿ ಬಿಜೂರು, ಮಂಜುನಾಥ ಶೇರುಗಾರ ಮುಡೂರ ಪೂಜಾರಿ, ಸತೀಶ ಬಿಜೂರು, ಬಾಬು ಕೆ. ದೇವಾಡಿಗ, ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೀನು ಕ್ಷಾಮದಿಂದ ಮೀನುಗಾರಿಕಾ ವೃತ್ತ್ತಿ ಮಾಡುತ್ತಿರುವವರು ಸಂಕಷ್ಟಕ್ಕೆ ಸಿಲುಕಿದ್ದು, ಮೀನಿನ ಮರಿ-ಮೊಟ್ಟೆಗಳ ಸಂತತಿ ನಾಶ, ಮೀನುಗಾರಿಕಾ ನೀತಿ ಕಟ್ಟುನಿಟ್ಟಾಗಿ ಅನುಸರಿಸದೇ ಇರುವುದು ಮೀನು ಕ್ಷಾಮಕ್ಕೆ ಕಾರಣ. ಮೀನುಗಾರರು ಸರ್ಕಾರದ ನಿಯಮ ಸ್ಪಷ್ಟ ಪಾಲಿಸಬೇಕು. ದೇಶದಲ್ಲಿ ಏಕರೂಪ ಮೀನುಗಾರಿಕಾ ನೀತಿಯಿಂದ ಸಮಸ್ಯೆ ಪರಿಹಾರ ಸಾಧ್ಯವಿದ್ದು, ಒಂದೇ ನೀತಿ ಜಾರಿಗೆ ಬರಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಮೀನುಗಾರಿಕಾ ಇಲಾಖೆ ಆಶ್ರಯದಲ್ಲಿ ಕುಂದಾಪುರ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಮೀನುಗಾರಿಕಾ ನೀಲಿ ಕ್ರಾಂತಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದಲ್ಲಿ ಒಂದೇ ಮೀನುಗಾರಿಕಾ ನೀತಿ ಅಳವಡಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಅಹವಾಲು ಸಲ್ಲಿಸಿದೆ ಎಂದ ಅವರು, ಮೀನುಗಾರಿಕಾ ಸಮಸ್ಯೆ ಬಗ್ಗೆ ಮುಕ್ತ ಚರ್ಚೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ವಿಚಾರ ಸಂಕಿರಣಗಳು ವೇದಿಕೆ ಆಗಬೇಕು ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯತು ಸದಸ್ಯರಾದ ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ…

Read More