ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸಕ್ತ ಸಾಲಿನಲ್ಲಿ ಎಸ್ಸಿಬಿಎ ಸಂಸ್ಥೆಯಿಂದ ಪ್ರತಿಷ್ಠಿತ ಬೆಸ್ಟ್ ಚೇರ್ಮೆನ್ ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಕುಂದಾಪುರ ತಾಲೂಕು ಸಹಕಾರಿ ಸಂಘಗಳ ಪರವಾಗಿ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಇಲ್ಲಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಮಾಜಿ ಶಾಸಕ ಎ. ಜಿ. ಕೊಡ್ಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ಧನ ಮರವಂತೆ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭ ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕರುಗಳಾದ ಎಸ್. ರಾಜು ಪೂಜಾರಿ, ಬಿ. ರಘುರಾಮ ಶೆಟ್ಟಿ, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಸ್. ದಿನಕರ ಶೆಟ್ಟಿ, ಕುಂದಾಪುರ ತಾಲೂಕು ಸಹಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಎಚ್. ರಾಜೀವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು ಕಳೆದ ವರ್ಷ ಸುರಿದ ಭೀಕರ ಮಳೆಗೆ ಉಪ್ಪುಂದ ಬಾಯಂಹಿತ್ಲು ನಿವಾಸಿ ನಾಗಮ್ಮ ಪೂಜಾರಿ ಇವರ ಮನೆ ಸಂಪೂರ್ಣ ಕುಸಿದಿದ್ದು, ಈ ನೆಲೆಯಲ್ಲಿ ಮನೆ ಕಳೆದುಕೊಂಡ ಇವರಿಗೆ ಜಿಲ್ಲಾ ಪಂಚಾಯತ್ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ದೊರೆತ ರೂ.೧೦,೦೦೦ ಮೊತ್ತದ ಚೆಕ್ನ್ನು ಸ್ಥಳೀಯ ಜಿಪಂ ಸುರೇಶ ಬಟ್ವಾಡಿ ಸಂತ್ರಸ್ಥೆಗೆ ಹಸ್ತಾಂತರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖಾರ್ವಿ ಸಮಾಜದ ಆರಾಧ್ಯ ದೇವರು ಶ್ರೀ ಮಹಾಕಾಳಿ. ಸಂಕೀರ್ತನೆ, ಪೂಜೆ, ಆರಾಧನೆಯ ಮೂಲಕ ಭಕ್ತಿ ಜ್ಞಾನವನ್ನು ತುಂಬಿದ ಕೀರ್ತಿ ಇಲ್ಲಿಯದು. ಈ ಕೀರ್ತಿಗೆ ಇನ್ನೊಂದು ಗರಿ ಎಂಬಂತೆ ದೇವಳದ ಆವರಣದಲ್ಲಿ ಗ್ರಂಥಾಲಯವನ್ನು ಆರಂಭಿಸಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ತೀರಾ ಹಿಂದುಳಿದ ವರ್ಗವೊಂದು ಇಲ್ಲಿ ಸಂಘಟಿತಗೊಂಡು ಸಮಾಜಮುಖಿ ಕಾರ್ಯಗಳ ಮೂಲಕ ಒಗ್ಗಟ್ಟಿನ ಹಾದಿಯಲ್ಲಿ ದಾಪುಗಾಲಿಕ್ಕುತ್ತಾ ಮುನ್ನಡೆಯುತ್ತಿದೆ. ಭಕ್ತಿ ಜ್ಞಾನವನ್ನು ತುಂಬಿ ಖಾರ್ವಿ ಸಮಾಜವನ್ನು ಧಾರ್ಮಿಕವಾಗಿ ಉನ್ನತಿಯೆಡೆಗೆ ಕೊಂಡೊಯ್ಯುವುತ್ತಿರುವ ಕುಂದಾಪುರ ಖಾರ್ವಿಕೇರಿಯಲ್ಲಿನ ಶ್ರೀಮಹಾಕಾಳಿ ದೇಗುಲವು ತನ್ನ ಅಂಗಳದಲ್ಲಿ ಜ್ಞಾನ ಭಂಡಾರವನ್ನು ಹೊತ್ತಿರುವ ಜ್ಞಾನ ದೇಗುಲವನ್ನು ತೆರೆದು ಓದಿನ ಮೂಲಕ ಸುಜ್ಞಾನದ ಬೆಳಕನ್ನು ಪಸರಿಸುವ ಕಾರ್ಯದಲ್ಲಿ ಇದೀಗ ನಿರತವಾಗಿದೆ. ಇವರ ಇಂಗಿತಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ, ಸರ್ವಸುಸಜ್ಜಿತವಾದ ಗ್ರಂಥಾಲಯವನ್ನು ನಿರ್ಮಿಸಿಕೊಟ್ಟವರು ಇಲ್ಲಿನ ಪ್ರತಿಷ್ಠಿತ ರೋಟರಿ ಕ್ಲಬ್ ಕುಂದಾಪುರ ಸನ್ರೈಸ್. ರೋಟರಿ ಸನ್ರೈಸ್ನ ಅಧ್ಯಕ್ಷರಾದ ಅಜಿತ್ ಕೆ ಅವರು ಸುಮಾರು ೧ ಲಕ್ಷ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ದೀರ್ಘಕಾಲ ಬಾಳಿಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮೂಹಿಕವಾದ ಮೃತ್ಯುಂಜಯ ಹೋಮ ಸೇರಿದಂತೆ ದೇವರ ಪ್ರಾರ್ಥನೆಗಳನ್ನು ಸಾಮೂಹಿಕವಾಗಿ ಕೈಗೊಂಡಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಮತ್ತು ಭಗವಂತನ ಪೂಜೆ ಫಲಪ್ರದವಾಗುತ್ತದೆ ಎಂಬುದಾಗಿ ಮಂಗಳೂರಿನ ಶ್ರೀ ಮಾತಾ ಅಮೃತಾನಂದಮಯಿ ಮಠದ ಮಠಾಧೀಶೆ ಬ್ರಹ್ಮಚಾರಿಣಿ ಶ್ರೀ ಮಂಗಳಾಮೃತ ಚೈತನ್ಯ ನುಡಿದರು. ಅವರು ಹಂಗಳೂರಿನ ಅನಂತಪದ್ಮನಾಭ ಸಭಾಭವನದಲ್ಲಿ ನಡೆದ ಮಹಾ ಮೃತ್ಯುಂಜಯ ಹೋಮ ಸರ್ವೇಶ್ವರಿ ಪೂಜೆ ಇನ್ನಿತರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಶೀವಚನ ನೀಡಿದರು. ಶ್ರೀ ಮಾತಾ ಅಮೃತಾನಂದಮಯಿ ಅಮ್ಮನವರ ೬೪ನೇ ಅವತರಣೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಮತಾಮಯಿಯಾದ ಅಮ್ಮನವರ ಅನುಗ್ರಹ ಸಮಾಜಕ್ಕೆ ದಾರಿದೀಪವಾಗಲೆಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಮಾತಾ ಅಮೃತಾನಂದಮಯಿ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್ ವಹಿಸಿದ್ದು “ದಿವ್ಯ ಶಕ್ತಿ”ಯಾದ ಅಮ್ಮನ ಕರುಣೆ ನಮಗೆಲ್ಲರಿಗು ಸದಾ ಬೇಕಾಗಿದೆ ಎಂಬುದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಮಾತಾಮೃತಾನಂದಮಯಿ ಸಮಿತಿಯ ಮಾಜಿ ಅಧ್ಯಕ್ಷ ಡಾ ಸನತ್ ಹೆಗ್ಡೆ ಮಾತನಾಡಿ ಅಮ್ಮನ ಅವತರಣ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪತಿ ಹಾಗೂ ಪತಿ ಮನೆಯವರ ನಿರಂತರ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ಹಾಲಾಡಿ-76 ತತ್ತೋಟ್ಟು ಎಂಬಲ್ಲಿ ನಡೆದಿದೆ. ರೇಖಾ(28) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮನೆಯವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರಿಂದ ಮಾನಸಿಕವಾಗಿ ನೊಂದಿದ್ದ ಮಹಿಳೆ ಮನೆ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಗಂಡ, ಮಾವ, ಅತ್ತೆ, ಭಾವ, ಮೈದುನ ಮೇಲೆ ದೂರು ದಾಖಲಾಗಿದ್ದು, ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ, ಕುಂದಾಪುರ: ವಿಶ್ವ ಹಿಂದೂ ಪರಿಷತ್ – ಭಜರಂಗದಳ ಘಟಕ ಉದ್ಘಾಟನಾ ಸಮಾರಂಭ ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು. ವಿಹಿಂಪ ಬೈಂದೂರು ಪ್ರಖಂಡದ ಅದ್ಯಕ್ಷ ಶ್ರೀದರ ಬಿಜೂರು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೂಕ್ತೇಸರರಾದ ವಿ.ಕೆ.ಶಿವರಾಮ ಶೆಟ್ಟಿ ಸಭೆಯ ಅದ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಗೌರವಾದ್ಯಕ್ಷ ಕೊಳ್ತ ಗೋಪಾಲ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತನ ಅದ್ಯಕ್ಷ ಎಲ್. ಎನ್. ಆಚಾರಿ, ಭಜರಂಗದಳ ಸಂಚಾಲಕ ಶರತ ಬಿಲ್ಲಾ, ಯಕ್ಷೀ ಅನ್ನಪೂರ್ಣೆಶ್ವರಿ ದೇವಸ್ಥಾನದ ಪಾತ್ರಿ ಭಾಸ್ಕರ, ಸಂಸ್ಥೆಯ ಸಂಚಾಲಕರಾದ ಮಹೇಶ ಗಾಣಿಗ, ಮಂಜುನಾಥ ಶಾರ್ಕೆ, ಪ್ರಕಾಶ ಪೂಜಾರಿ ಜೆಡ್ಡು, ಸಂದೀಪ ಚಂದನ, ರಿತೇಶ ಕುಮಾರ ಶೆಟ್ಟಿ, ಸಂಪತ್, ಸುಧಾಕರ ಪೂಜಾರಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ತಿನ ವಂಡ್ಸೆ ಘಟಕದ ಅದ್ಯಕ್ಷ ಎಲ್.ಎನ್. ಆಚಾರಿ ಸ್ವಾಗತಿಸಿದರು. ಜೀವನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ, ಕುಂದಾಪುರ: ಮರವಂತೆ ಗ್ರಾಮ ಪಂಚಾಯತ್ನಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಸಭೆಯಲ್ಲಿ ಘನ ದ್ರವ ಸಂಪನ್ಮೂಲ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಮತ್ತು ಯೋಜನೆಯ ಸಂಯೋಜಕ ಸುಧೀರ್ ಈ ಕುರಿತು ವಿವರವಾದ ಮಾಹಿತಿ ನೀಡಿದರು. ಮನೆ, ಅಂಗಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗುವ ಘನ, ದ್ರವ ತ್ಯಾಜ್ಯವನ್ನು ಮೂಲದಲ್ಲಿ ಬೇರ್ಪಡಿಸುವ ಅಗತ್ಯತೆ, ಗ್ರಾಮ ಪಂಚಾಯತ್ನಿಂದ ಅದರ ಸಂಗ್ರಹ, ನಿರ್ವಹಣಾ ಸ್ಥಳದಲ್ಲಿ ಮರು ಬೇರ್ಪಡಿಸಿ ಸಂಪನ್ಮೂಲವಾಗಿ ಪರಿವರ್ತನೆಯ ವಿಧಾನ, ಸಾರ್ವಜನಿಕರ ಪಾತ್ರ, ಪಾವತಿಸಬೇಕಾದ ಶುಲ್ಕ, ಇತ್ಯಾದಿ ವಿವರ ನೀಡಿದರು. ಪ್ಲಾಸ್ಟಿಕ್ ಬಳಕೆಯ ಅಪಾಯಗಳು, ಅದನ್ನು ಎಸೆಯುವುದರಿಂದ, ಹೂಳುವುದು ಮತ್ತು ಸುಡುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಮಾಹಿತಿ ನೀಡಿ ಅದರ ಬಳಕೆಯನ್ನು ತಗ್ಗಿಸುವ ಮತ್ತು ವಿಲೇವಾರಿಯ ಕ್ರಮಗಳನ್ನು ವಿವರಿಸಿದರು. ಸಂಜೀವ ಖಾರ್ವಿ, ವಿಜಯ ಕ್ರಾಸ್ತಾ, ಗುರುರಾಜ್ ಎತ್ತಿದ ಸಂಶಯಗಳಿಗೆ ಸೂಕ್ತ ಪರಿಹಾರ ಸೂಚಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ರೋಟರಿ ಸಂಸ್ಥೆಯು ಕಳೆದ ಹಲವು ದಶಕಗಳಿಂದ ಸಾಮಾಜಿಕ ಚಳವಳಿಯಲ್ಲಿ ತೊಡಗಿಕೊಳ್ಳುವ ಮೂಲಕ ಅನೇಕ ಉತ್ತಮ ಕಾರ್ಯಗಳನ್ನು ಸಮಾಜಕ್ಕೆ ನೀಡಿದೆ. ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆಯ ಪಾತ್ರ ಅವಿಸ್ಮರಣೀಯ. ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡ ರೋಟರಿ ಸಂಸ್ಥೆಯ ಸದಸ್ಯರು ತೊಡಗಿಸಿಕೊಂಡು ಅನಕ್ಷರತೆಯನ್ನು ತೊಡೆದುಹಾಕುವಲ್ಲಿ ಶ್ರಮಿಸುತ್ತಿದ್ದಾರೆ. ವಿಶ್ವದ ಎಲ್ಲಾ ದೇಶಗಳಲ್ಲಿ ರೋಟರಿ ಸಂಸ್ಥೆ ತನ್ನ ಜಾಲವನ್ನು ಹೊಂದಿದ್ದು, ರೋಟರಿ ಮೂಲಕ ಸ್ನೇಹ ವಿಶ್ವಾಸ ವೃದ್ಧಿಯಾಗುತ್ತದೆ ಎಂದು ರೋಟರಿ ಜಿಲ್ಲೆ ೩೧೮೨ರ ಗವರ್ನರ್ ಜಿ.ಎನ್.ಪ್ರಕಾಶ್ ಹೇಳಿದರು. ಅವರು ಗಂಗೊಳ್ಳಿ ರೋಟರಿ ಕ್ಲಬ್ಗೆ ಅಧಿಕೃತ ಭೇಟಿ ನೀಡಿ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣದಲ್ಲಿ ಸಂಜೆ ಜರಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಂಗೊಳ್ಳಿ ರೋಟರಿ ಸಂಸ್ಥೆಯ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜ ಉನ್ನತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಶಾಲೆಗೆ ದಾನಿಗಳ ಸಹಕಾರದೊಂದಿಗೆ ಕಂಪ್ಯೂಟರ್ ಮತ್ತಿತರ ಸಾಧನಗಳನ್ನು ಒದಗಿಸಲು ಮುಂದಾಗಿರುವುದು ಅಭಿನಂದನೀಯ ಎಂದರು. ಗಂಗೊಳ್ಳಿ ರೋಟರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಯ ಕರ್ನಾಟಕ ತಾಲೂಕು ಘಟಕ, ವಲಯ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ನಡೆಯಿತು. ಜಯ ಕರ್ನಾಟಕದ ಜಿಲ್ಲಾ ಪ್ರದಾನ ಸಂಚಾಲಕ ಅಣ್ಣಪ್ಪ ಕುಲಾಲ್ ಸಮಾರಂಭ ಉದ್ಘಾಟಿಸಿ ಮಾತನಾಡಿ ಯುವಕರ ಸಂಘಟನೆಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾನತೆ, ಭ್ರಾತೃತ್ವ ಮತ್ತು ಸಾಮರಸ್ಯದ ಸಂಕೇತವೇ ಜಯ ಕರ್ನಾಟಕ ಸಂಘಟನೆ. ಸಮಾಜದಲ್ಲಿ ನೊಂದವರ, ನಿರ್ಗತಿಕರ ಸೇವೆಗಾಗಿ ಜಯಕರ್ನಾಟಕ ಸಂಘಟನೆಯನ್ನು ಅಸ್ಥತ್ವಕ್ಕೆ ತರಲಾಯಿತು. ಆದರೆ ಬೈಂದೂರಿನಲ್ಲಿ ಜಯ ಕರ್ನಾಟಕ ಸಂಘಟನೆ ಮಾಡುವುದನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದ್ದೆ. ಜಯ ಕರ್ನಾಟಕದಲ್ಲಿ ಯಾವುದೇ ರಾಜಕೀಯ ಪಕ್ಷದವರು ಇದರಲ್ಲಿ ಇಲ್ಲ, ನಾವು ರಾಜಕೀಯದವರ ಪರವಾಗಿಲ್ಲ ಕೇವಲ ಸಂಘಟನೆಯ ಪರವಾಗಿ ಹಾಗೂ ನೊಂದವರ ಪರವಾಗಿ ಇದ್ದೇವೆ. ಮುಂದಿನ ದಿನಗಳಲ್ಲಿ ಬೈಂದೂರಿನಲ್ಲಿ ಜಯ ಕರ್ನಾಟಕ ವತಿಯಿಂದ ಕಾರ್ಯಕರ್ತರ ಬೃಹತ್ ಸಮಾವೇಶ ಮಾಡಬೇಕು. ನೊಂದವರ ಬಾಳಿಗೆ ನಾವು ಬೆಳಕು ತೊರಿಸಬೇಕು ಇದು ನಮ್ಮ ಸಿದ್ಧಾಂತ. ಜಯ ಕರ್ನಾಟಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ರಾಜ್ಯ ಸಚಿವ ರೋಷನ್ಬೇಗ್ ರಾಜೀನಾಮೆಗೆ ಆಗ್ರಹಿಸಿ ನಾವುಂದ, ಮರವಂತೆ, ಕಿರಿಮಂಜೇಶ್ವರ ಬಿಜೆಪಿ ಘಟಕದ ವತಿಯಿಂದ ಅರೆಹೊಳೆ ಬೈಪಾಸಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ನೇತೃತ್ವವಹಿಸಿದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ಗೆ ವಿನಾಶಕಾಲೇ ವಿಪರೀತ ಬುದ್ದಿ ಬಂದಿದ್ದು, ಅದರ ಅವನತಿಗೆ ಭಸ್ಮಾಸುರ ಕೈ ಎಳೆದಾಯಿತು. ಮುಂದಿನ ಚುನಾವಣೆಯಲ್ಲಿ ಹಿಂದು ವಿರೋಧಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗಲಿದೆ ಎಂದು ಭವಿಷ್ಯ ನುಡಿದರು. ಇನ್ನುಳಿದ ಕಾಲದಲ್ಲಾದರೂ ಸರ್ಕಾರದಲ್ಲಿರುವ ಸಚಿವರುಗಳಿಗೆ ದೇವರು ಒಳ್ಳೆಯ ಬುದ್ದಿಕೊಡಲಿ. ಕಾಂಗ್ರೆಸ್ ರಾಜ್ಯದಿಂದಲೇ ತೊಲಗಲಿ ಎಂದರು. ಈ ಸಂದರ್ಭ ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ಮರವಂತೆ ಗ್ರಾಪಂ ಅಧ್ಯಕ್ಷೆ ಅನಿತಾ ಆರ್. ಕೆ. ಮಾತನಾಡಿದರು. ಕಿರಿಮಂಜೇಶ್ವರ ಗ್ರಾಪಂ ಉಪಾಧ್ಯಕ್ಷ ಶೇಖರ ಖಾರ್ವಿ, ಮರವಂತೆ ಗ್ರಾಪಂ ಉಪಾಧ್ಯಕ್ಷ ಗಣೇಶ ಪೂಜಾರಿ, ರಾಜೇಂದ್ರ ಬಿಜೂರು,…
