Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷಗಾನದಲ್ಲಿ ಪಾತ್ರೋಚಿತ ನಟನೆ, ರಂಗನಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪುರಾಣ ಪ್ರಸಂಗಗಳ ಜವಾಬ್ದಾರಿಯುತ ಪಾತ್ರಗಳಾದ ಭೀಷ್ಮ ವಿಜಯದ ಅಂಬೆ, ದಕ್ಷಯಜ್ಞದ ಗೌರಿ, ದ್ರೌಪದಿ ವಸ್ತ್ರಾಪಹರಣದ ದ್ರೌಪದಿ ಇತ್ಯಾದಿ ಪಾತ್ರಗಳ ಸ್ಪಷ್ಟ ಚಿತ್ರಣವನ್ನು ಒದಗಿಸಿ ಅಸಂಖ್ಯಾತ ಕಲಾಪ್ರೇಕ್ಷಕರ ಮನ ಗೆದ್ದದ್ದು ಮಾತ್ರವಲ್ಲದೆ ಕಾಲ್ಪನಿಕ ಪ್ರಸಂಗಗಳಲ್ಲಿಯೂ ತಮ್ಮ ಕಲಾ ಪ್ರೌಢಿಮೆಯನ್ನು ಪ್ರದರ್ಶಿಸುತ್ತಿರುವ ಬಡಗುತಿಟ್ಟಿನ ಯುವ ಸ್ತ್ರೀ ವೇಷಧಾರಿ ಶ್ರೀ ಶಶಿಕಾಂತ ಶೆಟ್ಟಿ ಇವರಿಗೆ ೨೦೧೭ನೇ ಸಾಲಿನ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ನೀಡುವುದಾಗಿ ಪುರಸ್ಕಾರ ಸಮಿತಿಯು ನಿರ್ಧರಿಸಿದೆ. ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜು ಸತತ ೪೧ ವರ್ಷಗಳಿಂದ ನವಂಬರ್ ೧ ಕನ್ನಡ ರಾಜ್ಯೋತ್ಸವದಂದು ರಾಜ್ಯೋತ್ಸವ ತಾಳಮದ್ದಳೆಯನ್ನು ನಡೆಸಿಕೊಂಡು ಬರುತ್ತಿದೆ. ಇದರೊಂದಿಗೆ ಯಕ್ಷಗಾನದಲ್ಲಿ ವಿಶಿಷ್ಟ ಸಾಧನೆಯನ್ನು ಮಾಡುತ್ತಿರುವ ಭರವಸೆಯ ಯುವ ಕಲಾವಿದರಿಗೆ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ಸತತ ಆರು ವರ್ಷಗಳಿಂದ ನೀಡುತ್ತಾ ಬಂದಿದೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಡೆಯಲಿರುವ ತಾಳಮದ್ದಳೆಯ ಜೊತೆಗೆ ಈ ಪುರಸ್ಕಾರ ನೀಡುವುದಾಗಿ ಕಾಲೇಜಿನ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ಜರುಗಿದ ಜಿಎಸ್‌ಬಿ ಅಂಡರ್-19 ಕ್ರಿಕೆಟ್ ಪಂದ್ಯಾಟದಲ್ಲಿ ಕೋಟೇಶ್ವರದ ಕೊಂಕಣ್ ಎಕ್ಸ್‌ಪ್ರೆಸ್ ತಂಡ ವಿಜೇತರಾಗಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಜಿಎಸ್‌ಬಿ ಕೋಟ ತಂಡ ಪಡೆದುಕೊಂಡಿದೆ. ಅಂತಿಮ ಪಂದ್ಯದ ಪಂದ್ಯಶ್ರೇಷ್ಟ ಮತ್ತು ಉತ್ತಮ ದಾಂಡಿಗ ಪ್ರಶಸ್ತಿಯನ್ನು ಕಾರ್ತಿಕ್ ಶ್ಯಾನುಭಾಗ್, ಉತ್ತಮ ಎಸೆತಗಾರನಾಗಿ ಅನಂತ ಶೆಣೈ, ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ವಿವೇಕ ಪ್ರಭು ಪಡೆದರು. ಕೊಂಕಣ್ ಎಕ್ಸ್‌ಪ್ರೆಸ್ ಪುರುಷೋತ್ತಮ ಕಾಮತ್ ತಂಡಕ್ಕೆ ಶುಭಕೋರಿದರು. ತಂಡದ ಅಧ್ಯಕ್ಷರಾದ ಸತೀಶ ಕಾಮತ್, ಉಪಾಧ್ಯಕ್ಷರಾದ ರಾಜೇಶ ಪ್ರಭು, ರವೀಂದ್ರ ನಾಯಕ್ ಹಾಗೂ ಸರ್ವಸದಸ್ಯರು ಪಾಲ್ಗೊಂಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಜೆಸಿಐ ಸಂಸ್ಥೆಯ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ರಂಗ ಸೈಕಲಿನಲ್ಲಿ ಛದ್ಮವೇಷ ಸ್ವರ್ಧೆ ನೋಡುಗರ ವಿಶೇಷ  ಗಮನ ಸೆಳೆಯಿತು. ಯೂರೋಪ್ ಮೂಲದ ದೇಶಗಳಲ್ಲಿ ಸಾಕಷ್ಟು ಪ್ರಖ್ಯಾತ ಪಡೆದಿರುವ ಈ ಸೈಕಲ್ ಛದ್ಮವೇಷ ಜನಾಕರ್ಷಣೆಯ ಕೇಂದ್ರ ಬಿಂದು. ಭಾರತದಲ್ಲಿ  ಇದರ ಕುರಿತು ಮಾಹಿತಿ ಕಡಿಮೆ ಇದ್ದರು ಕೂಡ ಕುಂದಾಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಬಹು ಸಂಖ್ಯೆಯಲ್ಲಿ ಸ್ಪರ್ಧಿಗಳು ಆಗಮಿಸಿದ್ದರು. ಕುಂದಾಪುರದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಸೈಕಲ್ ಛದ್ಮವೇಷಕ್ಕೆ ಹಲವು ವೇಷಧಾರಿಗಳು ರಂಗು ತಂದರು. ಚಿಕ್ಕ ಮಕ್ಕಳಿಂದ ಹಿಡಿದು ಆಸಕ್ತ ಹಿರಿಯರು ಕೂಡ ಸೈಕಲ್ ಛದ್ಮವೇಷದಲ್ಲಿ ಕುಂದಾಪುರದ ಸಾರ್ವಜನಿಕರಿಗೆ ಮನೋರಂಜನೆ ನೀಡಿದರು. ಕುಂದಾಪುರ ಜೇಸಿಐ ಇದರ ಒಂದು ವಾರದ ರಂಗ ಸಪ್ತಾಹದ ಪ್ರಾರಂಭದ ದಿನದಂದು ಕುಂದಾಪುರ ಲಕ್ಷ್ಮೀ ನರಸಿಂಹ ಕಲಾ ಮಂದಿರದ ಮುಂಭಾಗದಿಂದ ಪ್ರಾರಂಭಗೊಂಡ ಸೈಕಲ್ ಜಾಥಾ ಮತ್ತು ಸೈಕಲ್ ಛದ್ಮವೇಷ ಕಾರ್ಯಕ್ರಮವನ್ನು ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಂದಾಪುರ ಉದ್ಘಾಟಿಸಿದರು. ಇದೇ ಸಂದರ್ಭ ಕುಂದಾಪುರ ಸೈಕ್ಲಿಂಗ್ ಕ್ಲಬ್‌ನ ಲಾಂಛನದ ಬಿಡುಗಡೆ ನಡೆಯಿತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಇಲ್ಲಿನ ಶ್ರೀ ಮಾತಾ ಆಸ್ಪತ್ರೆಯಲ್ಲಿ ಜರುಗಿತು. ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ, ಗೌರವಾನ್ವಿತ ಡಿ.ಪಿ ಕುಮಾರ ಸ್ವಾಮಿ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಮಾನಸಿಕ ರೋಗ ಎಂಬುದು ವ್ಯಕ್ತಿಯ ಮನಸ್ಸಿನ ರೋಗವಾಗಿದ್ದು, ಸಾಮಾಜಿಕ, ಸಾಂಸ್ಕೃತಿಕ, ಭೌತಿಕ, ಶೈಕ್ಷಣಿಕ ಪ್ರಭಾವು ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಮನೋ ವೈದ್ಯಾಧಿಕಾರಿಗಳಿಂದ ಸೂಕ್ತ ಸಲಹೆ ಪಡೆದು, ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಬೇಕು ಎಂದರು. ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಒಂದು ಅಂದಾಜಿನ ಪ್ರಕಾರ ನಮ್ಮ ಜೀವನದ ಶೇಕಡಾ ೭೦ ರಷ್ಟು ಭಾಗವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚಿತ್ತೂರು ಜೆಸಿಐ ಸಮೂಹದ ಸಮಾರೋಪ ಸಮಾರಂಭ ಮಾರಣಕಟ್ಟೆ ವಾಸುಕೀ ಸಭಾಭವನದಲ್ಲಿ ನೆಡೆಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಜೆ.ಸಿ.ಐ ಅದ್ಯಕ್ಷ ಅನಿಲ್ ಕುಮಾರ ಶೆಟ್ಟಿ ವಹಿಸಿದರು. ಮಖ್ಯ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಜೆ.ಸಿ.ಐ , ಎನ್ನುವ ಸಂಸ್ಥೆಗಳು ಹೆಚ್ಚು ತರಭೇತಿ ನೀಡುವುದರಿಂದ ಯುವಕರಲ್ಲಿರುವ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ತನ್ಮೂಲಕ ಒಂದು ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು. ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಕೊಲ್ಲೂರು ಮಾಜಿ ಆಡಳಿತ ಧರ್ಮದರ್ಶಿ ಬಿ.ಎಮ್.ಸುಕುಮಾರ ಶೆಟ್ಟಿ ,ಪತ್ರಕರ್ತ ಕೆ.ಸಿ. ರಾಜೇಶ ,ಮೈಸುರು ಉದ್ಯಮಿ ಕೆ.ಭಾಸ್ಕರ್ ಶೆಟ್ಟಿ ಕೆರೆಕೊಡ್ಲು , ಜೆಸಿಐ ಸ್ಥಾಪಕ ಅದ್ಯಕ್ಷ ಉದಂi .ಜಿ. ಪೂಜಾರಿ , ನಿಕಟ ಪೂರ್ವ ಅದ್ಯಕ್ಷ ಗೋವರ್ಧನ ಜೋಗಿ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಧಾರ್ಮಿಕ , ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೈ ದಾನಿ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರ ಸಂತೋಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡರ್ಕಾರ್ಸ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಸಸ್ಯಶಾಸ್ತ್ರ ಅಧ್ಯಾಪಕರ ಸಂಘ “ವನಶ್ರೀ” ಸಹಯೋಗದಲ್ಲಿ ಡಿಜಿಟಲ್ ಗಾರ್ಡನ್ – ಎ ನ್ಯೂ ಅಪ್ರೋಚ್ ಇನ್ ಪ್ಲಾಂಟ್ ಕನ್ಸರ್ವೇಶನ್” ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ಸೆಮಿನಾರ್ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಹೊಸ ಹೊಸ ಆವಿಷ್ಕಾರಗಳು ಮತ್ತು ವಸ್ತು-ವಿಷಯಗಳು ಇಂದಿನ ಯುವ ಜನಾಂಗದ ಮುಂದಿದೆ. ನಮ್ಮ ಸಂಶೋಧನಾತ್ಮಕತೆಯನ್ನು ಮತ್ತು ಜ್ನಾನವನ್ನು ವಿಸ್ತರಿಸಿಕೊಳ್ಳಲು ಸಾಕಷ್ಟು ತಂತ್ರಜ್ನಾನದ ನೆಲೆಯಲ್ಲಿ ಅವಕಾಶಗಳಿವೆ. ಅದನ್ನು ಹೆಚ್ಚೆಚ್ಚು ನಮ್ಮ ತಿಳುವಳಿಕೆ ಮತ್ತು ಕಲಿಯುವಿಕೆಯಲ್ಲಿ ಉಪಯೋಗಿಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನ ಮತ್ತು ಜ್ನಾನಾಭಿವೃದ್ಧಿಯಾಗುತ್ತದೆ. ಅಲ್ಲದೇ ಮಾನವೀಯ ನೆಲೆಗಳು ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಅಷ್ಟೇ ಮುಖ್ಯವಾಗಿರುತ್ತದೆ. ಮಾನವೀಯತೆಯನ್ನು ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮುನ್ನಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ ಎನ್.ಪಿ.ನಾರಾಯಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದೀಪಾವಳಿ ಹಬ್ಬವನ್ನು ಸಂತೋಷದಿಂದ ಸಂಭ್ರಮದಿಂದ ಆಚರಿಸುವ ಉದ್ದೇಶದಿಂದ ಗಂಗೊಳ್ಳಿಯ ಉದ್ಯಮಿ ಭಾಸ್ಕರ ವಿಠಲ ಶೆಣೈ ಅವರ ಕುಟುಂಬದ ಸದಸ್ಯರು ಗಂಗೊಳ್ಳಿಯ ಸುಮಾರು ಹತ್ತಕ್ಕೂ ಮಿಕ್ಕಿ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಗಂಗೊಳ್ಳಿಯಲ್ಲಿರುವ ಅನೇಕ ಬಡ ಕುಟುಂಬಗಳು ಇಂದಿಗೂ ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿವೆ. ಹಬ್ಬಹರಿದಿನಗಳನ್ನು ಆಚರಿಸಿಕೊಳ್ಳಲು ಬಹಳ ಕಷ್ಟಪಡುತ್ತಿದ್ದು, ಇತರರಂತೆ ದೀಪಾವಳಿ ಹಬ್ಬವನ್ನು ಸಂತೋಷದಿಂದ ಸಂಭ್ರಮದಿಂದ ಆಚರಿಸಿಕೊಳ್ಳಬೇಕು. ನಮ್ಮಂತೆ ಇತರರು ಸಂತೋಷದಿಂದ ಹಬ್ಬದ ಸವಿಯನ್ನು ಸವಿಯುವಂತಾಗಬೇಕು ಎಂಬ ಕಳಕಳಿಯಿಂದ ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಅವರು ಭಾನುವಾರ ಗಂಗೊಳ್ಳಿಯ ವಿವಿಧೆಡೆ ತೆರಳಿ ಸುಮಾರು ೧೨ ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿ ಮತ್ತು ಸಿಹಿತಿಂಡಿಯನ್ನು ವಿತರಿಸಿ ದೀಪಾವಳಿ ಹಬ್ಬದ ಶುಭ ಕೋರಿದರು. ಪಟಾಕಿ ಕೊಳ್ಳುವುದರಿಂದ ಹಣ ಪೋಲು, ಪಟಾಕಿ ಸುಡುವುದರಿಂದ ಆರೋಗ್ಯವೂ ಹಾಳು. ದೀಪಾವಳಿ ಬೆಳಕಿನ ಹಬ್ಬವೇ ಹೊರತು ಪಟಾಕಿಗಳ ಹೆಸರಿನಲ್ಲಿ ಹಣವನ್ನು ಪೋಲು ಮಾಡುವ ಹಬ್ಬವಲ್ಲ. ಪಟಾಕಿ ಕೊಳ್ಳುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಕುಂದಾಪುರ ತಾಲೂಕು ಹವ್ಯಕ ಸಭಾದ ೧೭ನೇಯ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭವು ಉಪ್ಪುಂದ ಶ್ರೀ ರಾಘವೆಂದ್ರ ಸ್ವಾಮೀ ಮಠದಲ್ಲಿ ಇತ್ತೀಚಿಗೆ ಜರಗಿತು. ಉಡುಪಿ ಜಿಲ್ಲಾ ಹವ್ಯಕ ಪರಿಷತ್ತಿನ ಉಪಧ್ಯಕ್ಷರಾದ ಗುಣವಂತೇಶ್ವರ ಭಟ್ ಮಾತನಾಡಿ ಸಂಘಟನೆಗಳು ಸಮಾಜದ ಬೆಳವಣೆಗೆಗೆ ಪೂರಕವಾಗಬೇಕು ಹಾಗೂ ಎಲ್ಲರನ್ನೂ ತಲಪುವಂತರಾಗಬೇಕು ಮತು ನಿರಂತರತೆಯನ್ನು ಕಾಯ್ದು ಕೊಳ್ಳಬೇಕಾಗಿದೆ. ಸಂಘಟನೆಯ ಆರ್ಥಿಕ ಸದೃಡತೆಗಾಗಿ ಪ್ರತಿಯೊಬ್ಬರಿಗೆ ತಮ್ಮ ದುಡಿಮೆಯ ಒಂದು ಪಾಲನ್ನು ಸಮಾಜದ ಕಾರ್ಯಕ್ಕೆ ಮತ್ತು ಧರ್ಮ ಕಾರ್ಯಗಳಿಗೆ ವಿನಿಯೋಗಿಸಬೇಕು ಇದರಿಂದಾಗಿ ಬದುಕು ಸಾರ್ಥಕತೆ ಹೊಂದಲು ಸ್ಯಾಧವಾಗಲಿದೆ ಎಂದು ಹೇಳಿದರು. ಈ ಸಮಾರಂಭದಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಾಲಯದ ತಂತ್ರಿ ಮತ್ತು ಹಾಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ವೇದಮೂರ್ತಿ ಮಂಜುನಾಥ ಅಡಿಗ ಕೊಲ್ಲೂರು ಮತ್ತು ಪಾಕಶಾಸ್ತ್ರ ಪ್ರವೀಣ ಬೈಂದೂರು ಶ್ರೀಧರ ಭಟ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರದ ಅಂಗವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೨ ಅಂಕಗಳೊಂದಿಗೆ ರಾಜ್ಯಕ್ಕೆ ೪ನೇ ರ‍್ಯಾಂಕ್ ಪಡೆದ ಚಿನ್ಮಯ ವಂಡ್ಸೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅರೆಶಿರೂರು ಮೂಕಾಂಬಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅರೆಹೊಳೆ ಶಿವರಾಮ ಮಧ್ಯಸ್ಥ ತಮ್ಮ ಅಧ್ಯಾಪನ ವೃತ್ತಿಯಲ್ಲಿ 25 ವರ್ಷ ಪೂರೈಸಿದ ಘಟ್ಟವನ್ನು ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಿರಿಮೆಯನ್ನು ತನ್ನ ಸಾಧನೆಗೆ ಕಾರಣರಾದವರನ್ನು ಸ್ಮರಿಸಿ ಗೌರವಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಗುರುಗಳು, ಹಿರಿಯರು, ಗೆಳೆಯರು, ಬಂಧುಗಳ ನೆರವಿನಿಂದ ಏರ್ಪಡಿಸಿ ಸಾರ್ಥಕ ಕ್ಷಣ ಅನುಭವಿಸಿದರು. ಎಲ್ಲರ ಹರಕೆ, ಹಾರೈಕೆ ಸ್ವೀಕರಿಸಿದರು. ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ರವಿವಾರ ನಡೆದ ಕಾರ್ಯಕ್ರಮದ ಹಿರಿತನ ವಹಿಸಿದವರು ಮಧ್ಯಸ್ಥರನ್ನು ಮುಖ್ಯೋಪಾಧ್ಯಾಯರಾಗಿ ನೇಮಕ ಮಾಡಿದ್ದ ಕೊಲ್ಲೂರು ದೇವಳದ ಅಂದಿನ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆಯವರು. ಶಿವರಾಮ ಮಧ್ಯಸ್ಥ ಶಿಕ್ಷಕ ತರಬೇತಿಯ ಅವಧಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಯು. ರಾಘವೇಂದ್ರ ಐತಾಳ್ ಅವರಿಗೆ ಗುರು ನಮನ ಸಲ್ಲಿಸಿದರು. ಅವರ ಪ್ರಾಥಮಿಕ ಶಿಕ್ಷಣದ ಗುರುಗಳಾದ ಮಹಾಲಿಂಗ ಕೊಠಾರಿ, ಎಂ. ಜಿ. ಹೆಗಡೆ, ಗೋಪಾಲ ಶೆಟ್ಟಿ, ಪ್ರೌಢ, ಪದವಿಪೂರ್ವ ಹಂತದಲ್ಲಿ ಬೋಧಿಸಿದ್ದ ಸಿ. ಸೀತಾರಾಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುಲ್ವಾಡಿಯಿಂದ ಕಂಡ್ಲೂರು ಕಡೆಗೆ ಅಕ್ರಮ ಗೋಸಾಗಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ತಡೆಯಲೆತ್ನಿಸಿದ ಸಂದರ್ಭ ಪೊಲೀಸ್ ಪೇದೆಯೋರ್ವ ಗಾಯಗೊಂಡ ಘಟನೆ ಕಂಡ್ಲೂರಿನಲ್ಲಿ ನಡೆದಿದೆ. ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೨೫ ದನಗಳ ಪೈಕಿ ೧೧ ದನಗಳು ಮೃತಪಟ್ಟಿವೆ. ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ತಾಲೂಕಿನ ಗುಲ್ವಾಡಿ ಕಡೆಯಿಂದ ಬಸ್ರೂರು ಮೂಲಕ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಗುಲ್ವಾಡಿ ಸೇತುವೆ ಮೇಲೆ ವಾಹನವನ್ನು ಪೊಲೀಸರು ಅಡ್ಡ ಹಾಕಿದ್ದರು. ಆದರೆ ಅಲ್ಲಿ ವಾಹನ ನಿಲ್ಲಿಸದೇ ಪರಾರಿಯಾದ ಆರೋಪಿಗಳು ಬಸ್ರೂರು ಮೂಲಕ ಕಂಡ್ಲೂರು ಕಡೆಗೆ ತೆರಳಿದ್ದರು. ಕಂಡ್ಲೂರಿನಲ್ಲಿ ಗ್ರಾಮಾಂತರ ಪೊಲೀಸರು ಠಾಣೆ ಎದುರು ಸಿಬ್ಬಂದಿಗಳಾದ ಅಶೋಕ್ ಮತ್ತು ಪ್ರಶಾಂತ್ ನಾಗಣ್ಣ ಬ್ಯಾರಿಕೆಡ್ ಅಳವಡಿಸಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನ ಬರುವುದನ್ನೇ ಕಾಯುತ್ತಿದ್ದರು. ಆದರೆ ಅಲ್ಲಿಯೂ ವಾಹನವನ್ನು ನಿಲ್ಲಿಸದೇ ಬ್ಯಾರಿಕೇಡ್‌ಗೆ ಗುದ್ದಿ ಆರೋಪಿಗಳು ಮುಂದುವರಿದಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಾಹನ ಗುದ್ದಿದ್ದ ರಭಸಕ್ಕೆ ಬ್ಯಾರಿಕೇಡ್ ಪೊಲೀಸ್ ಸಿಬ್ಬಂದಿ ಪ್ರಶಾಂತ್ ನಾಗಣ್ಣ ಅವರ ಕಾಲಿನ ಮೇಲೆ…

Read More