ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲೆ ಎಂಬುದು ಜಾತಿ, ಪಂಗಡ ಧರ್ಮದ ಪರಿಧಿಯನ್ನು ಮೀರಿ ಎಲ್ಲರನ್ನೂ ಸುಲಭವಾಗಿ ಸೆಳೆಯುವ ಮಾಧ್ಯಮವಾಗಿದ್ದು, ಅದರಲ್ಲಿ ತೊಡಗಿಕೊಳ್ಳುವ ಪ್ರತಿ ಕಲಾವಿದನೂ ಸಮಾಜದಲ್ಲಿ ವಿಶೇಷ ಮನ್ನಣೆಗೆ ಪಾತ್ರನಾಗುತ್ತಾನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರು ಹೇಳಿದರು. ಅವರು ಹೊಸೂರು ಪರಿಶಿಷ್ಟ ಪಂಗಡದ ಸಭಾಭವನಲ್ಲಿ ಪರಿಶಿಷ್ಟ ಪಂಗಡದ ರಂಗತಂಡ ಸಂಚಲನ ರಿ. ಹೊಸೂರು ಇದರ ದಶಮಾನೋತ್ಸವದ ಕಾರ್ಯಕ್ರಮಗಳಿಗೆ ಮಡಿಕೆಗೆ ಕಳಸದಲ್ಲಿ ತುಂಬಿದ ಹಾಲೇರೆದು ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿಯೇ ಮೊದಲ ಭಾರಿಗೆ ಪರಿಶಿಷ್ಟ ಪಂಗಡದ ಯುವಕರು ಒಗ್ಗಟ್ಟಾಗಿ ರಂಗತಂಡವನ್ನು ಕಟ್ಟಿರುವುದಲ್ಲದೇ ವರ್ಷಂಪ್ರತಿ ತರಬೇತಿ ಕಾರ್ಯಾಗಾರ, ಉತ್ಸವ, ನಾಟಕ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ಹಳ್ಳಿಯಲ್ಲಿಯೇ ಆಯೋಜಿಸುತ್ತಾ ಕಲೆಯ ಬಗೆಗೆ ಹಳ್ಳಿಯ ಜನರಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ. ಕಲಾ ಮಾಧ್ಯಮಕ್ಕೆ ಸಮಾಜ ಹಾಗೂ ವ್ಯವಸ್ಥೆಯನ್ನು ಕಲೆಯ ಮೂಲಕವೇ ಪ್ರಶ್ನಿಸುವ, ಎಚ್ಚರಿಸುವ ಶಕ್ತಿಯಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ರೋವರ್ ರೇಂಜರ್ ಘಟಕ ಹಾಗೂ ಬೈಂದೂರು ಪೋಲೀಸ್ ಠಾಣೆ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಮಾದಕ ವಸ್ತುಗಳ ನಿಷೇಧ ಅರಿವು ಪ್ರಯುಕ್ತ ಬೈಂದೂರು ಪೇಟೆಯಲ್ಲಿ ಜಾಥಾ ನಡೆಯಿತು. ಬೈಂದೂರು ವೃತ್ತ ನಿರೀಕ್ಷಕ ರಾಘವ ಎಸ್. ಪಡೀಲ್ ಜಾಥಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮಾದಕ ವಸ್ತುಗಳಿಗೆ ಬಲಿಯಾಗದೇ ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಮಾದಕ ವಸ್ತುಗಳ ನಿಷೇಧದ ಬಗ್ಗೆ ಅರಿವು ಮೂಡಿಸುವ ಬಗ್ಗೆ ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರವಿಚಂದ್ರ, ಉಪನ್ಯಾಸಕರಾದ ವಿನೋದ್, ನಾಗರಾಜ ಶೆಟ್ಟಿ, ನವೀನ್ ಉಪಸ್ಥಿತರಿದ್ದರು. ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಬಿ. ಎನ್. ಹಾಗೂ ಸಿಬ್ಬಂದಿ ವರ್ಗದವರು ಜಾಥಕ್ಕೆ ಸಹಕರಿಸಿದರು. ಗಂಗೊಳ್ಳಿ: ಗಂಗೊಳ್ಳಿ ಪೊಲೀಸ್ ಠಾಣೆಯ ವತಿಯಿಂದ ಹಕ್ಲಾಡಿಯ ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆಯಲ್ಲಿ ಮಾದಕ ದ್ರವ್ಯ ಸೇವನೆ ಅರಿವು ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಂಗವಾಗಿ ಹಕ್ಲಾಡಿ, ಹೊಳೆಮೊಗ್ಗೆ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬೈಂದೂರು ವಲಯ ಸಮತಿ ನೇತೃತ್ವದಲ್ಲಿ, ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಮಿಕ ಸಂಘಟನೆಗಳ ಸದಸ್ಯರ ರಾಜಕೀಯ ಸಮಾವೇಶವು ಬೈಂದೂರು ರೋಟರಿ ಭವನದಲ್ಲಿ ಜರಗಿತು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾನಂದ ಸ್ವಾಮಿ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡುತ್ತ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಹಾಗೂ ಮೋದಿಯವರ ಚುನಾವಣಾ ಪ್ರಚಾರ ಭಾಷಣದಲ್ಲಿ ಅಭಿವೃದ್ಧಿಯೇ ಬಿಜೆಪಿ ಮೂಲಮಂತ್ರ, ೬೦ ವರ್ಷದಲ್ಲಾಗದ ಅಭಿವೃದ್ಧಿ ಕೆಲಸ ಆರು ತಿಂಗಳಲ್ಲಿ ಸಾಧಿಸುತ್ತೇವೆ. ಎಲ್ಲಾ ಸಮಸ್ಯೆಗಳಿಗೆ ಬಿಜೆಪಿ ಪರಿಹಾರ ಅಚ್ಚೆದಿನ ಆನೆವಾಲೆ ಹೈ – ಒಳ್ಳೆಯ ದಿನಗಳು ಬರಲಿವೆ, ಅಧಿಕಾರಕ್ಕೆ ಬಂದ ೧೦೦ ದಿನಗಳಲ್ಲಿ ಬೆಲೆ ಏರಿಕೆ ತಡೆಯಾಡೆಯಲಾಗುತ್ತದೆ, ಬೃಷ್ಠಾಚಾರ ರಹಿತ ದೇಶ ಕಟ್ಟುತ್ತೇವೆ ಎಂದು ಮೋದಿ, ಅಮಿತ್ಷಾ ಹೇಳಿದರು. ನ ಕಾವೂಂಗ ನ ಕಾನೆ ದೂಂಗ ತಾನೂ ತಿನ್ನೊಲ್ಲ, ತಿನ್ನಲೂ ಬಿಡೋಲ್ಲ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್…
ಕ್ಷೇತ್ರದ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಶಾಸಕ ಗೋಪಾಲ ಪೂಜಾರಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಮಾಜಿಕವಾಗಿ ಧ್ವನಿಯಿಲ್ಲದ, ಶಕ್ತಿಯಿಲ್ಲದ ಜನರಿಗೆ ಸಮಸ್ಯೆ ಹೇಳಿಕೊಳ್ಳಲು ಜನಸಂಪರ್ಕ ಸಭೆಗಳ ಮೂಲಕ ಸರಕಾರ ನೇರ ಅವಕಾಶ ಕಲ್ಪಿಸಿದೆ. ಇಲ್ಲಿ ಜನರೇ ಸಾಹೇಬರು ಎಂಬುದನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಬಂದು ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಜನಸಂಪರ್ಕ ಸಭೆಗಳ ಮೂಲಕ ಸಾವಿರಾರು ಮಂದಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ತಾಲೂಕು ಆಡಳಿತದಿಂದ ಇಲ್ಲಿನ ಯಡ್ತರೆ ಜೆಎನ್ಆರ್ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಬೈಂದೂರು ಹೋಬಳಿ ಮಟ್ಟದ ಜನಸಂಪರ್ಕ ಸಭೆಗೆ ಚಾಲನೆ ನೀಡಿ ಮಾತನಾಡಿಜನರ ತೆರಿಗೆ ಹಣದಿಂದ ಸಂಬಳ ಪಡೆಯುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವಾಗಲೂ ಜನರ ಸೇವಕರೇ ಆಗಿರುತ್ತಾರೆ. ಜನರಿಗೆ ಅಗತ್ಯವಾದ ಸೌಕರ್ಯವನ್ನು ಸೂಕ್ತ ಸಮಯದಲ್ಲಿ ಒದಗಿಸುವುದು ನಮ್ಮಲ್ಲರ ಕರ್ತವ್ಯ ಎಂದರು. ರಾಜ್ಯ ಕಾಂಗ್ರೆಸ್ ಸರಕಾರ ಬಂದ ಬಳಿಕ ಜಿಲ್ಲೆಯಲ್ಲಿ ಹೊಸತಾಗಿ ೬೬,೦೦೦ ಜನರಿಗೆ ಬಿಪಿಎಲ್ ಕಾರ್ಡ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿವರಾಮ ಕಾರಂತರು ಅವಗಣನೆಗೆ ಈಡಾಗಿದ್ದ ಯಕ್ಷಗಾನಕ್ಕೆ ವಿಶೇಷ ಮಾನ್ಯತೆ ತಂದು ಕೊಟ್ಟ ಪರಿಣಾಮ ಈಗ ಈ ಕಲೆ ವ್ಯಾಪಕವಾಗಿ ಬೆಳೆದಿದೆ. ಹೊಸ ಪ್ರಯೋಗಗಳ ಮೂಲಕ ಹೊಸ ಪ್ರದೇಶಗಳಿಗೆ ವಿಸ್ತರಿಸಿದೆ. ಕಲಾವಿದರ ಆರ್ಥಿಕ ಮಟ್ಟ ಸುಧಾರಿಸಿದೆ. ಇದು ಇನ್ನಷ್ಟು ಬೆಳೆಯಬೇಕು. ಅದಕ್ಕೆ ಸಾಂಸ್ಕೃತಿಕ ಸಂಘಟನೆಗಳು ಪೋಷಣೆ ನೀಡಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು. ನಾಗೂರು ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಭಾಗವತ ಜಿ. ಆರ್. ಕಾಳಿಂಗ ನಾವುಡ ಸ್ಮರಣ ವೇದಿಕೆಯಲ್ಲಿ ಶನಿವಾರ ೫ನೇ ವರ್ಷದ ತಾಳಮದ್ದಲೆ ಸಪ್ತಾಹ ಸಮಾರೋಪದಲ್ಲಿ ಮಾತನಾಡಿದರು. ಅಕ್ಷರ ಜ್ಞಾನ ಮತ್ತು ಶಿಕ್ಷಣ ಒಂದೇ ಅಲ್ಲ. ಅಕ್ಷರದ ಅರಿವು ಇಲ್ಲದೆಯೂ ವಿದ್ಯಾವಂತನಾಗಬಹುದು ಎನ್ನುವುದಕ್ಕೆ ಯಕ್ಷಗಾನ ಕಲಾವಿದರಲ್ಲಿ ಉದಾಹರಣೆ ದೊರೆಯುತ್ತದೆ. ಅವರು ತಾವೂ ಬೆಳೆದು ಜನರಿಗೂ ಅನೌಪಚಾರಿಕ ಶಿಕ್ಷಣ ನೀಡುತ್ತಾರೆ. ಪೌರಾಣಿಕ ಕಥಾಪ್ರಸಂಗದ ಪ್ರದರ್ಶನಗಳ ಮೂಲಕ ಜನರಿಗೆ ಪುರಾಣಗಳ ಅರಿವು ಮೂಡಿಸುವುದರ ಜತೆಗೆ ಶುದ್ಧ ಕನ್ನಡ ಭಾಷೆಯನ್ನು ಕಲಿಸುತ್ತಾರೆ. ಆ ನೆಲೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅಕ್ಷರಜ್ಞಾನ ಅತ್ಯವಶ್ಯಕ. ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದ್ದು, ಹಳ್ಳಿಗಳಲ್ಲಿ ಇಂದಿಗೂ ಅನೇಕ ಮಂದಿ ಅನಕ್ಷರಸ್ಥರಿದ್ದಾರೆ. ಆದ್ದರಿಂದ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಸಾಕ್ಷರತೆಯನ್ನು ಹೆಚ್ಚಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ರೋಟರಿ ಸದಸ್ಯರು ಅನಕ್ಷರಸ್ಥರನ್ನು ಗುರುತಿಸಿ ಅವರಿಗೆ ಕನಿಷ್ಠ ವಿದ್ಯಾಭ್ಯಾಸ ನೀಡುವಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಚುನಾಯಿತ ೨೦೧೮-೧೯ನೇ ಸಾಲಿನ ರೋಟರಿ ಜಿಲ್ಲಾ ರಾಜ್ಯಪಾಲ ಅಭಿನಂದನ ಎ.ಶೆಟ್ಟಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ಒಳಾಂಗಣದಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ಆಶ್ರಯದಲ್ಲಿ ಜರಗಿದ ವಲಯ ಮಟ್ಟದ ಸಾಕ್ಷರತೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗರಾಜ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರೋಟರಿ ವಲಯ-೨ರ ಮಾಜಿ ಅಸಿಸ್ಟೆಂಟ್ ಗವರ್ನರ್ ಅಶೋಕಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಜೋನಲ್ ಲೆಫ್ಟಿನೆಂಟ್ ಮನೋಜ್ ನಾಯರ್, ಜೋನಲ್ ಕೋ-ಆರ್ಡಿನೇಟರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಾರಾಹಿ ಬಲದಂಡೆ ಯೋಜನೆ ಕಾಮಗಾರಿ ಆರಂಭಿಸದಿದ್ದರೆ ಎಡದಂಡೆ ಕಾಲುವೆಯಲ್ಲಿ ನೀರು ಹರಿಯೋದಕ್ಕೆ ಬಿಡೋದಿಲ್ಲ. ಕುಚ್ಚಲಕ್ಕಿ ಅನ್ನ ಊಟ ಮಾಡೋರಿಗೆ ಬೆಳ್ತಿಗೆ ಅಕ್ಕಿ ಅನ್ನಾ ಆಗಿಬರೋದಿಲ್ಲ! ಅರ್ಧ ವಾರ್ಷಿಕ ಪರೀಕ್ಷೆ ಬಂದರೂ ಬಟೆ, ಪುಸ್ತಕ ಪೂರೈಕೆ ಏಕಿಲ್ಲಾ? ಹಳ್ಳಿ ಶಾಲೆಗಳಲ್ಲಿ ಸಮಸ್ಯೆಗಳಿದ್ದರೂ ವಲಯ ಶಿಕ್ಷಣಾಧಿಕಾರಿ ಏಕೆ ಭೇಟಿ ಕೊಡೋದಿಲ್ಲ. ಸರಕಾರಿ ಜಾಗದಲ್ಲಿ ಬಹುಮಹಡಿ ಕಟ್ಟಡ ಕಟ್ಟಿದರೂ ಕ್ರಮ ಏಕೆ ಇಲ್ಲ. ಒಬ್ಬರೇ ಮೂರು ಮೂರು ಹುದ್ದೆಯಲ್ಲಿದ್ದರೂ ಸುಮ್ಮನಿರೋದು ಏಕೆ? ಇದು ಕುಂದಾಪುರ ತಾಲೂಕು ಪಂಚಾಯತ್ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರು ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಪರಿ ಇದು. ಕಂದಾಯ ಇಲಾಖೆ ಸಂಬಂಧಪಟ್ಟ ವಿಷಯ ಚರ್ಚೆಗಿದ್ದು, ತಹಸೀಲ್ದಾರ್ ಸಭೆಗೆ ಹಾಜರಾಗಿಲ್ಲ. ಮರಳು ಮಾಫಿಯಾ ಜೀವಭಯ ಒಡ್ಡುತ್ತಿದ್ದರೂ ಉತ್ತರ ಕೊಡಬೇಕಿದ್ದ ಗಣಿ ಇಲಾಖೆ ಅಧಿಕಾರಿಗಳ ಬಂದಿಲ್ಲ. ಅಧಿಕಾರಿಗಳು ಬಾರದಿದ್ದರೆ ಪ್ರಶ್ನೋತ್ತರ ಮುಂದುವರಿಯಲು ಬಿಡೋದಿಲ್ಲ. ಬಾವಿಗಿಳಿದು ಪ್ರತಿಭಟಸಬೇಕಾಗುತ್ತದೆ ಎಂದು ತಾಪಂ ಸದಸ್ಯ ಕರಣ್ ಪೂಜಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕರಾವಳಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಹಲವೆಡೆಗಳಲ್ಲಿ ಹಿಂದೂ ಚಳವಳಿಯನ್ನು ಹತ್ತಿಕ್ಕುವ, ಹಿಂದು ನಾಯಕರ ಮೇಲೆ ದಬ್ಬಾಳಿಕೆಯನ್ನು ನಡೆಸುವ, ಹಿಂದು ಸಾಮಾಜಿಕ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯ, ಕಿರುಕುಳವನ್ನು ಎಸಗುವ, ಹಿಂದು ಧಾರ್ಮಿಕ, ಸಾಮಾಜಿಕ ಆಚರಣೆಗಳಿಗೆ ನೀತಿ-ನಿರ್ಬಂಧಗಳನ್ನು ಹೇರಿ ಅಡೆ-ತಡೆಗಳನ್ನು ಒಡ್ಡುತ್ತಿರುವ ರಾಜ್ಯ ಸರಕಾರ ಹಿಂದು ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಯಾವುದೇ ತಪ್ಪು ಮಾಡದ, ದ್ರೋಹ ಎಸಗದ ಹಿಂದು ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ ಎಂದು ಬಜರಂಗ ದಳದ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ಹೇಳಿದರು. ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಆಶ್ರಯದಲ್ಲಿ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ಬಸ್ ನಿಲ್ದಾಣದ ಎದುರು ರಾಜ್ಯ ಸರಕಾರ ಹಿಂದು ವಿರೋಧಿ ಧೋರಣೆಯನ್ನು ಖಂಡಿಸಿ ಬುಧವಾರ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಳೆದ ೬೦ ವರ್ಷಗಳಲ್ಲಿ ಹಿಂದು ವಿರೋಧಿ ಧೋರಣೆ ಅನುಸರಿಸುತ್ತಿರುವ ಸರಕಾರ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಂದು ಕ್ರೌರ್ಯಕ್ಕಿಂತ ಹೆಚ್ಚಾಗಿ ಭಯ ಹುಟ್ಟಿಸುವ ವ್ಯವಸ್ಥಿತ ಕೆಲಸವಾಗುತ್ತಿದೆ. ಭಯವೆಂಬುದು ಸಾಂಕ್ರಾಮಿಕ ರೋಗವಾಗುತ್ತಿದೆ. ನಮಗೆ ಬೇಕಿರುವುದು ನಾವು ಮತ್ತು ನಮ್ಮ ಮಕ್ಕಳು ನೆಮ್ಮದಿ ಹಾಗೂ ಧೈರ್ಯದಿಂದ ಬದುಕುವ ಸಮಾಜ. ಭಿನ್ನಾಭಿಪ್ರಾಯವಿದ್ದರೆ ಮಾತಿನಿಂದ ಪರಿಹರಿಸಿಕೊಳ್ಳೋಣ ಆದರೆ ಹತ್ಯೆ ಅದಕ್ಕೆ ಉತ್ತರವಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು. ಅವರು ಕೋಟತಟ್ಟು ಗ್ರಾಮ ಪಂಚಾಯತ್ ಪಂಚಾಯತ್ ಸಾರಥ್ಯದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಹಾಗೂ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ ಸಹಯೋಗದೊಂದಿಗೆ ನಡೆದ ತಂಬೆಲರು ಕಾರ್ಯಕ್ರಮದಲ್ಲಿ ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ನಟ, ಕಲಾವಿದ ಪತ್ರಕರ್ತ ಯಾಕೆ ಮಾತನಾಡುತ್ತಾನೆ ಎಂದು ಪ್ರಶ್ನಿಸುವ ಮೊದಲು ಅವರೂ ಜನಸಮುದಾಯದಿಂದ ಬಂದವರು ಎಂಬುದನ್ನು ಮರೆಯಬಾರದು. ಎಲ್ಲವನ್ನೂ ನೋಡುತ್ತಾ ನಾವೇ ಹೇಡಿಯಾಗಿ ಕುಳಿತರೇ ಒಂದು ಸಮಾಜ ಹೇಡಿಯಾಗಲು ನಾವೇ ಕಾರಣವಾಗುತ್ತೇವೆ. ಮನಸಾಕ್ಷಿ ಅನ್ನಿಸಿದ್ದನ್ನು ಹೇಳಬಾರದು ಎಂದು ಹೇಳಲು ಯಾರಿಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕಾರ ಸಮಾರಂಭಕ್ಕೆ ಆಗಮಿಸಿದ್ದ ನಟ ಪ್ರಕಾಶ್ ರೈ ಅವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದವರನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡು ಘಟನೆ ನಡೆಯಿತು. ಪ್ರತಿಭಟನೆ ನಡೆಸುವ ಮುನ್ಸೂಚನೆ ಇದ್ದಿದ್ದರಿಂದ ಕೋಟದಲ್ಲಿ ಬೀಗು ಬಂದೋವಸ್ತ್ ಏರ್ಪಡಿಸಲಾಗಿತ್ತು. ಕೋಟ ಕಾರಂತ ಥೀಂ ಪಾರ್ಕ್ನಲ್ಲಿ ವಿಶೇಷ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳವಾರ ಮುಂಜಾನೆಯಿಂದಲೇ ಪೊಲೀಸ್ರು ಕಾರಂತ ಥೀಂ ಪಾರ್ಕ್ ಬಂದೋ ಬಸ್ತಿನಲ್ಲಿ ತೊಡಗಿದ್ದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ ಪಾಟೀಲ್ ಅವರ ನೇತೃತ್ವದಲ್ಲಿ ಕಾರಂತ ಥೀಂ ಪಾರ್ಕ್ನ ಭದ್ರತೆಗೆ ವ್ಯವಸ್ಥೆ ಕಲ್ಪಿಸಲಾಯಿತು. ಪ್ರತಿಭಟನೆಗೆ ಮುಂದಾದವರನ್ನು ಬಂಧಿಸಿ ಕೊನೆಗೆ ಬಿಡುಗಡೆಗೊಳಿಸಲಾಯಿತು. ಕೋಟತಟ್ಟು ಪಂಚಾಯತ್ ಮತ್ತು ಕಾರಂತ ಹುಟ್ಟೂರ ಪ್ರತಿಷ್ಠಾನ ನೀಡುವ ಕಾರಂತ ಹುಟ್ಟೂರ ಪ್ರತಿಷ್ಠಾನ ವಿಚಾರವಾಗಿ ಎದ್ದಿರುವ ವಿವಾದ ಹಿನ್ನಲೆಯಲ್ಲಿ ಮಂಗಳವಾರ ವಿಶೇಷ ಬಂದೋಬಸ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಹುಭಾಷಾ ನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದ ಬಳಿಕ, ಅವರು…
