ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಸ್ತುಬದ್ದ ಜೀವನ ಶೈಲಿ. ಸರಳ ಸಜ್ಜನಿಕೆಯ ವ್ಯಕ್ತಿತ್ವ. ಸಾಮಾಜಿಕ ಕಳಕಳಿಯಿಂದ ಹಳ್ಳಿಯ ಜನರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಜನಾನುರಾಗಿ ಹೊಸ್ಕೋಟೆ ಡಾಕ್ಟರ್ ಅವರ ನೂರು ವರ್ಷದ ಬದುಕೇ ಅತಿದೊಡ್ಡ ಸಾಧನೆ ಎಂದು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಹೊಸ್ಕೋಟೆ ವಿಜಯಕೃಪಾದ ರಘುವೀರ ಭಂಡಾರ್ಕಾರ್ ಸ್ಮರಣ ವೇದಿಕೆಯಲ್ಲಿ ಗುರುವಾರ ಸಂಜೆ ಡಾ. ಸದಾನಂದ ಗಣಪತಿ ರಾವ್ ಹೊಸ್ಕೋಟೆ (ಹೊಸ್ಕೋಟೆ ಡಾಕ್ಟರ್) ಇವರ ಶತ ಸಂವತ್ಸರದ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಿಸ್ವಾರ್ಥ ಸೇವೆಯಿಂದ ಮಾತ್ರ ತೃಪ್ತಿಯ ಜೀವನ ಪಡೆಯಲು ಸಾಧ್ಯ. ಈ ನೆಲೆಯಲ್ಲಿ ಶ್ರೀಮಂತ ಹಾಗೂ ಸುಸಂಸ್ಕೃತ ರಾವ್ಬಹದೂರ್ ವಂಶದಲ್ಲಿ ಜನಿಸಿದರೂ ಹಣದ ವ್ಯಾಮೋಹಕ್ಕೆ ಒಳಗಾಗದೇ ಜನಸೇವೆಯಲ್ಲಿಯೇ ದೇವರನ್ನು ಕಂಡುಕೊಂಡು ಇತಿಹಾಸ ಸೃಷ್ಠಿಸಿದ ಈ ಭಾಗದ ಪ್ರಸಿದ್ದ ವೈದ್ಯರಾಗಿದ್ದಾರೆ. ಲೌಕಿಕ ಆಸೆ ಆಮಿಷಗಳ ದಾಸರಾಗದ ಇವರು ’ವೈದ್ಯೋ ನಾರಾಯಣೋ ಹರಿಃ’ ಎಂಬ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಡೂರು- ಕುಂಜ್ಙಾಡಿ(ಕುಂದಾಪುರ) ಶ್ರೀ ಹ್ಯಾಗೂಳಿ ದೈವಸ್ಥಾನ ಆಶ್ರಯದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 12ನೇ ವರ್ಷದ ಗಣೇಶೋತ್ಸವದ ಅಂಗವಾಗಿ ನಿವೃತ್ತಿ ಹೊಂದಿದ ಜಡ್ಕಲ್ ಘಟಕದ ಉಪ ವಲಯ ಅರಣ್ಯಾಧಿಕಾರಿ ಶ್ರೀ. ಪಿ ಸುಬ್ರಾಯ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಾರಾಯಣ ರಾವ್, ಪ್ರದೀಪ ಶೆಟ್ಟಿ, ಶೇಖರ ಗೌಡ, ವಿಠ್ಠಲ ಶೆಟ್ಟಿ, ನರಸಿಂಹ ಶೆಟ್ಟಿ, ರಾಜಾರಾಮ್ ಶೆಟ್ಟಿ, ನಾರಾಯಣ ಅಧ್ಯಾಪಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀರಾಮ ಕೆಡಿಟ್ ಕೋ- ಅಪರೇಟಿವ್ ಸೊಸೈಟಿ ಲಿ ಬೈಂದೂರು ಶಾಖೆ ಸ್ಥಳಾಂತರ ಮತ್ತು ಸ್ವಂತ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು. ಬೈಂದೂರು ಮಾಜಿ ಶಾಸಕರ ಮತ್ತು ವಿಧಾನಸಭಾ ಕ್ಷೇತ್ರದ ಸದಸ್ಯರಾದ ಕೆ.ಲಕ್ಷ್ಮೀನಾರಾಯಣ ಉದ್ಘಾಟನೆ ಮಾಡಿದರು. ಭದ್ರತಾ ಕೊಠಡಿ ಉದ್ಘಾಟನೆಯನ್ನು ರಕ್ಷಾ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ಅಧ್ಯಕ್ಷರು ಚಂದ್ರಶೇಖರ ಉದ್ಘಾಟನೆ ಮಾಡಿದರು. ಕೆ.ನಾಗರಾಜ್ ರಾವ್ ಅಧ್ಯಕ್ಷರು ಶ್ರೀರಾಮ ಕೆಡಿಟ್ ಕೋ- ಅಪರೇಟಿವ್ ಸೊಸೈಟಿ ಲಿ ಕುಂದಾಪುರ ಇವರು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಸುರೇಶ್ ಬಟವಾಡಿ ಜಿ.ಪಂ ಸದಸ್ಯ, ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ ಬಿ ನಾಯಕ್, ಶ್ರೀ ರಾಮಕ್ಷತ್ರಿಯ ಸಂಘ ಬೈಂದೂರು ಅಧ್ಯಕ್ಷ ಗೋಪಾಲ ನಾಯ್ಕ್, ಆಡಳಿತ ಮಂಡಳಿಯ ಸದಸ್ಯರಾದ ಸತೀಶ್ ನರಸಿಂಹ ಶೇರುಗಾರ್, ಎನ್.ವಿ ದಿನೇಶ್, ಅಶೋಕ್ ಬೆಟ್ಟಿನ್, ಕೆ ರಾಮನಾಥ್ ನಾಯ್ಕ್, ಶ್ರೀಧರ ಪಿ.ಎಸ್., ಮಂಜುನಾಥ ಮದ್ದೋಡಿ, ಗೋಪಾಲಕೃಷ್ಣ ಕಲ್ಮಕ್ಕಿ, ವಿಶ್ವನಾಥ ಹವಲ್ದಾರ್, ಕೆ.ಚಂದ್ರಶೇಖರ ಕೊತ್ವಲ್, ರಾಜೇಶ್ ರಾವ್, ಬಿ.ರಾಧಾಕೃಷ್ಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ನಡೆದ ಬಸ್ ಹಾಗೂ ಬೈಕ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮರವಂತೆ ಗಾಡಿಮನೆ ವೆಂಕಪ್ಪ ಖಾರ್ವಿಯವರ ಪುತ್ರ ಶ್ರೀಕಾಂತ ಖಾರ್ವಿ(24) ಮೃತ ದುರ್ದೈವಿ ಯುವಕ. ಬೈಕ್ಗೆ ಸರ್ಕಾರಿ ಬಸ್ ಮುಖಾಮುಖಿ ಢಿಕ್ಕಿ ಹೊಡೆದಿದ್ದರಿಂದ, ಆಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಶ್ರೀಕಾಂತ ಖಾರ್ವಿಯನ್ನು ಸ್ಥಳೀಯರು ಆಪತ್ಭಾಂಧವ ಆಂಬುಲೆನ್ಸ್ ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬೈಂದೂರು 2016-17ನೇ ಸಾಲಿನಲ್ಲಿ 294 ಕೋಟಿಯಷ್ಟು ವ್ಯವಹಾರ ನಡೆಸಿ 73.15 ಲಕ್ಷ ರೂ. ಲಾಭಗಳಿಸಿದ್ದು, ಸಂಸ್ಥೆಯ ಸದಸ್ಯರಿಗೆ ಶೇ.13ರಷ್ಟು ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಸೋಮವಾರ ಬೈಂದೂರಿನ ಪ್ರಧಾನ ಕಛೇರಿಯಲ್ಲಿ ಜರುಗಿದ 15ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಆರ್ಥಿಕ ವರ್ಷದ ಅಂತ್ಯಕ್ಕೆ ಸಂಘವು 29.85 ಕೊಟಿ ರೂ. ಠೇವಣಿ ಸಂಗ್ರಹಿಸಿ, 25.23 ಕೋಟಿ ರೂ. ಸಾಲ ನೀಡಿ ಒಟ್ಟು 294 ಕೋಟಿ ರೂ. ವಹಿವಾಟು ನಡೆಸಿದೆ ಎಂದ ಅವರು ಪ್ರಧಾನ ಕಛೇರಿ ಸೇರಿದಂತೆ ಆರು ಶಾಖೆಗಳನ್ನು ಹೊಂದಿ ಉತ್ತಮ ವ್ಯವಹಾರ ನಡೆಸುತ್ತಿದ್ದು, ಕುಂದಾಪುರದಲ್ಲಿ ಸ್ವಂತ ಕಟ್ಟಡದಲ್ಲಿ ಕಛೇರಿ ತೆರೆಯುವ ಯೋಜನೆಯಿದೆ. ಪ್ರತಿವರ್ಷ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಈ ಭಾರಿ 1,71,000 ರೂ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು. ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರತಿಭಾವಂತ ಬಡ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಕೃತಿಯಲ್ಲಿರುವ ಹಲವು ಬಗೆಯ ಸಸ್ಯ ಪ್ರಭೇದಗಳು ಹಲವು ಪ್ರಯೋಜನಕಾರಿಯಾಗಿವೆ ಅದರಂತೆ ಶಿವನ ಸಾನಿಧ್ಯವಿರುವ ಬಿಲ್ವ ವೃಕ್ಷವನ್ನು ಸ್ಪರ್ಶಿಸುವುದರಿಂದಲೇ ಪಾಪ ಕ್ಷಯಿಸುವುದು. ಅಂತಹ ಸಸ್ಯ ಪ್ರಭೇದಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮದಾಗಿರಬೇಕು ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿವರು ನುಡಿದರು. ಅವರು ಕೋಟೇಶ್ವರ ಸಮೀಪದ ಶಾಂತಿಧಾಮ ಗುರುಕುಲ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಲ್ವ ಸಸಿಗಳನ್ನು ವಿತರಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಹರಿಹರ ಸೇವಾ ಬಳಗದ ಅಧ್ಯಕ್ಷ ಎನ್. ಮೋಹನ್ ಆಚಾರ್ಯ, ಸುದ್ದಿಮನೆ ಸಂಪಾದಕ ಸಂತೋಷ ಕೋಣಿ, ವ್ಯಾಪಾರೋದ್ಯಮಿ ವಿಠಲ ಪೈ ಉಪಸ್ಥಿತರಿದ್ದರು. ಶಾಲಾ ಅಧ್ಯಕ್ಷರಾದ ಕೃಷ್ಣರಾಯ ಶ್ಯಾನುಭಾಗ್ ಸ್ವಾಗತಿಸಿ, ವಂದಿಸಿದರು.
ಮೂಕಜ್ಜಿ, ಅಡಿಗ, ಶ್ರೀಧರರ ಶತಮಾನದ ಸ್ಮೃತಿ ಹಬ್ಬ. ನಾಗೂರು ಒಡೆಯರ ಮಠ ಗೋಪಾಲಕೃಷ್ಣ ಕಲಾಮಂದಿರದ ಬಳವಾಡಿ ಮಹಾಲಕ್ಷ್ಮೀ ಹೆಬ್ಬಾರತಿ ಸಭಾವರಣದಲ್ಲಿ ಅಗಸ್ಟ್ 27ರ ರವಿವಾರ ಬೆಳಿಗ್ಗೆಯಿಂದ ಸಂಜೆಯ ತನಕ. *** ಕಾರ್ಯಕ್ರಮದ ವಿವರ
ಕುಂದಾಪ್ರ ಡಾಟ್ ಕಾಂ ಸುದ್ದಿ, ಕುಂದಾಪುರ: ಸಾರ್ವಜನಿಕ ಗಣೇಶೋತ್ಸವ ಎಂದರೆ ಜನರನ್ನು ಒಗ್ಗೂಡಿಸುವ ವೇದಿಕೆ. ಇಂಥಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವ ಜನತೆ ಮತ್ತು ಸಾರ್ವಜನಿಕರ ಸಕ್ರೀಯ ಪಾಲ್ಗೊಳ್ಳುವಿಕೆಯಿಂದ ಯಶಸ್ಸು ಸಾಧ್ಯ. ಜನತೆಯ ಸಂಘಟಿತವಾದ ಪಾಲ್ಗೊಳ್ಳುವಿಕೆ ನಿರಂತರವಾಗಿರಲಿ ಎಂದು ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರು, ಶಾಸಕರಾದ ಕೆ.ಗೋಪಾಲ ಪೂಜಾರಿ ಹೇಳಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ವಂಡ್ಸೆ ಇದರ ೧೫ನೇ ವರ್ಷದ ಗಣೇಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಗಣೇಶೋತ್ಸವ ಸೇವಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಹೇಶ ಗಾಣಿಗ ಅಬ್ಬಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಉದಯ ಜಿ.ಪೂಜಾರಿ ಚಿತ್ತೂರು ಬಹುಮಾನ ವಿತರಿಸಿದರು. ನಿವೃತ್ತ ಯೋಧ ಬಿಜು ಥೋಮಸ್ ಅವರಿಗೆ ಗಣೇಶೋತ್ಸವ ಸೇವಾ ಪುರಸ್ಕಾರ ನೀಡಲಾಯಿತು. ವಂಡ್ಸೆ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ.ಶಿವರಾಮ ಶೆಟ್ಟಿ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ವಿಠಲ ಆಚಾರ್ಯ ಆತ್ರಾಡಿ, ವಂಡ್ಸೆ ಅಯ್ಯಂಗಾರ್ ಬೇಕರಿಯ ಮಾಲಕ ಜಗದೀಶ ಪ್ರಮೋದ್, ಗಣೇಶ ಫರ್ನಿಚರ್ಸ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳುವ ಉದ್ದೇಶದಿಂದ ಕರಾವಳಿ ಜಿಲ್ಲೆಯ ಜನರ ಭಾವನೆ ಕೆರಳಿಸಿ ಜಿಲ್ಲೆಗೆ ಬೆಂಕಿಯಿಡುವ ಕೆಲಸ ಮಾಡುತ್ತಿದೆ, ಇದರಿಂದ ಈ ಭಾಗದ ಜನರು ಹೊರಬರಬೇಕಾದರೆ ಮುಂದಿನ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳದ ಕಡೆಗೆ ಬೆಂಬಲ ನೀಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ. ಬಿ. ನಿಂಗಯ್ಯ ಹೇಳಿದ್ದಾರೆ. ಬೈಂದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿ, ಪಂಗಡದ ಜನರ ಏಳಿಗೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಬಿಜೆಪಿ ಮುಖಂಡರು ದಲಿತರ ಮನೆಗೆ ಭೇಟಿ ನೀಡಿ ಅಲ್ಲಿ ಹೋಟೇಲ್ ಊಟ ಸವಿಯುತ್ತಿದ್ದಾರೆ, ಎರಡು ಪಕ್ಷಗಳಿಗೆ ದಲಿತರ ಬಗ್ಗೆ ನೈಜ ಕಾಳಜಿಯಿಲ್ಲ. ಜೆಡಿಎಸ್ ಪಕ್ಷ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡದ ಜನರ ನಡಿಗೆ ಜೆಡಿಎಸ್ ಕಡೆಗೆ ಎಂಬ ಆಂದೋಲನ ರೂಪಿಸಲಿದೆ, ಈ ಬಗ್ಗೆ ಸೆ. ೨೯ಕ್ಕೆ ಪರಿಶಿಷ್ಠ ಜಾತಿ ಪಂಗಡದ ಬೃಹತ್ ಸಮಾವೇಶ…
