ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ. ಎನ್. ರಾಜೇಂದ್ರಕುಮಾರ್ ಅವರು ಇತ್ತಿಚಿಗೆ ಬೈಕ್ ಅಪಘಾತದಲ್ಲಿ ಮರಣ ಹೊಂದಿದ ಗಂಗೊಳ್ಳಿ ಸೀತಾರಾಮ ನವೋದಯ ಸ್ವಸಹಾಯ ಗುಂಪಿನ ಸದಸ್ಯೆ ಮಂಗಳ ಖಾರ್ವಿ ಅವರ ಕುಟುಂಬಕ್ಕೆ ಕೊಡಮಾಡಿದ ಒಂದು ಲಕ್ಷ ರೂ. ಚೆಕ್‌ನ್ನು ಎಸ್. ರಾಜು ಪೂಜಾರಿ ಅವರು ಕುಟುಂಬಿಕರಿಗೆ ಹಸ್ತಾಂತರಿಸಿದರು. ಈ ಸಂದರ್ಭ ತಾಲೂಕು ನವೋದಯ ಸಂಘಗಳ ಮೇಲ್ವಿಚಾರಕ ಮನೋಹರ ಶೆಟ್ಟಿ, ಬೈಂದೂರು ವಲಯ ನವೋದಯ ಸಂಘಗಳ ಮೇಲ್ವಿಚಾರಕ ಶಿವರಾಮ ಪೂಜಾರಿ, ಸೇವಾನಿರತ ನಾಗ ಹಾಗೂ ಪ್ರೇರಕ ವಾಸುದೇವ ಖಾರ್ವಿ, ಜ್ಯೋತಿಕೃಷ್ಣ ಇದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಇಲ್ಲಿನ ಶ್ರೀ ಮೂಕಾಂಬಿಕಾ ಬಾಲಕರ ವಸತಿ ನಿಲಯದಲ್ಲಿ ಜರುಗಿದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ ಶೆಟ್ಟಿ, ವಸಂತ ಶೆಟ್ಟಿ, ನವೀನ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣಪ್ರಕಾಶ್ ಶೆಟ್ಟಿ ಪ್ರಶಸ್ತಿ ಹಸ್ತಾಂತರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಗೀತ ಕೇಳುಗರ ಮನಸ್ಸನ್ನು ಅರಳಿಸುತ್ತದೆ. ಕಿವಿ ಮತ್ತು ಹೃದಯವನ್ನು ತೆರೆದು ಆಸ್ವಾದಿಸುವ ಗುಣ ಅದಕ್ಕೆ ಬೇಕು. ಮನಸ್ಸನ್ನು ಕೇಂದ್ರಿತವಾಗಿಟ್ಟುಕೊಂಡು ಸಂಗೀತದಿಂದ ಪರಿವರ್ತನೆಯೂ ಸಾಧ್ಯವಿದೆ. ಉತ್ತಮ, ಆಹ್ಲಾದಕರ ಸಂಗೀತದಿಂದ ಸಕಾರಾತ್ಮಕ ಪರಿಣಾಮವೂ ಆಗಬಲ್ಲುದು ಎಂಬುದನ್ನು ಪ್ರಯೋಗಗಳಿಂದ ಕಂಡುಕೊಳ್ಳಲಾಗಿದೆ. ಸಂಗೀತವು ಹೃದಯಕ್ಕೆ ಸಾಕಷ್ಟು ಹತ್ತಿರವಾದ ಭಾಷೆಯಾಗಿದೆ ಎಂದು ಮರವಂತೆ ಸಾಧನಾ ಜನಾರ್ದನ ಪ್ರತಿಷ್ಠಾನ ರಿ. ಪ್ರವರ್ತಕ, ಪತ್ರಕರ್ತ ಎಸ್. ಜನಾರ್ದನ ಹೇಳಿದರು. ಮರವಂತೆ ಸಾಧನಾ ಜನಾರ್ದನ ಪ್ರತಿಷ್ಠಾನ ರಿ. ಆಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಕಲಾವಿದ ಶಂಭು ಗುಡ್ಡಮ್ಮಾಡಿ ಮತ್ತು ಬಳಗದವರಿಂದ ನಾಡಾ-ಗುಡ್ಡೆಹೋಟೆಲ್‌ನ ರೆ. ಫಾ. ರಾಬರ್ಟ್ ಝಡ್ ಎಂ. ಡಿಸೋಜ ಸ್ಮಾರಕ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಬುಧವಾರ ಮಧ್ಯಾಹ್ನ ಜರುಗಿದ ವಿಶೇಷ ಘಟಕ ಯೋಜನೆಯಡಿ ಪ್ರಾಯೋಜಿತ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿ ಪತ್ರಕರ್ತ ರಾಜೇಶ್ ಕೆ. ಸಿ. ಮಾತನಾಡಿ ಯುವಜನರಲ್ಲಿ ಸಂಗೀತದ ಅಭಿರುಚಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಾಮಾಣಿಕತೆ, ಶುದ್ಧ ಮನಸ್ಸಿನ ಜೊತೆಗೆ ಪರಿಶ್ರಮದ ಹಾದಿ ನಮ್ಮದಾದಾಗ ಸಾಧನೆಯ ಶಿಖರವನ್ನೇರಬಹುದು. ನಮಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ದೇವರ ಸೇವೆಯ ಜೊತೆಗೆ ಜನಕಲ್ಯಾಣ ಕಾರ್ಯಗಳನ್ನು ಮಾಡಬಹುದೆಂಬುದನ್ನು ಹಟ್ಟಿಯಂಗಡಿ ಕ್ಷೇತ್ರ ತೋರಿಸಿಕೊಟ್ಟು ರಾಜ್ಯಾದ್ಯಂತ ಭಕ್ತರನ್ನು ಹೊಂದಿದೆ. ಕ್ಷೇತ್ರ ಇನ್ನಷ್ಟು ಪ್ರಗತಿದಾಯಕವಾಗಲಿ ಎಂದು ಸಾಗರದ ಮಾಜಿ ಶಾಸಕ ಎಲ್. ಟಿ. ತಿಮ್ಮಪ್ಪ ಹೆಗಡೆ ಹೇಳಿದರು. ಅವರು ಸಂಜೆ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ್ ಮಾತನಾಡಿ ದೇವರ ಮೇಲೆ ಭಯ ಮತ್ತು ಭಕ್ತಿ ಇದ್ದಲ್ಲಿ ಶ್ರದ್ಧೆ ಮೂಡುತ್ತದೆ. ಅದು ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುತ್ತದೆ ಎಂದರು. ಈ ಸಂದರ್ಭದಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ದೇವ ಎಜ್ಯುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್(ರಿ.) ಕಾರ್ಯದರ್ಶಿ ಭಂಡಾರಿ ರಾಧಾಕೃಷ್ಣ ಶೆಣೈ, ಯಕ್ಷಗಾನ ಕಲಾವಿದ ಹೆಮ್ಮಾಡಿ ರಾಮ, ಹಟ್ಟಿಯಂಗಡಿ ದೇವಳದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತ ಹಿಂದುಗಳ ತಾಯ್ನೆಲ, ಹಿಂದು ರಾಷ್ಟ್ರ ಎಂಬುದು ವಿವಾದಗಳಿಗೆ ಕಾರಣವಾಗಿರುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ದುರಂತ. ಹಿಂದುಗಳು ತಮ್ಮ ಹಬ್ಬಹರಿದಿನಗಳನ್ನು ಆಚರಿಸುವಂತೆ ಇಲ್ಲ. ಹಕ್ಕುಗಳನ್ನು ಪ್ರತಿಪಾದಿಸುವಂತೆಯೂ ಇಲ್ಲ. ಧಾರ್ಮಿಕ ಆಚರಣೆಗಳನ್ನು ಮಾಡಲು ಸಾಧ್ಯವಿಲ್ಲದ ದುಸ್ಥಿತಿ ಹಿಂದು ಸಮಾಜದಲ್ಲಿ ನಿರ್ಮಾಣವಾಗಿದೆ ಎಂದು ಬಜರಂಗದಳ ಮಂಗಳೂರು ವಿಭಾಗ ಸಂಚಾಲಕ ಸುನಿಲ್ ಕೆ. ಆರ್. ಹೇಳಿದರು. ಬೈಂದೂರು ಬೈಪಾಸಿನಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರಿಂದ ನಡೆದ ಬೃಹತ್ ಪ್ರತಿಭಟನೆಯ ನಂತರ ರಾಜರಾಜೇಶ್ವರಿ ಸಭಾಭವನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ನಮ್ಮಲ್ಲಿ ಧರ್ಮದ ವ್ಯತ್ಯಾಸಗಳಿದ್ದರೂ ಅದನ್ನು ತಮ್ಮ ತಮ್ಮ ಮನೆಗಳಲ್ಲಿ ಮಾಡಿಕೊಳ್ಳಬೇಕು. ಧರ್ಮದ ವಿಚಾರದಲ್ಲಿ ಗಲಭೆ ಸೃಷ್ಠಿಸುವವರ ಬಗ್ಗೆ ಜಾಗರೂಕರಾಗಿರಬೇಕಿದೆ. ಜನಪರ ಕಾನೂನುಗಳನ್ನು ಜಾರಿಗೊಳಿಸದೇ ಸರಕಾರಗಳೆ ಕಾನೂನು ಉಲ್ಲಂಘನೆ ಮಾಡುತ್ತಿದೆ ಎಂದ ಅವರು ಈಗಿನ ಪರಿಸ್ಥಿತಿಯಲ್ಲಿ ಧರ್ಮದ ಬಗ್ಗೆ ಮಾತನಾಡುವುದು ತಪ್ಪು ಎಂಬ ವಾತಾವರಣ ನಿರ್ಮಾಣವಾಗಿದೆ. ಧರ್ಮದ ಮೇಲಿನ ಶೃದ್ಧೆಯನ್ನು ಕಡಿಮೆ ಮಾಡುವ ವ್ಯವಸ್ಥಿತ ಸಂಚು ತೆರೆಮರೆಯಲ್ಲಿ ನಡೆಯುತ್ತಿದೆ ಆರೋಪಿಸಿದರು. ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನವದೆಹಲಿಯಲ್ಲಿ ಸ್ವಾತಂತ್ರಯೋತ್ಸವದ ಪ್ರಯುಕ್ತ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾಟದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಂಡ ಕೆರ್ಗಾಲು ಗ್ರಾಪಂ ವ್ಯಾಪ್ತಿಯ ನಂದನವನದ ರವಿಚಂದ್ರ ಹಾಗೂ ಸುಮಿತ್ರಾ ದಂಪತಿಗಳ ಪುತ್ರ ಹನೀಷ್ ಎನ್. ಆರ್. ಇವರು ಕಂಚಿನ ಪದಕ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಇವರು ಖಂಬದಕೋಣೆ ಸಂದೀಪನ್ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಯಾಗಿದ್ದು, ಕುಂದಾಪುರದ ಕರಾಟೆ ಶಿಕ್ಷಕ ಕಿರಣ್‌ಕುಮರ್ ಅವರ ಶಿಷ್ಯ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ: ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕುರು ರಾಮಚಂದ್ರ ಹೆಬ್ಬಾರ್ ಆಯ್ಕೆಯಾಗಿದ್ದಾರೆ. ಸೋಮವಾರ ದೇವಸ್ಥಾನದಲ್ಲಿ ಸಮಿತಿಯ ಸದಸ್ಯರು ಸಭೆಸೇರಿ ಈ ಆಯ್ಕೆ ಮಾಡಿದರು. ಇದರ ಪೂರ್ವದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ತು ಆಯ್ಕೆ ಮಾಡಿದ ಹೆಬ್ಬಾರ್ ಸೇರಿ ೯ ಜನರನ್ನು ಜಿಲ್ಲಾ ಹಿಂದು ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ನೇಮಕ ಮಾಡಿದ್ದರು. ನೇಮಕಗೊಂಡ ಸದಸ್ಯರು : ಶಿವಾನಂದ ಮೊವಾಡಿ, ತ್ರಾಸಿ, ಶ್ರೀಮತಿ ಆಚಾರ್ಯ ಮರವಂತೆ, ನೀಲಾವತಿ ಖಾರ್ವಿ ಮರವಂತೆ, ಕೆ. ಎಂ. ಜನಾರ್ದನ ಮರವಂತೆ, ಚಂದ್ರ ಮೊಗವೀರ ಪಡುಕೋಣೆ, ನಾಡ, ಲಕ್ಷ್ಮಣ ಪೂಜಾರಿ ಹಡವು, ನಾರಾಯಣ ದೇವಾಡಿಗ ಮರವಂತೆ, ಪ್ರಧಾನ ಅರ್ಚಕ ನರಸಿಂಹ ಅಡಿಗ ತ್ರಾಸಿ, .
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಬದುಕಿನ ಕೌಶಲ್ಯವನ್ನು ಕಲಿಸುವುದು ನಿಜವಾದ ಶಿಕ್ಷಣ ಎನ್ನಿಸಿಕೊಳ್ಳುತ್ತದೆ.ಸಾಹಿತ್ಯ ಬಗೆಗಿನ ಆಸಕ್ತಿ ಎನ್ನುವುದು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸಿ ಅವರನ್ನು ನಿರಂತರವಾಗಿ ಕ್ರಿಯಾಶೀಲರನ್ನಾಗಿಸಲು ಸಹಾಯ ಮಾಡುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಕುಂದಾಪುರ ಘಟಕದ ಅಧ್ಯಕ್ಷರಾದ ಡಾ. ಸುಬ್ರಮಣ್ಯ ಭಟ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಹೊರತರಲಾದ ವಿಶೇಷ ಸಂಚಿಕೆ ‘ಹೊಂಬೆಳಕು’ ಬಿಡುಗಡೆಗೊಳಿಸಿ ಮಾತನಾಡಿದರು. ಇಂತಹ ಸಂಚಿಕೆಗಳ ಮೂಲಕ ಇತಿಹಾಸವನ್ನು ದಾಖಲಿಸುವ ಪ್ರಯತ್ನಗಳ ಜೊತೆಗೆ ಪ್ರತಿಭೆಯನ್ನು ಪೋಷಿಸುವ ಕೆಲಸ ಆಗುತ್ತದೆ. ಕನ್ನಡದ ನಾಡು ನುಡಿಯ ಕಾಳಜಿಯೂ ಪ್ರೇರಣೆಗೊಳ್ಳುತ್ತದೆ ಎಂದು ಅವರು ಹೇಳಿದರು. ಪ್ರಧಾನ ಸಂಪಾದಕ ನರೇಂದ್ರ ಎಸ್ ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಚಿಕೆಯನ್ನು ಹೊರತರಲು ಸಹಕರಿಸಿದ ಎಲ್ಲರ ಸಹಕಾರವನ್ನು ಸ್ಮರಿಸಿ ಅಭಿನಂದಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ರಾಜು ದೇವಾಡಿಗ, ಹೊಂಬೆಳಕು ಸಂಪಾದಕ ಮಂಡಳಿಯ ಸದಸ್ಯರಾದ ಅಬ್ದುಲ್ ಸಲಾಂ, ಗಣೇಶ್ ಹೆಬ್ಬಾರ್, ಸಂಧ್ಯಾ ಪಟೇಲ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಾವುದೇ ಆರ್ಥಿಕ ಸಂಸ್ಥೆಯ ಬೆಳವಣಿಗೆಯು ಆ ಸಂಸ್ಥೆಯ ಕಾರ್ಯನೀತಿ ಹಾಗೂ ಸಂಸ್ಥೆಯ ಸಿಬ್ಬಂದಿಗಳ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿದೆ. ಸಂಸ್ಥೆಯ ದೂರದೃಷ್ಟಿತ್ವ ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶ, ಶಿಸ್ತುಬದ್ಧ ಆಡಳಿತ ಹಾಗೂ ಅತ್ಯುತ್ತಮ ಸೇವೆ ಮೊದಲಾದವುಗಳಿಂದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಹೇಳಿದರು. ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ೨೦೧೭-೧೮ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ದೂರದ ಮುಂಬೈ, ಹೈದರಾಬಾದ್, ಪುಣೆ ಹಾಗೂ ಬೆಂಗಳೂರಿನಲ್ಲಿ ಲಾಭದಾಯಕ ಉದ್ಯಮ ನಡೆಸುತ್ತಿದ್ದರೂ ಕೂಡಾ ನಮ್ಮೂರಿನ ಜನರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ಪಂದಿಸುವ ಉದ್ದೇಶದಿಂದ ಊರಿನಲ್ಲಿ ಸಹಕಾರಿ ಸಂಘವನ್ನು ಆರಂಭ ಮಾಡಲಾಗಿದೆ. ಅಲ್ಲದೇ ಶ್ರೀ ವರಲಕ್ಷ್ಮೀ ಟ್ರಸ್ಟ್ ಮೂಲಕವೂ ಶೈಕ್ಷಣಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಘದ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಹಾಯಹಸ್ತ ನೀಡಲಾಗುತ್ತಿದೆ. ಇದೊಂದು ಆತ್ಮತೃಪ್ತಿಗಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಸ್ತುಬದ್ದ ಜೀವನ ಶೈಲಿ. ಸರಳ ಸಜ್ಜನಿಕೆಯ ವ್ಯಕ್ತಿತ್ವ. ಸಾಮಾಜಿಕ ಕಳಕಳಿಯಿಂದ ಹಳ್ಳಿಯ ಜನರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಜನಾನುರಾಗಿ ಹೊಸ್ಕೋಟೆ ಡಾಕ್ಟರ್ ಅವರ ನೂರು ವರ್ಷದ ಬದುಕೇ ಅತಿದೊಡ್ಡ ಸಾಧನೆ ಎಂದು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಹೊಸ್ಕೋಟೆ ವಿಜಯಕೃಪಾದ ರಘುವೀರ ಭಂಡಾರ್‌ಕಾರ್ ಸ್ಮರಣ ವೇದಿಕೆಯಲ್ಲಿ ಗುರುವಾರ ಸಂಜೆ ಡಾ. ಸದಾನಂದ ಗಣಪತಿ ರಾವ್ ಹೊಸ್ಕೋಟೆ (ಹೊಸ್ಕೋಟೆ ಡಾಕ್ಟರ್) ಇವರ ಶತ ಸಂವತ್ಸರದ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಿಸ್ವಾರ್ಥ ಸೇವೆಯಿಂದ ಮಾತ್ರ ತೃಪ್ತಿಯ ಜೀವನ ಪಡೆಯಲು ಸಾಧ್ಯ. ಈ ನೆಲೆಯಲ್ಲಿ ಶ್ರೀಮಂತ ಹಾಗೂ ಸುಸಂಸ್ಕೃತ ರಾವ್‌ಬಹದೂರ್ ವಂಶದಲ್ಲಿ ಜನಿಸಿದರೂ ಹಣದ ವ್ಯಾಮೋಹಕ್ಕೆ ಒಳಗಾಗದೇ ಜನಸೇವೆಯಲ್ಲಿಯೇ ದೇವರನ್ನು ಕಂಡುಕೊಂಡು ಇತಿಹಾಸ ಸೃಷ್ಠಿಸಿದ ಈ ಭಾಗದ ಪ್ರಸಿದ್ದ ವೈದ್ಯರಾಗಿದ್ದಾರೆ. ಲೌಕಿಕ ಆಸೆ ಆಮಿಷಗಳ ದಾಸರಾಗದ ಇವರು ’ವೈದ್ಯೋ ನಾರಾಯಣೋ ಹರಿಃ’ ಎಂಬ…
