ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶ ಸ್ವತಂತ್ರವಾಗುವಲ್ಲಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ, ಮಹಾತ್ಮರ ತ್ಯಾಗ, ಬಲಿದಾನ ಹಾಗೂ ಲಕ್ಷಾಂತರ ವೀರ ಯೋಧರ ಪರಾಕ್ರಮ ಹಾಗೂ ರಕ್ತತರ್ಪಣವನ್ನು ಸ್ಮರಿಸಿದಾಗ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಲಿದೆ ಎಂದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬೈಂದೂರು ಶಾಸಕರ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಷ್ಟ್ರಧ್ವಜಾರೋಹಣಗೈದು ಮಾತನಾಡಿದರು. ನಮ್ಮ ವೀರ ಯೋಧರು ಜೀವದ ಹಂಗುತೊರೆದು ದೇಶ ರಕ್ಷಣೆ ಮಾಡಿದ ಪರಿಣಾಮ ಇಂದು ನಾವೆಲ್ಲರೂ ಕ್ಷೇಮವಾಗಿರಲು ಸಾಧ್ಯವಾಗಿದೆ. ಈ ನೆಲೆಯಲ್ಲಿ ನಾವೆಲ್ಲರೂ ಒಂದಾಗಿ ಪ್ರತಿದಿನವೂ ಯೋಧರನ್ನು ಸ್ಮರಿಸೋಣ. ನೂರಾರು ವರ್ಷಗಳಿಂದ ಎಲ್ಲಾ ಜಾತಿ, ಮತ, ಧರ್ಮದ ಜನರು ಒಂದಾಗಿ ಸೌಹಾರ್ದ ಹಾಗೂ ಸಾಮರಸ್ಯದಿಂದ ಬಾಳುತ್ತಿರುವ ನಮ್ಮ ಪರಿಸರವನ್ನು ಸಾಮಾಜಿಕ ಕಾಳಜಿ ಮೂಡಿಸುವ ಕೇಂದ್ರಗಳಾಗಿ ಪರಿವರ್ತಿಸೋಣ ಎಂಬ ಸಂದೇಶ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಕಾರ್ಯದರ್ಶಿ ನಾಗರಾಜ ಗಾಣಿಗ ಬಂಕೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಒ. ಆರ್. ಪ್ರಕಾಶ್, ಬೈಂದೂರು, ಯಡ್ತರೆ,…
Author: ನ್ಯೂಸ್ ಬ್ಯೂರೋ
ಶ್ರೇಯಾಂಕ್ ಎಸ್. ರಾನಡೆ | ಕುಂದಾಪ್ರ ಡಾಟ್ ಕಾಂ ಲೇಖನ. ಭಾರತ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು? ಈ ಪ್ರಶ್ನೆಯನ್ನು ನಿಮ್ಮ ಆಪ್ತರ, ಸಹೋದ್ಯೋಗಿಗಳ ಹಾಗೂ ಯಾವುದೇ ವಿದ್ಯಾರ್ಥಿಗಳ ಬಳಿ ಕೇಳಿ ನೋಡಿ. ಅದಕ್ಕೆ ನಿಮಗೆ ಸಿಗುವ ಉತ್ತರ ಗಾಂಧೀಜಿ ಕೇಂದ್ರಿತವಾಗಿರುತ್ತದೆ. ಖಂಡಿತವಾಗಿಯೂ ಸ್ವಾತಂತ್ರ್ಯ ಚಳುವಳಿಯ ಕೊನೆಯ ಘಟ್ಟದಲ್ಲಿ 1915-1947 ಗಾಂಧೀಜಿಯ ಪಾಲು ಬಹುಮುಖ್ಯವಾದದ್ದು. ಆದರೆ ಈ ದೇಶದ ಜನರ ಆಸ್ಥೆ, ಗಾಂಧೀಜಿಯ ಅಹಿಂಸಾ ಸತ್ಯಾಗ್ರಹ ಮಾತ್ರವೇ ದಪ್ಪ ಚರ್ಮದ ಬ್ರಿಟಿಷರ ಸೊಕ್ಕು ಮುರಿಯಲಿಲ್ಲ. ಅನೇಕ ಕ್ರಾಂತಿಕಾರಿಗಳು, ಸಣ್ಣ-ಪುಟ್ಟ ಹಳ್ಳಿ, ಪ್ರಾಂತ್ಯ-ಪ್ರದೇಶಗಳಲ್ಲಿ ರೈತ, ಬುಡಕಟ್ಟು ಹೀಗೆ ಅಸಂಖ್ಯಾತ ಜನರು ಆಗಾಗ್ಗೆ ಇಂಗ್ಲೀಷರ ಅಹಂಕಾರಕ್ಕೆ ಪೆಟ್ಟುಕೊಟ್ಟರೆ; ಹೊರಗಿನಿಂದ ನೇರವಾಗಿ ಹಾಗೂ ಒಳಗಿನಿಂದ ಪರೋಕ್ಷವಾಗಿ ಬ್ರಿಟಿಷರ ಸೊಕ್ಕನ್ನು, ಅವರ ಬೃಹತ್ ವಸಾಹತು ಸಾಮ್ರಾಜ್ಯದ ಅಸ್ಮಿತೆಯನ್ನೇ ಕಂಪಿಸುವಂತೆ ಮಾಡಿದ್ದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಹೊರಟಿದ್ದು ಸುಭಾಷ್ ಚಂದ್ರ ಬೋಸ್ರ ಇಂಡಿಯನ್ ನ್ಯಾಷನಲ್ ಆರ್ಮಿ. ಆದರೆ ಐ.ಎನ್.ಎ ಸಾಗಿದ ಹಾದಿಯ ಪ್ರೇರಣೆ ಭಾರತದ ಉದ್ದಗಲಕ್ಕೂ ವ್ಯಾಪಿಸಿತ್ತು. ಶಾಂತಿಯಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ರಹ್ಮಾವರ: ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಪತ್ರಕರ್ತರ ವಿವಿಧ ಜಿಲ್ಲೆಯ ಪತ್ರಕರ್ತರ ಬಗ್ಗೆ ತಿಳಿದುಕೊಂಡಿದ್ದೇನೆ. ಆದರೆ ಉಡುಪಿ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕಾರ‍್ಯ ನಿರ್ವಹಿಸುವ ಪತ್ರಕರ್ತ ಹೆಚ್ಚೇ ಇದ್ದಾರೆ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಬ್ರಹ್ಮಾವರದ ವಾರಂಬಳ್ಳಿ ಗ್ರಾ.ಪಂ. ಆವರಣದಲ್ಲಿ ಸೋಮವಾರ ಉದ್ಘಾಟನೆಗೊಂಡ ಬ್ರಹ್ಮಾವರ ಪ್ರೆಸ್ ಕ್ಲಬ್ ನ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಾವರ ಪ್ರೆಸ್ ಕ್ಲಬ್‌ಗೆ ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಜಾಗವನ್ನು ಹಾಗೂ ಬೇಕಾಗುವ ಎಲ್ಲ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸುವುದಾಗಿ ಹೇಳಿದರು. ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಾತನಾಡಿ, ಇಂದು ಎಲ್ಲರು ಪತ್ರಿಕೆಯನ್ನು ಅವಲಂಭಿರಾಗಿರುವ ಕಾಲ. ಜನಮಾನಸಕ್ಕೆ ಹತ್ತಿರವಾಗಿ ಸಮಾಜದ ಒಳಿತನ್ನು ಪತ್ರಿಕೆ ಕೊಡುತ್ತಿದೆ ಎಂದರು. ಬ್ರಹ್ಮಾವರ ಪ್ರೆಸ್ ಕ್ಲಬ್‌ನ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಹಿತ್ಯವು ಮೊದಲಾಗಿ ಮಾನವೀಯ ಮತ್ತು ಸಾಮಾಜಿಕ ನೆಲೆಗಳನ್ನು ತನ್ನ ರಚನೆಯಲ್ಲಿ ಹೆಚ್ಚೆಚ್ಚು ವ್ಯಕ್ತಪಡಿಸಬೇಕು. ಎಂದು ಡಾ ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶಾಂತಿ ಕೆ.ಅಪ್ಪಣ್ಣ ಅವರು ಅಭಿಪ್ರಾಯಪಟ್ಟರು. ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಸಾಹಿತ್ಯ ಮತ್ತು ಸಾಹಿತಿ ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ ಸಮಾಜದ ಮಾನವೀಯ ನೆಲೆಗಳಿಗೆ ಸ್ಪಂದಿಸುವ ಹೃದಯವಂತಿಕೆ ಸಾಧ್ಯವಾಗಿಸಿಕೊಳ್ಳಬೇಕು. ತನ್ನ ಮಿತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆಯಬೇಕು. ನಿರ್ಧಿಷ್ಠವಾದ ನಿರ್ಧಾರಗಳಿಗೆ ಜೋತುಬೀಳದೆ ಸೃಜನಶೀಲತೆಗೆ ತನ್ನ ಬರವಣಿಗೆಯಲ್ಲಿ ಪ್ರಾಮುಖ್ಯತೆಯನ್ನು ನೀಡಬೇಕು. ಬರವಣಿಗೆ ಸ್ವಭಾವವಾಗಿದೆ. ಅದನ್ನು ಕರಗತ ಮಾಡಿಕೊಳ್ಳಬೇಕಾದರೆ ನಮ್ಮ ಒಳಗಣ್ಣನ್ನು ತೆರೆದು ನೋಡಬೇಕು. ಪ್ರೋತ್ಸಾಹಿಸಬೇಕು ಪೋಷಿಸಬೇಕು. ಹಾಗೆಯೇ ಈ ಪ್ರಶಸ್ತಿಯು ನನ್ನ ಬರವಣಿಗೆಯ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಹೆಚ್.ಶಾಂತಾರಾಮ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯವನ್ನು ಓದುವಂತಹ ಪ್ರವೃತ್ತಿ ಬೆಳೆದುಬರಬೇಕು. ನಮ್ಮ ವಿದ್ಯಾಸಂಸ್ಥೆಗಳಲ್ಲಿ ಉತ್ತಮವಾದ ಗ್ರಂಥಾಲಯವಿದೆ. ಅದನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇರಳಕಟ್ಟೆ ಘಟಕದ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ, ಸಭೆಯನ್ನು ನೇರಳಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ನೇರಳಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಬಿಜ್ರಿ ರಾಜೀವ ಶೆಟ್ಟಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಆಜ್ರಿ ಮೂರ್ಕೈ ನಿಸರ್ಗ ಮಾರ್ಗವಾಗಿ ಪುನಃ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಹಿಂದಿರುಗಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಮಂದಿರ ಸಂಪರ್ಕ ಪ್ರಮುಖ್ ಪ್ರೇಮಾನಂದ ಶೆಟ್ಟಿ ಕಟ್ಕೇರಿ ಅವರು ದಿಕ್ಸೂಚಿ ಭಾಷಣ ಮಾಡಿದರು. ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡ ಅಧ್ಯಕ್ಷ ಶ್ರೀಧರ ಬಿಜೂರು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ನಾಗರಾಜ ಬಾಳಿಗ, ಜಗದೀಶ್ ನಾಯಕ್ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ನೇರಳಕಟ್ಟೆ ಘಟಕದ ಅಧ್ಯಕ್ಷ ನಾರಾಯಣ ಗಾಣಿಗ, ಭಜರಂಗದಳ ತಾಲೂಕು ಸಹ ಸಂಚಾಲಕ ಜಯರಾಮ್ ಎಮ್. ನೇರಳಕಟ್ಟೆ, ಗೌರವಾಧ್ಯಕ್ಷರಾದ ಕುಷ್ಠ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾನ್ಯವಾಗಿ ಬಹಳ ಶಿಸ್ತುಬದ್ಧರಾಗಿ ಜೀವನ ನಡೆಸುವವರು ಜನರಿಂದ ದೂರವಿರುತ್ತಾರೆ. ಪರಂಪರೆಯಲ್ಲಿ ಅಭಿಮಾನವುಳ್ಳವರು ಆಧುನಿಕತೆ ಯನ್ನು ನಿರಾಕರಿಸು ತ್ತಾರೆ ಹಾಗೂ ಸಮುದಾಯದಿಂದ ದೂರವಿರುತ್ತಾರೆ ಎನ್ನುವುದು ಪ್ರತೀತಿ. ಆದರೆ ಇದಕ್ಕೆ ಭಿನ್ನವಾಗಿರುವ ಡಾ| ಶಾಂತಾರಾಮ್ ಅವರು ಇವುಗಳನ್ನೆಲ್ಲ ಮೀರಿ ಜನರ ನಡುವೆಯೇ ಸಾಧನೆ ಮಾಡಿ ತೋರಿದವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಅವರು ಹೇಳಿದರು. ಅವರು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಸ್ವಪ್ನಶಿಲ್ಪಿ ಡಾ| ಎಚ್. ಶಾಂತಾರಾಮ್ ಅವರ ತೊಂಬತ್ತನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆಯುವ 3 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನ ಎನ್ನುವುದು ಪುಸ್ತಕದ ಮೂಲಕ, ರಂಗದ ಮೂಲಕ ಹಾಗೂ ರಂಗದ ಹೊರಗಡೆ ಹೀಗೆ ಮೂರು ನೆಲೆಗಳಲ್ಲಿ ದೊರೆಯುವಂತಹದು. ಈ ಮೂರು ನೆಲೆಗಳಲ್ಲಿ ಜ್ಞಾನ ಸಂಪಾ ದನೆ ಮಾಡದೇ ಹೋದಲ್ಲಿ ನಮ್ಮ ಶಿಕ್ಷಣ ಎನ್ನುವುದು ಪದವಿಗಳನ್ನು ಗಳಿಸುವುದಕ್ಕೆ ಮಾತ್ರ ಸೀಮಿತ ವಾಗುತ್ತದೆ ಎನ್ನುವುದನ್ನು ನಂಬಿಕೊಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಭಟ್ಕಳ: ಫ್ಯಾನ್ ತುಂಡಾದ ಪರಿಣಾಮ, ಮುಂದಕ್ಕೆ ಚಲಿಸಲಾಗದ ದೋಣಿ ಸಮುದ್ರದಲ್ಲೇ ಮುಳುಗುತ್ತ ತೇಲುತ್ತ ಬಂದು ರಾತ್ರಿ ನೆಸ್ತಾರ್ ಸಮುದ್ರ ತೀರದ ಮರಳಿನಲ್ಲಿ ಸಿಲುಕಿ ಹಾಕಿಕೊಂಡಿದ್ದ ಮೀನುಗಾರಿಕಾ ದೋಣಿಯೊಂದನ್ನು ಕ್ರೇನ್ ಸಹಾಯದಿಂದ ಮೇಲೆತ್ತಲಾಗಿದ್ದು, ದೋಣಿಯಲ್ಲಿದ್ದ ೩೦ಕ್ಕೂ ಹೆಚ್ಚು ಮೀನುಗಾರರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಕುಂದಾಪುರದ ಮರವಂತೆಯ ರಾಮ ಖಾರ್ವಿ ಹಾಗೂ ಪ್ರಭಾಕರ ಖಾರ್ವಿ ಅವರಿಗೆ ಸೇರಿದ ‘ಯಕ್ಷೇಶ್ವರಿ’ ಹೆಸರಿನ ಈ ‘ದೋಣಿಯು ಭಟ್ಕಳದ ಬಂದರಿನಿಂದ ಶುಕ್ರವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿತ್ತು. ತೀರದಿಂದ ಸುಮಾರು ಒಂದೂವರೆ ಕಿ. ಮೀ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ದೋಣಿಯ ಫ್ಯಾನ್ ಇದ್ದಕ್ಕಿದ್ದಂತೆ ತುಂಡಾಗಿದೆ. ಚಲಿಸಲಾಗದ ದೋಣಿ ನಿಧಾನವಾಗಿ ಮುಳುಗಲು ಆರಂಭಿಸಿದೆ. ಮೀನುಗಾರಿಕೆ ನಡೆಸುತ್ತಿದ್ದ ಇತರ ದೋಣಿಗಳ ಮೂಲಕ ಹಗ್ಗವನ್ನು ಬಳಸಿ ಮುಳುಗುತ್ತಿದ್ದ ದೋಣಿಯನ್ನು ಎಳೆಯಲು ಮೀನುಗಾರರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ. ಇದೇ ಸಂದರ್ಭದಲ್ಲಿ ಜೋರಾಗಿ ಗಾಳಿ, ಮಳೆ ಬಂದಿದ್ದರಿಂದ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಿ ಮುಳುಗುತ್ತ ತೇಲುತ್ತಾ ಬಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಸಮಾಜದ ಋಣವನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಿಲ್ಲ ಆದರೆ ಅವಕಾಶ ಸಿಕ್ಕಾಗಲೆಲ್ಲಾ ಪ್ರಾಮಾಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧ್ಯವಾದಷ್ಟು ಸಮಾಜಮುಖಿ ಕಾರ್ಯವನ್ನು ಮಾಡಲು ಸಾಧ್ಯವಿದೆ ಎಂದು ವಿಜಯಾ ಬ್ಯಾಂಕ್ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಹೆಚ್. ವಸಂತ ಹೆಗ್ಡೆ ಹೇಳಿದರು. ಅವರು ಇಲ್ಲಿನ ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಬೈಂದೂರು ರೋಟರಿ ಕ್ಲಬ್ ಪ್ರಾಯೋಜಕತ್ವದಲ್ಲಿ ಜರುಗಿದ ಇಂಟರ‍್ಯಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದರು. ಬದುಕಿನಲ್ಲಿ ಪ್ರಾಮಾಣಿಕತೆ, ವಿಧೇಯತೆ, ಸತ್ಯ ಹಾಗೂ ಸ್ಪಚ್ಚತೆಯನ್ನು ಅಳವಡಿಸಿಕೊಳ್ಳಬೇಕು. ವಿದ್ಯಾವಂತರಾಗುವುದರ ಜೊತೆಗೆ ಪ್ರಜ್ಞಾವಂತರಾಗುವುದು ಕೂಡ ಬಹುಮುಖ್ಯ. ಶಿಸ್ತು ಹಾಗೂ ಸಂಪ್ರದಾಯದೊಂದಿಗೆ ಸುಂದರ ಬದುಕು ರೂಪಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದೆ ಎಂದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಹೆಚ್. ಕೃಷ್ಣಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿ ನೂತನ ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷೆಗೆ ಪದಪ್ರದಾನ ನೆರವೇರಿಸಿ ಮಾತನಾಡಿ ಪಠ್ಯದ ಕಲಿಕೆಯ ಜೊತೆಗೆ ಬದುಕಿನ ಪಾಠವನ್ನು ಕಲಿಸುವುದೂ ಅಗತ್ಯವಾಗಿದೆ. ರೋಟರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಕ್ಷಾಬಂಧನವೆಂಬುದು ಅಣ್ಣ ತಂಗಿಯರ ಭ್ರಾತೃತ್ವದ ಭಾವನೆಯನ್ನು ಗಟ್ಟಿಗೊಳಿಸುವ ಹಬ್ಬ. ಆದರೆ ಇಲ್ಲೋಬ್ಬ ಆಸಾಮಿ ರಕ್ಷಾಬಂಧನಕ್ಕೆಂದು ಊರಿಗೆ ಬಂದು ತಂಗಿಯನ್ನೆ ಕಿಡ್ನಾಪ್ ಮಾಡಿ ಪರಾರಿಯಾಗಿದ್ದು ಸಂಬಂಧಗಳ ಅರ್ಥವನ್ನೇ ತಲೆ ಕೆಳಗೆ ಮಾಡಿದ್ದಾನೆ. ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು ಎಂಬಲ್ಲಿ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿ ಶುಕ್ರವಾರ ಬೆಳಿಗ್ಗೆಯಿಂದ ಕಾಣೆಯಾಗಿದ್ದು ಮಗಳನ್ನು ಹುಡುಕಿಕೊಡುವಂತೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕಟ್‌ಬೆಲ್ತೂರಿನಲ್ಲಿ ನೇಪಾಳ ಮೂಲದ ಭರತರಾಜ್ ಮತ್ತು ಸೋನಾ ದಂಪತಿಗಳು ತಮ್ಮ ಮಕ್ಕಳು ಹಾಗೂ ಸಂಬಂಧಿಗಳೊಂದಿಗೆ ಕೆಲವು ಸಮಯದಿಂದ ವಾಸವಾಗಿದ್ದಾರೆ. ರಕ್ಷಾಬಂಧನ ಹಬ್ಬಕ್ಕಾಗಿ ತಮಿಳುನಾಡಿನಿಂದ ಇಲ್ಲಿಗೆ ಬಂದಿದ್ದ ಭರತರಾಜ್ ಅವರ ಸ್ವಂತ ಅಣ್ಣನ ಮಗ ಬಿಕ್ರಮ್ ಮತ್ತು ಆತನ ಸ್ನೇಹಿತ ಸುನಿಲ್ ಇಬ್ಬರೂ ಮನೆಯಲ್ಲಿ ಹಬ್ಬವನ್ನು ಚನ್ನಾಗಿ ಆಚರಣೆ ಮಾಡಿದ್ದರು. ಶುಕ್ರವಾರ ಚಿಕ್ಕಪ್ಪನ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ತಮಿಳುನಾಡಿಗೆ ಕಿಡ್ನಾಪ್ ಮಾಡಿ ಕರೆದೊಯ್ದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ. ಶಾಲೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಟೇಶ್ವರ: ವಕ್ವಾಡಿ ಶಾಲೆಯ ಪೂರ್ವ ಪ್ರಾಥಮಿಕ ಪುಟಾಣಿಗಳಿಗಾಗಿ ’ಶ್ರೀ ಕೃಷ್ಣ ಜನ್ಮಾಷ್ಟಮಿ’ಯನ್ನು ವಿಶೇಷವಾಗಿ ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳೆಲ್ಲರೂ ರಾಧಾಕೃಷ್ಣ ಉಡುಪು ಧರಿಸಿ ವಿಜೃಂಭಿಸುತ್ತಿದ್ದರು. ಕೃಷ್ಣಂ ವಂದೇ ಜಗದ್ಗುರು ಎಂಬ ಧ್ಯೇಯ ವಾಕ್ಯದಡಿಯಲ್ಲಿ ಬಾಲ ಕೃಷ್ಣನ ತೊಟ್ಟಿಲು ತೂಗುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಗಿತು. ಅಷ್ಟಮಿಯ ವಿಶೇಷ ತಿಂಡಿಗಳೆಲ್ಲವನ್ನು ಜೋಡಿಸುವುದರ ಜೊತೆಗೆ ವಿವಿಧ ಭಂಗಿಯ ಕೃಷ್ಣನ ಚಿತ್ರಗಳನ್ನು ಜೋಡಿಸಲಾಗಿತ್ತು. ಬಾಲಕೃಷ್ಣನ ಹೆಜ್ಜೆ ಗುರುತು ಮತ್ತು ರಂಗೋಲಿಯ ಚಿತ್ತಾರಗಳನ್ನು ಬಿಡಿಸುವುದರ ಜೊತೆಗೆ ಈ ದಿನದ ವಿಶೇಷವಾಗಿ ಪುಟಾಣಿಗಳು ಮುರಾರಿಯ ಪ್ರಿಯವಾದ ಗೋವುಗಳಿಗೆ ಆರತಿ ಬೆಳಗಿ, ತಿಲಕವಿರಿಸಿ, ಅಕ್ಕಿ ಮತ್ತು ಹಣ್ಣುಗಳನ್ನು ನೀಡಿ ಗೋಪೂಜೆಯನ್ನು ಮಾಡಿದರು. ನಂತರ ಮೊಸರುಕುಡಿಕೆ, ಕೊಳಲು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕೊನೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಕೆಲವು ಮಾಧವಪ್ರಿಯ ಹಾಡುಗಳನ್ನು ಶಿಕ್ಷಕಿಯರು ಪುಟಾಣಿಗಳ ಜೊತೆ ಸೇರಿ ಹಾಡಿದರು. ಕೆಲವು ಪುಟಾಣಿಗಳು ರಾಧಾ ಕೃಷ್ಣ ಹಾಡುಗಳಿಗೆ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕಿ ಅನುಪಮ.ಎಸ್.ಶೆಟ್ಟಿ…
