ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮ ಸರ್ಕಾರವಾದ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯಗಳ ಸೃಷ್ಟಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಸಮಗ್ರ ಅಭಿವೃದ್ಧಿಯ ಗುರಿ ಸಾಧಿಸಬೇಕು. ತಮ್ಮ ಕಾರ್ಯಸೂಚಿಯಲ್ಲಿ ಮಹಿಳೆಯರ, ಮಕ್ಕಳ ಮತ್ತು ಹಿರಿಯ ನಾಗರಿಕರ ರಕ್ಷಣೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಹೇಳಿದರು. ಅವರು ಇಲಾಖೆಯಿಂದ ಯೂಟ್ಯೂಬ್ ಮೂಲಕ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಶಿಕ್ಷಣ ಕಾರ್ಯಪಡೆಗಳ ಸದಸ್ಯರ ಒಂದು ದಿನದ ರಾಜ್ಯವ್ಯಾಪಿ ತರಬೇತಿಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶ ಇಂದು ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮಾಡುತ್ತಿರುವಾಗ ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸು ನನಸು ಮಾಡುವ ಹೊಣೆ ನಮ್ಮ ಮೇಲಿದೆ. ಅದೇ ವೇಳೆ ಕೋವಿಡ್ ಸೋಂಕಿನ ಕಾರಣ ಮಕ್ಕಳು, ಮಹಿಳೆಯರು, ಹಿರಿಯರು ವಿವಿಧ ಸಂಕಷ್ಟ ಎದುರಿಸುತ್ತಿದ್ದಾರೆ. ಶಾಲೆ ತ್ಯಜಿಸಿದ ಮಕ್ಕಳನ್ನು ಶಾಲೆಗೆ ತರುವ, ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ತಡೆಯುವ, ಹಿರಿಯ ನಾಗರಿಕರಿಗೆ ಸಾಂತ್ವನ ನೀಡುವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸಕ್ತ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. 50 ರೂ. ಹೆಚ್ಚುವರಿ ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಸೆಪ್ಟಂಬರ್ 15 ಕೊನೆಯ ದಿನವಾಗಿದೆ. ಅರ್ಜಿ ನಮೂನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿಗೆ ಮೂವತ್ತು ರೂ. ಮನಿಯಾರ್ಡರ್ ಮಾಡಿದರೆ ಅಂಚೆ ಮೂಲಕ ಅಥವಾ ವೆಬ್ಸೈಟ್ www.kasapa.in ಮೂಲಕ ಸಹ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು ದೂರವಾಣಿ ಸಂಖ್ಯೆ: 080-26623584 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಶ್ಚಿಮ ವಾಹಿನಿ ಹೆಸರಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲ್ಪಡುತ್ತಿರುವ ವೆಂಟೆಡ್ ಡ್ಯಾಮ್ ಕಾಮಗಾರಿಗಳು ಕಳಪೆಯಾಗಿದ್ದು ಮತ್ತು ಈ ಕಾಮಗಾರಿಗಳಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಹಣ ದುರುಪಯೋಗ ಆಗುತ್ತಿದೆ. ಕಳಪೆ ಕಾಮಗಾರಿಗಳ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮ ವಾಹಿನಿ ಯೋಜನೆಯ ಅಡಿಯಲ್ಲಿ 1400ಕ್ಕೂ ಹೆಚ್ಚು ವೆಂಟೆಡ್ ಡ್ಯಾಮ್ ಗಳು ಮಂಜೂರಾಗಿದ್ದು, ಉಡುಪಿ ಜಿಲ್ಲೆಯಲ್ಲೂ ಈ ಯೋಜಯ ಅಡಿ ಹಲವು ವೆಂಟೆಡ್ ಡ್ಯಾಂ ನಿರ್ಮಾಣವಾಗಿದ್ದು ಇನ್ನು ಕೆಲವು ನಿರ್ಮಾಣದ ಹಂತದಲ್ಲಿವೆ, ಈ ಡ್ಯಾಂಗಳು ರೈತರ ಬೇಡಿಕೆ ಹಾಗೂ ಆಗ್ರಹಕ್ಕೆ ನಿರ್ಮಾಣವಾಗದೆ ಜನಪ್ರತಿನಿಧಿಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಮರ್ಜಿಗೆ ಒಳಗಾಗಿ ಅವರಿಗೆ ಲಾಭವಾಗುವಲ್ಲಿ ಡ್ಯಾಂ ಮಂಜೂರು ಮಾಡುತ್ತಿದ್ದಾರೆ ಹಾಗೂ ಈ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಅನುಪಯುಕ್ತ ಕಾಮಗಾರಿಗಳಾಗಿವೆ ಹಾಗೂ ಕಾಮಗಾರಿಯ ಅಂದಾಜು ಮೊತ್ತ ಕಾಮಗಾರಿ ಮುಕ್ತಾಯವಾಗುವಾಗ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಜುಲೈ 5ರಿಂದ ರಿಂದ 19ರವರೆಗೆ ಜಾರಿಯಲ್ಲಿರುವಂತೆ ಅನ್’ಲಾಕ್ 3.0 ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹೆಗಳನ್ನು ಗಮನಿಸಿ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮೂರನೇ ಅನ್ ಲಾಕ್ ಘೋಷಣೆ ಮಾಡಿದರು. ಸರ್ಕಾರಿ, ಖಾಸಗಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು, ಮಾಲ್ ಗಳಿಗೆ ಅನುಮತಿ, ಮೆಟ್ರೋ, ಕಾರ್ಮಿಕ ಕಾರ್ಯಗಳಿಗೆ ಅವಕಾಶ ನೀಡಲಾಗಿದೆ ಎಂದರು. ಯಾವುದಕ್ಕೆಲ್ಲ ವಿನಾಯಿತಿ ನೀಡಲಾಗಿದೆ? 1. ಸರ್ಕಾರಿ/ಖಾಸಗಿ ಕಛೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. 2. ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. 3. ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಶೇ.100ರಷ್ಟು ಪ್ರಮಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ. 4. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. 5. ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ…
ಅಡುಗೆ ಮಾಡುವಾಗ, ಇತರರು ಊಟಕ್ಕೆ ಬಂದಾಗ ಇಂಥಾ ಜಿರಳೆಗಳನ್ನು ಅಸಹ್ಯಕರ ಎನಿಸುವುದುಂಟು. ಬಹುಪಾಲು ಜನರು ಜಿರಳೆ ಎಂಬರೆ ಮುಖ ತಿರುಗಿಸುವುದನ್ನೂ ನೋಡಿದ್ದೇವೆ. ಜಿರಲೆ ಬರಬಾರದೆಂದು ನೀವು ಎಷ್ಟೇ ಕಷ್ಟಪಟ್ಟು ನಿತ್ಯ ಸ್ವಚ್ಛಗೊಳಿಸಿದರೂ, ಯಾವೆಲ್ಲಾ ಔಷಧಗಳನ್ನು ಸಿಂಪಡಿಸಿದರೂ ಕೇವಲ ತಾತ್ಕಾಲಿಕವಷ್ಟೇ ಆಗಿರುತ್ತದೆ, ಹಾಗೂ ಹೀಗೂ ಮತ್ತೆ ಅಡುಗೆ ಮನೆ ಸೇರಿಸುತ್ತವೆ. ಅಷ್ಟೇ ಅಲ್ಲದೇ ಇದು ಅರೋಗ್ಯಕ್ಕೆ ಸಾಕಷ್ಟು ಹಾನಿಕಾರಕ ಮತ್ತು ಹಲವಾರು ಕಾಯಲೆಗಳಿಗೆ ಸಹ ಕಾರಣವಾಗಬಹುದು. ಈ ಸಮಸ್ಯೆಗಳಿಗೆ ಹೆಚ್ಚಿನ ಖರ್ಚಿಲ್ಲದೆ, ಮನೆಯಲ್ಲೇ ಇರುವ ಮದ್ದುಗಳ ಮೂಲಕ ಜಿರಳೆ ಕಾಟವನ್ನು ನಿಧಾನವಾಗಿ ನಿವಾರಿಸಬಹುದು. ಬಿಸಿನೀರು, ನಿಂಬೆ ಮತ್ತು ಅಡಿಗೆ ಸೋಡಾ ಒಂದು ಚಮಚ ನಿಂಬೆ ರಸ, 2 ಚಮಚ ಬೇಕಿಂಗ್ ಸೋಡಾವನ್ನು 1 ಲೀಟರ್ ಬಿಸಿನೀರಿನಲ್ಲಿ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಸಿಂಕ್ ಅಥವಾ ನೀರು ಹೋಗುವ ಸ್ಥಳಗಳಲ್ಲಿ ಸುರಿಯಿರಿ ಅಥವಾ ಸಿಂಕ್ ಹಾಗೂ ಅಡುಗೆ ಮನೆಯ ಚಪ್ಪಡಿಗಳನ್ನು ಇದನ್ನು ಹಾಕಿ ತೊಳೆಯಿರಿ. ಇದು ಪರಿಣಾಮಕಾರಿಯಾಗಿ ಅಡುಗೆಮನೆಯಲ್ಲಿನ ಜಿರಳೆಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸುತ್ತದೆ. ಬಿಸಿನೀರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹಿನ್ನಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಮಕ್ಕಳನ್ನು ಕೋವಿಡ್ 3ನೇ ಅಲೆಯಿಂದ ರಕ್ಷಿಸುವ ಕುರಿತಂತೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮೆಡಿಕಲ್ ಎಕ್ಸ್ಪರ್ಟ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳನ್ನು ಕೋವಿಡ್ 3 ನೇ ಅಲೆಯಿಂದ ರಕ್ಷಿಸುವ ಕುರಿತಂತೆ ಈಗಾಗಲೇ ಭಾರತೀಯ ಮಕ್ಕಳ ವೈದ್ಯರ ಸಂಘವು ಸಿದ್ದಪಡಿಸಿರುವ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲು ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮಕ್ಕಳ ಚಿಕಿತ್ಸೆಗಾಗಿ ಕೆಎಂಸಿ ಯಲ್ಲಿ 40 ಐಸಿಯು ಬೆಡ್ ಗಳು ಮತ್ತು ಜಿಲ್ಲಾಸ್ಪತ್ರೆ ಮತ್ತು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 60 ಬೆಡ್ ಗಳನ್ನು ಸಿದ್ದಪಡಿಸುವಂತೆ ತಿಳಿಸಿದರು. ಮಕ್ಕಳಿಗೆ ಕೋವಿಡ್ ಚಿಕಿತ್ಸೆ ನೀಡುವ ಕುರಿತಂತೆ ಜಿಲ್ಲೆಯ ಸರ್ಕಾರಿ ಮಕ್ಕಳ ವೈದ್ಯರೊಂದಿಗೆ , ಎಲ್ಲಾ ಖಾಸಗಿ ಆಸ್ಪತ್ರೆಗಳ ಮಕ್ಕಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಏಳಜಿತ ಶಾಲೆಯ ಒಟ್ಟು 139 ವಿದ್ಯಾರ್ಥಿಗಳಿಗೆ ಶ್ರೀ ರಾಮಕೃಷ್ಣ ಕುಟೀರದಿಂದ ನೋಟ್ ಬುಕ್ ಉಚಿತವಾಗಿ ವಿತರಿಸಲಾಯಿತು. ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಗೌರವ ಕಾರ್ಯದರ್ಶಿ ಹಾಗೂ ಏಳಜಿತ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಜ್ಯೋತಿ ಎಚ್.ಎಸ್ ದೀಪ ಬೆಳಗಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುವ ಮೂಲಕ ಗುರುವಾರ ಚಾಲನೆ ನೀಡಿದರು. ಪ್ರತಿ ವಿದ್ಯಾರ್ಥಿಗಳಿಗೂ ತಲಾ ಒಂದು ಸೆಟ್ ನೋಟ್ ಬುಕ್ಗಳನ್ನು ವಿತರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕಾರವಾರ-ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್ ಫಾಸ್ಟ್ ರೈಲಿಗೆ ‘ಪಂಚ ಗಂಗಾ ಎಕ್ಸ್ಪ್ರೆಸ್’ ಎಂಬ ಹೆಸರನ್ನು ಕೆಂದ್ರ ರೈಲ್ವೆ ಸಚಿವಾಲಯ ಮರುನಾಮಕರಣ ಮಾಡಿ ಆದೇಶಿಸಿದೆ. ಉಡುಪಿ ಜಿಲ್ಲೆಯ ಐದು ಪ್ರಮುಖ ಪುಣ್ಯ ನದಿಗಳು ಸಂಗಮಿಸಿ ಸೃಷ್ಟಿಯಾಗುವ ಪ್ರಾಕೃತಿಕ ಅಚ್ಚರಿ ಪಂಚಗಂಗಾವಳಿ ನದಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಯ ಹೆಸರು ಸೇರಿಸಿ ಜನರ ಅಪೇಕ್ಷೆಯಂತೆ ಪಂಚಗಂಗಾ ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ. ಈ ಹೆಸರನ್ನು ಬೆಂಗಳೂರು ಕಾರವಾರ (16595/16596) ರೈಲಿಗೆ ಪಂಚಗಂಗಾ ಹೆಸರು ಇಡುವಂತೆ ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹಾಗೂ ಸಾರ್ವಜನಿಕರು ಸಂಸದರಿಗೆ ಮನವಿ ಮಾಡಿದ್ದು ಅದರಂತೆ ಸಂಸದೆ ಶೋಭಾ ಕರಂದ್ಲಾಜೆ ಅವರು ಹಿಂದಿನ ರೈಲ್ವೆ ರಾಜ್ಯ ಸಚಿವರಾದ ಸುರೇಶ್ ಅಂಗಡಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಟೈಮ್ಸ್ ಆಫ್ ಇಂಡಿಯಾ ನಡೆಸಿದ 2021ರ ಟೈಮ್ಸ್ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ರ್ಯಾಂಕಿಂಗ್ ಸರ್ವೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ರಾಷ್ಟ್ರಮಟ್ಟದಲ್ಲಿ 147ನೇ ರ್ಯಾಂಕ್ ಪಡೆದಿದೆ. ರಾಷ್ಟ್ರಮಟ್ಟದಲ್ಲಿ ನಡೆದ ಈ ಪ್ರತಿಷ್ಠಿತ ಸಮೀಕ್ಷೆಯಲ್ಲಿ ಎಐಇಟಿ ಈ ಅತ್ಯುನ್ನತ ಸ್ಥಾನ ಪಡೆದಿದೆ. ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅದ್ಭುತ ಸಾಧ್ಯತೆಗಳನ್ನು ಒದಗಿಸುತ್ತಿರುವ ಈ ಭಾಗದ ಪ್ರತಿಷ್ಠಿತ ಕಾಲೇಜುಗಳಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಒಂದಾಗಿದೆ. ದೇಶದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳನ್ನು ಗುರುತಿಸಿ ರ್ಯಾಂಕಿಂಗ್ ನೀಡುವುದು ಈ ಸಮೀಕ್ಷೆಯ ಆಶಯ. ಕಾಲೇಜಿನ ಮೂಲಸೌಕರ್ಯ, ಕುಶಲ ಉಪನ್ಯಾಸಕ ವೃಂದ, ಪಠ್ಯಕ್ರಮ, ಔದ್ಯೋಗಿಕ ಕ್ಷೇತ್ರದೊಡನೆಯ ಸಂಬಂಧ, ಬೋಧನ ಕ್ರಮ, ಸಂಶೋಧನೆಯ ವೈವಿಧ್ಯಮಯ ಸಾಧ್ಯತೆಗಳು, ಜಾಗತಿಕ ಮಟ್ಟದ ಅವಕಾಶಗಳು, ಉದ್ಯೋಗಾವಕಾಶಗಳು ಮತ್ತು ಕಾಲೇಜಿನ ಒಟ್ಟು ಬ್ರ್ಯಾಂಡ್ ಮೌಲ್ಯ ಈ ಸಮೀಕ್ಷೆಯ ವಿವಿಧ ಮಾನದಂಡಗಳಾಗಿದ್ದವು. ಈ ಮಾನದಂಡಗಳ ಆಧಾರದ ಮೇಲೆ ಅತ್ಯುತ್ತಮ ಕಾಲೇಜಿನ ಸೂಚ್ಯಂಕವನ್ನು ನೀಡಲಾಗಿದೆ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಶಿಕ್ಷಣಕ್ಕೆ ಅರಿವು ಮತ್ತು ಅಕ್ಷರವೇ ಮೂಲ, ಚೋಮನ ದುಡಿಯಂತಹ ತಳ ಸಮುದಾಯದ ಬದುಕಿನ ಕುರಿತು ಕೃತಿ ರಚಿಸಿ ಚಿಂತಕನೊಬ್ಬನ ಚಿಂತನೆಗೆ ದಾರಿ ತೋರಿದ ಕಾರಂತರ ನೆನಪಿನಲ್ಲಿರುವ ಈ ಕಾರಂತ ಥೀಮ್ ಪಾರ್ಕ್ ಸಮಾಜಕ್ಕೆ ಕಾರಂತರ ಚಿಂತನೆಗಳನ್ನು, ಅವರ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಸ್ಥಳವಾಗಿದ್ದು, ಇನ್ನಷ್ಟೂ ಅಭಿವೃದ್ಧಿಗೊಂಡು ಸಾಹಿತ್ಯ ಪ್ರೇಮಿಗಳನ್ನು ಸೆಳೆಯುವಂತಾಗಲಿ ಎಂದು ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ್ ಮೂರ್ತಿ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ಗೆ ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿಗೆ ಮಾಲರ್ಪಣೆ ಮಾಡಿ ರಂಗ ಮಂದಿರ ಆರ್ಟ್ ಗ್ಯಾಲರಿ, ಅಂಗನವಾಡಿ, ಗ್ರಂಥಾಲಯ ವೀಕ್ಷಿಸಿದರು. ಗ್ರಂಥಾಲಯದಲ್ಲಿನ ಪುಸ್ತಕಗಳ ಶೇಖರಣೆ ವ್ಯವಸ್ಥೆ ಶ್ಲಾಘಿಸಿ, ತಾವು ಒಂದಿಷ್ಟೂ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪಿ.ಡಿ.ಓ ಶೈಲಾ ಎಸ್ ಪೂಜಾರಿ, ಕೋಟ ಕಂದಾಯ ನಿರೀಕ್ಷಕ ರಾಜು, ಗ್ರಾಮ…
