ಕುಂದಾಪ್ರ ಡಾಟ್ ಕಾಂ ಸುದ್ದಿ. ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಆಶ್ರಯದಲ್ಲಿ ರೋಟರಿ ಜಿಲ್ಲೆ ೩೧೮೨ ಇದರ ವಲಯ ೧ರ ರೋಟರಿ ಸಾಂಸ್ಕೃತಿಕ ವೈಭವ-೨೦೧೭ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ರೋಟರಿ ವಲಯದ ೭ ಕ್ಲಬ್ಗಳು ಭಾಗವಹಿಸಿ ವಿಜೃಂಭಣೆಯಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸಾಂಸ್ಕೃತಿಕ ವೈಭವವನ್ನು ರೋಟರಿ ವಲಯ೧ರ ಮಾಜಿ ಅಸಿಸ್ಟೆಂಟ್ ಗವರ್ನರ್ ಗಣೇಶ ಶೆಟ್ಟಿ ಮೊಳಹಳ್ಳಿ ಉದ್ಘಾಟಿಸಿ, ರೋಟರಿ ಸದಸ್ಯರ ಭಾಂಧವ್ಯವೃದ್ಧಿಯ ದ್ರಷ್ಠಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಹತ್ವಪೂರ್ಣವೆನಿಸಿದೆ. ಪ್ರತಿಯೊಬ್ಬ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಂಭ್ರಮದಲ್ಲಿ ಮಿಂದೇಳುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ೧ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ.ಕಾಂಚನ್, ಜೋನಲ್ ಲೆಫ್ಟಿನೆಂಟ್ ಜಯಪ್ರಕಾಶ್ ಶೆಟ್ಟಿ, ಮನೋಜ್ ನಾಯರ್, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಕೆ. ನರಸಿಂಹ ಹೊಳ್ಳ, ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಅಧ್ಯಕ್ಷ ಅಜಿತ್ ಕೆ, ಕಾರ್ಯದರ್ಶಿ ಸಿ.ಹೆಚ್. ಗಣೇಶ್, ಕ್ಲಬ್ನ ಸಾಂಸ್ಕೃತಿಕ ಕಾರ್ಯದರ್ಶಿ ರಾಜಶೇಖರ ಹೆಗ್ಡೆ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ಕುಂದಾಪುರ ಮತ್ತು ಅಭಿಯೋಗ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮ ಕುಂದಾಪುರ ನ್ಯಾಯಾಲಯದ ಸಂಕೀರ್ಣದಲ್ಲಿ ಜರುಗಿತು. ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ, ಗೌರವಾನ್ವಿತ ಡಿ.ಪಿ ಕುಮಾರ ಸ್ವಾಮಿ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಭ್ರಷ್ಟಾಚಾರ ಎಂಬ ಮಹಾಪೀಡುಗಿನಲ್ಲಿ ಲಂಚ ಕೊಡುವುದು ಮತ್ತು ತೆಗೆದುಕೊಳ್ಳುವುದು ಮಾತ್ರ ಭ್ರಷ್ಟಾಚಾರವಲ್ಲ. ಭ್ರಷ್ಟಾಚಾರವನ್ನು ನೋಡಿ ಸುಮ್ಮನಿರುವುದು ಕೂಡಾ ಅತೀ ದೊಡ್ಡ ಭ್ರಷ್ಟಾಚಾರ. ಭ್ರಷ್ಟಾಚಾರದ ವಿರುದ್ಧದ ದ್ಯೇಯೋದ್ದೇಶಗಳನ್ನು ಪಾಲನೆ ಮಾಡಿಕೊಂಡು ಬರುವುದು ಇಂದಿನ ಯುವ ಸಮುದಾಯದ ಅಗತ್ಯದ ಕರ್ತವ್ಯ ಪಾಲನೆಗಳಲ್ಲಿ ಒಂದಾಗಿದೆ ಎಂದರು. ಕುಂದಾಪುರ ಬಾರ್ ಅಸೋಸಿಯೇಷನ್ ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇಶದ ಜನರಿಗೆ ದಿನ ಬೆಳಗಾದರೆ ಭ್ರಷ್ಟಾಚಾರದ ಬಗ್ಗೆ ಕೇಳಿ ಕೇಳಿ ಸಾಕಾಗಿದೆ, ಭ್ರಷ್ಟಾಚಾರ ಎನ್ನುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಾರ್ಕೂರು ರಂಗನಕೆರೆ ಹುಭಾಶಿಕ ಯುವ ಕೊರಗರ ವೇದಿಕೆ ಆಶ್ರಯದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಿರಿಜನ ಉಪಯೋಜನೆ ಪ್ರಾಯೋಜಿತ ಕಾರ್ಯಕ್ರಮದಡಿ ಕುಂಭಾಶಿ ಮಕ್ಕಳ ಮನೆಯಲ್ಲಿ ಸುಗಮ ಸಂಗೀತ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಎಸ್. ಶೆಟ್ಟಿ ಸಾಮಾಜಿಕವಾಗಿ ಮತ್ತುಶೈಕ್ಷಣಿಕವಾಗಿ ಹಿಂದುಳಿದಿರುವ ಕೊರಗ ಸಮುದಾಯದ ಮಕ್ಕಳಲ್ಲಿ ಎಲ್ಲರಂತೆ ಸುಪ್ತವಾಗಿರುವ ಪ್ರತಿಭೆ ಇದೆ. ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ದೊರೆತರೆ ಮಾತ್ರ ಅದು ಪ್ರಕಟಗೊಳ್ಳಲು ಸಾಧ್ಯ. ಸಂಘಟನೆಗಳು ಲಭ್ಯ ನೆರವು ಪಡೆದು ಅವಕಾಶ ಕಲ್ಪಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ವಾಣಿ ಅಡಿಗ ಇಂತಹ ಕಾರ್ಯಕ್ರಮಗಳನ್ನು ಆಗಾಗ ನಡೆಸುವ ಮೂಲಕ ಕೊರಗ ಮಕ್ಕಳ ಪ್ರತಿಭಾ ಪೋಷಣೆಗೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದರು. ಗ್ರಾಮ ಪಂಚಾಯತ್ ಸದಸ್ಯೆ ಸಾಲು, ಸಾಮಾಜಿಕ ಕಾರ್ಯಕರ್ತ ಕೊರ್ಗಿ ವಿಠಲ ಶೆಟ್ಟಿ, ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಪದವಿ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ಜೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೂರಕ್ಕೆ ಇಪ್ಪತ್ತು ಬಾಲಕರಲ್ಲಿ ಮಧುಮೇಹ. ಆರು ವರ್ಷದ ಬಾಲೆಯಲ್ಲೂ ಋತು ಚಕ್ರ ಬದಲು. ನೂರಕ್ಕೆ ನಾಲ್ಕು ಯುವತಿಯರ ಮೊಗದಲ್ಲಿ ಕೂದಲು. ಐವತ್ತು ವರ್ಷಕ್ಕೆ ನರ ದೌರ್ಬಲ್ಯ. ಶೇ.80ರಷ್ಟು ಯವಕರಲ್ಲಿ ಸಂತಾನೋತ್ಪತ್ತಿ ಕ್ಷೀಣ. ಇದಕ್ಕೆ ಕಾರಣವೇನು ಗೊತ್ತಾ? ಹಾಲಿನ ಉತ್ಪಾದನೆ ವಾಣಿಜ್ಯೀಕರಣ. ಬದಲಾದ ಅಹಾರ ಪದಾರ್ಥ. ಅತಿಯಾದ ರಾಸಾಯನಿಕ ಬಳಕೆ. ಸಹಜತೆ ಬದಲು ಕೃತಕತೆ! ಹೀಗೆ ಬದಲಾದ ಆಹಾರ ಪದಾರ್ಥಗಳಿಂದ ಏನೆಲ್ಲಾ ಆಗುತ್ತದೆ ಎಂಬುವುದನ್ನು ಆಹಾರ ವಿಜ್ಞಾನಿ ಡಾ.ಖಾದರ್ ಮೈಸೂರು ಅವರು ತೆರೆದಿಟ್ಟರು. ಕೋಟೇಶ್ವರ ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆ ಶಾಲಾ ವಠಾರದಲ್ಲಿ ಭಾನುವಾರ ಸಂಜೆ ಆಯೋಜಿಸಿದ ಪ್ರಕೃತಿ ನೀಡಿದ ಸೌಭಾಗ್ಯ ‘ಸಿರಿಧಾನ್ಯ’ ಮಹತ್ವದ ಬಗ್ಗೆ ಮಾತನಾಡಿ, ಕೃತಕ ಹಾಲು ಸಂಪೂರ್ಣ ಆಹಾರವೇ ಅಲ್ಲ. ಅದು ಹಾಲಾಹಲ ಸೃಷ್ಟಿಸುತ್ತದೆ. ಮೂರು ವರ್ಷದ ನಂತರ ಮಾನವ ದೇಹ ಹಾಲು ಜೀರ್ಣಸಿಕೊಳ್ಳುವ ಪ್ರಕ್ರಿಯೆ ನಿಲ್ಲಿಸುತ್ತದೆ. ಕೃತಕ ಹಾಲು ಸಂಪೂರ್ಣ ಆಹಾರ ಹೇಗಾಗುತ್ತದೆ? ತಾಯಿ ಹಾಲೇ ಸಂಪೂರ್ಣ ಆಹಾರ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಕಸ್ಮಿಕವಾಗಿ ನದಿಗೆ ಬಿದ್ದು ಬಾಲಕನೊಬ್ಬ ಸಾವನ್ನಪಿದ ಘಟನೆ ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡದ ಹಾಲಾಡಿ ಹೊಳೆಯಲ್ಲಿ ನ 6ರ ಸೋಮವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಜನ್ನಾಡಿ ನಿವಾಸಿಗಳಾದ ರಾಜು ಮತ್ತು ಸುಮತಿ ಮೊಗವೀರ ದಂಪತಿಗಳ ಮಗ ಆದರ್ಶ ಮೋಗವೀರ (13) ಎಂದು ಗುರುತಿಸಿಲಾಗಿದೆ, ಇತನು ಬಿದಲ್ಕ್ ಕಟ್ಟೆಯ ಸರಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿದಲ್ಕ್ ಕಟ್ಕೆಯ ಸರಕಾರಿ ಆಸ್ಪ್ರತ್ರೆಗೆ ರವಾನಿಸಲಾಗಿದ್ದು ಕೋಟ ಠಾಣಾ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರೋಟರಿ ಕ್ಲಬ್ ಬೈಂದೂರು ಹಾಗೂ ಸುರಭಿ ರಿ. ಬೈಂದೂರು ಸಂಸ್ಥೆಯ ನೃತ್ಯ ಸುರಭಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೫ ದಿನಗಳ ಶಾಸ್ತ್ರೀಯ ಭರತನಾಟ್ಯ ಕಾರ್ಯಾಗಾರವನ್ನು ಬೈಂದೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜಾತಿ ಮತಗಳನ್ನು ಮೀರಿ ನಿಂತಿರುವ ಕಲೆಯಲ್ಲಿ ಶಿಕ್ಷಣಕ್ಕೆ ಪೂರಕವಾದ ಮತ್ತು ಎಲ್ಲಾ ಹೃದಯಗಳನ್ನು ಸ್ವರ್ಶಿಸುವ ಗುಣವಿದೆ ಎಂದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನೃತ್ಯಗುರು ವಿದ್ವಾನ್ ಚಂದ್ರಶೇಖರ ನಾವಡ, ಸುರಭಿ ಬೈಂದೂರು ಅಧ್ಯಕ್ಷ ಶಿವರಾಮ ಕೊಠಾರಿ ಉಪಸ್ಥಿತರಿದ್ದರು. ಸುರಭಿಯ ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮಣ ಕೊರಗ ವಂದಿಸಿದರು. ನಿರ್ದೇಶಕ ಸುಧಾಕರ ಪಿ. ಬೈಂದೂರು ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಕುಂದಾಪುರ ವಲಯದ ಬಿದ್ಕಲ್ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ, ಹಾಗೂ ಪುಟಾಣಿಗಳಾದ ಪರೀಕ್ಷಿತ್ ಜಿ ಐತಾಳ್ ಹಾಗೂ ಶಯಂತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ರೂಪಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಪತ್ರಿಕೆಯ ೯ನೇ ಸಂಚಿಕೆ ಅನಾವರಣ ಕಾರ್ಯಕ್ರಮವು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಾಂತಾರಾಮರ ಅಧ್ಯಕ್ಷತೆಯಲ್ಲಿ ಜರುಗಿತು. ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಶ್ರೀ ಶಾಂತಾರಾಮ ಚಾಲನೆ ನೀಡಿದರು. ಮಕ್ಕಳು ಕನ್ನಡ ಗೀತೆಗಳ ಸಮೂಹ ಗಾಯನದ ಮೂಲಕ ರಂಜಿಸಿದರು. ಯುವಸಾಹಿತಿ ಪೂರ್ಣಿಮಾ ಎನ್ ಭಟ್ ಚಾರಣ ಸಂಚಿಕೆಯನ್ನು ಅನಾವರಣಗೊಳಿಸಿ ಎಲ್ಲಡೆ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತೀ ತಿಂಗಳೂ ಸಾಹಿತ್ಯ ಸಂಚಿಕೆಯನ್ನು ರೂಪಿಸಿ ಮಕ್ಕಳಲ್ಲಿ ಸಾಹಿತ್ಯದೊಲವನ್ನು ಹುಟ್ಟು ಹಾಕುತ್ತಿರುವುದು ಶ್ಲಾಘನೀಯ. ಮಕ್ಕಳು, ಪೋಷಕರು ಇದರ ಉದ್ದೇಶವನ್ನು ಅರ್ಥಮಾಡಿಕೊಂಡು, ಕನ್ನಡವನ್ನು ಸ್ಪಷ್ಟವಾಗಿ ಬರೆಯುವ, ನಿರರ್ಗಳವಾಗಿ ಓದುವ ಮಾತನಾಡುವ ಕೌಶಲ ಬೆಳೆಸಿಕೊಳ್ಳಬೇಕು. ಯಾವುದೇ ಭಾಷೆಯನ್ನು ಕಲಿತರೂ ಕನ್ನಡಿಗರಾದ ನಮ್ಮಲ್ಲಿ ಕನ್ನಡತನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸತ್ಕರ್ಮ, ಉಪಾಸನೆಗಳನ್ನು ನಿರಂತರವಾಗಿ ಮಾಡುತ್ತಿದ್ದರೆ ಜೀವನದಲ್ಲಿ ಯೋಗ್ಯ ಫಲ ದೊರೆಯುತ್ತದೆ. ಧರ್ಮ, ಸಂಸ್ಕಾರ, ಸಂಸ್ಕೃತಿ ಮೊದಲಾದವುಗಳನ್ನು ಅನುಸರಿಸುತ್ತಾ ಹಿರಿಯರು ನಡೆದುಕೊಂಡು ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಬೇಕು. ಆರಾಧನೆ, ಉಪಾಸನೆಗಳನ್ನು ಮಾಡುತ್ತಿದ್ದರೆ ನಮ್ಮಲ್ಲಿನ ಅಜ್ಞಾನ, ಅಂಧಕಾರ ದೂರವಾಗಿ ಜೀವನ ಪಾವನವಾಗುತ್ತದೆ ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಅವರು ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನವನ್ನು ಪೂರ್ವಜರು ಬಹಳ ಶ್ರಮಪಟ್ಟು ಕಟ್ಟಿ ಬೆಳೆಸಿದ್ದು, ಶ್ರೀದೇವರ ಅನುಗ್ರಹದಿಂದ ದೇವಾಲಯ ಉತ್ತಮ ರೀತಿಯಲ್ಲಿ ಬೆಳೆದು ನಿಂತಿದೆ. ದೇವಾಲಯದ ಅಭಿವೃದ್ಧಿಯಿಂದ ದೇವರ ಸಾನಿಧ್ಯ ಕೂಡ ಹೆಚ್ಚಿ ಭಕ್ತರ ಮನೋಭಿಷ್ಟಗಳು ನೆರವೇರುತ್ತದೆ ಎಂದು ಅವರು ಹರಸಿದರು. ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ರೋಹಿದಾಸ ನಾಯಕ್ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ದೇವಳದ ಅರ್ಚಕ ವೇದಮೂರ್ತಿ ಜಿ.ಅನಂಕಕೃಷ್ಣ ಭಟ್, ವೇದಮೂರ್ತಿ ಜಿ.ವಸಂತ ಭಟ್, ವೇದಮೂರ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದು ಯಕ್ಷಗಾನ ವೃತ್ತಿ ಮೇಳಗಳಲ್ಲಿ ಸಮರ್ಥ ಯುವ ಕಲಾವಿದರ ಕೊರತೆ ಇದೆ. ಯಕ್ಷಗಾನ ಕಲಾಕೇಂದ್ರಗಳು ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಭವಿಷ್ಯದ ಉತ್ತಮ ಕಲಾವಿದರನ್ನಾಗಿ ರೂಪಿಸುವ ಮೂಲಕ ಈ ಕೊರತೆಯನ್ನು ನೀಗಬೇಕು ಎಂದು ಉದ್ಯಮಿ, ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಆನಂದ ಸಿ. ಕುಂದರ್ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹೇರಂಜಾಲು ಯಕ್ಷಗಾನ ಪ್ರತಿಷ್ಠಾನ ನಾಗೂರಿನ ಗುಂಜಾನುಗುಡ್ಡೆಯ ಮಾರ್ವಿ ರಾಮಕೃಷ್ಣ ಹೆಬ್ಬಾರ್ ರಂಗಮಂದಿರದಲ್ಲಿ ನಡೆಸಿದ ದಿ. ವೆಂಕಟರಮಣ ಗಾಣಿಗ ನೆನಪಿನೋಕುಳಿ ಯಕ್ಷಗಾನ ದಶಮಿ ಕಾರ್ಯಕ್ರಮದ ಭಾನುವಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯಕ್ಷಗಾನಕ್ಕೆ ಹೇರಂಜಾಲು ವೆಂಕಟರಮಣ ಗಾಣಿಗ ಮತ್ತು ಮಾರ್ವಿ ರಾಮಕೃಷ್ಣ ಹೆಬ್ಬಾರ್ ಅವರ ಕೊಡುಗೆ ಅನನ್ಯವಾದುದು. ಅವರ ಹೆಸರಿನಲ್ಲಿ ಈ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ವಿತರಿಸುತ್ತಿರುವುದು ಪ್ರಶಂಸನೀಯ ಕಾರ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಹೇರಂಜಾಲು ಯಕ್ಷಗಾನ ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ, ಯಕ್ಷಗಾನ ಶಾಲೆಗೆ ಸರ್ಕಾರದ ಅನುದಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗದಗದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆಟ್ಟಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಸುದರ್ಶನ್ ಶೆಟ್ಟಿ ಪ್ರಥಮ ಸ್ಥಾನ ಪಡೆದು ಛತ್ತೀಸ್ಗಡದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ನೆಲೆಯಲ್ಲಿ ಕಾಲ್ತೋಡು ಗ್ರಾಮಸ್ಥರ ಪರವಾಗಿ ಪಂಚಾಯತ್ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ ಇವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯದ ಸುದರ್ಶನ್ ಶೆಟ್ಟಿ ಇವರನ್ನು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭ ಉಪಾಧ್ಯಕ್ಷ ರಾಜು ಪೂಜಾರಿ, ಮಾಜಿ ಅಧ್ಯಕ್ಷ ಮಾದಯ್ಯ ಶೆಟ್ಟಿ, ಸದಸ್ಯರಾದ ಚಂದು ಕುಲಾಲ್ತಿ, ಲಲಿತಾ ಶೆಟ್ಟಿ ಮುರೂರು, ಸುಜಾತಾ ಪೂಜಾರಿ, ಗಣೇಶ ಶೆಟ್ಟಿ, ಬೇಬಿ ಭೋವಿ, ವಿನೋದ, ಪಿಡಿಒ ಸತೀಶ್ ತೋಳಾರ್, ಮೆಟ್ಟಿನಹೊಳೆ ಶಾಲಾ ಮುಖ್ಯಶಿಕ್ಷಕ ಹಾಗೂ ಯೋಗಾ ತರಬೇತುದಾರ ಸುಬ್ಬಯ್ಯ ದೇವಾಡಿಗ, ಶಿಕ್ಷಕ ಮಂಜುನಾಥ ದೇವಾಡಿಗ ಹಾಗೂ ಪಂಚಾಯತ್ ಸಿಬ್ಬಂದಿಗಳು ಇದ್ದರು.
