ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಕಸ್ಮಿಕವಾಗಿ ನದಿಗೆ ಬಿದ್ದು ಬಾಲಕನೊಬ್ಬ ಸಾವನ್ನಪಿದ ಘಟನೆ ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡದ ಹಾಲಾಡಿ ಹೊಳೆಯಲ್ಲಿ ನ 6ರ ಸೋಮವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಜನ್ನಾಡಿ ನಿವಾಸಿಗಳಾದ ರಾಜು ಮತ್ತು ಸುಮತಿ ಮೊಗವೀರ ದಂಪತಿಗಳ ಮಗ ಆದರ್ಶ ಮೋಗವೀರ (13) ಎಂದು ಗುರುತಿಸಿಲಾಗಿದೆ, ಇತನು ಬಿದಲ್ಕ್ ಕಟ್ಟೆಯ ಸರಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿದಲ್ಕ್ ಕಟ್ಕೆಯ ಸರಕಾರಿ ಆಸ್ಪ್ರತ್ರೆಗೆ ರವಾನಿಸಲಾಗಿದ್ದು ಕೋಟ ಠಾಣಾ ಪ್ರಕರಣ ದಾಖಲಾಗಿದೆ.