ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬಂಟರ ಯಾನೆ ನಾಡವ ಸಂಘದ ನೇತೃತ್ವದಲ್ಲಿ ಬೆಂಗಳೂರು ಬಂಟರ ಸಂಘದ ಸಹಭಾಗಿತ್ವದೊಂದಿಗೆ ನಡೆದ ವಾರ್ಷಿಕ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಸಂಘದ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಮರನಾಥ ಶೆಟ್ಟಿ ಮೂಡಬಿದ್ರೆ, ಬೆಂಗಳೂರು ಸಂಘದ ಖಜಾಂಚಿ ಅನಂದರಾಮ ಶೆಟ್ಟಿ, ವಿದ್ಯಾರ್ಥಿ ವೇತನ ಸಮಿತಿ ಅಧ್ಯಕ್ಷ ರಮಿತ್ ಬಿ. ಶೆಟ್ಟಿ, ಉಪ್ಪುಂದ ಸೀತಾರಾಮ ಶೆಟ್ಟಿ, ಡಾ ಮಾಧವ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ಡಾ. ಸಉಧಾಕರ ಹೆಗ್ಡೆ, ಉಪಾಧ್ಯಕ್ಷರುಗಳಾದ ನೆಲ್ಯಾಡಿ ಶೀವರಾಮ ಶೆಟ್ಟಿ, ಚುಚ್ಚಿ ನಾರಾಯಣ ಶೆಟ್ಟಿ, ಬೆಲ್ತೂರು ವಿಠಲ ಶೆಟ್ಟಿ, ನಾಕಟ್ಟೆ ಜಗನ್ನಾಥ ಶೆಟ್ಟಿ, ಸಾಲ್ಗದ್ದೆ ವಸಂತ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಶಶಿಧರ ಶೆಟ್ಟಿ, ಮಹಿಳಾ ವೇದಿಕೆ ಸಂಚಾಲಕಿ ಶಿಲ್ಪಾ ಸತೀಶ್ ಶೆಟ್ಟಿ ವೇದಿಕೆಯಲ್ಲಿದ್ದರು. ಈ ಸಂದರ್ಭ ಸೂರ್ಯ ನಮಸ್ಕಾರದಲ್ಲಿ ಗಿನ್ನಿಸ್ ದಾಖಲೆಗೈದ ನಿರಂಜನ ಶೆಟ್ಟಿ, ರೋಟರಿ ಬೈಂದೂರು ನಿಕಟಪೂರ್ವಾಧ್ಯಕ್ಷ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಪ್ಪಂದ: ಕುಂದಾನಾಡಿನ ಎರಡು ದೀಪ ಸ್ತಂಭಗಳಂತೆ ನಾಡಿನಾದ್ಯಾಂತ ಖ್ಯಾತಿ ಪಡೆದ ಡಾ | ಶಿವರಾಮ ಕಾರಂತರು ಮತ್ತು ಗೋಪಾಲ ಕೃಷ್ಣ ಅಡಿಗರನ್ನು ಅರ್ಥೈಸಿ ಕೊಳ್ಳುವುದು. ಮತ್ತು ಅಭಿಮಾನದಿಂದ ಆಸ್ವಾಧಿಸುವುದು. ನಮ್ಮ ಪೀಳಿಗೆಯ ಕರ್ತವ್ಯ ಎಂದು ಬೆಂಗಳೂರಿನ ’ಕಾರಂಂತ ವೇದಿಕೆ’ ಯ ಸಂಚಾಲಕ ಪಿ.ಸಿ ಚಡಗ ಹೇಳಿದರು. ಅವರು ಉಪ್ಪುಂದ ಸುವಿಚಾರ ಬಳಗ ಏರ್ಪಡಿಸಿದ ಅಡಿಗರ ಜನ್ಮ ಶತಾಬ್ದಿ ಸಾಹಿತ್ಯ ಸಪ್ತಾಹದ ಸ್ಪರ್ಧೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ನುಡಿದರು. ಸ್ಪರ್ಧಾಥಿಗಳಿಗೆ ಬಹುಮಾನ ವಿತರಿಸಿದ ಕರ್ನಾಟಕ ಬ್ಯಾಂಕಿನ ನಿವೃತ್ತಿ ಮುಖ್ಯ ಪ್ರಬಂಧಕ ಬಿ.ಎಂ.ರಮೇಶ ಅವರು ಸುವಿಚಾರ ವೇದಿಕೆಯ ಕಾರ್ಯಕ್ರಮಗಳ ವೈವಿಧ್ಯತೆ ಮತು ಹರವಿನ ಕುರಿತು ಶ್ಲಾಘಿಸಿ ಸಹ ಮನಸ್ನ ಪ್ರಜ್ಞಾವಂತರ ಕೂಟ ಇದು ಎಲ್ಲಾಡೆಯಾ ಅವಶ್ಯಕತೆಯಾಗಿದೆ ಎಂದು ನುಡಿದರು. ಲಲಿತಾ ಜಿ. ಎಸ್. ಭಟ್‌ರವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ ನಡೆಯಿತು. ಪ್ರಗತಿ ಶೆಟ್ಟಿ, ವಿನಯಾ ಶೆಟ್ಟಿ, ಕೀರ್ತಿ ಎಸ್. ಮನಿಷ್ ದೇವಾಡಿಗ ಮತ್ತು ನಮೃತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿಡಿಲು ಬಡಿದು ಮನೆ ಭಾಗಶಹ ಹಾನಿಯಾಗಿದ್ದು, ಓರ್ವ ಮಹಿಳೆ ಹಾಗೂ ಬಾಲಕ ಸಿಡಿಲಾಘಾತಕ್ಕೆ ಒಳಗಾಗಿದ್ದಾರೆ. ಮನೆ ಪೌಂಡೇಶನ್, ಗೋಡೆ ಬಿರುಕುಬಿಟ್ಟಿದ್ದು,ವಿದ್ಯುತ್ ಉಪಕರಣ, ಮೀಟರ್ ಬೋರ್ಡ್ ಸುಟ್ಟು ಕರಕಲಾದ ಘಟನೆ ಸೋಮವಾರ ತಡರಾತ್ರಿ ಹೇರಿಕೆರೆ ಬಳಿ ನಡೆದಿದೆ. ಕುಂದಾಪುರ ತಾಲೂಕ್ ಕಂದಾವರ ಗ್ರಾಮ, ಹೆರಿಕೆರೆ ಸಿರಾಜುನ್ನೀಸಾ ಹಾಗೂ ಅಬ್ದುಲ್ ಖಾದರ್ ಎಂಬವರ ಎರಡು ವಾಸದ ಮನೆಗೆ ಹಾನಿಯಾಗಿದೆ. ತಸ್ಲೀಮಾ ಬಾನು ಹಾಗೂ ಮೊಹಮ್ಮದ್ ರೈಫ್ ಸಿಡಿಲಾಘಾತಕ್ಕೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರುಳಿದ್ದಾರೆ. ಬಾಲಕನ ಕಿವಿ ತಮಟೆಗೆ ಪೆಟ್ಟಾಗಿದ್ದರೆ, ಮಹಿಳೆ ವಾಂತಿ, ತಲೆ ಸುತ್ತುವಿಕೆ ಹಾಗೂ ತೀವ್ರ ಬಳಲಿಕೆಗೆ ಒಳಗಾಗಿದ್ದಾರೆ. ಮಧ್ಯರಾತ್ರಿ ಸಿಡಿಲು ಎರಗಿದ್ದು, ಮನೆ ಗೋಡೆ ಬಿರುಕು ಬಿಟ್ಟಿದೆ. ವೈಯಿರಿಂಗ್ ಸುಟ್ಟಿದೆ. ಮನೆ ಪೌಂಡೇಶನ್ ಬಳಿ ಹೊಂಡ ಬಿದ್ದಿದ್ದು, ಮನೆ ಹತ್ತರಿದ ದರೆಗೆ ಸಿಡಿಲಪ್ಪಳಿಸಿ ಬಿರುಕು ಬಿಟ್ಟಿದೆ. ವಿದ್ಯುತ್ ಮೀಟರ್ ಬೋರ್ಡ್ ಸಂಪೂರ್ಣ ಸುಟ್ಟು ಹೋಗಿದ್ದು, ಅನತಿ ದೂರದಲ್ಲಿ ಮೀಟರ್ ಬೋರ್ಡ್ ಮುಚ್ಚಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರಿಗೆ ಎಲ್ಲಾ ಸೌಕರ್ಯಗಳೂ ಸುಲಭದಲ್ಲಿ ದೊರೆಯುವಂತೆ ಮಾಡುವ ಮೂಲಕ ಮಹಾತ್ಮ ಗಾಂಧೀಜಿ ಅವರ ಗ್ರಾಮೀಣ ಭಾರತದ ಕನಸು ನನಸಾಗಿಸಲು ನಿರಂತರವಾಗಿ ಶ್ರಮಿಸಬೇಕಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ಹೇಳಿದರು. ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಮಾಜಿ ಪ್ರಧಾನ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಪಣೆಗೈದು ಬಳಿಕ ಮಾತನಾಡಿದರು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರಂತಹ ನಾಯಕರ ಉದಾತ್ತ ಚಿಂತನೆಗಳು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅದ ಪ್ರತಿ ಹಂತದಲ್ಲಿಯೂ ಮಾರ್ಗದರ್ಶನ ನೀಡುವಂತದ್ದು ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ. ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪ್ರತಿಯೊಬ್ಬರಿಗೂ ತಮ್ಮ ರಕ್ತದ ಗುಂಪು ತಿಳಿದಿರಬೇಕಾದ ಅವಶ್ಯಕತೆ ಇದೆ. ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತದ ಗುಂಪು ಅಗತ್ಯವಾಗಿ ತಿಳಿದಿರಬೇಕು. ರಕ್ತದಾನ ಮಾಡುವ ಸಂದರ್ಭ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ರಕ್ತ ಗುಂಪು ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬರೂ ತಕ್ತ ಗುಂಪು ವರ್ಗೀಕರಣ ತಪಾಸಣೆ ನಡೆಸಿ ಮುಂದಿನ ಭದ್ರ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಬೇಕು ಎಂದು ತ್ರಾಸಿ ಚರ್ಚಿನ ಧರ್ಮಗುರು ಚಾರ್ಲ್ಸ್ ಲೂಯಿಸ್ ಹೇಳಿದರು. ತ್ರಾಸಿಯ ಕ್ರೈಸ್ತ ದ ಕಿಂಗ್ ಚರ್ಚಿನ ಅಂತರ ಧರ್ಮೀಯ ಆಯೋಗ, ಚರ್ಚಿನ ಆರೋಗ್ಯ ಮಂಡಳಿ, ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಲೈಫ್‌ಕೇರ್ ಡಯಾಗ್ನೋಸ್ಟಿಕ್ ಸೆಂಟರ್ ಕುಂದಾಪುರ ಇವರ ಸಹಯೋಗದೊಂದಿಗೆ ತ್ರಾಸಿ ಚರ್ಚಿನ ಮಿಲೇನಿಯಂ ಸಭಾಭವನದಲ್ಲಿ ಭಾನುವಾರ ಜರಗಿದ ಉಚಿತ ರಕ್ತ ಗುಂಪು ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಾರದಾ ಡಿ. ಬಿಜೂರು, ಕುಂದಾಪುರ ಲೈಫ್‌ಕೇರ್ ಡಯಾಗ್ನೋಸ್ಟಿಕ್ ಸೆಂಟರ್‌ನ ಜಗದೀಶ, ತ್ರಾಸಿಯ ಕ್ರೈಸ್ತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಪ್ರಸ್ತುತ ದಿನಗಳಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದಂತಹ ವೈದ್ಯಪದ್ಧತಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದು ಆಯುಷ್ ಜಿಲ್ಲಾ ಮುಖ್ಯಸ್ಥರಾದ ಡಾ. ಮಹಮ್ಮದ್ ಇಕ್ಬಾಲ್ ಹೇಳಿದರು. ಅವರು ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 15ನೇ ಶೈಕ್ಷಣಿಕ ವರ್ಷಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಪೆÇೀಷಕರನ್ನುದ್ದೇಶಿಸಿ ಮಾತನಾಡಿದರು. ಆಳ್ವಾಸ್ ಕಾಲೇಜಿನ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆವಹಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ವನಿತಾಶೆಟ್ಟಿ ಉಪಸ್ಥಿತರಿದ್ದರು. ಪ್ರಥಮ ವರ್ಷದಿಂದ ನಾಲ್ಕನೇ ವರ್ಷದವರೆಗೆ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶ್ವೇತಾ ನಾರಾಯಣ್ ಕಾರ್ಯಕ್ರಮ ನಿರ್ವಹಿಸಿದರು. ಅನಾಮಿಕ ವಂದಿಸಿದರು ಪ್ರಕೃತಿ ಚಿಕಿತ್ಸಾ ದಿನಾಚರಣೆ: ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಆಳ್ವಾಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಮೌಂಟ್ ರೋಜರಿ ಚಾರಿಟೇಬ್ಲ್ ಟ್ರಸ್ಟ್ ನ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಇಲ್ಲಿ ಗಾಂಧಿಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಪುಷ್ಪನಮನ ಸಲ್ಲಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಎಮ್. ಜಿ ಬಾನಾವಳಿಕರ್ ಪುಷ್ಪ ನಮನ ಸಲ್ಲಿಸಿ ಗಾಂಧಿಜಿ ಹಾಗೂ ಶಾಸ್ತ್ರಿಯವರ ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶಂಕರ ಪೂಜಾರಿ ಹಾಗೂ ಮೇಲ್ವಿಚಾರಕರಾದ ಎ.ಬಿ.ಪೂಜಾರಿ ಉಪಸ್ಥಿತರಿದ್ದು, ಪುಷ್ಪ ನಮನ ಸಲ್ಲಿಸಿದರು. ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸರ್ವಧರ್ಮ ಭಜನೆಯನ್ನು ಮಾಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳವರ ಅನುಗ್ರಹದೊಂದಿಗೆ ವೇದಮೂರ್ತಿ ಕೆ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಸಂಭ್ರಮ ಸಡಗರದಲ್ಲಿ ಜರುಗಿತು. ಪ್ರತಿದಿನ ಭಜನೆ ವಿಶೇಷ ಪೂಜೆ, ಅಲಂಕಾರ ಸೇವೆ, ಚಂಡಿಕಾಯಾಗ, ರಂಗಪೂಜೆಗಳಲ್ಲಿ ಭಕ್ತಾದಿಗಳು ಪಾಲ್ಗೊಂಡರು. ದೇವಳದ ಅರ್ಚಕ ಗಣಪತಿ ಸುವರ್ಣ, ಉತ್ಸವ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಹೇರಿಕುದ್ರು, ಅಧ್ಯಕ್ಷ ಪ್ರಕಾಶ್ ಕೆ.ಬಿ, ಶ್ರೀಧರ ಸುವರ್ಣ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್ ಸ್ತ್ರೀ ಸಂಘಟನೆ ನೇತೃತ್ವದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಜರುಗಿತು. ಉಡುಪಿ ಸಂಪದ ಕೇಂದ್ರ ನಿರ್ದೇಶಕ ರೆ. ಫಾ. ರೆಜಿನಾಲ್ಡ್ ಪಿಂಟೋ, ರೆ. ಫಾ ರೊನಾಲ್ಡ್ ಮಿರಾಂದ, ಉಪಾಧ್ಯಕ್ಷ ಸ್ಟಾನಿ ಮಾಸ್ಟರ್ ದಾನಿ ತಿಯೋಕರ್ ಫೆರ್ನಾಂಡಿಸ್ ವೇದಿಕೆಯಲ್ಲಿದ್ದರು. ಹಿರಿಯ ನಾಗರಿಕರಿಗೆ ವಿವಿಧ ಸ್ವರ್ಧೆಗಳು ಜರುಗಿದವು. ಶಾಂತಿ ಡಯಾಸ್ ಸ್ವಾಗತಿಸಿ ಜೋಯಲಾಸ್ ರೋಡ್ರಿಗಸ್ ವಂದಿಸಿದರು. ವೀಣಾ ಫೆರ್ನಾಂಡಿಸ್ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕವನಗಳನ್ನು ಹಾಡುವಾಗ ಸಾಹಿತ್ಯಕ್ಕೆ ಮುತ್ತು ಕೊಟ್ಟು, ಪದ-ಪದ ಪ್ರಸ್ತಾರ ಹಾಕಿ ಪ್ರಸ್ತುತ ಪಡಿಸಿದರೇ ಕವಿಯ ಆಶಯ ಪೂರ್ತವಾಗುವುದು. ಕವಿ ಅಡಿಗರ ಆಯ್ದ ಹಾಡುಗವನಗಳನ್ನು ಸಂಗ್ರಹಿಸಿ ಕವಿಯ ಆಶಯ ಮತ್ತು ಕವನದ ಒಟ್ಟು ಅರ್ಥ ಸ್ಫುರಿಸಲು ಅನುವಾಗುವಂತೆ ಸುವಿಚಾರ ಬಳಗದ ಯು. ವರಮಹಾಲಕ್ಷ್ಮೀ ಹೊಳ್ಳ ಮತ್ತು ತಂಡ ಹಾಕಿದ ಮೇಲ್ಪಂಕ್ತಿ ಕವಿ ಅಡಿಗರ ಜನ್ಮ ಶತಾಬ್ಧಿಯ ಉತ್ತಮ ಕಾಣೆಯಾಗಿದೆ. ಇದು ಐತಿಹಾಸಿಕವಾಗಿದ್ದು ಇದರ ಮಹತ್ವ ದರ್ಶಕದ ಬಳಿಕ ಅರಿವಿಗೆ ಬರಬಹುದು. ಎಂದು ಸಿರಿಮೋಗೇರಿ ಸಮಷ್ಠಿ ವೇದಿಕೆಯ ಸಂಚಾಲಕ ಎಂ .ಜಯರಾಮ್ ಅಡಿಗರು ನುಡಿದರು. ಉಪ್ಪುಂದದ ಸುವಿಚಾರ ಬಳಗವು ಕವಿ ಅಡಿಗರ ಜನ್ಮ ಶತಾಬ್ಧಿ ಕಾರ್ಯಕ್ರಮದಡಿ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಏರ್ಪಡಿಸಿದ ತಿಂಗಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಿದ್ದರು. ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಮಾತನಾಡಿ ದೀಪದ ಬುಡದಲ್ಲಿ ಕತ್ತಲು, ಹಿತ್ತಲ ಗಿಡ ಮದ್ದಲ್ಲ ಗಾದೆಗಳು ಸುಳ್ಳಾಗುವಂತೆ ನಮ್ಮವರನ್ನು ಆಸ್ವಾದಿಸಿ, ಆನಂದಿಸಿ, ಗೌವರಸುವುದು.…
