ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಸಮಾಜದ ಋಣವನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಿಲ್ಲ ಆದರೆ ಅವಕಾಶ ಸಿಕ್ಕಾಗಲೆಲ್ಲಾ ಪ್ರಾಮಾಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧ್ಯವಾದಷ್ಟು ಸಮಾಜಮುಖಿ ಕಾರ್ಯವನ್ನು ಮಾಡಲು ಸಾಧ್ಯವಿದೆ ಎಂದು ವಿಜಯಾ ಬ್ಯಾಂಕ್ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಹೆಚ್. ವಸಂತ ಹೆಗ್ಡೆ ಹೇಳಿದರು. ಅವರು ಇಲ್ಲಿನ ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಬೈಂದೂರು ರೋಟರಿ ಕ್ಲಬ್ ಪ್ರಾಯೋಜಕತ್ವದಲ್ಲಿ ಜರುಗಿದ ಇಂಟರ್ಯಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದರು. ಬದುಕಿನಲ್ಲಿ ಪ್ರಾಮಾಣಿಕತೆ, ವಿಧೇಯತೆ, ಸತ್ಯ ಹಾಗೂ ಸ್ಪಚ್ಚತೆಯನ್ನು ಅಳವಡಿಸಿಕೊಳ್ಳಬೇಕು. ವಿದ್ಯಾವಂತರಾಗುವುದರ ಜೊತೆಗೆ ಪ್ರಜ್ಞಾವಂತರಾಗುವುದು ಕೂಡ ಬಹುಮುಖ್ಯ. ಶಿಸ್ತು ಹಾಗೂ ಸಂಪ್ರದಾಯದೊಂದಿಗೆ ಸುಂದರ ಬದುಕು ರೂಪಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದೆ ಎಂದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಹೆಚ್. ಕೃಷ್ಣಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿ ನೂತನ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆಗೆ ಪದಪ್ರದಾನ ನೆರವೇರಿಸಿ ಮಾತನಾಡಿ ಪಠ್ಯದ ಕಲಿಕೆಯ ಜೊತೆಗೆ ಬದುಕಿನ ಪಾಠವನ್ನು ಕಲಿಸುವುದೂ ಅಗತ್ಯವಾಗಿದೆ. ರೋಟರಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಕ್ಷಾಬಂಧನವೆಂಬುದು ಅಣ್ಣ ತಂಗಿಯರ ಭ್ರಾತೃತ್ವದ ಭಾವನೆಯನ್ನು ಗಟ್ಟಿಗೊಳಿಸುವ ಹಬ್ಬ. ಆದರೆ ಇಲ್ಲೋಬ್ಬ ಆಸಾಮಿ ರಕ್ಷಾಬಂಧನಕ್ಕೆಂದು ಊರಿಗೆ ಬಂದು ತಂಗಿಯನ್ನೆ ಕಿಡ್ನಾಪ್ ಮಾಡಿ ಪರಾರಿಯಾಗಿದ್ದು ಸಂಬಂಧಗಳ ಅರ್ಥವನ್ನೇ ತಲೆ ಕೆಳಗೆ ಮಾಡಿದ್ದಾನೆ. ಕುಂದಾಪುರ ತಾಲೂಕಿನ ಕಟ್ಬೆಲ್ತೂರು ಎಂಬಲ್ಲಿ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿ ಶುಕ್ರವಾರ ಬೆಳಿಗ್ಗೆಯಿಂದ ಕಾಣೆಯಾಗಿದ್ದು ಮಗಳನ್ನು ಹುಡುಕಿಕೊಡುವಂತೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕಟ್ಬೆಲ್ತೂರಿನಲ್ಲಿ ನೇಪಾಳ ಮೂಲದ ಭರತರಾಜ್ ಮತ್ತು ಸೋನಾ ದಂಪತಿಗಳು ತಮ್ಮ ಮಕ್ಕಳು ಹಾಗೂ ಸಂಬಂಧಿಗಳೊಂದಿಗೆ ಕೆಲವು ಸಮಯದಿಂದ ವಾಸವಾಗಿದ್ದಾರೆ. ರಕ್ಷಾಬಂಧನ ಹಬ್ಬಕ್ಕಾಗಿ ತಮಿಳುನಾಡಿನಿಂದ ಇಲ್ಲಿಗೆ ಬಂದಿದ್ದ ಭರತರಾಜ್ ಅವರ ಸ್ವಂತ ಅಣ್ಣನ ಮಗ ಬಿಕ್ರಮ್ ಮತ್ತು ಆತನ ಸ್ನೇಹಿತ ಸುನಿಲ್ ಇಬ್ಬರೂ ಮನೆಯಲ್ಲಿ ಹಬ್ಬವನ್ನು ಚನ್ನಾಗಿ ಆಚರಣೆ ಮಾಡಿದ್ದರು. ಶುಕ್ರವಾರ ಚಿಕ್ಕಪ್ಪನ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ತಮಿಳುನಾಡಿಗೆ ಕಿಡ್ನಾಪ್ ಮಾಡಿ ಕರೆದೊಯ್ದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ. ಶಾಲೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಟೇಶ್ವರ: ವಕ್ವಾಡಿ ಶಾಲೆಯ ಪೂರ್ವ ಪ್ರಾಥಮಿಕ ಪುಟಾಣಿಗಳಿಗಾಗಿ ’ಶ್ರೀ ಕೃಷ್ಣ ಜನ್ಮಾಷ್ಟಮಿ’ಯನ್ನು ವಿಶೇಷವಾಗಿ ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳೆಲ್ಲರೂ ರಾಧಾಕೃಷ್ಣ ಉಡುಪು ಧರಿಸಿ ವಿಜೃಂಭಿಸುತ್ತಿದ್ದರು. ಕೃಷ್ಣಂ ವಂದೇ ಜಗದ್ಗುರು ಎಂಬ ಧ್ಯೇಯ ವಾಕ್ಯದಡಿಯಲ್ಲಿ ಬಾಲ ಕೃಷ್ಣನ ತೊಟ್ಟಿಲು ತೂಗುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಗಿತು. ಅಷ್ಟಮಿಯ ವಿಶೇಷ ತಿಂಡಿಗಳೆಲ್ಲವನ್ನು ಜೋಡಿಸುವುದರ ಜೊತೆಗೆ ವಿವಿಧ ಭಂಗಿಯ ಕೃಷ್ಣನ ಚಿತ್ರಗಳನ್ನು ಜೋಡಿಸಲಾಗಿತ್ತು. ಬಾಲಕೃಷ್ಣನ ಹೆಜ್ಜೆ ಗುರುತು ಮತ್ತು ರಂಗೋಲಿಯ ಚಿತ್ತಾರಗಳನ್ನು ಬಿಡಿಸುವುದರ ಜೊತೆಗೆ ಈ ದಿನದ ವಿಶೇಷವಾಗಿ ಪುಟಾಣಿಗಳು ಮುರಾರಿಯ ಪ್ರಿಯವಾದ ಗೋವುಗಳಿಗೆ ಆರತಿ ಬೆಳಗಿ, ತಿಲಕವಿರಿಸಿ, ಅಕ್ಕಿ ಮತ್ತು ಹಣ್ಣುಗಳನ್ನು ನೀಡಿ ಗೋಪೂಜೆಯನ್ನು ಮಾಡಿದರು. ನಂತರ ಮೊಸರುಕುಡಿಕೆ, ಕೊಳಲು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕೊನೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಕೆಲವು ಮಾಧವಪ್ರಿಯ ಹಾಡುಗಳನ್ನು ಶಿಕ್ಷಕಿಯರು ಪುಟಾಣಿಗಳ ಜೊತೆ ಸೇರಿ ಹಾಡಿದರು. ಕೆಲವು ಪುಟಾಣಿಗಳು ರಾಧಾ ಕೃಷ್ಣ ಹಾಡುಗಳಿಗೆ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕಿ ಅನುಪಮ.ಎಸ್.ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಂದೆ ತಾಯಿಗೆ ಹಲ್ಲೆ ನಡೆಸಿದ ಕಾರಣಕ್ಕೆ ಮನನೊಂದು ಮಗನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬಿಜೂರು ಸಾಲಿಮಕ್ಕಿಯ ಉಡುಪರಅಡಿ ಎಂಬಲ್ಲಿ ನಡೆದಿದೆ. ಉಡುಪರ ಅಡಿ ನಿವಾಸಿ ಮಂಜು ಪೂಜಾರಿ ಎಂಬುವವರ ಪುತ್ರ ರಾಘವೇಂದ್ರ (32) ಮೃತ ಯುವಕ. ಉಡುಪರ ಅಡಿಯಲ್ಲಿ ತಂದೆ ತಾಯಿಯೊಂದಿಗೆ ವಾಸವಿದ್ದ ರಾಘವೇಂದ್ರ, ದೇವರ ದರ್ಶನಕ್ಕಾಗಿ ಧರ್ಮಸ್ಥಳಕ್ಕೆ ತೆರಳಿ ಇಂದು ಬೆಳಿಗ್ಗೆ ಸುಮಾರಿಗೆ ಮನೆಗೆ ಮರಳಿದ್ದಾರೆ. ಮನೆಯಲ್ಲಿ ಬಾಗಿಲು ತೆರೆಯಲು ತಡವಾಯಿತು ಎಂಬ ಕಾರಣಕ್ಕೆ ತಾಯಿ ಹಾಗೂ ತಂದೆಗೆ ಅಲ್ಲೇ ಇದ್ದ ಕೋಲಿನಿಂದ ಹಲ್ಲೆ ನಡೆಸಿ ಬಳಿಕ ಅಲ್ಲಿಂದ ಹೊರಕ್ಕೆ ನಡೆದಿದ್ದಾರೆ. ಹೊರಗೆಲ್ಲೊ ಇರಬಹುದು ಎಂದು ತಂದೆ ತಾಯಿ ಇಬ್ಬರೂ ಬಾವಿಸಿ ಸುಮ್ಮನಾಗಿದ್ದರು. ಆದರೆ ಬೆಳಿಗ್ಗೆಯ ವೇಳೆಗೆ ಬಾವಿಯನ್ನು ನೋಡುವಾಗ ಮಗ ಮೃತಪಟ್ಟಿರುವುದು ತಿಳಿದುಬಂದಿತ್ತು. ಕುಂದಾಪ್ರ ಡಾಟ್ ಕಾಂ. ಘಟನಾ ಸ್ಥಳಕ್ಕೆ ಎಸ್ಪಿ ಡಾ. ಸಂಜೀವ ಪಾಟೀಲ್, ಡಿವೈಎಸ್ಪಿ ಪ್ರವೀಣ ನಾಯ್ಕ್, ಬೈಂದೂರು ವೃತ್ತನಿರೀಕ್ಷಕ ರಾಘವ ಪಡೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ…
ಓದಿ ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಈ ದೇಶದ ಶ್ರೇಷ್ಠತೆ, ಸಂಪತ್ತು, ಇತಿಹಾಸವನ್ನು ಕಂಡು ದೇಶದ ಮೇಲೆ ಅನೇಕ ದಾಳಿಗಳು ನಡೆದರೂ ಸು ಧೀರ್ಘವಾದ ಹೋರಾಟಗಳ ಮೂಲಕ ಬ್ರಿಟಿಷರಿಂದ ಮುಕ್ತಿ ಪಡೆದಿದೆ. ನಾವು ದೇಶಕ್ಕೆ ಸ್ವಾತಂತ್ರ್ಯ ತರುವ ನಿಟ್ಟಿನಲ್ಲಿ ಸ್ವಾತಂತ್ರ್ಯಸೇನಾನಿಗಳ ಕನಸನ್ನು ನನಸು ಮಾಡಬೇಕಾಗಿದೆ. ದ್ವೇಷ, ಅಸೂಯೆಗಳು ಈ ದೇಶವನ್ನು ಬಿಟ್ಟು ತೊಲಗಬೇಕಾಗಿದೆ ಎಂದು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹಾಫಿಳ್ ಮುಹಮ್ಮದ್ ಸುಫ್ಯಾನ್ ಸಖಾಫಿ ಹೇಳಿದರು. ಅವರು ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ನಡೆದ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಿ., ಎಸ್.ಎಸ್.ಎಫ್ ಉಡುಪಿ ಜಿಲ್ಲೆಯ ವತಿಯಿಂದ ನಡೆದ ದೇಶ ಉಳಿಸಿ-ದ್ವೇಷ ಅಳಿಸಿ ಆಝಾದಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಸಂದೇಶ ಭಾಷಣ ಮಾಡಿದರು. ಎಸ್.ಎಸ್.ಎಫ್. ಉತ್ತರ ಕನ್ನಡ ಜಿಲ್ಲೆ ಅಧ್ಯಕ್ಷ ಅಸ್ಸಯ್ಯದ್ ಅಲವಿ ತಂಙಳ್ ಅಲ್ ಬುಖಾರಿ, ಎಸ್.ಎಸ್.ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಇಲ್ಯಾಸ್ ನಾವುಂದ, ಎಸ್.ಎಸ್.ಎಫ್ ಇಹ್ಸಾನ್ ಕರ್ನಾಟಕ ಇದರ ಜನರಲ್ ಕನ್ವೀನರ್ ಕೆ.ಎ. ಅಬ್ದುರ್ರಹ್ಮಾನ್, ಎಸ್.ಎಸ್.ಎಫ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪಠ್ಯ ಚಟುವಟಿಕೆಗಳಲ್ಲದೆ ಸಹ ಪಠ್ಯ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಪಠ್ಯೇತರ ಚಟುವಟಿಕೆಗಳು ಕಲಿಕಾರ್ತಿಗಳಲ್ಲಿ ಅವಶ್ಯಕವಾದ ಜೀವನ ಮೌಲ್ಯಗಳನ್ನು ತಿಳಿಸುವುದರ ಜೊತೆ ಜೊತೆಯಲ್ಲಿ ನಮ್ಮ ನಾಡು, ದೇಶ, ನುಡಿ, ಆಚಾರ, ವಿಚಾರ, ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಪರಿಪೂರ್ಣ ಜ್ಞಾನವನ್ನು ನೀಡುತ್ತದೆ. ಈ ಮುನ್ನೋಟವನ್ನು ಹೊತ್ತು ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿ ತಮ್ಮ ವಿದ್ಯಾರ್ಥಿಗಳಿಗೆ ವಾರ್ಷಿಕ ’ಪ್ರತಿಭಾ ಸಿಂಚನ’ ಕಾರ್ಯಕ್ರಮದ ಅಂಗವಾಗಿ, ಛಧ್ಮವೇಷ ಮತ್ತು ನೃತ್ಯ ಸ್ಪರ್ಧೆಗಳನ್ನು ಶಾಲೆಯ ವಿಶಾಲವಾದ ಕಲಾಂಗಣ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಯಿತು. 1ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಹಲವಾರು ವಿದ್ಯಾರ್ಥಿಗಳು ರಾಮನ್ , ಕಲಾಮ್, ಕಲ್ಪನ ಮತ್ತು ಆರ್ಯಭಟ ಎನ್ನುವ ನಾಲ್ಕು ತಂಡಗಳಿಂದ ಆಯ್ಕೆಗೊಂಡು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಎರಡು ಸ್ಪರ್ಧೆಗಳು ಕ್ರಮವಾಗಿ ಜೂನಿಯರ್ , ಸಬ್ ಜೂನಿಯರ್ ಮತ್ತು ಸೀನಿಯರ್ ಎಂಬ ಮೂರು ಹಂತಗಳಲ್ಲಿ ನಡೆಯಿತು. ಛಧ್ಮವೇಷದಲ್ಲಿ ವಿದ್ಯಾರ್ಥಿಗಳು ಪೌರಾಣಿಕ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕು ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಬೈಂದೂರು ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೈಂದೂರು-ಗಂಗಾನಾಡು ರಸ್ತೆಯ ಭರತನಗರದಲ್ಲಿ ಸೌಪರ್ಣಿಕ ಡೆವಲಪರ್ಸ್ ಹಾಗೂ ಮಹಾವೀರ ಕನ್ಸ್ಸ್ಟ್ರಕ್ಷನ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ’ಓಂ ಮಹಾವೀರ’ ಸುಸಜ್ಜಿತ ವಸತಿ ಸಮುಚ್ಚಯಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಸಂದರ್ಭ ಜಿ.ಪಂ ಸದಸ್ಯ ಶಂಕರ ಪೂಜಾರಿ, ಕೆ. ಬಾಬು ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಉದ್ಯಮಿಗಳಾದ ಟಿ. ನಾರಾಯಣ ಹೆಗ್ಡೆ, ಕೆ. ವೆಂಕಟೇಶ ಕಿಣಿ, ಭೀಮೇಶ್ ಕುಮಾರ್, ನಾಗೇಶ ನಾಯ್ಕ್ ಗೊರಟೆ, ಗೋಪಾಲಕೃಷ್ಣ ಜಿ. ಮುಂತಾದವರು ಹಾಜರಿದ್ದರು. ಭರತ್ ನಗರದಲ್ಲಿ ನಿರ್ಮಾಣವಾಗಲಿರುವ 1 ಬಿಹೆಚ್ಕೆ ಹಾಗೂ 2 ಬಿಹೆಚ್ಕೆ ಅಪಾರ್ಟ್ಮೆಂಟ್ಗಳು ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದೆ. ನೂತನ ಅಪಾರ್ಟ್ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. 500ಮೀಟರ್ ದೂರದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು, 700 ಮೀಟರ್ ದೂರದಲ್ಲಿ ಸೈಂಟ್ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ 1.5ಕಿ.ಮೀ ದೂರದಲ್ಲಿ ಮುಖ್ಯ ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಇನ್ನಿತರ ಸೇವೆಗಳು ಲಭ್ಯವಾಗಲಿದೆ. ಇದನ್ನೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ವಿದ್ಯಾರ್ಥಿ ಜೀವನ ನಮ್ಮ ಜೀವನದ ಸುವರ್ಣಯುಗ. ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನ ಯುವಜನರಿಂದ ನಡೆಯಬೇಕು. ದೇಶದಲ್ಲಿ ಯುವಶಕ್ತಿ ಬೆಳೆದರೆ ಮಾತ್ರ ನಮ್ಮ ರಾಷ್ಟ್ರ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಮುಂದಾಗಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ನಂಜೇನಾಯ್ಕ್ ಹೇಳಿದರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ೨೦೧೭-೧೮ನೇ ಸಾಲಿನ ಚಟುವಟಿಕೆಗಳಿಗೆ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದರು. ಎನ್ನೆಸ್ಸೆಸ್ನಿಂದ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ಬೆಳೆಯುತ್ತದೆ. ಮುಖ್ಯವಾಗಿ ರಾಷ್ಟ್ರೀಯ ಭಾವನೆ, ರಾಷ್ಟ್ರೀಯ ಐಕ್ಯತೆಯನ್ನು ನಮ್ಮಲ್ಲಿ ಬೆಳೆಸುವಲ್ಲಿ ಎನ್ನೆಸ್ಸೆಸ್ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ.ಎಸ್ ಅಸೋಶಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಶುಭ ಹಾರೈಸಿದರು. ವಿದ್ಯಾರ್ಥಿಗಳಾದ ಸುಶ್ಮಿತಾ ಮತ್ತು ಗೌರೀಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ಇದರ ೪೧ನೇ ವಾರ್ಷಿಕ ಮಹಾಸಭೆಯು ದಿನಾಂಕ ೨೩-೦೭-೨೦೧೭ ರಂದು ಹಂಚು ಕಾರ್ಮಿಕರ ಭವನದಲ್ಲಿ ನಡೆಸಲಾಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ. ಲಕ್ಷ್ಮಣ ಬರೆಕಟ್ಟುರವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಐಟಿಯುನ ರಾಜ್ಯ ಸಮಿತಿ ಅಧ್ಯಕ್ಷರಾದ ಕಾಮ್ರೆಡ್ ಎಸ್. ವರಲಕ್ಷ್ಮೀಯವರು “ಕೇಂದ್ರ ಸರಕಾರವು ತಂದಿರುವ ರಸ್ತೆ ಸುರಕ್ಷತಾ ಮಸೂದೆಯಲ್ಲಿ ಸುರಕ್ಷತೆಗಿಂತ ಚಾಲಕರನ್ನು ಶಿಕ್ಷಿಸುವ ಕಾಯಿದೆಗಳು ಅಡಕವಾಗಿವೆಯೆಂದು, ಸ್ವಂತ ಹಣದಿಂದ ಆಟೋ ತೆಗೆದುಕೊಂಡು ಸ್ವಂತ ಉದ್ಯೋಗ ಮಾಡುವ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಆಟೋ ಚಾಲಕರಿಗೆ ಸರಕಾರದಿಂದ ಯಾವುದೇ ಸೌಲಭ್ಯವನ್ನು ನೀಡದೆ ಇಂದು ಬೇರೆ ಬೇರೆ ತೆರಿಗೆಗಳನ್ನು ವಿಧಿಸಿ ಅವರ ಬದುಕಿನಲ್ಲಿ ಅತಂತ್ರ ಪರಿಸ್ಥಿತಿಯನ್ನು ತಂದಿಟ್ಟಿದೆ. ಇವತ್ತು ೪೦ ವರ್ಷ ಮೇಲ್ಪಟ್ಟ ಚಾಲಕರು ಅಧಿಕ ಸಂಖ್ಯೆಯಲ್ಲಿದ್ದು ಅಂತವರಿಗೆ ಬ್ಯಾಡ್ಜ್ ನೀಡಲು ಸರಕಾರವು ೧೦ನೇ ತರಗತಿ ತೇರ್ಗಡೆ ಹೊಂದಿರುವ ಪ್ರಮಾಣಪತ್ರ ಕೇಳುತ್ತಿರುವುದು ಸರಿಯಾದ ಕ್ರಮವಲ್ಲ. ಅಂತಹ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ವಿಶ್ರಾಂತಿ ಪಡೆದುಕೊಳ್ಳದೆ ಪ್ರಧಾನಮಂತ್ರಿ ಮತ್ತು ಪಕ್ಷದ ಇಚ್ಛೆಯಂತೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಕಾರ್ಯಕರ್ತರು ಶ್ರಮಿಸಬೇಕು. ಪಕ್ಷ ಸಂಘಟನೆ ಹಾಗೂ ಪಕ್ಷ ಬಲವರ್ಧನೆ ಬಗ್ಗೆ ಕಾರ್ಯಕರ್ತರು ಹೆಚ್ಚಿನ ಸಮಯವನ್ನು ನೀಡಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ರಘು ಶೆಟ್ಟಿ ಅವರ ಮನೆಯಲ್ಲಿ ನಡೆದ ಬಿಜೆಪಿಯ ಗ್ರಾಮಸ್ಪಂದನ, ಕೋಟಿ ವೃಕ್ಷ ಅಭಿಯಾನ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರಕಾರದ ನಾಮಫಲಕ ಅಳವಡಿಸಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಕೇಂದ್ರ ಸರಕಾರ ಉಚಿತವಾಗಿ ಎಲ್ಪಿಜಿ ಸಂಪರ್ಕವನ್ನು ನೀಡುತ್ತಿದ್ದು ರಾಜ್ಯ ಸರಕಾರ ಇದನ್ನು ಅನಿಲ ಭಾಗ್ಯ ಯೋಜನೆ ಎಂದು ಬಿಂಬಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿಗೆ ಕಿಲೋ ಒಂದಕ್ಕೆ ೨೯…
