ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟ ಹೋಬಳಿಯ ಕೋಡಿಕನ್ಯಾಣದಲ್ಲಿ ವೈಭವದ ಉಂಜಲೋತ್ಸವ ಪುಷ್ಭಯಾಗ ಭಾನುವಾರ ಸಂಪನ್ನಗೊಂಡಿತು. ಸಾವಿರಾರು ಭಕ್ತರು ಉಂಜಲೋತ್ಸವದಲ್ಲಿ ಪಾಲ್ಗೊಂಡು ಶ್ರೀನಿವಾಸನ ಕೃಪೆಗೆ ಪಾತ್ರರಾದರು.
ವಿಶೇಷವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀದೇವಿ -ಭೂದೇವಿ ಸಹಿತ ಶ್ರೀನಿವಾಸ ದೇವರ ಉಂಜಲೋತ್ಸವ ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷ ಅಧಿಕಾರಿ ವಿ| ಆನಂದತೀರ್ಥಾಚಾರ್ಯ ಪಗಡಲ್ ಅವರ ನೇತೃತ್ವದಲ್ಲಿ ಉಚಿಜಲೋತ್ಸವದ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ಸುಮಾರು ಮೂರು ಗಂಟೆಗೂ ಅಧಿಕ ಧಾರ್ಮಿಕ ವಿಧಿವಿಧಾನಗಳ ನಡುವೆ ಉಂಜಲೋತ್ಸವ ಪುಷ್ಭಯಾಗ ಗೋವಿಂದನ ಸ್ಮರಣೆಗೈಯುತ್ತಾ ಗೀತಗಾನದಲ್ಲಿ ಶ್ರೀನಿವಾಸನ ಭಕ್ತರು ಭಾಗಿಯಾದರು.ಉಂಜಲೋತ್ಸವದಲ್ಲಿ ಪ್ರಸಾದ ರೂಪದಲ್ಲಿ ನಾನಾ ರೀತಿಯ ಫಲಹಾರದ ವ್ಯವಸ್ಥೆ ಕಲ್ಪಿಸಲಾಯಿತು.
ಸಾಲಿಗ್ರಾಮದಿಂದ ಹೊರಟ ಪುರಮೆರವಣಿಗೆ:
ಸಾಲಿಗ್ರಾಮ ಗುರುನರಸಿಂಹ ದೇಗುಲದ ವಠಾರಲ್ಲಿ ಉಂಜಲೋತ್ಸವದ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಅಧ್ಯಕ್ಷ ಡಾ. ಕೆ.ಎಸ್ ಕಾರಂತ, ಕೋಟ ಅಮೃತೇಶ್ವರೀ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಸಮ್ಮುಖದಲ್ಲಿ ಮೆರವಣಿಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಲ್ಲದೆ, ಕೀಲುಕುದುರೆ ಸೇರಿದಂತೆ ಇನ್ನಿತರ ವೇಷಭೂಷಣ ಹೊಲುವ ಬೊಂಬೆಗಳು ಗಮನ ಸೆಳೆದವು. ಉಡುಪಿ ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ನೃತ್ಯ ಭಜನಾ ತಂಡಗಳು ಭಾಗಿಯಾದವು.
ನಾಡೋಜ ಡಾ.ಜಿ.ಶಂಕರ್ ಸಾರಥ್ಯ:
ಉಂಜಲೋತ್ಸವದ ಸಾರಥ್ಯವನ್ನು ನಾಡೋಜ ಡಾ. ಜಿ. ಶಂಕರ್, ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ವಹಿಸಿದ್ದು ಸ್ಥಳೀಯ ಗಣ್ಯರು, ಗ್ರಾಮಸ್ಥರ ಸಮ್ಮುಖದಲ್ಲಿ ಯಶಸ್ವಿಗೊಂಡಿತು.
















