ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ದೇವಾಡಿಗ ನವೋದಯದ ಸಂಘ ಬೆಂಗಳೂರು ರಿ. ಇವರ ಆಶ್ರಯದಲ್ಲಿ 2026ನೇ ಇಸವಿಯ ದಿನದರ್ಶಿಕೆ ಬಿಡುಗಡೆ ಸಮಾರಂಭವು ಭಾನುವಾರ ಹೋಟೆಲ್ ಸಿಂಧೂರ ಗಾರ್ಡೆನಿಯ ಸಭಾಭವನದಲ್ಲಿ ನಡೆಯಿತು.


ವೇದಿಕೆಯಲ್ಲಿ ದೇವಾಡಿಗ ನವೋದಯದ ಸಂಘದ ಅದ್ಯಕ್ಷರಾದ ಟಿ.ಎಮ್ ಹರಿ ದೇವಾಡಿಗ, ಉಪಾಧ್ಯಕ್ಷರಾದ ಮಂಜುನಾಥ ದೇವಾಡಿಗ, ಗೌರವ ಅಧ್ಯಕ್ಷರಾದ ಬಿ. ಆರ್. ದೇವಾಡಿಗ, ಖಜಾಂಚಿ ಗೋಪಾಲ ಸೇರಿಗಾರ, ಸದಸ್ಯರಾದ ಅಶೋಕ ದೇವಾಡಿಗ, ಕದಂ ಮಾಜಿ ಕಾರ್ಯದರ್ಶಿ ನಾರಾಯಣ ದೇವಾಡಿಗ, ಲೆಕ್ಕಪರಿಶೋಧಕ ಸೂರ್ಯಕಾಂತ ದೇವಾಡಿಗ, ಸುದ್ದಿ ವಾಹಿನಿ ನಿರೂಪಕಿ ಅಶ್ವಿನಿ ದೇವಾಡಿಗ, ಶ್ರೀನಿವಾಸ ದೇವಾಡಿಗ ಸೇರಿದಂತೆ ದೇವಾಡಿಗ ನವೋದಯ ಸಂಘ ರಿ. ಇದರ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಕರಾವಳಿ ಶೈಲಿಯ ಆಹಾರವನ್ನು ಸವಿದ ಸಂಭ್ರಮದಿಂದ ಪಾಲ್ಗೊಂಡರು.
ಚರಣ್ ಬೈಂದೂರು ಕಾರ್ಯಕ್ರಮ ನಿರೂಪಿಸಿ, ಸುಧೀರ್ ಮುದ್ರಾಡಿ ವಂದನೆ ಸಲ್ಲಿಸಿದರು.
ವರದಿ: ರಾಘವೇಂದ್ರ ಹಾರ್ಮಣ್










