Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಾಚ್ಯವಸ್ತುಗಳು ಇತಿಹಾಸದ ಆಕರಗಳು. ಅವು ಸಮುದಾಯದ ಪ್ರಾಚೀನ ಜೀವನ ವಿಧಾನ, ಸಾಂಸ್ಕೃತಿಕ ಬೆಳವಣಿಗೆ ಮತ್ತು ಬದಲಾವಣೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಅಧ್ಯಯನದ ದೃಷ್ಟಿಯಿಂದ ಮಹತ್ವ ಪಡೆದಿರುವ ಅಂತಹ ವಸ್ತುಗಳನ್ನು ಸಂಗ್ರಹಿಸಿ ರಕ್ಷಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮೂಲಕ ಮಾಡಬಹುದು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಎಂ. ಗೋವಿಂದ ಹೇಳಿದರು. ಪ್ರಾಚ್ಯ ವಸ್ತು ಸಂಗ್ರಹಾಲಯಗಳ ಮತ್ತು ಪರಂಪರೆಯ ಇಲಾಖೆಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸ್ಮಾರಕಗಳ ಮೂರ್ತ ಮತ್ತು ಅಮೂರ್ತ ಪರಂಪರೆಯ ಸಂಪತ್ತಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಸ್ಪರ್ಧೆಗಳ ಭಾಗವಾಗಿ ನಡೆದ ನಿತ್ಯಬಳಕೆಯ ಪ್ರಾಚ್ಯವಸ್ತುಗಳ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರದರ್ಶನವನ್ನು ಉದ್ಘಾಟಿಸಿದ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ವಸ್ತುಗಳ ಸಂಗ್ರಹಕ್ಕೆ ಶ್ರಮಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ವಸ್ತುಗಳ ಕಿರು ಸಂಗ್ರಹಾಲಯವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಾವುದೇ ಸಮಾರಂಭ ಸುಂದರವಾಗಿ ಮೂಡಿಬರಬೇಕಾದರೆ ಕಾರ್ಯಕ್ರಮ ಸಂಯೋಜಕರ ಜತೆ ಧ್ವನಿ ಬೆಳಕು ಸಂಯೋಜಕರ ಶ್ರಮ ಮತ್ತು ಕೌಶಲ್ಯ ಮಹತ್ವದ ಪಾತ್ರ ವಹಿಸಿ ಸಮಾರಂಭದ ಯಶಸ್ವಿಗೆ ಕಾರಣವಾಗುತ್ತದೆ ಎಂದು ಕುಂದಾಪುರದ ಟಾರ್ಪೋಡೊಸ್ ಸ್ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾದ ಗೌತಮ ಶೆಟ್ಟಿ ಹೇಳಿದರು. ಅವರು ಕುಂದಾಪುರ ವಲಯ ಧ್ವನಿ ಬೆಳಕು ಸಂಯೋಜಕರ ಸಂಘದ ೬ನೇ ವಾರ್ಷಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎಚ್ ಉದಯ ಆಚಾರ್, ಕಾರ್ಯದರ್ಶಿ ದಾಮೋದರ, ಉಪಾಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ಕುಂದಾಪುರ ವಲಯದ ಗೌರವಾಧ್ಯಕ್ಷರಾದ ಸತೀಶ, ಕೋಶಾಧಿಕಾರಿ ರಾಜ್‌ಗೋಪಾಲ, ಬ್ರಹ್ಮಾವರ ವಲಯದ ಅಧ್ಯಕ್ಷರಾದ ಪುಂಡಲೀಕ ಕಾಮತ್, ಬೈಂದೂರು ವಲಯದ ಅಧ್ಯಕ್ಷರಾದ ಶಶಿಧರ ಶಣೈ, ಉಡುಪಿ ವಲಯದ ಅಧ್ಯಕ್ಷರಾದ ಅನಿಲ ಕುಮಾರ್, ಕುಂದಾಪುರ ವಲಯದ ಅಧ್ಯಕ್ಷರಾದ ರೋನಿ ಬೆರಟ್ಟೊ, ಕುಂದಾಪುರ ವಲಯ ಪ್ರತಿನಿಧಿಗಳಾದ ಪಾಂಡುರಂಗ ಜೋಗಿ, ಸರ್ದಾರ ,ನಿಕಟಪೂರ್ವ ಕಾರ್ಯದರ್ಶಿ ಭರತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಳೆದ ಹಲವು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ, ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭ ಜರುಗಿತು. ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅವರು ಶಾಲಾ ಸಂಸತ್ತನ್ನು ಉದ್ಘಾಟಿಸಿ ಸಂದರ್ಭಗಳೇ ಸಂಬಂಧಗಳ ಆಳವನ್ನು ಮತ್ತು ವಾಸ್ತವವನ್ನು ತಿಳಿಸುವಂತೆ, ಶಾಲಾ ಸಂಸತ್ತು ಮಕ್ಕಳಿಗೆ ಸಂಸತ್ತಿನ ಬಗ್ಗೆ ಮೌಲ್ಯಯುತವಾದ ಅಂಶವನ್ನು ತಿಳಿಸಿದರು. ಸೋಲು ಗೆಲುವು ಇವೆರಡು ಜೀವನದ ಒಂದು ಭಾಗವಾಗಿದೆ. ಬದುಕಿನ ಎರಡು ಮುಖಗಳಾಗಿವೆ. ಇಂತಹ ಸಂದರ್ಭದಲ್ಲಿಯುವ ಪೀಳಿಗೆಯ ವಿದ್ಯಾರ್ಥಿಗಳಾದ ನೀವು ಶಾಸಕಾಂಗದ ಪ್ರತಿನಿಧಿಯಾಗಿ ಚುನಾಯಿತರಾದಲ್ಲಿ ಈಗಿನ ಶಾಸಕಾಂಗದ ನಿಯಮಗಳನ್ನು ಸಧೃಡಗೊಳಿಸುವಲ್ಲಿ ಪ್ರಯತ್ನಿಸುವವರಾಗಿರಬೇಕು ಎಂದು ಸಲಹೆ ನೀಡಿದರು. ಹಾಗೆಯೇ ಸಂಸತ್ತಿನ ಬಗ್ಗೆ ವಿದ್ಯಾರ್ಥಿಗಳಿಗಿದ್ದ ಕೆಲವು ಗೊಂದಲಗಳನ್ನು ನಿವಾರಿಸಿದರು. ಮಕ್ಕಳ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದರು. ಕಾರ್ಯಕ್ರಮದಲ್ಲಿ ಬಾಂಡ್ಯಾ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯ ನಿರ್ವಾಹಕರಾದ ಕೆ. ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸನ್ನಿ ಪಿ. ಜಾನ್ ಮತ್ತು ಗುರುಕುಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ಯೆಂದೂರು: ಧ್ವನಿ ಬೆಳಕು ಸಂಯೋಜಕರ ಸಂಘಟನೆಯ 6ನೇ ಜಿಲ್ಲಾ ವಾರ್ಷಿಕ ಮಹಾಸಭೆ ಹಾಗೂ 6ನೇ ವಾರ್ಷಿಕೋತ್ಸವ ಕಾರ್ಯಕ್ರಮವು ನಾಗೂರು ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ಜರುಗಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಧ್ವನಿಬೆಳಕು ಸಂಘದ ಸದಸ್ಯರಿಗೆ ವೈದ್ಯಕೀಯ ತಪಾಸಣೆ, ಉತ್ತಮ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ, ಸದಸ್ಯರಿಗೆ ಆರೋಗ್ಯ ವಿಮೆ ಸೇರಿದಂತೆ ಇತರೆ ಕಾರ್ಯಕ್ರಮಗಳು ನಡೆಯಲಿರುವುದು ಎಂದು ಉಡುಪಿ ಜಿಲ್ಲಾ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್. ಉದಯ ಆಚಾರ್ಯ ಹೇಳಿದರು. ಅವರು ನಾಗೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಉಡುಪಿ ಜಿಲ್ಲೆಯ ಧ್ವನಿ ಬೆಳಕು ಸಂಯೋಜಕರು ಸೇರಿ ಜಿಲ್ಲೆಯ ಎಲ್ಲ ವೃತ್ತಿ ಬಾಂಧವರನ್ನು ಒಟ್ಟುಗೂಡಿಸಿ ಒಂದೇ ಸಿದ್ಧಾಂತವನ್ನು ರೂಢಿಸಿಕೊಂಡು, ಉತ್ತಮ ಸೇವೆಯನ್ನು ನೀಡುವ ಸಲುವಾಗಿ ಸದುದ್ದೇಶದಿಂದ ಸಂಘಟನೆ ರಚನೆಗೊಂಡಿದ್ದು ಬ್ಯೆಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳ ಹಾಗೂ ಕಾಪು ವಲಯಗಳ ೭೦೦ ಸದಸ್ಯರಿದ್ದಾರೆ ಎಂದರು. ಉಚಿತ ವೈದ್ಯಕೀಯ ಶಿಬಿರ, ಆರ್ಥಿಕವಾಗಿ ಹಿಂದುಳಿದವರ ಮನೆಗಳಿಗೆ ಉಚಿತ ವಿದ್ಯುತ್ ವೈರಿಂಗ್…

Read More

ಖಾಸಗಿ ರಸ್ತೆಗೆ ಸರಕಾರದ ದುಡ್ಡು ದುರ್ಬಳಕೆ! ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಸರಕಾರಿ ಕಾಮಗಾರಿಗಳಿಗೆ ವಿನಿಯೋಗವಾಗಬೇಕಿದ್ದ ಸಂಸದರ ಅನುದಾನ ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರೋರ್ವರ ಮನೆಯ ಖಾಸಗಿ ರಸ್ತೆಗೆ ವಿನಿಯೋಗಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಕಾಮಗಾರಿಗೆ ಅನುಮೋದನೆ ನೀಡಿರುವ ಸ್ಥಳದಲ್ಲಿ ಕಾಮಗಾರಿ ನಡೆಸದೇ ಮನೆಗೆ ತೆರಳುವ ಖಾಸಗಿ ರಸ್ತೆಗೆ ಇಂಟರ್‌ಲಾಕ್ ಅಳವಡಿಸಿಕೊಂಡು ಸರಕಾರದ ಕಣ್ಣಿಗೆ ಮಣ್ಣೆರೆಚಲು ಹೊರಟಿರುವ ಬಗ್ಗೆ ಕುಂದಾಪ್ರ ಡಾಟ್ ಕಾಂಗೆ ಮಾಹಿತಿ ಲಭ್ಯವಾಗಿದೆ. ಕುಂದಾಪುರದ ವೆಸ್ಟ್ ಬ್ಲಾಕ್ ರೋಡ್ (ದತ್ತಾತ್ರೆಯ ನಗರ ರಸ್ತೆ) ಬಳಿ ಕುಂದಾಪುರದ ಮಾಜಿ ಪುರಸಭಾ ಅಧ್ಯಕ್ಷ, ಹಾಲಿ ಸದಸ್ಯ ಮೋಹನದಾಸ್ ಶೆಣೈ ಅವರ ಮನೆಗೆ ಹೋಗುವ ಖಾಸಗಿ ಕಾಲುದಾರಿಗೆ ಇಂಟರ್‌ಲಾಕ್ ಅಳವಡಿಕೆಗೆ ಉಡುಪಿ ಚಿಕ್ಕಮಂಗಳೂರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಸರಕಾರದ ಹಣ ಪೋಲು ಮಾಡುತ್ತಿರುವ ಕುರಿತು ಕುಂದಾಪುರ ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಕೆ. ಕೇಶವ ಭಟ್ ಅವರು ಉಡುಪಿ ಜಿಲ್ಲಾಧಿಕಾರಿಯವರಿಗೆ ದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದುಸ್ಥಾನಿ ಸಂಗೀತ ಗುರುಗಳಾದ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ ಮತ್ತು ವಿದುಷಿ ಪ್ರತಿಮಾ ಭಟ್ ಅವರ ಶಿಷ್ಯವೃಂದ ರವಿವಾರದ ಗುರು ಪೂರ್ಣಿಮೆಯ ನಿಮಿತ್ತ ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾ ಭವನದಲ್ಲಿ ಗುರುಪೂಜೆ ಮತ್ತು ಸಂಗೀತೋಪಾಸನೆ ನಡೆಸಿತು. ನಿವೃತ್ತ ಶಿಕ್ಷಕ ಹಾಗೂ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್. ಶ್ರೀಧರ ಹಂದೆ ಮತ್ತು ಹಿರಿಯ ತಬಲಾ ವಾದಕ ಸತ್ಯವಿಜಯ ಭಟ್ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಧರ ಹಂದೆ ಈಗ ಪೋಷಕರು ತಮ್ಮ ಮಕ್ಕಳು ಅಂಕಗಳ ಬೆನ್ನು ಹತ್ತುವಂತೆ ಅತಿಯಾದ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಮಕ್ಕಳು ಮುಂದೆ ಬದುಕಿನ ಭಾಗವಾಗಬೇಕಾದ ಸಾಂಸ್ಕೃತಿಕ ಪ್ರಜ್ಞೆ ಮತ್ತು ರಸಾನುಭೂತಿಯಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ. ಮಕ್ಕಳು ಕನಿಷ್ಠ ಒಂದು ಕಲೆಯಲ್ಲಾದೂ ಪರಿಣತಿ ಪಡೆದರೆ ಇಂತಹ ವಂಚನೆಗೆ ಒಳಗಾಗರು ಎಂದರು. ಸಂಗೀತದ ಬಗೆಗೆ ಮಾತನಾಡಿದ ಅವರು ಅದು ಕಲೆಗಳಲ್ಲೇ ಅತ್ಯಂತ ಪ್ರಾಚೀನವಾದುದು. ಅದು ದೇವಾನುದೇವತೆಗಳ ಕೊಡುಗೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಫೋಟೊ ಕಾನ್ಸೈರ್ಜ್ ಸಂಸ್ಥೆಯು ಆಯೋಜಿಸಿದ್ದ ದಿ ಬಿಗ್ ಸಫ್ ಪೋಟೋ ಕಂಟೆಸ್ಟ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ನಿತೀಶ್ ಪಿ. ಬೈಂದೂರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಲವು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಿತೀಶ್ ಬೈಂದೂರು ಈವರೆಗೂ ಹಲವಾರು ಪೋಟೋಗ್ರಫಿ ಸ್ವರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ. Read this ► ನಿತೀಶ್ ಸಾಧನೆಯ ಓಘಕ್ಕೆ ವೇಗ ಹೆಚ್ಚಿಸಿದ ಬೆಳದಿಂಗಳ ಗೌರವ – http://kundapraa.com/?p=1460

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಸರಕಾರಿ ಪದವಿ ಕಾಲೇಜುಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ತರಗತಿ ಆರಂಭಿಸಬೇಕು ಎಂದು ಹೊರಡಿಸಿರುವ ಆದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗದವರಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಆದೇಶ ಹಿಂಪಡೆಯಬೇಕೆಂಬ ಆಗ್ರಹ ಎಲ್ಲೆಡೆಯಿಂದಲೂ ಕೇಳಿ ಬರುತ್ತಿದೆ. ಕಳೆದ ವಾರ ಕಾಲೇಜು ಶಿಕ್ಷಣ ಆಯುಕ್ತರು ಬೆಳಿಗ್ಗೆ 8 ಗಂಟೆಯಿಂದಲೇ ತರಗತಿ ಆರಂಭಿಸಬೇಕು ಎಂದು ಆದೇಶಿಸಿದ್ದರು. ಈ ಆದೇಶದಿಂದಾಗಿ ನಗರ ಭಾಗದ ವಿದ್ಯಾರ್ಥಿಗಳಿಗೆ ಅಂತಹ ತೊಂದರೆ ಆಗದಿದ್ದರೂ ಹತ್ತಾರು ಕಿ.ಮೀ ಬಳಸಿ ಬರಬೇಕಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿ ಪರಣಮಿಸಿದೆ. ಇನ್ನು ಶೇ.80ರಷ್ಟು ಅತಿಥಿ ಉಪನ್ಯಾಸಕರೇ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಉಪನ್ಯಾಸಕರ ಸಂಬಳ ಹಾಗೂ ನೇಮಕಾತಿಯ ವಿಚಾರವೇ ಅತಂತ್ರವಾಗಿರುವಾಗ, ಬೆಳಿಗ್ಗೆ 8 ರಿಂದಲೇ ತರಗತಿ ಆರಂಭಿಸಬೇಕೆಂದು ಆದೇಶಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳಿಗ್ಗೆ ಬಸ್ ಸಂಪರ್ಕವಿಲ್ಲ, ಸುರಕ್ಷಿತವೂ ಅಲ್ಲ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಕೇಶ್ವರದ ಕಾವೇರಿ ಮಾರ್ಗದಲ್ಲಿ ಮಧ್ಯದಂಗಡಿಯನ್ನು ತೆರೆಯಲು ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸೋಮವಾರ ಮಧ್ಯದಂಗಡಿಗಾಗಿ ನಿಗದಿಪಡಿಸಿದ ಕಟ್ಟಡದ ಎದುರಿನಲ್ಲಿಯೇ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾವೇರಿ ಮಾರ್ಗದ ನಿವಾಸಿ ನಾಗರಾಜ ಗಾಣಿಗ ಬಂಕೇಶ್ವರ ಮಾತನಾಡಿ ಕಾವೇರಿ ಮಾರ್ಗದಲ್ಲಿ ಎಲ್ಲಾ ಸಮುದಾಯದವರೂ ಈವರೆಗೆ ಶಾಂತಿ ಸೌಹಾರ್ದದಿಂದ ಬದುಕುತ್ತಿದ್ದಾರೆ. ಪ್ರತಿನಿತ್ಯವೂ ಹತ್ತಾರು ಮಕ್ಕಳು, ಮಹಿಳೆಯರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಸಮೀಪದಲ್ಲಿ ದೇವಸ್ಥಾನ, ಅಂಗನವಾಡಿ ಕೇಂದ್ರ ಹಾಗೂ ಹತ್ತಾರು ಮನೆಗಳಿದ್ದು ಇಲ್ಲಿಯೇ ಮಧ್ಯದಂಗಡಿ ತೆರೆಯುವುದು ಸೂಕ್ತವಲ್ಲ. ಕಿರಿದಾದ ರಸ್ತೆಗೆ ತಾಕಿಕೊಂಡಿರುವ ಕಟ್ಟಡದಲ್ಲಿ ಅಂಗಡಿ ತೆರೆದರೆ ಈ ಮಾರ್ಗದಲ್ಲಿ ಸಂಚರಿಸುವುದೇ ಕಷ್ಟವಾಗಲಿದೆ. ತಹಶೀಲ್ದಾರರು, ಸ್ಥಳೀಯ ಪಂಚಾಯತ್ ಹಾಗೂ ಅಬಕಾರಿ ಇಲಾಖೆ ಈ ಬಗ್ಗೆ ಕೂಡಲೇ ಗಮನ ಹರಿಸಿ ಮಧ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿದರು. ಕುಂದಾಪ್ರ ಡಾಟ್ ಕಾಂ. ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ ಪ್ರತಿಕ್ರಿಯಿಸಿ ಸಾರ್ವಜನಿಕರಿಗೆ ತೀವ್ರ…

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ತಾಲೂಕಿನ ಪ್ರಸಿದ್ಧ ಸೌಕೂರು ದೇವಸ್ಥಾನಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಕಾವ್ರಾಡಿ ಹಾಗೂ ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ದುರಸ್ತಿ ಕಾಣದೇ ವರ್ಷಗಳೇ ಸಂದಿದ್ದು ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಚಾರವೇ ದುಸ್ತರವಾಗಿದ್ದು ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಸಮಸ್ಯೆಯ ಪರಿಹಾರಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ. ಸಂಪೂರ್ಣ ಹದಗೆಟ್ಟಿರುವ ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ವಾಹನ ಸವಾರರು ಪರಿತಪಿಸುವಂತಾಗಿದೆ. ಕಂಡ್ಲೂರಿನಿಂದ ಸೌಕೂರಿಗೆ ಸಾಗುವ ಸುಮಾರು 1.5 ಕಿ.ಮೀ ಡಾಮರು ರಸ್ತೆ ಸಂಪೂರ್ಣ ಮಾಯವಾಗಿ ಕೆಸರು ಮಯವಾಗಿದೆ. ಮಳೆಗಾಳದಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಈ ಹಿಂದೆ ಬಸ್ಸು ಸಂಪರ್ಕವನ್ನು ಹೊಂದಿದ್ದು ರಸ್ತೆಯ ಅವ್ಯವಸ್ಥೆಯನ್ನು ಕಂಡು ಕಳೆದ ಒಂದೂವರೆ ವರ್ಷದಿಂದ ಬಸ್ಸುಗಳೂ ಸಹ ಬರುವುದನ್ನು ನಿಲ್ಲಿಸಿವೆ. ಇಲ್ಲಿನ ಜನರು ಮುಖ್ಯ ರಸ್ತೆಯನ್ನು ತಲುಪಬೇಕಾದರೆ ನಡೆದುಕೊಂಡೇ ಸಾಗಬೇಕಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಕಷ್ಟಕರವಾದರೆ ರಸ್ತೆ ಸಮಸ್ಯೆಯಿಂದ ಆಟೋ ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಇಷ್ಟು ಪಡುತ್ತಿಲ್ಲ. ಈವರೆಗೆ ಜನಪ್ರತಿನಿಧಿಗಳು ರಸ್ತೆ ದುರಸ್ತಿಯ ಬಗ್ಗೆ…

Read More