ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕ್ವಾಡಿ, ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭ ಜರುಗಿತು.
ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅವರು ಶಾಲಾ ಸಂಸತ್ತನ್ನು ಉದ್ಘಾಟಿಸಿ ಸಂದರ್ಭಗಳೇ ಸಂಬಂಧಗಳ ಆಳವನ್ನು ಮತ್ತು ವಾಸ್ತವವನ್ನು ತಿಳಿಸುವಂತೆ, ಶಾಲಾ ಸಂಸತ್ತು ಮಕ್ಕಳಿಗೆ ಸಂಸತ್ತಿನ ಬಗ್ಗೆ ಮೌಲ್ಯಯುತವಾದ ಅಂಶವನ್ನು ತಿಳಿಸಿದರು.
ಸೋಲು ಗೆಲುವು ಇವೆರಡು ಜೀವನದ ಒಂದು ಭಾಗವಾಗಿದೆ. ಬದುಕಿನ ಎರಡು ಮುಖಗಳಾಗಿವೆ. ಇಂತಹ ಸಂದರ್ಭದಲ್ಲಿಯುವ ಪೀಳಿಗೆಯ ವಿದ್ಯಾರ್ಥಿಗಳಾದ ನೀವು ಶಾಸಕಾಂಗದ ಪ್ರತಿನಿಧಿಯಾಗಿ ಚುನಾಯಿತರಾದಲ್ಲಿ ಈಗಿನ ಶಾಸಕಾಂಗದ ನಿಯಮಗಳನ್ನು ಸಧೃಡಗೊಳಿಸುವಲ್ಲಿ ಪ್ರಯತ್ನಿಸುವವರಾಗಿರಬೇಕು ಎಂದು ಸಲಹೆ ನೀಡಿದರು. ಹಾಗೆಯೇ ಸಂಸತ್ತಿನ ಬಗ್ಗೆ ವಿದ್ಯಾರ್ಥಿಗಳಿಗಿದ್ದ ಕೆಲವು ಗೊಂದಲಗಳನ್ನು ನಿವಾರಿಸಿದರು. ಮಕ್ಕಳ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಾಂಡ್ಯಾ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯ ನಿರ್ವಾಹಕರಾದ ಕೆ. ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸನ್ನಿ ಪಿ. ಜಾನ್ ಮತ್ತು ಗುರುಕುಲ ಪಬ್ಲಿಕ್ ಶಾಲಾ ಪ್ರಾಂಶುಪಾಲರಾದ ಸಾಯಿಜು ಕೆ. ಆರ್ ನಾಯರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರತೀಕ್ಷಾ ಪೈ ಸ್ವಾಗತಿಸಿ ಚರಿತ್ರಾ ಶೆಟ್ಟಿ ವಂದಿಸಿದರು.