ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಗುರುಕುಲ ಪಿ.ಯು. ಕಾಲೇಜಿಗೆ 96% ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಉತ್ಪಲ್ ಉದಯ್ ಶೆಟ್ಟಿ (579 ) , ಆದಿತ್ಯ ಶೆಟ್ಟಿ (571) ಹಾಗೂ ವಾಣಿಜ್ಯ ವಿಭಾಗದಲ್ಲಿ ಶ್ರೀಕಲ್ಪ ಭಟ್ (560) ಅಂಕ ಪಡೆದು ಕಾಲೇಜಿನ ಟಾಪರ್ ಎನಿಸಿಕೊಂಡಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
Author: ನ್ಯೂಸ್ ಬ್ಯೂರೋ
2013 ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ ಪ್ರಕರಣ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಂಡಾರು ಆರ್‌ಟಿಐ ಕಾರ್ಯಕರ್ತ ಕೊಲೆ ಆಪಾಧಿತರ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಮುಕ್ತಗೊಳಿಸಿ, ಆದೇಶ ಮಾಡಿದ್ದಾರೆ. ಜ್ಯೋತಿಸಿ ರಮೇಶ್ ಬಾಯರಿ. ಬಾಯರಿ ಸಂಬಂಧಿ ಸುಬ್ರಮಣ್ಯ ಉಡುಪ. ಬೆಂಗಳೂರು ಉಮೇಶ, ಬನಶಂಕರಿ ಹೊಸಕೆರೆ ಹಳ್ಳಿ ನವೀನ್, ರಾಘವೇಂದ್ರ, ಮೋಹನ್ ಕುಮಾರ್, ರವಿಚಂದ್ರ ಹಾಗೂ ವಿಜಯ ಸಾರಥಿ ಎಂಬವರನ್ನು ಗುರುವಾರ ದೋಷಮುಕ್ತಿಗೊಳಿಸಲಾಗಿದೆ. ಆರ್.ಟಿ.ಐ. ಕಾರ್ಯಕರ್ತ ವಂಡಾರು ವಾಸುದೇವ ಅಡಿಗೆ ಕೊಲೆಯಾದ ವ್ಯಕ್ತಿ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಅಂದಿನ ಕುಂದಾಪುರ ಡಿಎಸ್ಟಿ ಯಶೋದಾ ಒಂಟಗೋಡಿ ನ್ಯಾಯಾಲಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ೯೬ ಸಾಕ್ಷಿಗಳ ಹೇಳಿಕೆ ಪಡೆಯಲಾಗಿತ್ತು. ಪ್ರಮುಖ ಆರೋಪಿ ರಮೇಶ್ ಬಾಯರಿಗೆ ಎರಡು ವರ್ಷ ಜಾಮೀನು ಕೂಡ ಸಿಕ್ಕದೆ, ಜೈಲು ವಾಸ ಅನುಭವಿಸಿದ್ದರು. ಪ್ರಕರಣದ ಹಿನ್ನೆಲೆ: ಆರ್.ಟಿ.ಐ. ಕಾರ್ಯಕರ್ತ ವಾಸುದೇವ ಅಡಿಗ 2013…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಾಧಿಕಾ ಪೈ ಇತ್ತೀಚಿಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಗಂಗೊಳ್ಳಿಯಲ್ಲಿ ಸಂಭ್ರಮ ಮನೆ ಮಾಡಿದೆ. ಊರಿನ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಅನೇಕ ಗಣ್ಯರು ಊರಿನ ಜನರು ತಂಡೋಪ ತಂಡವಾಗಿ ರಾಧಿಕಾ ಪೈ ಮನೆಗೆ ತೆರಳಿ ಶುಭ ಹಾರೈಸಿದ್ದಾರೆ. ಅನೇಕರು ದೂರವಾಣಿ ಕರೆ ಮಾಡಿ ಅಭಿನಂದಿಸಿ ಶುಭ ಹಾರೈಸಿದ್ದಾರೆ. ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕಾಶೀನಾಥ ಪೈ, ಎಚ್.ಗಣೇಶ ಕಾಮತ್, ಎನ್.ಸದಾಶಿವ ನಾಯಕ್, ಕೆ.ರಾಮನಾಥ ನಾಯಕ್, ಶಾಲೆಯ ನಿವೃತ್ತ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ರಾಘವೇಂದ್ರ ಶೇರುಗಾರ್ ಮೊದಲಾದವರು ಶುಭ ಹಾರೈಸಿದ್ದಾರೆ. ಗಂಗೊಳ್ಳಿ ಜಿಎಸ್‌ಬಿ ಸಮಾಜದ ಪರವಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ವೇದಮೂರ್ತಿ ಜಿ.ವೇದವ್ಯಾಸ…
ದ್ವಿತೀಯ ಪಿಯುಸಿಯಲ್ಲಿ ಎಸ್.ವಿ ಕಾಲೇಜಿನ ವಿದ್ಯಾರ್ಥಿನಿಯ ಸಾಧನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಾಧಿಕಾ ಪೈ ಅವರು ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ೫೯೬ ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾಳೆ. ಗಂಗೊಳ್ಳಿಯ ಪೋಸ್ಟ್ ಆಫೀಸಿನ ಬಳಿಯ ಉದ್ಯಮಿ ಎಂ.ಮಾಧವ ವಿ.ಪೈ ಹಾಗೂ ಎಂ.ಮಾಯಾ ಎಂ.ಪೈ ಅವರ ಏಕೈಕ ಪುತ್ರಿಯಾಗಿರುವ ಈಕೆ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಂಸ್ಕೃತ-೯೮, ಇಂಗ್ಲೀಷ್-೯೮, ಭೌತಶಾಸ್ತ್ರ-೧೦೦, ರಸಾಯನಶಾಸ್ತ್ರ-೧೦೦, ಜೀವಶಾಸ್ತ್ರ-೧೦೦, ಲೆಕ್ಕಶಾಸ್ತ್ರ-೧೦೦ ಅಂಕ ಗಳಿಸಿ ಅದ್ಭುತ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿ ಗಂಗೊಳ್ಳಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ರಾಧಿಕಾ ಪೈ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಸರಸ್ವತಿ ವಿದ್ಯಾಸಂಸ್ಥೆಗಳ ಅಧ್ಯಾಪಕರು, ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ರಾಜ್ಯದಲ್ಲಿ ಗರಿಷ್ಠ ಪಿಯುಸಿ ವಿದ್ಯಾರ್ಥಿಗಳನ್ನು ಹೊಂದಿರುವ ಹಿರಿಮೆಯ ಆಳ್ವಾಸ್ ಪದವಿ ಪೂರ್ವ ಕಾಲೇಜು ಸೇ 98.66 ಫಲಿತಾಂಶ ದಾಖಲಿಸಿದೆ. ಟಾಪ್ ಟೆನ್ ವಿದ್ಯಾಥರ್ಿಗಳ ಸಾಲಿನಲ್ಲಿ ಕಾಮಸರ್್ನ ಸ್ಪಂದನ (594) 2ನೇ ರ್ಯಾಂಕ್ ಸಹಿತ ಆಳ್ವಾಸ್ನ ಐದು ಮಂದಿ ವಿದ್ಯಾಥರ್ಿಗಳು ಸಾಧನೆ ಮೆರೆದಿದ್ದಾರೆ. ಕಾಮಸರ್್ನ ಅನಿತಾ, ಸ್ವಾತಿ (ತಲಾ 593 ಅಂಕಗಳು) ವಿಜ್ಞಾನ ವಿಭಾಗದಲ್ಲಿ ನಿಹಾರಿಕಾ ಮತ್ತು ಮಹಾಗುಂಡಯ್ಯ ವಸ್ತದ (ತಲಾ 594)ಅಂಕಗಳೊಂದಿಗೆ ಟಾಪ್ಟೆನ್ನಲ್ಲಿ ಸ್ಥಾನ ಪಡೆದಿದ್ದಾರೆ. ಒಟ್ಟು 5241 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿ 5171 ಮಂದಿ ಉತೀರ್ಣರಾಗಿದ್ದು ಶೇ 98.66 ಫಲಿತಾಂಶ ಲಭಿಸಿದೆ. ಆಳ್ವಾಸ್ನಿಂದ 2193 ವಿದ್ಯಾಥರ್ಿಗಳು ಶೇ 85ಕ್ಕೂ ಹೆಚ್ಚಿನ ಫಲಿತಾಂಶ ಪಡೆದಿರುವುದು, 21 ಮಂದಿ 590ಕ್ಕೂ ಮಿಕ್ಕಿದ ಅಂಕಗಳನ್ನು ಗಳಿಸಿರುವುದು ಹಾಗೂ 417 ಮಂದಿ ವಿದ್ಯಾಥರ್ಿಗಳು ತಲಾ 570ಕ್ಕೂ ಅಧಿಕ ಅಂಕಗಳಿಸಿರುವುದು ದಾಖಲೆಯಾಗಿದೆ. ಕಲಾ ವಿಭಾಗದಲ್ಲಿ ಅಂಧ ವಿದ್ಯಾರ್ಥಿ ಪ್ರಕಾಶ್ ಬಲಗಣ್ಣೂರು (553) ವಾಣಿಜ್ಯ ವಿಭಾಗದಲ್ಲಿ ಪೊಲೀಯೋ ಪೀಡಿತ ದೀಕ್ಷಿತ್ ಶೆಟ್ಟಿ(573)…
ಕುಂದಾಪ್ರ ಡಾಟ್ ಕಾಂ | ಕುಂದಾಪುರ ಪರಿಸರದಲ್ಲಿ ಉತ್ತಮ ಗುಣಮಟ್ಟದ ಮತ್ತು ಮೌಲ್ಯಪೂರ್ಣ ಶೈಕ್ಷಣಿಕ ಅವಕಾಶಗಳು ವಿಪುಲವಾಗಿ ತೆರೆದುಕೊಳ್ಳದ ಕಾಲಘಟ್ಟದಲ್ಲಿ ಅಂದರೆ 1975ರ ವೇಳೆಗೆ ಹುಟ್ಟಿಕೊಂಡದ್ದು ಕುಂದಾಪುರ ಎಜ್ಯುಕೇಶನ್ ಸೊಸೈಟಿ. ಕುಂದಾಪುರ ಹೃದಯ ಭಾಗದಲ್ಲಿ ತನ್ನ ನೆಲೆಯನ್ನು ಕಂಡುಕೊಂಡ ಈ ಸೊಸೈಟಿ ಆರಂಭಗೊಂಡದ್ದು ನರ್ಸರಿ ತರಗತಿಯ ಮೂಲಕ ಈಗ ಪದವಿವರೆಗೆ ಬೆಳೆದು ನಿಂತಿದೆ. ಕುಂದಾಪುರ ತಾಲೂಕಿನ ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಸುವ ಬಡ ಮತ್ತು ಪ್ರತಿಭಾನ್ವಿತ ವಿದ್ಯಾಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಸಾಮಾಜಿಕ ಬದ್ಧತೆಯೊಂದಿಗೆ ನಾಲ್ಕು ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸಿದೆ. ಪ್ರಸ್ತುತ ಈ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ನಾಲ್ಕು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣದೊಂದಿಗೆ ಇನ್ನಿತರ ಕಲಿಕೆ, ಸಾಹಿತ್ಯ, ಕಲೆ, ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ವಿಪುಲ ಅವಕಾಶಗಳಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಈ ಶಿಕ್ಷಣ ಸಂಸ್ಥೆಗಳು ತಮ್ಮನ್ನು ಗುರುತಿಸಿಕೊಂಡು ಎಲ್ಲರ ಗಮನ ಸೆಳೆದಿದೆ. ಆರ್ಥಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠವೆಂದರೆ ಒಂದು ರೀತಿಯಲ್ಲಿ ಸೂಪರ್ ಬಜಾರ್ ಇದ್ದಹಾಗೆ. ಅಲ್ಲಿ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ದೊರೆಯುವಂತೆ ಮಠಕ್ಕೆ ಬರುವ ಭಕ್ತರ ಎಲ್ಲಾ ಕೋರಿಕೆಗಳಿಗೂ ರಾಯರು ಸ್ಪಂದಿಸುವ ಮೂಲಕ ತಕ್ಷಣ ಪೂರೈಸಲಾಗುತ್ತದೆ ಎಂದು ಮಂತ್ರಾಲಯ ಪೀಠಾಧಿಪತಿ ಶ್ರೀಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಹೇಳಿದರು. ಉಪ್ಪುಂದದಲ್ಲಿರುವ ಮಂತ್ರಾಲಯದ ಶಾಖಾ ಮಠಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು. ಕಾಮಧೇನು, ಕಲ್ಪವೃಕ್ಷಗಳನ್ನು ಭಕ್ತಿ, ಶೃದ್ಧೆಯಿಂದ ಮೈಮರೆತು ಪೂಜಿಸಿ, ತಾಳತಟ್ಟುತ್ತಾ ಭಜಿಸುವುದರಿಂದ ಪ್ರಸನ್ನೀಕರಿಸಿಕೊಂಡಾಗ ಮಾತ್ರ ಜ್ಞಾನ ಪ್ರಾಪ್ತಿ, ಭೂತ-ಪ್ರೇತ ಬಾಧೆ, ಸಕಲ ರೋಗೋಪದ್ರವಗಳು ಕೂಡಾ ಪರಿಹಾರವಾಗುತ್ತದೆ. ಭವರೋಗವೈದ್ಯ ಎನಿಸಿಕೊಂಡ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಪ್ರತ್ಯಕ್ಷ ದೇವರು ಎಂದರು. ಉಪ್ಪುಂದ ಶಾಖಾಮಠದ ಸ್ಥಳದಾನಿ ಹಾಗೂ ಉಸ್ತುವಾರಿ ಯು. ಸತ್ಯನಾರಾಯಣ ಪುರಾಣಿಕ್ ದಂಪತಿಗಳು ಸ್ವಾಮೀಜಿಯವರನ್ನು ಮಠಕ್ಕೆ ಬರಮಾಡಿಕೊಂಡರು ಕರ್ನಾಟಕ ಬ್ಯಾಂಕಿನ ಜನರಲ್ ಮೇನೆಜರ್ ಉಪ್ಪುಂದ ಸುಭಾಸ್ ಪುರಾಣಿಕ ಮತ್ತು ಸಹೋದರರು ಕೊಡಮಾಡಿದ ರಜತ ಕವಚವನ್ನು ರಾಯರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಿತ್ರ ಸಂಗಮ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ. ಜನಪರ ಜನಪಯೋಗಿ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ವಿಂಶತಿ ಉತ್ಸವಕ್ಕೆ ಅರ್ಥ ತುಂಬಿದ್ದಾರೆ. ಯುವಕರಿಗೆ ಜಾವಬ್ದಾರಿ ಇದೆ. ಯುವಕರಲ್ಲಿ ಇರುವ ಶಕ್ತಿ ಬೇರೆ ಯಾರಲ್ಲೂ ಇಲ್ಲ.ನಮ್ಮಲ್ಲಿ ಹೆಚ್ಚು ಶಕ್ತಿ ಇದ್ದ ಸಂದರ್ಭದಲ್ಲಿ ಯಾರು ಕಷ್ಟದಲ್ಲಿದ್ದವರಿಗೆ, ಕಣ್ಣಿರಿನಲ್ಲಿದ್ದವರಿಗೆ, ಆಸಹಾಯಕರಿಗೆ ಸಹಾಯ ಮಾಡಬೇಕು. ಆ ಕೆಲಸವನ್ನು ಮಿತ್ರ ಸಂಗಮ ಸಂಸ್ಥೆ ಮಾಡಿದೆ ಎಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಬೀಜಾಡಿ ಗೋಪಾಡಿ ಮಿತ್ರಸಂಗಮ ವಿಂಶತಿ ಸಮಾರೋಪ ಸಮಾರಂಭದಲ್ಲಿ ಇಪ್ಪತ್ತು ಮಂದಿ ಸಾಧಕರಿಗೆ ಸನ್ಮಾನ, ಅಶಕ್ತರಿಗೆ ಸಹಾಯಧನ, ಹೊಲಿಗೆ ಯಂತ್ರ,ಗಾಲಿ ಕುರ್ಚಿ,ಊರುಗೋಲು ವಿತರಿಸಿ,ವಿಂಶತಿ ದರ್ಶನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ನನ್ನ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಯುವಜನ ಮೇಳವನ್ನು ಸಂಘಟಿಸಲು ಯುವಕ ಮಂಡಲಗಳು ಹಿಂದೆಟು ಹಾಕುವ ಸಂದರ್ಭದಲ್ಲಿ ಮಿತ್ರ ಸಂಗಮದವರು ಈ ವರ್ಷ ತಾಲೂಕು ಮಟ್ಟದ ಯುವಜನಮೇಳವನ್ನು ಯಶಸ್ವಿಯಾಗಿ ಸಂಘಟಿಸಿ ಇಲಾಖೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮುದಾಯವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೊತೆಗೂಡಿ ನಡೆಸಿದ ಹತ್ತು ದಿನಗಳ ರಂಗರಂಗು ರಜಾಮೇಳದ ಸಮಾರೋಪ ಸಮಾರಂಭ ಮತ್ತು ಮೇಳದ ಮಕ್ಕಳ ನಾಟಕ ಪ್ರದರ್ಶನ ಕುಂದಾಪುರದ ಗಾಂಧಿಪಾರ್ಕಿನ ಬಾಲಭವನದಲ್ಲಿ ನಡೆಯಿತು. ಸಮಾರೋಪ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೆ.ಸಿ.ಐ ಚರಿಷ್ಮಾ, ಕುಂದಾಪುರ ಇದರ ಅಧ್ಯಕ್ಷರಾದ ಶ್ರೀಮತಿ ಗೀತಾಂಜಲಿ ಆರ್ ನಾಯ್ಕ್ ಮಾತನಾಡಿ ಮಕ್ಕಳ ಬಾಲ್ಯವು ಅವರ ಇಡೀ ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ಅಂತಹ ಬಾಲ್ಯವನ್ನು ಕಟ್ಟಲು ಸಮುದಾಯ ನಡೆಸುವ ಮಕ್ಕಳ ಮೇಳ ಸಹಕಾರಿ ಎಂದರು. ಸಭೆಯಲ್ಲಿ ಶ್ರೀ ಕೆ.ಆರ್ ನಾಯ್ಕ್, ಶ್ರೀಮತಿ ಅಭಿಲಾಷಾ ಹಂದೆ, ಸಿ.ಡಿ.ಪಿ.ಓ ಶ್ರೀಮತಿ ಶಶಿಕಲಾ ಸಭೆಯಲ್ಲಿ ಉಪಸ್ಥಿತರಿದ್ದರು. ಸಮುದಾಯ ಕುಂದಾಪುರದ ಅಧ್ಯಕ್ಷರಾದ ಉದಯ ಗಾಂವಕಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಾಸುದೇವ ಗಂಗೇರ ಸ್ವಾಗತಿಸಿದರು. ರವಿ ಕಟ್ಕೆರೆ ವಂದಿಸಿದರು. ಸದಾನಂದ ಬೈಂದೂರು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಚಿನ್ನಾ ವಾಸುದೇವ ನಿರ್ದೇಶನದಲ್ಲಿ ‘ಮಳೆ ಬಂತು ಮಳೆ‘ ಮತ್ತು ವಿನಾಯಕ ಎಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಎರಡನೇ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಸತತ ಗೊಂಬೆಯಾಟ ತರಬೇತಿ ಪಡೆದುಕೊಂಡ ಅಕಾಡೆಮಿಯ ವಿದ್ಯಾರ್ಥಿಗಳಾದ ಸಂತೋಷ್ ಪ್ರಭು, ಸುದೀಪ್ ಸೇರುಗಾರ್ ಮತ್ತು ಅಭಿಷೇಕ್ ದೇವಾಡಿಗ ಇವರನ್ನು ಅರ್ಹತಾ ಪತ್ರ ನೀಡಿ ಸನ್ಮಾನಿಸಲಾಯಿತು. ನಂತರ ಅಕಾಡೆಮಿಯ ವಿದ್ಯಾರ್ಥಿಗಳಿಂದ ಗೊಂಬೆಯಾಟ ಪ್ರಾತ್ಯಕ್ಷಿಕೆ ನಡೆಯಿತು.
