Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ ಎಜ್ಯುಕೇಶನ್ ಸೊಸೈಟಿ: ವಿದ್ಯಾರ್ಥಿಗಳ ಭವ್ಯ ಭವಿಷ್ಯಕೊಂದು ಬುನಾದಿ
    Recent post

    ಕುಂದಾಪುರ ಎಜ್ಯುಕೇಶನ್ ಸೊಸೈಟಿ: ವಿದ್ಯಾರ್ಥಿಗಳ ಭವ್ಯ ಭವಿಷ್ಯಕೊಂದು ಬುನಾದಿ

    Updated:31/05/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ |
    ಕುಂದಾಪುರ ಪರಿಸರದಲ್ಲಿ ಉತ್ತಮ ಗುಣಮಟ್ಟದ ಮತ್ತು ಮೌಲ್ಯಪೂರ್ಣ ಶೈಕ್ಷಣಿಕ ಅವಕಾಶಗಳು ವಿಪುಲವಾಗಿ ತೆರೆದುಕೊಳ್ಳದ ಕಾಲಘಟ್ಟದಲ್ಲಿ ಅಂದರೆ 1975ರ ವೇಳೆಗೆ ಹುಟ್ಟಿಕೊಂಡದ್ದು ಕುಂದಾಪುರ ಎಜ್ಯುಕೇಶನ್ ಸೊಸೈಟಿ. ಕುಂದಾಪುರ ಹೃದಯ ಭಾಗದಲ್ಲಿ ತನ್ನ ನೆಲೆಯನ್ನು ಕಂಡುಕೊಂಡ ಈ ಸೊಸೈಟಿ ಆರಂಭಗೊಂಡದ್ದು ನರ್ಸರಿ ತರಗತಿಯ ಮೂಲಕ ಈಗ ಪದವಿವರೆಗೆ ಬೆಳೆದು ನಿಂತಿದೆ. ಕುಂದಾಪುರ ತಾಲೂಕಿನ ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಸುವ ಬಡ ಮತ್ತು ಪ್ರತಿಭಾನ್ವಿತ ವಿದ್ಯಾಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಸಾಮಾಜಿಕ ಬದ್ಧತೆಯೊಂದಿಗೆ ನಾಲ್ಕು ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸಿದೆ. ಪ್ರಸ್ತುತ ಈ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ನಾಲ್ಕು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣದೊಂದಿಗೆ ಇನ್ನಿತರ ಕಲಿಕೆ, ಸಾಹಿತ್ಯ, ಕಲೆ, ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ವಿಪುಲ ಅವಕಾಶಗಳಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಈ ಶಿಕ್ಷಣ ಸಂಸ್ಥೆಗಳು ತಮ್ಮನ್ನು ಗುರುತಿಸಿಕೊಂಡು ಎಲ್ಲರ ಗಮನ ಸೆಳೆದಿದೆ.

    Click Here

    Call us

    Click Here

    ಆರ್ಥಿಕ ತೊಂದರೆಗಳನ್ನು ಅನುಭವಿಸುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿಗಳ ಶುಲ್ಕ ವಿನಾಯಿತಿಯನ್ನು ನೀಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರ ಆಶಯ, ಬಡ ವಿದ್ಯಾರ್ಥಿಗಳು ಆರ್ಥಿಕ ಮುಗ್ಗಟ್ಟಿನಿಂದಾಗಿ ಶಿಕ್ಷಣದಿಂದ ವಂಚಿತರಾಗ ಬಾರದೆಂಬುವುದು.

    [quote bcolor=”#ffffff” arrow=”yes” align=”right”]ಯಶಸ್ಸಿನ ರೂವಾರಿ:


    ಬಿ. ಎಮ್. ಸುಕುಮಾರ ಶೆಟ್ಟಿ

    ಕರಾವಳಿ ಕುಂದಾಪುರ ಪರಿಸರದ ಶೈಕ್ಷಣಿಕ, ಧಾರ್ಮಿಕ, ಔಧ್ಯಮಿಕ, ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಕೇಳಿ ಬರುವ ಮಹತ್ವಪೂರ್ಣ ಹೆಸರು  ಬಿ. ಎಮ್. ಸುಕುಮಾರ ಶೆಟ್ಟಿ. ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂಬ ಧ್ಯೇಯವನ್ನು ಇಟ್ಟುಕೊಂಡು ಹಗಲಿರುಳು ಶಿಕ್ಷಣ ಸಂಸ್ಥೆಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಶಿಕ್ಷಣದ ಬಗ್ಗೆ ಅಪಾರ ಕಾಳಜಿ, ಕಳಕಳಿ ಹೊಂದಿರುವ ಶ್ರೀಯುತರು ತಮ್ಮ ಯೋಚನೆ, ಯೋಜನೆಗಳನ್ನು ಕಾರ್ಯರೂಪಗೊಳಿಸಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸಿದ ಈ ಸಂಸ್ಥೆಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರ ಜೊತೆಗೆ, ಇಂದಿನ ಶೈಕ್ಷಣಿಕ ಅವಸರಗಳಿಗೆ ಎಲ್ಲಾ ನೆಲೆಯಲ್ಲಿಯೂ ಸ್ಪಂದಿಸುತ್ತಿರುವುದು ಶ್ರೀಯುತರ ದಕ್ಷ ಆಡಳಿತಕ್ಕೆ ಹಿಡಿದ ಕನ್ನಡಿ. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಈ ಎಲ್ಲಾ ವಿದ್ಯಾ ಸಂಸ್ಥೆಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾದರಿ ಸಂಸ್ಥೆಗಳನ್ನಾಗಿ ರೂಪಿಸಬೇಕೆಂಬ ಉತ್ಕಟ ಹಂಬಲವನ್ನು ಹೊಂದಿದ್ದಾರೆ.[/quote]

    Click here

    Click here

    Click here

    Call us

    Call us

    ಸಂಸ್ಥೆಯ ವೈಶಿಷ್ಟ್ಯಗಳು – ಕಾಳಜಿಗಳು:
    ಆರೋಗ್ಯಕರ ವಾತಾವರಣದಲ್ಲಿ ಮೌಲ್ಯಾಧಾರಿತ ಶಿಕ್ಷಣ.
    ವಿದ್ಯಾರ್ಥಿಗಳಿಗೆ ನಿರಂತರ ಮಾರ್ಗದರ್ಶನಕ್ಕಾಗಿ ಮೆಂಟರಿಂಗ್ ವಿಧಾನ.
    ವಿವಿಧ ವೇದಿಕೆಗಳ ಮೂಲಕ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ತರಬೇತಿ.
    ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ತರಬೇತಿ.
    ಪರಿಣಿತ ಹಾಗೂ ಕ್ರೀಯಾಶೀಲ ಶಿಕ್ಷಕ ವೃಂದವನ್ನು ಪರಿಣಾಮಕಾರಿಯಾಗಿ ತೊಡಗಿಸುವುದು.
    ಪಿ.ಯು.ಸಿ ಯಲ್ಲಿ ಪಠ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲಿ ಶುಲ್ಕ ವಿನಾಯಿತಿ.

    ಆದ್ಯತೆಗಳು:
    ವಿದ್ಯಾರ್ಥಿಗಳ ಸಮಗ್ರ ಮತ್ತು ನಿರಂತರ ಬೆಳವಣಿಗೆಗೆ ಪ್ರೋತ್ಸಾಹ.
    ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ.
    ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಶೇಷ ಗಮನ.
    ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ, ಅವರಿಂದ ಮಹತ್ತರ ಸಾಧನೆ.
    ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ನಿರಂತರ ಉತ್ತೇಜನ.
    ಕಾಲಕ್ಕೆ ತಕ್ಕಂತೆ ಶಿಕ್ಷಕರಿಗೆ ಪರಿಣತರಿಂದ ತರಬೇತಿ.

    ಆಂತರಿಕ ವ್ಯವಸ್ಥೆ:
    ಶಿಸ್ತು ಮತ್ತು ಶುಚಿತ್ವದ ವಾತಾವರಣ.
    ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ನೆಲೆಯಲ್ಲಿ ಮಾರ್ಗದರ್ಶನ, ಶೈಕ್ಷಣಿಕ ಪ್ರಗತಿಗೆ ಪ್ರೇರಣೆ.
    ಹೊಸ ಯೋಜನೆಗಳೊಂದಿಗೆ ಮಾರ್ಗದರ್ಶನ ಹಾಗೂ ಕ್ಲಪ್ತ ಅನುಷ್ಠಾನ.
    ಉತ್ಕೃಷ್ಟ ಗುಣಮಟ್ಟದ ಗ್ರಂಥಾಲಯ ಹಾಗೂ ಪ್ರಯೋಗಾಲಯ.
    ವಾಹನ ಸೌಲಭ್ಯ, ಹಾಸ್ಟೆಲ್ ಸೌಲಭ್ಯ ಹಾಗೂ ಶುಚಿ-ರುಚಿಯಾದ ಮಧ್ಯಾಹ್ನದ ಭೋಜನ ವ್ಯವಸ್ಥೆ.
    ಪೋಷಕ-ಶಿಕ್ಷಕರ ನಿರಂತರ ಸಂಪರ್ಕ, ಚರ್ಚೆ ಮತ್ತು ಪೋಷಕರ ಸಲಹೆಗಳಿಗೆ ಸ್ಪಂದನೆ.

    ಎಚ್.ಎಮ್. ಎಮ್ ನರ್ಸರಿ & ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ:
    ಕುಂದಾಪುರ ಪರಿಸರದಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ಸಾಮಾನ್ಯವರ್ಗಕ್ಕೆ ಕನಸಾಗಿದ್ದ 1975ರ ಹೊತ್ತಿಗೆ ಯೋಚನೆ, ಯೋಜನೆಯಾಗಿ ಧೈರ್ಯ, ಆಸ್ತೆಯಿಂದ ಹುಟ್ಟಿಕೊಂಡ ಎಚ್. ಎಮ್. ಎಮ್. ಸಂಸ್ಥೆಗೆ ಈಗ ನಲವತ್ತೆರಡರ ಹರೆಯ.

    ಕಾಳಜಿ: ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಶಾಲೆಯೆಂದರೆ ಸಂತಸದ ತಾಣವಾಗಿರಬೇಕು. ಈ ನೆಲೆಯಲ್ಲಿ ನಮ್ಮ ಸಂಸ್ಥೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ವಿಭಿನ್ನವಾಗಿ ಆಯೋಜಿಸಿ ಮಕ್ಕಳಿಗೆ ಕಲಿಕೆಯೊಂದನ್ನು ಸಂಭ್ರಮವಾಗಿಸುವಲ್ಲಿ ಕಾಳಜಿ ವಹಿಸುತ್ತಿದೆ. ಕಲಿಕೆಯನ್ನು ಸಾಮಾಜಿಕ ಕಾಳಜಿಯೊಂದಿಗೆ ಹೊಂದಾಣಿಸುವುದು, ಜ್ಞಾನ, ಕೌಶಲ, ಸ್ವತಂತ್ರ ಚಿಂತನೆಗಳಿಗೆ ಒತ್ತುಕೊಟ್ಟು, ದೈನಂದಿನ ಜೀವನಶೈಲಿಯೊಂದಿಗೆ ಸಮ್ಮಿಲನಗೊಳಿಸುವುದು ಹಾಗೂ ಪ್ರತೀ ಮಗುವಿನಲ್ಲಿ ಬಿಂಬಿತವಾಗುತ್ತಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರದರ್ಶಿಸುವಂತೆ ಮಾಡುವ ಪೂರಕ ವಾತಾವರಣದ ನಿರ್ಮಾಣ ನಮ್ಮ ಸಂಸ್ಥೆಯ ಬೋಧಕ ವರ್ಗದ ಮೊದಲ ಆದ್ಯತೆ.

    ಮೆಂಟರಿಂಗ್: ಮಕ್ಕಳನ್ನು ಅರಿತು, ಅವರು ದೃಢವಾದ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸುವ ಶಾಲೆಯ ವಿಭಿನ್ನ ಪ್ರಯತ್ನವೇ ಮೆಂಟರಿಂಗ್, ಈ ವ್ಯವಸ್ಥೆಯಲ್ಲಿ ಪ್ರತೀ ಶಿಕ್ಷಕನು ಮಗುವಿನ ಮನಸ್ಸನ್ನು ಅರ್ಥೈಸಿಕೊಂಡು ಅವರಲ್ಲಿ ಧೈರ್ಯ, ಭರವಸೆ, ಆತ್ಮವಿಶ್ವಾಸವನ್ನು ಮೂಡಿಸುವ ಮೂಲಕ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸುವ ಮಾರ್ಗದರ್ಶಿಯಾಗಿರುತ್ತಾನೆ.

    ಪ್ರಥಮ ಪ್ರಯೋಗ: ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಗಳ ಸಾಲಿನಲ್ಲಿಯೇ ಪ್ರಥಮ ಪ್ರಯೋಗವಾದ TWINKLING STARS….with sparkling eyes ಹೆಸರಿನ ತರಗತಿವಾರು ಹಸ್ತಪತ್ರಿಕೆಯು ಪ್ರತೀ ಮಗುವಿನ ವಿಭಿನ್ನವಾದ ಆಲೋಚನೆ, ದೃಷ್ಟಿಕೋನ, ಸೃಜನಶೀಲತೆ ಮತ್ತು ಸ್ವಂತಿಕೆಯನ್ನು ಅಚ್ಚೊತ್ತಿದಂತಿದೆ.

    ಆಶಯ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಎಲ್ಲಾ ಅವಶ್ಯಕತೆಗಳನ್ನು ಈಡೇರಿಸುವ ಅಭಿಲಾಷೆಯೊಂದಿಗೆ ಸಂಸ್ಥೆ ಹೊಸ ಪರಿಸರದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಲಿದೆ. ( ಮುಖ್ಯ ಶಿಕ್ಷಕಿ: ಚಿಂತನಾ ರಾಜೇಶ್ )

    ವಿ.ಕೆ.ಆರ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆ:
    ಸಮತೋಲಿತ ವ್ಯಕ್ತಿತ್ವದೊಂದಿಗೆ ಒಳ್ಳೆಯ ನಾಗರಿಕರನ್ನಾಗಿ ರೂಪಿಸುವ ಹಾಗೂ ಕಲಿಕೆ, ಕ್ರೀಡೆ, ಸಾಂಸ್ಕೃತಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಪ್ರೌಡಿಮೆ ಸಾಧಿಸಲು ಅವಕಾಶಗಳನ್ನು ಕಲ್ಪಿಸುವ ಹಿನ್ನಲೆಯಲ್ಲಿ 1982ರಲ್ಲಿ ಸ್ಥಾಪನೆಯಾದ ಸಂಸ್ಥೆ ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ.

    ಈ ಸ್ತರದಲ್ಲಿ ಮಕ್ಕಳಿಗೆ ಸೃಜನಶೀಲತೆಗೆ ಒತ್ತುನೀಡಿ ವಿವಿಧ ಆಸಕ್ತಿದಾಯಕ ಕಲಿಕಾ ಚಟುವಟಿಕೆಗಳನ್ನು ಬಹಳ ಆಸ್ತೆ ಮತ್ತು ಕಾಳಜಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಹದಿಹರೆಯದ ವಿದ್ಯಾರ್ಥಿಗಳ ಭಾವನಾತ್ಮಕ ಸೆಲೆಯನ್ನು ಅರ್ಥೈಸಿಕೊಂಡು ಮನೋವೈಜ್ಞಾನಿಕ ನೆಲೆಯಲ್ಲಿ ವಿವಿಧ ಶೈಕ್ಞಣಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

    ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವಿಕೆ, ಅನ್ವಯಿಸುವಿಕೆ, ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಕರಿಸುವ ವಿಭಿನ್ನವಾದ ತರಗತಿ ಚಟುವಟಿಕೆಗಳನ್ನು ಅಳವಡಿಸಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅವಶ್ಯಕತೆಗಳಿಗೆ ತಕ್ಕಂತೆ ನೂತನ ಕಟ್ಟಡದಲ್ಲಿ ಎಲ್ಲಾ ಸೌಲಭ್ಯದೊಂದಿಗೆ ಹೊಸ ಶೈಕ್ಷಣಿಕ ವರ್ಷವನ್ನು ಸ್ವಾಗತಿಸಲು ಸಜ್ಜಾಗಿ ನಿಂತಿರುವ ಸಂಸ್ಥೆ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢಶಾಲೆ. ( ಮುಖ್ಯ ಶಿಕ್ಷಕ: ಕೃಷ್ಣ ಅಡಿಗ )

    ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜು:
    ಪ್ರೌಢಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಗುಣ ಮಟ್ಟದ ಪದವಿಪೂರ್ವ ಶಿಕ್ಷಣ, ವೃತ್ತಿಪರ ಪ್ರವೇಶ ಪರೀಕ್ಷಾ ತರಬೇತಿಗಳು ಒಂದೇ ಸೂರಿನಲ್ಲಿ ದೊರೆಯುವಂತಾಗಬೇಕು, ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಾನವೀಯ ನೆಲೆಯಲ್ಲಿ ಸಜ್ಜುಗೊಳಿಸಬೇಕು ಎಂಬ ನಿಟ್ಟಿನಲ್ಲಿ 2003ರಲ್ಲಿ ರೂಪುಗೊಂಡ ಸಂಸ್ಥೆ ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜು. 56 ವಿದ್ಯಾರ್ಥಿಗಳಿಂದ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿರುವ ಈ ಸಂಸ್ಥೆ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ, ಚಾರಿತ್ರ್ಯ ನಿರ್ಮಾಣಕ್ಕೆ ಒತ್ತು ನೀಡುವತ್ತ ಹೆಚ್ಚು ಗಮನ ಹರಿಸುತ್ತಿದೆ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಕ್ರಮ: ಪ್ರತಿ ವಿದ್ಯಾರ್ಥಿಯ ಬಗ್ಗೆ ವೈಯಕ್ತಿಕ ಕಾಳಜಿ ನೀಡುತ್ತಿರುವುದು. ವಿದ್ಯಾರ್ಥಿಯ ಪೂರ್ವಾಪರ ಅರಿಯಲು, ಅವರನ್ನು ಗುರಿಯೆಡೆಗೆ ಮುನ್ನೆಡೆಸಲು ಅನುಕೂಲವಾಗುವಂತೆ ಮೆಂಟರ್ ಪದ್ಧತಿ ಅಳವಡಿಸಿಕೊಂಡಿರುವುದು. ಒತ್ತಡ ನಿವಾರಣೆಗೆ ವೈಯಕ್ತಿಕ ಕೌನ್ಸೆಲಿಂಗ್ ವ್ಯವಸ್ಥೆ ಇದೆ. ವಿದ್ಯಾರ್ಥಿಯ ಪ್ರತೀದಿನದ ಹಾಜರಾತಿಯ ಬಗ್ಗೆ ಮನೆಯವರಿಗೆ ಮಾಹಿತಿ ನೀಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದವರನ್ನು ಕಾಲೇಜಿನ ಆರಂಭದ ತಿಂಗಳಲ್ಲೇ ಗುರುತಿಸಿ, ಅವರ ಕಲಿಕಾ ಮಟ್ಟವನ್ನು ಸುಧಾರಿಸಲು ನಿರಂತರ ಪ್ರಯತ್ನ. ಕಾಲಕಾಲಕ್ಕೆ ಸರಿಯಾಗಿ ವಿದ್ಯಾರ್ಥಿಯ ಪ್ರಗತಿಯ ಬಗ್ಗೆ ಪೋಷಕರಿಗೆ ಮಾಹಿತಿ, ಚರ್ಚೆ.

    ಪಠ್ಯದ ಜೊತೆಗೆ ವೃತ್ತಿಪರ ಪ್ರವೇಶ ಪರೀಕ್ಷಾ ತರಬೇತಿ:
    ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ.ಬಿ, ಪಿ.ಸಿ.ಎಂ.ಸಿ, ಪಿ.ಸಿ.ಎಂ.ಎಸ್, ಪಿ.ಸಿ.ಎಂ.ಇ ಎಂಬ ನಾಲ್ಕು ಸಂಯೋಜನೆಗಳಿದ್ದು ಪಠ್ಯದ ಜೊತೆಗೆ CET, JEE Main, NEET ಪರೀಕ್ಷೆಗೆ ತರಬೇತಿ ನೀಡುವ ವ್ಯವಸ್ಥೆ ಇದೆ.

    ವಾಣಿಜ್ಯ ವಿಭಾಗದಲ್ಲಿ ಎಸ್.ಇ.ಬಿ.ಎ, ಸಿ.ಇ.ಬಿ.ಎ, ಬಿ.ಇ.ಬಿ.ಎ ಎಂಬ ಮೂರು ಸಂಯೋಜನೆಗಳಿದ್ದು, ಸಿಪಿಟಿ, ಬ್ಯಾಂಕಿಂಗ್‌ನಂಥ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಮಾಹಿತಿಯನ್ನು ನೀಡಲಾಗುತ್ತಿದೆ. ಕಂಪ್ಯೂಟರ್‌ನಲ್ಲಿ ಪಿಜಿಡಿಸಿಎ, ಡಿಪ್ಲೋಮಾ ಕೋರ್ಸ್‌ಗೂ ಅವಕಾಶವಿದ್ದು, ಕರಾಟೆ ಶಿಕ್ಷಣ ತರಬೇತಿ ಸಹ ನೀಡಲಾಗುತ್ತಿದೆ.

    ಬಹುಜನರ ಆಯ್ಕೆ ಆರ್.ಎನ್.ಎಸ್.:
    ಸಮರ್ಪಣಾ ಮನೋಭಾವದ ಉತ್ಸಾಹಶೀಲ, ಪರಿಣತ ಉಪನ್ಯಾಸಕ ವೃಂದ, ವಿಶಾಲವಾದ ಕಟ್ಟಡ, ಸುಸಜ್ಜಿತವಾದ ಪ್ರಯೋಗಾಲಯ, ಗ್ರಂಥಾಲಯ ಸೌಲಭ್ಯ ಹೊಂದಿರುವ ಆರ್. ಎನ್. ಎಸ್. ಪದವಿಪೂರ್ವ ಕಾಲೇಜು ಇಂದು ಕುಂದಾಪುರದ ಸುತ್ತಮುತ್ತಲ ಎಲ್ಲಾ ವರ್ಗದ ವಿದ್ಯಾರ್ಥಿಗಳ ಅತ್ಯುತ್ತಮ ಆಯ್ಕೆಯಾಗಿದೆ. ( ಪ್ರಾಂಶುಪಾಲರು: ನವೀನ್ ಕುಮಾರ್ ಶೆಟ್ಟಿ)

    ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು:
    2010ರಲ್ಲಿ ಪ್ರಾರಂಭಗೊಂಡ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಪಡೆದು ಅರಳಿದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಪದವಿ ಶಿಕ್ಷಣವನ್ನು ನೀಡಿ ಸಮರ್ಥ ಪದವೀದರರನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ.

    ಸಂಸ್ಥೆಯ ಬೆಳವಣಿಗೆಯ ಕುರಿತು ಒಂದು ನೋಟ :
    ಪ್ರಾರಂಭಗೊಂಡ ಏಳು ವರ್ಷಗಳಲ್ಲಿ ಎಲ್ಲರ ಗಮನ ಸೆಳೆಯುವ ಸಾಧನೆಗಳೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಒಂದಾಗಿ ಸಂಸ್ಥೆ ಮೂಡಿ ಬಂದಿದೆ. 130ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಈ ಸಂಸ್ಥೆ ಈಗ 1042 ವಿದ್ಯಾರ್ಥಿಗಳನ್ನು ಹೊಂದಿದೆ. ಯಾವುದೇ ವಿಭಾಗಗಳಿಲ್ಲದೆ, 60 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಗೊಂಡ ಬಿ.ಕಾಂ. ಕೋರ್ಸ್, 2016-17ರಲ್ಲಿ ಪ್ರಥಮ ಬಿ.ಕಾಂ.ನ 4 ವಿಭಾಗಗಳೊಂದಿಗೆ, ಒಟ್ಟು 904 ವಿದ್ಯಾರ್ಥಿಗಳು ಈ ಕೋರ್ಸ್‌ನಲ್ಲಿ ಕಲಿಯುತ್ತಿರುವುದು ಗಮನಾರ್ಹ ಸಾಧನೆ. 2016-17ರಲ್ಲಿ ಪ್ರಾರಂಭಗೊಂಡ ಬಿ.ಸಿ.ಎ. ಕೋರ್ಸ್, 2017-18ರಲ್ಲಿ ಪ್ರಾಂಭಗೊಳ್ಳುತ್ತಿರುವ ಬಿ.ಎಸ್ಸಿ ಕೋರ್ಸುಗಳೊಂದಿಗೆ ಸಂಸ್ಥೆ ಹೊಸ ಅಧ್ಯಾಯಗಳನ್ನು ಪ್ರಾರಂಭಿಸಿದೆ. ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ- ಈ ಎಲ್ಲಾ ರಂಗಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ, ರಾಜ್ಯ ಮತ್ತು ರಾಷ್ಟ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮತ್ತು ಬಹುಮಾನ ಪಡೆದು ಅಪ್ರತಿಮ ಸಾಧನೆ ಮಾಡಿದ್ದಾರೆ. ( ಪ್ರಾಂಶುಪಾಲರು: ಚಂದ್ರಶೇಖರ್ ದೋಮ )

    ನೂತನ  ಕೋರ್ಸು:
    ಬಿ.ಎಸ್ಸಿ – ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ(MPC), ಭೌತಶಾಸ್ತ್ರ, ರಸಾಯನ ಶಾಸ್ತ್ರ, ಕಂಪ್ಯೂಟರ್ ವಿಜ್ಞಾನ(PCCs)

    ಪದವಿ ಕೋರ್ಸುಗಳು: ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್ಸಿ.

    ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಸಂಧ್ಯಾ ಕಾಲೇಜು: ಬಿ.ಕಾಂ. ಹಾಗೂ ಬಿ.ಎ. (ಇತಿಹಾಸ, ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಕೋರ್ಸುಗಳೊಂದಿಗೆ ಪ್ರಾರಂಭ)

    [quote bgcolor=”#ffffff” arrow=”yes” align=”right”]ಧ್ಯೇಯಗಳು :
    ತರಗತಿ ಕೋಣೆಗಳಿಗೆ ಸೀಮಿತವಾಗಿರದ ಕಲಿಕೆ
    ಕಲಿಕಾ ಅನುಭವದ ಪರಿಧಿಯ ವಿಸ್ತರಣೆ
    ಸಮಾಜದ ವಿವಿಧ ಸಮುದಾಯಗಳ ಬದುಕಿನ ಸಮಸ್ಯೆಗಳ ಅರಿವು ಮತ್ತು ನೆರವು
    ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರ
    ವಿದ್ಯಾರ್ಥಿ-ಕ್ಷೇಮ ಸಂಬಂಧಪಟ್ಟ ಯೋಜನೆಗಳು
    ಶೈಕ್ಷಣಿಕ ಪ್ರಗತಿ ಸಾಧನೆಗೆ ಒತ್ತು
    ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಹಾಗೂ ಭವಿಷ್ಯ ಕುರಿತು ಚಿಂತನೆ
    ಆರೋಗ್ಯವಂತ ವಿದ್ಯಾರ್ಥಿ ಸಮುದಾಯ ನಿರ್ಮಾಣ[/quote]

    ಪ್ರಯೋಗಶೀಲ ಹೆಜ್ಜೆಗಳು.
    ವಾಲ್ ಮ್ಯಾಗ್‌ಜಿನ್ : ವಿದ್ಯಾರ್ಥಿಗಳಲ್ಲಿರುವ ಕಲಾತ್ಮಕ ಗುಣ ಹಾಗೂ ಸೃಜನಶೀಲ ಬರವಣಿಗೆ ಪ್ರದರ್ಶನ
    ಇನ್ನೋವೇಶನ್ ಕ್ಲಬ್ : ಕ್ರೀಯಾಶೀಲ, ರಚನಾತ್ಮಕ ಹಾಗೂ ಸೃಜನಶೀಲ ಚಿಂತನೆಯೊಂದಿಗೆ ಹೊಸತನದ ಹುಡುಕಾಟ
    ಸಾಕ್ಷ್ಯ ಚಿತ್ರ ಪ್ರದರ್ಶನ : ಬದುಕಿನ ವಿವಿಧ ಆಯಾಮಗಳ ಮತ್ತು ಆಶಯಗಳ ಪರಿಚಯ.
    ಸಮುದಾಯ ಸೇವಾ ಕೇಂದ್ರ(Centre for Community Services): ಸಮುದಾಯಗಳ ಕುರಿತು ಕಾಳಜಿಯನ್ನು ಹುಟ್ಟು ಹಾಕುವ, ಅವುಗಳ ಸಮಸ್ಯೆಗಳನ್ನು ಗುರುತಿಸಿ ಅವಸರಗಳನ್ನು ಪೂರೈಸುವುದು.
    ಸಂಶೋಧನೆ ಮತ್ತು ಉದ್ಯಮಶೀಲತಾ ಕೇಂದ್ರ : ವಿದ್ಯಾರ್ಥಿಗಳು ಉದ್ಯಮಶೀಲರಾಗಿರಲು ಮಾನಸಿಕ ಸಿದ್ಧತೆ ಮತ್ತು ಸಂಶೋಧನೆಯ ಮೂಲಕ ಅವಕಾಶಗಳನ್ನು ಕಂಡುಕೊಳ್ಳುವುದು.
    ಕೌಶಲ್ಯಾಭಿವೃದ್ಧಿ (Skill Development) : ಉದ್ಯೋಗ ಅರಸುವಿಕೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಬದುಕಿನುದ್ದಕ್ಕೂ ಬೇಕಾಗುವ ಕೌಶಲ್ಯಗಳನ್ನು ನಿರಂತರ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಬೆಳೆಸುವುದು.
    ಈ ಪರಿಸರದ ಶಿಕ್ಷಣ ರಂಗದಲ್ಲಿ ಕಂಡು ಬಂದ ಕೊರತೆಗಳನ್ನು ಅರ್ಥೈಸಿಕೊಂಡು, ಅವುಗಳಿಗೆ ಸ್ಪಂಧಿಸುತ್ತಾ ಬೆಳವಣಿಗೆಯ ಹಂತಗಳನ್ನು ಎಲ್ಲರ ನಿರೀಕ್ಷೆಗೂ ಮೀರಿ ತೀವೃಗತಿಯಲ್ಲಿ ಏರುತ್ತಿರುವ, ಸದಾ ಚಟುವಟಿಕೆಗಳಿಂದ ವಿಜೃಂಭಿಸುತ್ತಿರುವ ಈ ಸಂಸ್ಥೆಗೆ ಈ ಪರಿಸರದ ಜನರ ಪ್ರೋತ್ಸಾಹ ಮತ್ತು ಹಾರೈಕೆ ಮುಖ್ಯ ಕಾರಣವೆಂದು ಸಂಸ್ಥೆಯ ನಂಬಿಕೆ.

    ನಿಂತ ನೀರಾಗದೆ ಹರಿಯುವ ನೀರಾಗಬೇಕು ಎಂಬುವುದು ನಮ್ಮ ಆಸೆ. ಮಾಡುತ್ತಿರುವ ಕೆಲಸಗಳಲ್ಲಿ ಹೊಸತನ, ಭವಿಷ್ಯದಲ್ಲಿ ಕಂಡು ಬರುವ ಹೊಸ ಅವಸರಗಳಿಗೆ ತೆರೆದುಕೊಳ್ಳುವ, ಪ್ರಗತಿಯ ಪಥದಲ್ಲಿ ಸಾಗುವ, ನಮ್ಮ ವೈಶಿಷ್ಟ್ಯಪೂರ್ಣ ಸಾಧನೆಗಳ ಮೂಲಕ ಜನರ ಮನಸ್ಸಿನಲ್ಲಿ ಸದಾ ಉಳಿಯಬೇಕೆಂಬುವುದು ನಮ್ಮ ಉತ್ಕೃಷ್ಟ ಆಕಾಂಕ್ಷೆ.

     

    ಸಂಸ್ಥೆಯ ಮುಖ್ಯಾಂಶಗಳು:
    ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಪದವಿ ಕೋರ್ಸುಗಳು
    ಅನುಕೂಲಕರ ವೇಳಾಪಟ್ಟಿ.
    ವಸತಿ ಸೌಲಭ್ಯ
    ಕಡಿಮೆ ಶುಲ್ಕ.
    ನುರಿತ ಅಧ್ಯಾಪಕರು

    ಸಂಪರ್ಕಿಸಿರಿ :

    ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ
    ನರ್ಸರಿ ಮತ್ತು ಪ್ರಾಥಮಿಕ ಶಾಲೆ
    ಕುಂದಾಪುರ
    08254-231292
    hmmschool175@gmail.com

    ವಿ. ಕೆ. ಆರ್. ಆಚಾರ್ಯ ಸ್ಮಾರಕ
    ಆಂಗ್ಲ ಪ್ರೌಢ ಶಾಲೆ, ಕುಂದಾಪುರ
    08254-231406
    vkracharyaenglishschool@gmail.com

    ಆರ್. ಎನ್. ಶೆಟ್ಟಿ ಪಿ.ಯು. ಕಾಲೇಜು,
    ಕುಂದಾಪುರ
    08254-231501
    Su182.pue@gmail.com

    ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ
    08254-235589, 8711017225
    bbhegdecollegekundapura@rediffmail.com

    Like this:

    Like Loading...

    Related

    Coondapur Edication Society
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ
    • ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್‌

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d