ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ ಎನ್ನುವ ಮಾತನ್ನು ಇಟ್ಟುಕೊಂಡೆ, ಬಾಲ್ಯದಲ್ಲಿ ತಂದೆ-ತಾಯಿಯ ಆಶ್ರಯದಲ್ಲಿ, ಯೌವನದಲ್ಲಿ ಸಂಗಾತಿಯ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಮಹಿಳೆ ಬೆಳೆಯುವುದರಿಂದ ಆಕೆ ಸಮಾನ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎನ್ನುವ ದ್ವಂದ್ವ ವಾದದ ನಡುವೆ ಮಹಿಳೆಯರು ಇಂದು ಸಮಾಜದಲ್ಲಿ ಸಾಕಷ್ಟು ಪ್ರಬಲರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಕಾನೂನು ಜ್ಞಾನ ಕೂಡಾ ಅತೀ ಅಗತ್ಯ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಬಾರ್ ಅಸೋಸಿಯೇಶನ್ ಕುಂದಾಪುರ, ಅಭಿಯೋಜಕ ಇಲಾಖೆ ಕುಂದಾಪುರ, ಜೆಸಿಐ ಕುಂದಾಪುರ, ರೋಟರಿ ಕುಂದಾಪುರ, ಮಹಾವಿಷ್ಣು ಯುವಕ ಮಂಡಲ (ರಿ) ಹರೇಗೋಡು, ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕುಂದಾಪುರ , ಮಾನಸತಿ ಯುವತಿ ಮಂಡಲ ಹರೇಗೋಡು ಹಾಗೂ ಶ್ರೀ ಸಾಯಿ ಮಂಟಪ ಶ್ಯಾಮಿಯಾನ ಮತ್ತು ಡೆಕೊರೇಟರ್ಸ್ ಕಟ್ಟು ಹೆಮ್ಮಾಡಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವ್ಯಾಸರಾಜ ಮಠದಲ್ಲಿ ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ನವೀಕೃತಗೊಂಡ ಶ್ರೀ ರಾಮಚಂದ್ರತೀರ್ಥ ಶ್ರೀ ಪಾದಂಗಳರವರ ಮತ್ತು ಶ್ರೀ ಹಯಗ್ರೀವ ತೀರ್ಥ ಶ್ರೀಪಾದಂಗಳರವರ ವೃಂದಾವನಗಳ ಉದ್ಘಾಟನೆಯನ್ನು ಮಠಾದೀಶರಾದ ಪೂಜ್ಯ ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀ ಪಾದಂಗಳರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ವೇದಮೂರ್ತಿ ಶ್ರೀ ವಿಜಯ ಪೆಜತ್ತಾಯ ಇವರ ನೇತೃತ್ವದಲ್ಲಿ ವೃಂದಾವನಗಳ ಸ್ಥಾನ ಶುಧ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪುಣ್ಯಾಹವಾಚನ, ವೃಂದಾವನ ಶುದ್ಧಿ, ಪವಮಾನ ಹೋಮ, ವಿರಾಜಮಂತ್ರ ಹೋಮ, ನವಕ ಪ್ರಧಾನ ಹೋಮ, ಆಶ್ಲೇಷಾ ಬಲಿ ಸೇರಿದಂತೆ ಅನೇಕ ದಾರ್ಮಿಕ ವಿಧಿ ವಿಧಾನಗಳು ನಡೆದವು. ಸಮಾಜ ಭಾಂದವರಿಂದ ಶ್ರೀ ಗುರುಗಳ ಪಾದ ಪೂಜೆ, ಹಾಗೂ ಗುರುಗಳಿಂದ ಮುದ್ರಾಧಾರಣೆ ಕಾರ್ಯಕ್ರಮ ನಡೆಯಿತು. ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ, ಹೊಟೇಲ್ ಉದ್ಯಮಿಗಳಾದ ಹಳ್ಳಿಮನೆ ಸಂಜೀವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆಯ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಕಾರ್ಯಕ್ರಮ ಜರುಗಿತು. ಉಡುಪಿ ಎ.ವಿ.ಬಾಳಿಗ ಅಡ್ಮಿನಿಸ್ಟ್ರೇಟರ್ ಶ್ರೀಮತಿ. ಸೌಜನ್ಯ ಶೆಟ್ಟಿ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಬಳಿಕ ಮಾತನಾಡಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವವಾಗಿದೆ ಮಕ್ಕಳು ಹಿರಿಯರು ಹೇಳಿದ್ದನ್ನು ಕೇಳುವುದಿಲ್ಲ, ಬದಲಾಗಿ ನಾವು ಮಾಡುವುದನ್ನು ಅನುಕರಣೆ ಮಾಡುತ್ತಾರೆ. ಮಕ್ಕಳ ಮನಸ್ಸು ಹೂವಿನಂತೆ ಮೃದುವಾಗಿರುತ್ತದೆ. ಅವರ ಸೂಕ್ಷ್ಮತೆಗಳನ್ನು ಅರಿತು ಅರ್ಥೈಸಿಕೊಳ್ಳಬೇಕಾಗಿರುವುದು ಪೋಷಕರ ಕರ್ತವ್ಯ. ಮಕ್ಕಳಿಗೆ ಹೊಡೆಯುವುದರಿಂದ ಅವರ ಬೆಳವಣಿಗೆಯ ವ್ಯಕ್ತಿತ್ವವನ್ನು ಚಿವುಟಿದಂತಾಗುತ್ತದೆ. ಆ ನಿಟ್ಟಿನಲ್ಲಿ ಪೋಷಕರು ಶಿಕ್ಷಕರ ಜೊತೆಗೂಡಿ ಸಹಕರಿಸಿದಾಗ ಉತ್ತಮ ಮಕ್ಕಳನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆಯೆಂದು ನುಡಿದರು. ಈ ಸಂದರ್ಭದಲ್ಲಿ ಬಾಂಡ್ಯ ಶಿಕ್ಷಣಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮ. ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲರಾದ ಸಾಯಿಜು ಕೆ. ಆರ್. ನಾಯರ್ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಐಸಿರಿ ಮತ್ತು ವೇದಾಂತ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಆದ್ಯಾ ಶೆಟ್ಟಿ ಸ್ವಾಗತಿಸಿದರು. ಮೂಸಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟ್ರಿ ಕ್ಲಬ್ ಕುಂದಾಪುರ ಸನ್ರೈಸ್ ನೇತೃತ್ವದಲ್ಲಿ ಕೋಡಿಯ ಕಡಲ ಕಿನಾರೆಯಲ್ಲಿ ಸಂಭ್ರಮದಿಂದ ರೋಟರಿ ಮತ್ತು ವಿಶ್ವ ತಿಳುವಳಿಕೆಯ ದಿನಾಚರಣೆ ಜರುಗಿತು. ಸತ್ಯ ಶಾಂತಿ ಮತ್ತು ತ್ಯಾಗದ ಸಂಕೇತವಾದ ರಾಷ್ಟ್ರದ ತ್ರಿವರ್ಣ ಧ್ವಜ ಮೂರು ಧರ್ಮದ ಪ್ರಮುಖರು ಒಟ್ಟಾಗಿ ಬಿಡಿಸುವುದರ ಮೂಲಕ ಸಹಬಾಳ್ವೆಯ ಸಂಕೇತವೆಂಬಂತೆ ವಿಶಿಷ್ಟ ರೀತಿಯಲ್ಲಿ ಉದ್ಧಾಟಿಸಲಾಯಿತು. ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತ್ಯಾಧಿಕಾರಿ ಡಾ|| ಎಚ್.ವಿ. ನರಸಿಂಹಮೂರ್ತಿ ಸಾಮಾಜಿಕ ಕಾರ್ಯಕರ್ತ ಎಲ್. ಎನ್. ಹಾಜಿ ಇಬ್ರಾಹಿಂ ಸಾಹೇಬ್ ಕೋಟ, ಕುಂದಾಪುರದ ಚರ್ಚ್ನ ಧರ್ಮ ಗುರುಗಳಾದ ಅತಿ ವಂದನೀಯ ಫಾದರ್ ಅನಿಲ್ ಡಿಸೋಜ ರವರು ಮುಖ್ಯ ಅತಿಥಿಗಳಾಗಿದ್ದರು. ಸರ್ವೆಜನಾಃ ಸುಖಿನೋ ಭವಂತು, ಸರ್ವ ಧರ್ಮಗಳ ಶಾಂತಿಯ ನೆಲವೀಡು ನಮ್ಮ ಭಾರತ ಎಂದು ಎಚ್.ವಿ.ನರಸಿಂಹಮೂರ್ತಿಯವರು ಹೇಳಿದರು. ದೇವನೊಬ್ಬನೆ, ನಾಮ ಹಲವು ಸೌಹಾರ್ದತೆಯಲ್ಲಿ ಜೀವನ ಸಾಗಿಸೋಣ ಎಂದು ಹಾಜಿ ಇಬ್ರಾಹಿಂ ಸಾಹೇಬ್ ಕೋಟ ಹೇಳಿದರು. ಶಾಂತಿ ಸೌಹಾರ್ಧತೆಯಿಂದ ಬಾಳಲು ಪರಧರ್ಮ ಸಹಿಷ್ಣುತೆ ಅತೀ ಅಗತ್ಯ ಎಂದು ಅತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿ ಎರಡನೇ ಬಾರಿಗೆ ಪಡೆದುಕೊಂಡಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾಡಳಿತ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತು ಉಡುಪಿ ಸಹಯೋಗದಲ್ಲಿ ಮಣಿಪಾಲ ರಜತಾದ್ರಿ ಜಿಲ್ಲಾದಿಕಾರಿ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಪಂಚಾಯತ್ ಅದ್ಯಕ್ಷ ದಿನಕರ ಬಾಬು ಪ್ರಶಸ್ತಿ ಪ್ರಧಾನ ಮಾಡಿದರು. ಶಾಲಾ ಮುಖ್ಯ ಶಿಕ್ಷಕ ಸದಾನಂದ ನಾಯಕ, ಸಹಶಿಕ್ಷಕ ಪ್ರಭಾಕರ ಶೆಟ್ಟಿ , ಚಂದ್ರಶೇಖರ ಶೆಟ್ಟಿ ಹಾಗೂ ವಿದ್ಯಾರ್ಥಿ ವೃಂದದೊಂದಿಗೆ ಪ್ರಶಸ್ತಿ ಸ್ವೀಕರಿಸಿದರು .ಹಿರಿಯ ಸಿವಿಲ್ ನ್ಯಾಯಧೀಶರಾದ ಲತಾ, ಅಪರ ಜಿಲ್ಲಾದಿಕಾರಿ ಅನುರಾದ , ಹಿರಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ , ಡಿ.ಡಿ.ಪಿ.ಐ. ದಿವಕರ ಶೆಟ್ಟಿ ಉಪಸ್ತಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಕ್ಕಳ ದೈಹಿಕ ದೃಢತೆಯಲ್ಲಿ ಪೌಷ್ಠಿಕ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಆಧುನಿಕತೆಯ ಭರಾಟೆಯಲ್ಲಿ ನಾವು ಉಪಯೋಗಿಸುವ ಸಿದ್ಧ ಪಾನೀಯಗಳು ಹಾಗೂ ಆಹಾರ ಪದಾರ್ಥಗಳು ಮಕ್ಕಳ ಬೆಳವಣಿಗೆಗೆ ಮಾರಕ. ಹಾಗೆಯೇ ಎಳೆ ವಯಸ್ಸಿನ ಕಲಿಕೆಯಲ್ಲಿ ಮೊಂಟೆಸ್ಸೋರಿ ಶಿಕ್ಷಣವು ಹೆಚ್ಚು ಪರಿಣಾಮಕಾರಿಯಾಗಿದ್ದು, ಆರು ವರ್ಷ ತುಂಬಿದ ಮಗುವನ್ನು ಮಾತ್ರ ೧ನೇ ತರಗತಿಗೆ ದಾಖಲಿಸುವುದು ವೈಜ್ಞಾನಿಕವಾಗಿಯೂ ಸೂಕ್ತ ಎಂದು ಖ್ಯಾತ ಮಕ್ಕಳ ತಜ್ಞ ಡಾ. ಬಿ ರಾಜೇಂದ್ರ ಶೆಟ್ಟಿ ನುಡಿದರು. ಅವರು ಮಾತಾ ಮೊಂಟೆಸ್ಸೋರಿಯ 7ನೇ ವಾರ್ಷಿಕೋತ್ಸವದ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಕೋಣಿ ಗ್ರಾಮದ ಪಂಚಾಯತ್ನ ಅಧ್ಯಕ್ಷ ಸಂಜೀವ ಮೋಗವೀರ ಮಾತನಾಡುತ್ತಾ ಕಳೆದೇಳು ವರ್ಷಗಳಿಂದ ಈ ಸಂಸ್ಥೆ ಸುಂದರ ಪರಿಸರದೊಂದಿಗೆ ಶೈಕ್ಷಣಿಕ ಪರಿಕರಗಳೊಂದಿಗೆ ಶಿಕ್ಷಣ ನೀಡುತ್ತಾ ಕುಂದಾಪುರ ತಾಲೂಕಿನ ವಿವಿಧ ಕಡೆಗಳಿಂದಲೂ ಪುಟಾಣಿಗಳನ್ನು ಆಕರ್ಷಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು. ಪಂಚಾಯತ್ನ ಮಾಜಿ ಸದಸ್ಯ ಕೃಷ್ಣ ಪೂಜಾರಿ ಕಾರ್ಯಕ್ರಮಕ್ಕೆ ಶುಭಕೋರಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ಚ್ಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಂದಾಪುರ ಶಾಖೆ ಆಶ್ರಯದಲ್ಲಿ ಕೋಟೇಶ್ವರ ಸಹನಾ ಕನ್ವೆಂಷನ್ ಸಮುಖ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಸಾಮರಸ್ಯ ಮತ್ತು ರಾಷ್ಟ್ರೀಯತೆ ವಿಚಾರ ಸಂಕಿರಣ ಬೆಂಗಳೂರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರುಳಾಪುರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹೊಸ ದೃಷ್ಟಿಕೋನದಲ್ಲಿ ಅಸ್ಪೃಶ್ಯತೆ ನಿವಾರಣೆ, ಜಾತೀಯತೆ ಹಾಗೂ ಮೇಲ್ವರ್ಗ ಕೆಳವರ್ಗ ಎಂಬ ತಾರತಮ್ಯ ಹೋಗಲಾಡಿಸುವ ದೊಡ್ಡ ಜವಾಬ್ದಾರಿ ಯುವಕರ ಹೆಗಲ ಮೇಲಿದೆ. ಸಮಾನತೆಯಿಂದ ದೇಶ ಹಾಗೂ ಸಮಾಜ ಕಟ್ಟುವ ಕೆಲಸ ಆಗಬೇಕು ಎಂದು ಹೇಳಿದರು. ಭಾರತ ಯುದ್ದದಿಂದ ದೇಶಕಟ್ಟಿದ್ದಲ್ಲ ಎಂದ ಅವರು, ಜ್ಞಾನದಿಂದ ದೇಶಕಟ್ಟಿದ್ದು, ಜ್ಞಾನದ ಮೂಲಕ ವಿಶ್ವಮಾನ್ಯವಾಗಿದೆ. ಯುವಕರು ಮತ್ತು ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕು. ಅಂಬೇಡ್ಕರ್ ತತ್ವ ಸಿದ್ಧಾಂತದ ಮೂಲಕ ಅಸಮಾನತೆಯ ಕೊಂಡಿ ಕಳಚಿ ಹೊಸ ದಿಕ್ಕುದಿಶೆಯತ್ತ ದೇಶ ಕೊಂಡೊಯ್ಯ ಬೇಕು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕೆರಾಡಿ ವರಸಿದ್ಧ ವಿನಾಯಕ ಪದವಿಪೂರ್ವ ಕಾಲೇಜ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟೇಶ್ವರ: ಬೀಜಾಡಿ ಗ್ರಾ.ಪಂ.ನ ವಿಶೇಷ ಗ್ರಾಮಸಭೆ ದೊಡ್ಡೋಣಿಯ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಪಿಎಲ್ ಹಾಗೂ ಎಪಿಎಲ್ ಕಾರ್ಡುಗಳ ಅರ್ಜಿ ಸ್ವೀಕರಿಸಲಾಗಿದ್ದು ಈ ವರೆಗೆ ಸರ್ವೆ ನಡೆದಿಲ್ಲ ಎಂಬ ಬಗ್ಗೆ ಗ್ರಾ.ಪಂ. ಸದಸ್ಯ ರವೀಂದ್ರ ದೊಡ್ಮನೆ ಅವರು ಸಭೆಯ ಗಮನ ಸೆಳೆದಾಗ ನೂತನ ಪಿಡಿಒ ಅವರು ಆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬೀಜಾಡಿ ನಿವಾಸಿ ಚಂದ್ರ ಹಾಗೂ ಶ್ರೀನಿಧಿ ಭಟ್ ಅವರು ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡು ಮಿತ್ರಸಂಗಮ ಸಂಘಟನೆ ಹಾಗೂ ಬೀಜಾಡಿ ಮೂಡು ಶಾಲೆಯ ಮುಖ್ಯ ಶಿಕ್ಷಕ ಪದ್ಮನಾಭ ಅಡಿಗ ಅವರ ನಡುವಿನ ದೂರಿನ ವಿಚಾರದ ಬಗ್ಗೆ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಗಮನ ಸೆಳೆದಾಗ ನಡೆದ ಘಟನೆಯಲ್ಲಿನ ಪರ ವಿರೋಧ ಅಭಿಪ್ರಾಯವನ್ನು ಬದಿಗಿರಿಸಿ ಸೌಹಾರ್ದಯುತವಾಗಿ ಬಗೆಹರಿಸುವುದು ಸೂಕ್ತವೆಂದು ಸೀತಾರಾಮ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಈ ವಿಚಾರದ ಬಗ್ಗೆ ಅಶೋಕ ಪೂಜಾರಿ ಮಾತನಾಡಿ ಕಳೆದ 3…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗಂಗೊಳ್ಳಿಯಿಂದ ಮೀನುಗಾರಿಕೆಗಾಗಿ ತೆರಳಿದ್ದ ಜಲದುರ್ಗಾ ಬೋಟ್ನ ಬಲೆಗೆ ಸುಮಾರು 170 ಕೆ.ಜಿ. ತೂಕದ ಮುರು ಮೀನು ಬಿದ್ದಿದೆ. ಸ್ಥಳೀಯವಾಗಿ ಗೊಬ್ಬರ ಮೀನು ಎಂದೂ ಕರೆಯಲಾಗುತ್ತದೆ. ಭಟ್ಕಳದ ಮಾರಾಟಗಾರರು ಇದನ್ನು ಖರೀದಿಸಿದ್ದು, ಕೆ.ಜಿ.ಗೆ 330 ರೂ.ನಂತೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಸಣ್ಣ ಗಾತ್ರದ ಮುರು ಮೀನು ಸಾಮಾನ್ಯವಾಗಿದ್ದು, ಇಷ್ಟು ದೊಡ್ಡ ಗಾತ್ರದ್ದು ಅಪರೂಪ ಎಂದು ಮೀನುಗಾರರು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು, ಮಾ.20: ದಕ್ಷಿಣ ಭಾರತದ ಪ್ರಸಿದ್ದ ತೀರ್ಥಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ಮನ್ಮಹಾರಥೋತ್ಸವ ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ಕ್ಷೇತ್ರದ ಅಧಿದೇವತೆಯಾದ ಶ್ರೀ ಮೂಕಾಂಬಿಕೆಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಮಾ.13ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ಊರಿನ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಮಾ.20ರ ಬೆಳಿಗ್ಗೆ ದೇವಳದ ತಂತ್ರಿಗಳು ನೇತೃತ್ವದಲ್ಲಿ ಮುಹೂರ್ತ ಮಂಗಳಾರತಿ, ಪಂಚಾಮೃತ ಅಭಿಷೇಕ, ಕ್ಷಿಪ್ರಬಲಿ, ವಿಶೇಷ ಭೂತ ಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಭೋಜನಾಲದಲ್ಲಿ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದೇವರಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ವಳದ ಕಾರ್ಯನಿರ್ವಹಣಾಕಾರಿ ಯೋಗೀಶ್ವರ ಅವರ ಸಲಹೆಯಂತೆ, ಸಹಾಯಕ…
