ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆಲಸ ಹುಡುಕಿ ಬಂದ ವಲಸೆ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆ ಕುಂದಾಪುರದ ನೆಹರೂ ಮೈದಾನದಲ್ಲಿ ರಾತ್ರಿ ವಾಸ್ತವ್ಯ ಮಾಡುವ ಅನಿವಾರ್ಯತೆ ಇದ್ದು, ಬೇರೆಡೆ ವಸತಿ ಕಲ್ಪಿಸುವ ಅಗತ್ಯತೆ ಪರಿವಿದೆ. ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿದೆ. ಮಾನವೀಯ ನೆಲೆಯಲ್ಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಿ.ಟಿ. ಹೇಳಿದರು. ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ವಲಸೆ ಕಾರ್ಮಿಕರಿಗೆ ಪುನರ್ವಸತಿ ನಿಮಿತ್ತ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಕುಂದಾಪುರದಲ್ಲಿ ಉತ್ತರ ಪ್ರದೇಶ, ಬಿಹಾರದಿಂದ ಬಂದಿರುವ ಮರಳು ತೆಗೆಯುವ ಕಾರ್ಮಿಕರು, ರಾಷ್ಟ್ರೀಯ ಹೆದ್ದಾರಿ ಕಾರ್ಮಿಕರು, ನಿರ್ಮಾಣ ಕಾಮಗಾರಿ, ಕೂಲಿ ಕಾರ್ಮಿಕರನ್ನು ಕಾಣಬಹುದು. ಈ ಕಾರ್ಮಿಕರಿಗೆ ಊರಲ್ಲಿ ಕೃಷಿಭೂಮಿ ಇದ್ದರೂ ಕೂಡಾ, ಬರದ ಕಾರಣದಿಂದ ಅನುವಾರ್ಯವಾಗಿ ಇಲ್ಲಿಗೆ ಬಂದಿದ್ದಾರೆ. ಕಾರ್ಮಿಕ ಕಲ್ಯಾಣ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಸ್ಪಷ್ಟ ಮಾಹಿತಿ ಇವರಿಗೆ ಇಲ್ಲ ಎಂದು ಹೇಳಿದರು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇವರ ವಿಸ್ತಾರ ಅರಿತುಕೊಂಡಾಗ ಧೇವರನ್ನು ಆರಾಧಿಸಲು ಸಾಧ್ಯವಾಗುತ್ತದೆ. ಉಪಕರಣದ ಜೊತೆಗೆ ಅಂತಃಕರಣವಿದ್ದಾಗ ದೇವರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಬ್ಯಾಂಕಿನ ಎಜಿಎಂ ವಿದ್ಯಾಲಕ್ಷ್ಮೀ ಆರ್ ಹೇಳಿದರು. ಬಿಜೂರು ಗ್ರಾಪಂ ವ್ಯಾಪ್ತಿಯ ಶ್ರೀಮಕ್ಕಿಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ೩೦ನೇ ವಾರ್ಷಿಕೋತ್ಸವದ ವಿಶೇಷ ಕಾರ್ಯಕ್ರಮ ಯಕ್ಷೋತ್ಸವ-೨೦೧೭ ಉದ್ಘಾಟಿಸಿ ಮಾತನಾಡಿದರು. ಇಂದು ನಾವು ಜಗತ್ತಿನ ಅಲೌಕಿಕ ಸುಖದ ಭ್ರಮೆಗೆ ಒಳಗಾಗುತ್ತಿದ್ದೇವೆ. ಇದರಿಂದ ಹೊರಬಂದು ನಮ್ಮೊಳಗಿನ ಆನಂದವನ್ನು ಕಾಣುವಂತಾಗಬೇಕು. ಇಂದಿನ ಯುವಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ದೇಶದ ಪರಂಪರೆಯನ್ನು ಕಲಿಸುವ ಶಿಕ್ಷಣದ ಅವಶ್ಯಕತೆಯಿದೆ. ಶಿಕ್ಷಣದ ಜತೆಗೆ ಸಾಂಸ್ಕೃತಿಕವಾಗಿಯೂ ಮಕ್ಕಳು ಬೆಳೆಯುವಲ್ಲಿ ಪಾಲಕರು ಪ್ರೇರೇಪಿಸಬೇಕು. ಇದು ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುವ ಮೂಲಕ ಜೀವನ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಬಲ್ಲದು ಎಂದರು. ನಂತರ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿದ್ದು, ಶಾಸ್ತ್ರೀಯ ಕನ್ನಡ ಶಬ್ದಗಳನ್ನೇ ಬಳಕೆಮಾಡಿಕೊಂಡು ಬಂದ ಯಕ್ಷಗಾನ ರಂಗಭೂಮಿ ತನ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ರಾಜ್ಯ ಸರಕಾರ ಬಜೆಟ್‌ನಲ್ಲಿ ಬೈಂದೂರು ತಾಲೂಕನ್ನು ಹುಟ್ಟುಹಾಕಿ ಗಂಗೊಳ್ಳಿ ಗ್ರಾಮವನ್ನು ನೂತನ ಬೈಂದೂರು ತಾಲೂಕಿಗೆ ಸೇರ್ಪಡೆಯಾಗುವಂತೆ ಮಾಡಲಿದೆ ಎಂಬ ಮಾಹಿತಿ ದೊರೆಯುತ್ತಿರುವುದು ಗಂಗೊಳ್ಳಿಯ ನಾಗರಿಕರ ಮೇಲೆ ಕೊಡಲಿ ಪೆಟ್ಟು ಬಿದ್ದಂತೆ ಆಗಿದೆ. ಪ್ರಮುಖವಾಗಿ ಇಲ್ಲಿನ ಜನರ ಮತ್ಸ್ಯೋದ್ಯಮ, ಉನ್ನತ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಮೇಲೆ ಪ್ರಬಲವಾದ ಆಘಾತವಾಗಿದೆ. ಆದ್ದರಿಂದ ನೂತನವಾಗಿ ರಚನೆಯಾಗಲಿರುವ ಬೈಂದೂರು ತಾಲೂಕಿಗೆ ಗಂಗೊಳ್ಳಿ ಗ್ರಾಮವನ್ನು ಯಾವುದೇ ಕಾರಣಕ್ಕೂ ಸೇರ್ಪಡೆಗೊಳಿಸಬಾರದು ಎಂದು ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಹೇಳಿದರು. ಗಂಗೊಳ್ಳಿ ಗ್ರಾಮವನ್ನು ನೂತನವಾಗಿ ರಚನೆಯಾಗಿರುವ ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸುವುದನ್ನು ವಿರೋಧಿಸಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಎದುರು ನಡೆದ ಸಾಂಕೇತಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಗಂಗೊಳ್ಳಿಯ ಜನರಿಗೆ ಕುಂದಾಪುರದೊಂದಿಗೆ ಅನೇಕ ದಶಕಗಳ ಅವಿನಾಭಾವ ಸಂಬಂಧವಿದೆ. ಗಂಗೊಳ್ಳಿಯ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಕುಂದಾಪುರವನ್ನೇ ಅವಲಂಬಿಸಿದ್ದಾರೆ. ಕುಂದಾಪುರಕ್ಕೆ ಸಾರಿಗೆ ವ್ಯವಸ್ಥೆ ಕೂಡ ಉತ್ತಮವಾಗಿದೆ. ಗಂಗೊಳ್ಳಿ-ಕುಂದಾಪುರ ನಡುವೆ ಸೇತುವೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕಳೆದ ಹಲವು ವರ್ಷಗಳಿಂದ ಹಿಂದು ಸಮಾಜದ ಮೇಲೆ ನಿರಂತರವಾಗಿ ಅಕ್ರಮಣಗಳು, ಅನ್ಯಾಯ, ಮುಸ್ಲಿಮ್ ದೌರ್ಜನ್ಯ ಹೆಚ್ಚಾಗುತ್ತಿದೆ. ಇದನ್ನು ತಡೆಯಬೇಕಾದರೆ ಹಿಂದುತ್ವದ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡು ಹಿಂದುತ್ವದ ಶಕ್ತಿ ಮೈಗೂಡಿಸಿಕೊಳ್ಳಬೇಕು. ಭಾರತದ ಶ್ರೇಷ್ಠತೆ, ಹಿಂದುತ್ವದ ಶ್ರೇಷ್ಠತೆಯನ್ನು ಮನಗಾಣಬೇಕು. ಹಿಂದುತ್ವದ ಬಗ್ಗೆ ಗೌರವ, ಭಕ್ತಿ ಬಂದಾಗ ನಮ್ಮನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ದೊ. ಕೇಶವಮೂರ್ತಿ ಹೇಳಿದರು. ಅವರು ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ಜರಗಿದ ೫೦೫ ಕಲಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು. ಸ್ವಾತಂತ್ರ್ಯಾನಂತರದ ಹಿಂದುತ್ವವನ್ನು ಅಲುಗಾಡಿಸುವ ಪ್ರಯತ್ನ ನಡೆಯುತ್ತಿದೆ. ಗೋಮಾತೆ ಹಿಂದೂಗಳಿಗೆ ಶ್ರದ್ಧೆ. ಅಕ್ರಮ ಗೋಸಾಗಾಟ, ಗೋಹತ್ಯೆ ವಿರುದ್ಧ ಹಿಂದು ಜಾಗರಣ ವೇದಿಕೆ ಹೋರಾಟ ನಡೆಸಲಿದೆ. ಲವ್ ಜಿಹಾದ್ ಮೂಲಕ ಹಿಂದು ಯುವತಿಯರಿಗೆ ವಿವಿಧ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಮನೆ, ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶವು ಮರವಂತೆ ಸಾಧನ ಸಭಾ ಭವನದಲ್ಲಿ ಯಶಸ್ವಿಯಾಗಿ ಜರಗಿತು. ಮರವಂತೆ ಗ್ರಾಮ ಮನೆ, ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷ ಮನ್ಸೂರ್ ಇಬ್ರಾಹಿಂ ಮರವಂತೆ- ನಿವೇಶನ ರಹಿತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ, ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ – ನಿವೇಶನ ರಹಿತ ೫೩೧ ಅರ್ಜಿಗಳನ್ನು ಗ್ರಾಮ ಪಂಚಾಯತ್ ಕಛೇರಿ ವತಿಯಿಂದ ಪರಿಶೀಲಿಸಿ, ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ಧಪಡಿಸಿ ೨ ವರ್ಷ ಸಂದರೂ ಈತನಕ ಸರಕಾರಿ ಜಾಗ ಗುರುತಿಸಿ ನಿವೇಶನದ ಭೂಮಿ ಹಕ್ಕು ಪತ್ರ ಮಂಜೂರು ಮಾಡದ ಸ್ಥಳೀಯ ಆಡಳಿತ ಕ್ರಮವನ್ನು ಖಂಡಿಸಿದರು. ಮನೆ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ – ಭೂಮಿ ಹಕ್ಕು ಪತ್ರ ಸಿಗುವ ತನಕ ಭೂಮಿ ಹಕ್ಕಿನ ಹೋರಾಟ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದದಲ್ಲಿ ಪೂರ್ವನಿಗದಿತ ಸ್ಥಳದಲ್ಲೇ ಹೆದ್ದಾರಿ ಅಂಡರ್‌ಪಾಸ್ ನಿರ್ಮಿಸಬೇಕೆಂದು ಒಂದು ವರ್ಗದ ಸಾರ್ವಜನಿಕರು ಬುಧವಾರ ಧರಣಿ, ಮೆರವಣಿಗೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲ್ಲೂಕು ಪಂಚಾಯತ್ ಸದಸ್ಯ ಜಗದೀಶ ಪೂಜಾರಿ, ಸ್ಥಳೀಯರಾದ ರಾಮ ಖಾರ್ವಿ, ಅಶೋಕ ಆಚಾರ್, ನರಸಿಂಹ ಆಚಾರ್, ರಾಜೇಶ ಪೂಜಾರಿ ಹೆದ್ದಾರಿ ಚತುಷ್ಪಥಗೊಂಡ ಬಳಿಕ ವಾಹನಗಳ ಒತ್ತಡ ಹೆಚ್ಚುತ್ತದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆ ದಾಟುವುದು ಅಪಾಯಕಾರಿಯಾಗಲಿದೆ. ಆದುದರಿಂದ ಅಂಡರ್‌ಪಾಸ್ ಅತ್ಯಂತ ಅಗತ್ಯ. ಅದಕ್ಕೆ ಪೂರ್ವನಿಗದಿತ ಸ್ಥಳವು ಅತ್ಯಂತ ಪ್ರಶಸ್ತವಾಗಿದ್ದು, ಇಲ್ಲಿ ಅದನ್ನು ನಿರ್ಮಿಸುವುದರಿಂದ ಗಾಣಿಗರ ಕೇರಿ, ಹೊಳೆಬದಿ, ಗರಡಿಬೆಟ್ಟು, ಅರೆಹೊಳೆ ನಿವಾಸಿಗಳಿಗೂ ಅನುಕೂಲವಾಗಲಿದೆ ಎಂದರು. ಈ ಸಂಬಂಧದ ಮನವಿಯನ್ನು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಬಂದಿದ್ದ ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ನೀಡಲಾಯಿತು. ತಾಲೂಕು ಪಂಚಾಯತ್ ಸದಸ್ಯ ಮಹೇಂದ್ರ ಪೂಜಾರಿ, ಮಹಿಳೆಯರೂ ಸೇರಿದಂತೆ ನೂರಾರು ಜನರು ಧರಣಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರದೇಶದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ಸಮಾಜದ ೩೧ ವಟುಗಳಿಗೆ ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆಯಿತು. ವೇದಮೂರ್ತಿ ವಿಜಯ ಪೇಜಾತ್ತಾಯ ಇವರ ನೇತೃತದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ರಾಮನವಮಿ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಇದೇ ಸಂದರ್ಭದಲ್ಲಿ ಸಮಾಜದ ಭಕ್ತ ವೃಂದದಿಂದ ಭಜನೆ ಮತ್ತು ನಾಮ ಸಂರ್ಕೀತನೆ ಕಾರ್ಯಕ್ರಮಗಳು ಜರುಗಿದವು. ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಶಿವಾನಂದ ಗಾಣಿಗ, ಕೋಶಧಿಕಾರಿ ಶಂಕರನಾರಾಯಣ ಗಾಣಿಗ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ನಿರ್ಮಾಣ ಸಮಿತಿ ಸದಸ್ಯರು, ಎಲ್ಲಾ ಘಟಕಗಳ ಅಧ್ಯಕ್ಷರು, ಮಹಿಳಾ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಮಾಜ ಭಾಂದವರೂ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ನೂತನವಾಗಿ ರಚನೆಯಾಗಲಿರುವ ಬೈಂದೂರು ತಾಲೂಕಿಗೆ ಗಂಗೊಳ್ಳಿ ಗ್ರಾಮವನ್ನು ಯಾವುದೇ ಕಾರಣಕ್ಕೂ ಸೇರ್ಪಡೆಗೊಳಿಸಬಾರದು. ಗಂಗೊಳ್ಳಿ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲಿಯೇ ಉಳಿಸಿಕೊಳ್ಳಬೇಕು. ಗಂಗೊಳ್ಳಿ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಂಡಲ್ಲಿ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಸಂಘಟಿತ ಹೋರಾಟ ನಡೆಸಲು ಹಾಗೂ ಎಪ್ರಿಲ್ ೧೨ರಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಮುಂಭಾಗ ಸಾಂಕೇತಿಕ ಧರಣಿ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಗಂಗೊಳ್ಳಿ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ನಾಗರಿಕರ ಸಭೆಯಲ್ಲಿ ಈ ಒಕ್ಕೊರಲ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿಯ ಜನರಿಗೆ ಕುಂದಾಪುರದೊಂದಿಗೆ ಅನೇಕ ದಶಕಗಳ ಅವಿನಾಭಾವ ಸಂಬಂಧವಿದೆ. ಗಂಗೊಳ್ಳಿಯ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಕುಂದಾಪುರವನ್ನೇ ಅವಲಂಬಿಸಿದ್ದಾರೆ. ಕುಂದಾಪುರಕ್ಕೆ ಸಾರಿಗೆ ವ್ಯವಸ್ಥೆ ಕೂಡ ಉತ್ತಮವಾಗಿದೆ. ಗಂಗೊಳ್ಳಿ-ಕುಂದಾಪುರ ನಡುವೆ ಸೇತುವೆ ನಿರ್ಮಾಣಗೊಂಡಲ್ಲಿ ಗಂಗೊಳ್ಳಿ ಜನರು ಕೇವಲ ಒಂದುವರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಾಸ್ತವದ ನೆಲೆಗಟ್ಟಿನಲ್ಲಿ ಸಮರ್ಥವಾದ ಜನಾ ಭಿಪ್ರಾಯ ರೂಪಿಸುವುದು ಮಾಧ್ಯಮ ಗಳ ಬಲುದೊಡ್ಡ ಜವಾಬ್ದಾರಿ. ಮಾಧ್ಯಮಗಳ ಮಾಹಿತಿ ಆಧಾರದಲ್ಲೇ ನಮಗೆ ಸಾವಿರಾರು ಮೈಲಿಗಳ ದೂರದಲ್ಲಿನ ಘಟನೆ ಮತ್ತು ವ್ಯಕ್ತಿಗಳ ಸಾಚಾ ಅಥವಾ ನೀಚತನಗಳ ಅರಿವಾಗುವುದು. ಆದರೆ ಇಂದು ಬಹುತೇಕ ಮಾಧ್ಯಮಗಳು ಕೆಲವು ಪ್ರಭಾವಗಳು, ಪೂರ್ವಾಗ್ರಹಗಳಿಗೆ ಒಳಗಾಗುತ್ತಿರುವುದು ಪ್ರಜಾಪ್ರಭುತ್ವದ ದುರಂತ ಎಂದು ವಂ. ಫಾ. ಚೇತನ್ ಲೋಬೋ ಹೇಳಿದರು. ಕುಂದಾಪುರ ಇಗರ್ಜಿಯ ಸಾಮಾಜಿಕ ಸಂಪರ್ಕ ಮಾಧ್ಯಮವು ಆಯೋಜಿಸಿದ ಕುಂದಾಪುರ ಧರ್ಮಕೇಂದ್ರದಲ್ಲಿ ಮಾಧ್ಯಮದವರ ಸೇವೆಗೆ ಅಭಿನಂದನೆ – ಸಹಮಿಲನ- ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸಾಮಾಜಿಕ ಸಂಪರ್ಕ ಮಾಧ್ಯಮದ ಸಂಚಾಲಕ ಬರ್ನಾರ್ಡ್ ಡಿ’ಕೋಸ್ತಾ ಪ್ರಸ್ತಾವಿಸಿ, ಸ್ವಾಗತಿಸಿದರು. ಮುಖ್ಯ ಅತಿಥಿ ಪತ್ರಕರ್ತ ಯು.ಎಸ್.ಶೆಣೆ„ ಮಾತನಾಡಿ ಪತ್ರಿಕೆಗಳು ದೇಶ ವಿದೇಶಗಳ ಸುದ್ದಿಗಳೊಂದಿಗೆ ಸ್ಥಳೀಯ ಮಾಹಿತಿಗಳನ್ನೂ ಒದಗಿಸಬೇಕು. ಸ್ಥಳೀಯ ಸಮಸ್ಯೆಗಳನ್ನು ಸಂಬಂಧಿತರ ಗಮನಕ್ಕೆ ತರುವುದು ಮಾತ್ರವಲ್ಲದೆ, ಒಳಿತುಗಳ ಶ್ಲಾಘನೆ ಮನೋ ರಂಜನೆ ಎಲ್ಲವನ್ನೂ ಒದಗಿಸುತ್ತಿವೆ. ನಿಸ್ವಾರ್ಥ ಕಾರ್ಯಗಳಿಂದ ಪ್ರಭಲ ಜನಾಭಿಪ್ರಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯ ವತಿಯಿಂದ ಸುಮಾರು ಓಂಭತ್ತು ದಿನಗಳ ಕಾಲ ವಿಶೇಷ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ಪ್ರತಿದಿನ ಸಂಜೆ ೭ ರಿಂದ ರಾತ್ರಿ ೯.೩೦ರ ವರೆಗೆ ದೇವಸ್ಥಾನ ಪರಿಸರದ ದೊಡ್ಡೋಣಿ ರಸ್ತೆಯಲ್ಲಿರುವ ಹಲವಾರು ಮನೆಗಳಿಗೆ ತೆರೆಳಿ ದೇವರ ಭಜನೆ, ಸಂಕೀರ್ತನೆಯೊಂದಿಗೆ ಸಾಗಿ ಬಂದ ಭಜನಾ ತಂಡ ಮನೆಯ ಎದುರುಗಡೆ ಬಿಡಿಸಿದ ರಂಗೋಲಿ, ತುಳಸಿಕಟ್ಟೆ ಹಾಗೂ ದೀಪಕ್ಕೆ ಕುಣಿತ ಭಜನೆಯ ಮೂಲಕ ಸುತ್ತು ಬಂದು ಮುಂದೆ ಸಾಗಿದರು. ಕಾರ್ಯಕ್ರಮದ ಕೊನೆಯ ದಿನದಂದು ದೊಡ್ಮನೆಬೆಟ್ಟು ಶ್ರೀ ಆಂಜನೇಯ ದೇವಸ್ಥಾನ, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಶ್ರೀ ಕೋದಂಡ ರಾಮ ದೇವಸ್ಥಾನ, ಶ್ರೀ ಮಾರಿಯಮ್ಮ ದೇವಸ್ಥಾನ ಹಾಗೂ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ದೇವರ ಸಮ್ಮುಖದಲ್ಲಿ ಕುಣಿತ ಭಜನೆ ನೆರವೇರಿಸಿದರು. ಈ ತಂಡದಲ್ಲಿ ಮಕ್ಕಳು, ಯುವಕರು, ಯುವತಿಯರು ಹೀಗೆ ಎಲ್ಲಾ ವಯೋಮಾನದ ಸದಸ್ಯರ ಉಪಸ್ಥಿತಿ ವಿಶೇಷ. ಇತ್ತೀಚೆಗೆ…
