ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವ ಆಸಕ್ತಿಗಳು ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಭವಿಷ್ಯದ ನಿರ್ದಿಷ್ಟ ಗುರಿ ಮತ್ತು ಕಠಿಣ ಪ್ರಯತ್ನ ನಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬೈಂದೂರು ಸರಕಾರಿ ಪದವಿಪೂರ್ವ ಕಾಲೆಜಿನ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಮಹಾನ್ ಸಾಧಕರು ಸಾಧಿಸಿದ್ದು ಕೂಡಾ ಪರಿಶ್ರಮದಿಂದಲೆ. ಈ ನೆಲೆಯಲ್ಲಿ ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗಳ ಮೂಲಕ ಯಶಸ್ಸು ಕಾಣಬೇಕು ಎಂದರು. ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀಪಾದ ಶೆಟ್ಟಿ ಸ್ಪೂರ್ತಿ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಶಿಕ್ಷಣದ ಮೂಲಕ ಮಕ್ಕಳು ಕ್ರೀಯಾಶೀಲ ಕನಸನ್ನು ಕಾಣುವಂತಾಗಬೇಕು. ಪ್ರತಿಯೊಂದರಲ್ಲಿಯೂ ತಾಯಿಯನ್ನು ಕಾಣುವ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ನಾಡಿಗೆ ಶಕ್ತಿ ಕೊಡುವ ಉತ್ತಮ ಪ್ರಜೆಗಳನ್ನು ಶಿಕ್ಷಣ ಕೇಂದ್ರಗಳಲ್ಲಿ ರೂಪಿಸಬೇಕು ಎಂದರು. ಧನಾತ್ಮಕ ಚಿಂತನೆಗಳು ದೊಡ್ಡ ಶಕ್ತಿಯಾಗಬೇಕು. ವಿದ್ಯಾ ಸಂಸ್ಥೆಗಳಲ್ಲಿ ಮಕ್ಕಳಿಗೆ ಭಾವನಾತ್ಮಕ ವ್ಯಕ್ತಿತ್ವ ವಿಕಸನದ ಶಿಕ್ಷಣ ಸಿಗುವಂತಾಗಬೇಕು ಎಲ್ಲರಿಗೂ ಭಗವಂತ ಕೊಟ್ಟ ಸೂಕ್ಷ್ಮ ಅಂಗಾಗಗಳಲ್ಲಿ ಸಮರ್ಪಕ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡ್ ಅಧ್ಯಕ್ಷರಾಗಿ ಶ್ರೀಧರ್ ಬಿಜೂರು ಆಯ್ಕೆಯಾಗಿದ್ದಾರೆ. ಉಡುಪಿ ಅದಮಾರು ಮಠದ ಸಭಾಂಗಣದಲ್ಲಿ ಜರುಗಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವಿಶೇಷ ಜಿಲ್ಲಾ ಬೈಠಕ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಬೈಂದೂರು ಘಟಕದ ಪ್ರಖಂಡ್ ಆಗಿ ಶ್ರೀಧರ್ ಬಿಜೂರು ಅವರನ್ನು ಹೆಸರನ್ನು ಘೋಷಿಸಿದ್ದಾರೆ. ವಿಶೇಷ ಬೈಠಕ್‌ನಲ್ಲಿ ಬಜರಂಗದಳ ವಿಭಾಗ ಸಂಚಾಲಕ ಸುನೀಲ್ ಕೆ.ಆರ್., ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು. ಶ್ರೀಧರ ಬಿಜೂರು ಅವರು ಬಜರಂಗದಳ ಹಾಗೂ ಧರ್ಮ ಜಾಗರಣ ವೇದಿಕೆಯ ತಾಲೂಕು ಸಂಚಾಲಕರಾಗಿ, ಭಗವದ್ಗೀತಾ ಅಭಿಯಾನದ ತಾಲೂಕು ಸಂಚಾಲಕರಾಗಿ ಹಿಂದೂ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾಗಿದ್ದಲ್ಲದೇ ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರದ ಸಂಸ್ಕೃತಿಯನ್ನು ಜಗದಗಲಕ್ಕೂ ಸಾರುವ ಸಲುವಾಗಿ ಕುಂದಾಪುರ ಮೂಲದ ತರುಣರಿಂದ ಹುಟ್ಟಿಕೊಂಡ ಕಾಣಿ ಸ್ಟುಡಿಯೋ ತಂಡ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ತಾಣಗಳಲ್ಲಿ ಗುರುತಿಸಿಕೊಂಡಿತ್ತು. ಇಲ್ಲಿನ ಭಾಷೆ, ಕಲೆ, ಜೀವನ ಶೈಲಿ, ಸಂಸ್ಕೃತಿಗೆ ಹೊಸ ಕಲ್ಪನೆಯೊಂದಿಗೆ ಬಣ್ಣ ನೀಡುತ್ತಿರುವ ಕಾಣಿ ಸ್ಟುಡಿಯೋ ಹುಡುಗರ ತಂಡ ಡಿಸೈನ್, ನಿರ್ವಹಣೆ, ನೆಟ್‌ವರ್ಕಿಂಗ್ ಮತ್ತು ಫಲಿತಾಂಶ ಹೀಗೆ ಮೂರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತೀರುವಹಿಸುತ್ತಿದೆ. ಈಗ ಕೋಟೇಶ್ವರ ಕೊಡಿ ಹಬ್ಬದಲ್ಲಿ ಸೆಲ್ಫಿ ಹಬ್ಬ ಎನ್ನುವ ಹೆಸರಿನೊಂದಿಗೆ ನವದಂಪತಿಗಳು, ಕುಟುಂಬ, ಸ್ನೇಹಿತರು, ಕೊಡಿ ಹಬ್ಬ ಸಂಭ್ರಮ, ಆಚರಣೆ ಗಮನದಲ್ಲಿಟು ಸೆಲ್ಫಿ ಪೋಟೋಗ್ರಾಫಿ ಸ್ಪರ್ಧೆ ಏರ್ಪಡಿಸಿದ್ದಾರೆ. ಇನ್ನು ಕೊಡಿ ಹಬ್ಬಕ್ಕೆ ಬಂದು ಹಾಗೇ ಹೊಗಬೇಡಿ. ಸೆಲ್ಫಿ ಹೇಗೆ ಬರುತ್ತೆ ಅಂತ ಕಾಣಿ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಸೆಲ್ಫಿ ತೆಗೆದು ಕಳುಹಿಸುವುದು ಹೇಗೆ?: ನಿಮ್ಮ ಫೇಸ್ಬುಕ್ ಅಂಕೌಟ್ನಲ್ಲಿ Add Photos ಕ್ಲಿಕ್ ಮಾಡಿ ನಿಮ್ಮ Selfi ಪೋಟೊ ಒಂದನ್ನು Open ಮಾಡಿ Say…
ಅಂತರಾಷ್ಟ್ರೀಯ ಸಮುದಾಯದೊಂದಿಗೆ ಸ್ವರ್ಧಿಸುವ ಜೊತೆಗೆ ಅಸ್ಮಿತೆ-ಸಾಂಸ್ಕತಿಕ ನೆಲೆಗಳೂ ಗಟ್ಟಿಗೊಳ್ಳಬೇಕಿದೆ: ಪೆರ್ಲ ನೀರನ್ನು ಸಂರಕ್ಷಿಸದಿದ್ದರೆ ಜಲಕ್ಷಾಮದ ದಿನಗಳು ದೂರವಿಲ್ಲ: ಶ್ರೀಪಡ್ರೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದು ಪ್ರಪಂಚದ ಜನರ ಜೊತೆಗೆ ಸ್ವರ್ಧಿಸಬೇಕಾದ ದಿನಗಳು ಬಂದಿವೆ. ಕಲಿಕೆ ಎಂಬುದು ಶಾಲೆಯ ಪಾಠ-ಪಠ್ಯಗಳಿಗಷ್ಟೇ ಸೀಮಿತವಾಗಿರದೇ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ರಂಗದಲ್ಲಿ ಪ್ರಬಲವಾಗಿ ಬೆಳೆಯುವಂತೆ ಮಾಡಬೇಕಿದ್ದು, ನಮ್ಮ ಅಸ್ಮಿತೆ ಹಾಗೂ ಮೂಲ ಸಂಸ್ಕೃತಿಯ ನೆಲೆಗಳನ್ನು ಮರೆಯದೇ ಮುನ್ನಡೆಯಬೇಕಿದೆ ಎಂದು ಮಂಗಳೂರು ಆಕಾಶವಾಣಿ ನಿರ್ದೇಶಕ, ಸಾಹಿತಿ ಡಾ. ವಸಂತಕುಮಾರ್ ಪೆರ್ಲ ಹೇಳಿದರು. ಅವರು ಕುಸುಮಾ ಫೌಂಡೇಶನ್ ಆಶ್ರಯದಲ್ಲಿ ನಾಗೂರಿನ ಕುಸುಮಾ ಗ್ರೂಪ್ ಆವರಣದಲ್ಲಿ ಜರುಗಿದ ‘ಕುಸುಮಾಂಜಲಿ 2016’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಜನಪದದಲ್ಲಿ ನಡೆಯುತ್ತಿದ್ದ ಗ್ರಾಮೋತ್ಸವ, ಊರ ಜಾತ್ರೆಗಳು ಸಾಂಸ್ಕೃತಿಕ, ಧಾರ್ಮಿಕ, ಕೃಷಿಪರ ಎಚ್ಚರವನ್ನು ಉಂಟು ಮಾಡುತ್ತಿದ್ದರೇ, ಕರಾವಳಿ ಜಿಲ್ಲೆಗಳಲ್ಲಿ ಶೈಕ್ಷಣಿಕ ಹಾಗೂ ಸಾಹಿತ್ತಿಕವಾದ ಆಧುನಿಕ ಸಾಂಸ್ಕೃತಿಕ ಎಚ್ಚರ ಉಂಟಾಗುತ್ತಿದೆ ಎಂದರು. ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿಗಳು ಸುಂದರ, ಸುಲಲಿತವಾಗಿ, ಮೇರುಕಲಾವಿದರ ಗಾಯನದ ಪ್ರಸ್ತುತಿಗೆ ಎರಡಿಲ್ಲದಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಮತ್ತು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಮಾರಕ ರೋಗ, ಏಡ್ಸ್ ಬಗ್ಗೆ ಅರಿವು ಮೂಡಿಸುವ ಬಗ್ಗೆ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುಂದಾಪುರ ತಾಲೂಕು ಪಂಚಾಯತ್ ವಠಾರದಲ್ಲಿ ನಡೆದ ಒಂದು ಗಂಟೆಯ ಈ ಯಕ್ಷಗಾನ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪ್ರಾಯೋಜಿಸಿದ್ದು, ಯಕ್ಷಗಾನವನ್ನು ಬೆಂಗಳೂರಿನ ಕಲಾದರ್ಶಿನಿ ತಂಡ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಅವರು ಈ ಪ್ರದರ್ಶನ ಸಾರ್ವಜನಿಕರಿಗೆ ಮಾರಕ ಕಾಯಿಲೆ ಏಡ್ಸ್ ಬಗ್ಗೆ ಅರಿವು ಮೂಡಿಸುವಲ್ಲಿ ತುಂಬಾ ಸಹಕಾರಿಯಾಗಿದೆ ಎಂದು ಕಲಾವಿದರಿಗೆ ಶುಭ ಹಾರೈಸಿದರು. ರೋಟರಿ ಸನ್‌ರೈಸ್ ಸದಸ್ಯರಾದ ಕೆ.ಎಚ್. ಚಂದ್ರಶೇಖರ, ಪ್ರಕಾಶಚಂದ್ರ ಹೆಗ್ಡೆ, ಅಬುಶೇಖ್ ಸಾಹೇಬ್, ರಾಜಶೇಖರ ಹೆಗ್ಡೆ, ಟಿ.ಎಂ. ಚಂದ್ರಶೇಖರ, ನಾಗರಾಜ ನಾಕ್, ಶಿವಾನಂದ ಎಂ.ಪಿ., ಡುಂಡಿರಾಜ್, ನಾಗೇಶ್ ನಾವುಡ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದಿನ ತಂತ್ರಜ್ಞಾನ ಯುಗದಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ತಮ್ಮದೇ ಆದ ವೆಬ್‌ಸೈಟ್‌ನ ಅಗತ್ಯತೆ ಇದ್ದು ಇದರಿಂದ ಶೈಕ್ಷಣಿಕ ಸಂಸ್ಥೆಗೆ, ವಿದ್ಯಾರ್ಥಿಗಳಿಗೆ ರಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಬಿ.ನಾಯಕ್ ರವರು ಸ್ಥಳೀಯ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿದರು ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನ ಖ್ಯಾತ ಮಕ್ಕಳ ತಜ್ಞ ಹಾಗೂ ೨೦೧೭ನೇ ಸಾಲಿಗೆ ಇಂಡಿಯನ್ ಪಿಡಿಯಾಟ್ರಿಕ್ಸ್ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಸಂತೋಷ ಟಿ ಸೋನ್ಸ್ ರವರು ಮಾತನಾಡುತ್ತಾ ಇಂದು ದೇಶದ ಮೂಲೆ ಮೂಲೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಯುವಕ ಯುವತಿಯರು ತಮ್ಮ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಕುಂದಾಪುರದವರು ಛಲಗಾರರು, ಬುದ್ಧಿವಂತರು, ಪ್ರಪಂಚದ ಬೇರೆ ಬೇರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ನಾಗಾರಾಧನೆಯಿಂದ ನಮ್ಮ ಇಷ್ಟಾರ್ಥಗಳೆಲ್ಲವೂ ನೆರವೇರುತ್ತವೆ. ನಮಗೆ ಕಣ್ಣಿಗೆ ಕಾಣಸಿಗುವ ಪ್ರತ್ಯಕ್ಷ ದೇವರಾದ ನಾಗನನ್ನು ಭಕ್ತಿಶ್ರದ್ಧೆಯಿಂದ ಪೂಜಿಸಬೇಕು. ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಪ್ರತಿನಿತ್ಯ ಶಾಸ್ತ್ರೋಕ್ತವಾಗಿ ನಡೆದರೆ ಊರಿನಲ್ಲಿ ಎಲ್ಲರೂ ಕ್ಷೇಮದಿಂದ ಇರಲು ಸಾಧ್ಯ ಮತ್ತು ಯಾವುದೇ ಕ್ಷಾಮವಿಲ್ಲದೆ ಎಲ್ಲರೂ ಸುಖದಿಂದ ಬಾಳಲು ಸಹಾಯಕವಾಗಲಿದೆ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ ಅವರ ಶಿಷ್ಯ ಶ್ರೀ ವಿದುಶೇಖರ ಭಾರತೀ ಸ್ವಾಮೀಜಿ ಹೇಳಿದರು. ಅವರು ಗುಜ್ಜಾಡಿಯ ಬೆಣ್ಗೆರೆಯಲ್ಲಿರುವ ಶ್ರೀ ನಾಗ ದೇವಸ್ಥಾನಕ್ಕೆ ಚಿತ್ತೈಸಿ ಶ್ರೀದೇವರ ದರ್ಶನ ಪಡೆದು ಭಕ್ತರನ್ನು ಆಶೀರ್ವದಿಸಿ ಮಾತನಾಡಿದರು. ಶ್ರೀ ಶೃಂಗೇರಿ ಮಠಕ್ಕೂ ಬಾಡುಡಿ ಮೇಸ್ತ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಭಕ್ತರು ಪ್ರತಿವರ್ಷ ಮಠದ ಮಹಾಸ್ವಾಮಿಗಳು ದರ್ಶನ ಪಡೆದು ಸ್ವಾಮೀಜಿಯವರ ಅನುಗ್ರಹಕ್ಕೆ ಪ್ರಾಪ್ತರಾಗುತ್ತಿದ್ದು, ಶ್ರೀದೇವರ ಮತ್ತು ಗುರುಗಳ ಆಶೀರ್ವಾದದಿಂದ ಸಮಾಜ ಅಭಿವೃದ್ಧಿ ಹೊಂದಿ ಶ್ರೀದೇವರ ಸತ್ಕಾರ್ಯಗಳನ್ನು ನಿರಂತರವಾಗಿ ನಡೆಸುವಂತಾಗಲಿ ಎಂದು ಆಶೀರ್ವದಿಸಿದರು. ಇದೇ ಸಂದರ್ಭ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಸಮಾರಂಭಕ್ಕೆ ಚಾಲನೆ ನೀಡಿದರು. ಹಸ್ತಪತ್ರಿಕೆ ಬಿಡುಗಡೆಗೊಳಿಸಿದ ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಮತ್ತು ಆಸ್ಪತ್ರೆಯ ರೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ದಿಕ್ಸೂಚಿ ಭಾಷಣ ಮಾಡಿ, ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ಅನಂತ ಕೌಶಲ್ಯಗಳನ್ನು ಕಲಿಸುವುದು ಕೂಡಾ ಭವಿಷ್ಯದ ಜೀವನಕ್ಕೆ ಸಹಕರಿಯಾಗುತ್ತದೆ. ಜೀವನದಲ್ಲಿ ಆಗಾಗ ಬರುತ್ತಿರುವ ಅವಕಾಶಗಳಿಂದ ಮಕ್ಕಳು ವಂಚಿತರಾಗದೇ ಕಠಿಣ ಪರಿಶ್ರಮ, ಸತತ ಪ್ರಯತ್ನಗಳಿಂದ ಮುನ್ನುಗ್ಗಿದಾಗ ಬೆಳಕು ಕಾಣಬಹುದು ಎಂದರು. ಸಾಂಸಾರಿಕ ವರ್ತನೆಯ ನಿರೀಕ್ಷೆಯಂತೆ ಮಕ್ಕಳನ್ನು ಬೆಳೆಸುವುದು ಸಾಮಾನ್ಯ ಸಂಗತಿಯಾದರೂ ಕೂಡಾ ಅವರಿಗೆ ಮೌಲ್ಯ, ನೈತಿಕತೆ, ಸಾಮಾಜಿಕ ಜ್ಞಾನ ಹಾಗೂ ಸೇವಾಮನೋಭಾವನೆಯ ಬಗ್ಗೆ ತಿಳಿಹೇಳಬೇಕು. ಇದು ನಮ್ಮ ನಡೆ-ನುಡಿಯ ಮೇಲೆ ಅವಲಂಬಿತವಾಗಿದ್ದು, ಮನೆಯಿಂದಲೇ ಈ ರೀತಿಯಾಗಿ ಕಲಿಕೆ ಪ್ರಾರಂಭಿಸಬೇಕು. ಯಾವುದೇ ವಿಚಾರವನ್ನು ನಾವು ಒಪ್ಪಿಕೊಂಡು ಗೌರವಿಸುತ್ತೇವೋ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದಲ್ಲಿ ೨೦೧೨ರಿಂದ ಪಂಜರದಲ್ಲಿ ಮೀನು ಸಾಕಣಿಕೆ ನಡೆಯುತ್ತಿದ್ದು, ಕೃಷಿಕರು ಮೀನು ಸಾಕಣಿಕೆ ಹೆಚ್ಚಿನ ಒತ್ತನ್ನು ನೀಡಿ ಅದನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿ ಎಂದು ಕರಾವಳಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಸಿ.ಕೆ. ಮೂರ್ತಿ ಹೇಳಿದರು. ಜಿಲ್ಲಾ ಪಂಚಾಯತ್ ಉಡುಪಿ ಮತ್ತು ಮೀನುಗಾರಿಕಾ ಇಲಾಖೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಉಪ್ಪುಂದ ನಾಡದೋಣಿ ಭನವದಲ್ಲಿ ನಡೆದ ಪಂಜರದಲ್ಲಿ ಮೀನು ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷ ದೇಶದಲ್ಲಿ ೩೩ ಸಾವಿರ ಕೋಟಿ ರೂ. ಸಿಗಡಿ ರಫ್ತು ಮಾಡಲಾಗಿದೆ, ಇದರಲ್ಲಿ ಸಿಂಹಪಾಲು ಉತ್ಪಾದನೆ ಆಂಧ್ರ, ಕೇರಳ ರಾಜ್ಯದಿಂದ ಆಗಿದ್ದು, ಸೌಲಭ್ಯ ಕೊರತೆಯಿಂದ ನಮಗೆ ಸ್ವಲ್ಪಮಟ್ಟಿಗೆ ಹಿನ್ನೆಡೆಯಾಯಿತು. ವೈಜ್ಞಾನಿಕ ಸಂಬಂಧದೊಂದಿಗೆ ಸೀಕೇಜ್ ಕೃಷಿ ಮಾಡಿ ಫಲಕಾರಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಸಿಗಡಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಪಂಜರದಲ್ಲಿ ಮೀನು ಸಾಕಣಿಕೆಗೆ ಕೇಂದ್ರ, ರಾಜ್ಯ ಹಾಗೂ ನ್ಯಾಷನಲ್ ಫೀಶರಿಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ನಿಟ್ಟೆ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ ೩೧೮೨ ಇದರ ಜಿಲ್ಲಾ ಮಟ್ಟದ ಕ್ರೀಡಾಕೂಟ ಸ್ಪೂರ್ತಿ ೨೦೧೬ರಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಕುಂದಾಪುರ ವಿವಿಧ ಸ್ಪರ್ಧೆಗಳಲ್ಲಿ ೨೩ ಪ್ರಥಮ, ೧೯ ದ್ವಿತೀಯ, ೧೧ ತೃತೀಯ ಸ್ಥಾನದೊಂದಿಗೆ ಅತೀ ಹೆಚ್ಚು ಪ್ರಶಸ್ತಿಯನ್ನು ಗಳಿಸಿ ಚಾಂಪಿಯನ್‌ಶಿಪ್ ಪಡೆದು ರೋಟರಿ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಿದೆ. ಹುಡುಗರ ವಿಭಾಗದಲ್ಲಿ ಪ್ರಭಾವ್, ಹುಡುಗಿಯರ ವಿಭಾಗದಲ್ಲಿ ರೋಶನಿ, ಆನ್ಸ್ ಕಿರಿಯರ ವಿಭಾಗದಲ್ಲಿ ನಯನ ಕಿಶೋರ್, ಆನ್ಸ್ ಹಿರಿಯರ ವಿಭಾಗದಲ್ಲಿ ಗೀತಾಂಜಲಿ ಆರ್. ನಾಯ್ಕ್ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು. ಆನ್ಸ್ ಹಿರಿಯರ ವಿಭಾಗದಲ್ಲಿ ೫೦ ಮೀ. ಓಟದಲ್ಲಿ, ಶಾಟ್‌ಪುಟ್, ಸ್ಟ್ಯಾಂಡಿಂಗ್ ಜಂಪ್‌ನಲ್ಲಿ ಗೀತಾಂಜಲಿ ಆರ್. ನಾಯ್ಕ್ ಪ್ರಥಮ, ಆನ್ಸ್ ಕಿರಿಯರ ವಿಭಾಗದಲ್ಲಿ ೧೦೦ ಮೀ. ಓಟದಲ್ಲಿ, ೨೦೦ ಮೀ. ಓಟದಲ್ಲಿ, ಲಾಂಗ್‌ಜಂಪ್‌ನಲ್ಲಿ ನಯನ ಕಿಶೋರ್ ಪ್ರಥಮ, ಕೇರಂ ಸಿಂಗಲ್ಸ್‌ನಲ್ಲಿ ಸುರೇಖಾ ಕಿಶೋರ್ ಪ್ರಥಮ, ಹುಡುಗಿಯರ ವಿಭಾಗದಲ್ಲಿ ಶಾಟ್‌ಪುಟ್, ಕೇರಂನಲ್ಲಿ…
