ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪಟ್ಟಣ ಪ್ರದೇಶಗಳಲ್ಲಿರುವ ಆಸ್ಪತ್ರೆಗಳು ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಬೇಕಿದೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸಂರಕ್ಷಣೆ ಹಾಗೂ ಆರೋಗ್ಯ ಸೇವೆಯನ್ನು ನೀಡಲು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳು ಮುಂದೆ ಬರಬೇಕು. ಗ್ರಾಮೀಣ ಪ್ರದೇಶದ ಬಡ ಜನರಿಗೆ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಕ್ರಮಕೈಗೊಳ್ಳಬೇಕು ಎಂದು ಗಂಗೊಳ್ಳಿ ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಹೇಳಿದರು. ಉಡುಪಿ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಕುಂದಾಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ, ಸ್ಫೂರ್ತಿ ಮಹಿಳಾ ಘಟಕ ಗಂಗೊಳ್ಳಿ, ಅಮೃತ ಮಹಿಳಾ ಸಂಘ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಯೆನಪೋಯ ಮೆಡಿಕಲ್ ಕಾಲೇಜು ಮಂಗಳೂರು ಇವರ ಸಹಯೋಗದೊಂದಿಗೆ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗರ್ಭಕೋಶ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರಿನ ಯೆನಪೋಯ ಮೆಡಿಕಲ್ ಕಾಲೇಜಿನ ವೈದ್ಯ ಡಾ.ಇಬ್ರಾಹಿಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನದಿ -ಕಡಲಿನ ಸಂಗಮವನ್ನು ಬೇರ್ಪ ಡಿಸುವ ಸುಂದರ ಹಾಗೂ ಪ್ರಖ್ಯಾತ ಮರವಂತೆ ಕಡಲ ತೀರದ ಪಕ್ಕದಲ್ಲೇ ಹಾದುಹೋಗುವ ರಾ.ಹೆ. 66ರಲ್ಲಿ ಚತುಷ್ಪಥ ಕಾಮಗಾರಿಯ ವೇಳೆ ನಿರ್ಮಿಸಲಾದ ಮೇಲ್ಸೇತುವೆಯಲ್ಲಿ ಸಂಚಾರ ಮುಕ್ತಗೊಳಿಸಲಾಗಿದೆ. ಕುಂದಾಪುರದಿಂದ ಕಾರವಾರದ ತನಕ ಹೆದ್ದಾರಿ ವಿಸ್ತರಣೆಯ ವೇಳೆ ಗುತ್ತಿಗೆದಾರರಿಗೆ ಈ ಸ್ಥಳದಲ್ಲಿ ಚತು ಷ್ಪಥ ಹೆದ್ದಾರಿಯನ್ನು ನಿರ್ಮಿಸುವಾಗ ಸ್ಥಳಾವಕಾಶದ ಕೊರತೆಯಿಂದ ಇಲ್ಲಿ ಹರಿಯುತ್ತಿರುವ ನದಿಯ ಅಂಚಿನಲ್ಲಿ ನದಿಗೆ ಪಿಲ್ಲರ್ ಅಳವಡಿಸಿ ನಿರ್ಮಿಸಲಾದ ಈ ಸೇತುವೆ ಕಾಮಗಾರಿ ಕಳೆದ ತಿಂಗಳು ಪೂರ್ಣ ಗೊಂಡಿದ್ದು ಇದನ್ನು ಸಂಪರ್ಕಿಸುವ ಸಂಪರ್ಕ ರಸ್ತೆಯ ಕಾಮಗಾರಿ ಮುಗಿದ ಬಳಿಕ ಈ ರಸ್ತೆಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದರ ಇನ್ನೊಂದು ಪಾರ್ಶ್ವದಲ್ಲಿ ಹೆದ್ದಾರಿ ಕಾಮಗಾರಿ ಆರಂಭ ವಾಗಬೇಕಾಗಿರುವುದರಿಂದ ಈ ಮೇಲ್ಸೇತುವೆಯಲ್ಲಿ ಸಂಚಾರ ಮುಕ್ತ ಗೊಳಿಸಲಾಗಿದೆ ಎನ್ನುವುದು ಐಆರ್ಬಿ ಎಂಜಿನಿಯರ್ಗಳು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಾಣ ಪ್ರಸಿದ್ಧ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸಂಕಷ್ಟ ಹರ ಚತುರ್ಥಿಯ ಹಿನ್ನೆಲೆಯಲ್ಲಿ ವಿಶೇಷವಾಗಿ ಶ್ರೀದೇವರಿಗೆ ಸುಮಾರು 16 ಸಾವಿರ ಕಡಬು (ಮೂಡೆ) ನೈವೇದ್ಯ ಅನಂತರ ಭಕ್ತರಿಗೆ ಕಡುಬು (ಮೂಡೆ) ಪ್ರಸಾದ ವಿತರಣಾ ಕಾರ್ಯಕ್ರಮ ಜರುಗಿತು. ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಸಂಕಷ್ಟ ಹರ ಚತುರ್ಥಿಯ ಹಿನ್ನೆಲೆಯಲ್ಲಿ ಶ್ರೀದೇವರಿಗೆ ಸುಮಾರು 16 ಸಾವಿರ ಕಡುಬು (ಮೂಡೆ) ತಯಾರಿಯ ಪೂರ್ವ ಸಿದ್ಧತೆಗಾಗಿ ಸುಮಾರು ಒಂದು ವಾರದಿಂದಲೂ ಹಾಲಾಡಿ, ಹೊಸಂಗಡಿ ಮುಂತಾದ ಗ್ರಾಮೀಣ ಭಾಗದಿಂದ ಮುಂಡ್ಕನೊಲಿ ತಂದು 25 ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು ಕಡುಬಿನ ಓಲೆ ಕಟ್ಟಿದ್ದರು ಹಾಗೂ ಸುಮಾರು 500 ಕೆ.ಜಿ. ಅಕ್ಕಿ ಹಾಗೂ ಉದ್ದಿನ ಬೇಳೆ ಪ್ರಮಾಣಕ್ಕನುಸಾರವಾಗಿ ಐದು ಅರೆಯುವ ಯಂತ್ರಗಳನ್ನು ಬಳಸಿಕೊಂಡು 25 ಕ್ಕೂ ಅಧಿಕ ಮಂದಿ ನುರಿತ ಪಾಕಶಾಸ್ತ್ರಜ್ಞರು ಮಾ. 15ರ ರಾತ್ರಿಯಿಂದಲೇ ನಿರಂತರವಾಗಿ ಕಾರ್ಯನಿರ್ವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಮ್ಮಾಡಿ ಸಮೀಪದ ಮೂವತ್ತುಮುಡಿ ಬಸ್ ನಿಲ್ದಾಣದ ಬಳಿ ಲಾರಿ ಹಾಗೂ ಟಿಪ್ಪರ್ ನಡುವೆ ಮುಖಾಮುಖೀ ಢಿಕ್ಕಿ ಸಂಭಧಿವಿಸಿ ಲಾರಿ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಚಾಲಕ ತಮಿಳುನಾಡು ನಿವಾಸಿ ಜಯ ಕುಮಾರ್ (41) ಹಾಗೂ ಅದೇ ಲಾರಿಯ ಲ್ಲಿದ್ದ ಇನ್ನೋರ್ವ ಚಾಲಕ ಪೊನ್ನುಸ್ವಾಮಿ (52) ಗಂಭೀರವಾಗಿ ಗಾಯಗೊಂಡವರು. ಢಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ಮಗುಚಿ ಬಿದ್ದಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ. ಕುಂದಾಪುರದಿಂದ ಬಂಡೆ ಕಲ್ಲುಗಳನ್ನು ತುಂಬಿಕೊಂಡು ಗಂಗೊಳ್ಳಿಗೆ ತೆರಳುತ್ತಿದ್ದ ಟಿಪ್ಪರ್ಗೆ ಹುಬ್ಬಳ್ಳಿಯಿಂದ ಕೇರಳದತ್ತ ಸಾಗುತ್ತಿದ್ದ ಲಾರಿ ತೀರಾ ಬಲಕ್ಕೆ ಚಲಿಸಿ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಟಿಪ್ಪರ್ ಪಲ್ಟಿಯಾಗಿ ಅದರ ಲ್ಲಿದ್ದ ಬಂಡೆಕಲ್ಲುಗಳು ರಸ್ತೆಯ ಬದಿ ಬಿದ್ದಿದ್ದವು. ಟಿಪ್ಪರ್ ಚಾಲಕನಿಗೆ ಗಾಯಗಳಾಗಿದ್ದು ಅವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಲಾರಿಯೊಳಗೆ ಸಿಲುಕಿಕೊಂಡಿದ್ದ ಚಾಲಕರಿಬ್ಬರನ್ನು ಹೆಮ್ಮಾಡಿಯ ರಿಕ್ಷಾ ಚಾಲಕರು ಹೊರತೆಗೆದು ಅವರದ್ದೇ ರಿûಾದಲ್ಲೇ ಕುಂದಾಪುರ ಆಸ್ಪತ್ರೆಗೆ ಸಾಗಿಸಿದ್ದರು. ಅಪಘಾತ ಸಂಭವಿಸಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ತನ್ನ ಇಪ್ಪತ್ತೈದರ ಹರೆಯದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರಶಸ್ತಿ ಪಡೆದ ದಿ. ರಾಜೇಶ ಶಿಬಾಜೆ ಹೆಸರಿನಲ್ಲಿ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಘಟಕವು ನೀಡುವ ಪ್ರತಿಷ್ಠಿತ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಗೆ ಉಡುಪಿಯ ಹಿರಿಯ ಪತ್ರಕರ್ತ ಕನ್ನಡಪ್ರಭ ವರದಿಗಾರ ಸುಭಾಶ್ಚಂದ್ರ ಎಸ್.ವಾಗ್ಲೆ ಮತ್ತು ಮುಂಬಯಿಯ ಕರ್ನಾಟಕ ಮಲ್ಲದಲ್ಲಿ ೨೫ ವರ್ಷಗಳಿಂದ ಕ್ರೀಡಾ ಅಂಕಣವನ್ನು ಬರೆಯುತ್ತಿರುವ ಕರ್ನಾಟಕ ಮಲ್ಲ ಪತ್ರಿಕೆಯ ವರದಿಗಾರ ನವೀನ್ ಕೆ. ಇನ್ನ ಅವರು ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ. ಸುಭಾಶ್ಚಂದ್ರ ಎಸ್. ವಾಗ್ಳೆ ಅವರು ಕನ್ನಡ ಪ್ರಭ ಪತ್ರಿಕೆಯ ಹಿರಿಯ ವರದಿಗಾರರಾಗಿದ್ದಾರೆ. ೧೯೯೬ರಲ್ಲಿ ಪುತ್ತೂರಿನ ಜನ ಈ ದಿನ ಪತ್ರಿಕೆಯಲ್ಲಿ ಛಾಯಾಚಿತ್ರಗ್ರಾಹಕರಾಗಿ ವೃತ್ತಿ ಆರಂಭ. ೧೯೯೮ರಲ್ಲಿ ಸುಪ್ರಭಾತ ಛಾನೆಲ್, ೧೯೯೯ರಲ್ಲಿ ಕಾವೇರಿ ಛಾನೆಲ್, ೨೦೦೦ರಲ್ಲಿ ಉಡುಪಿ ದರ್ಶನ ಕೇಬಲ್ ಛಾನೆಲ್, ೨೦೦೨ರಲ್ಲಿ ಕನ್ನಡಪ್ರಭದ ಮಣಿಪಾಲ ವರದಿಗಾರ, ೨೦೦೩ರಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಸೇವೆ ಆರಂಭಿಸಿ ಅದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಾಲೇಜು ವಿದ್ಯಾರ್ಥಿನಿಯೋರ್ವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ತಗ್ಗರ್ಸೆ ಮಳುವಾಡಿಮನೆ ಮಂಜುನಾಥ ಪೂಜಾರಿ ಎಂಬುವವರ ಪುತ್ರಿ, ಬೈಂದೂರು ಸರಕಾರಿ ಪದವಿ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಅಶ್ವಿನಿ (20) ಮೃತ ದುರ್ದೈವಿ. ಮೃತ ಅಶ್ವಿನಿ ತಂದೆ ದುಬೈನಲ್ಲಿ ಉದ್ಯೋಗಿಯಾಗಿದ್ದು ಮನೆಯಲ್ಲಿ ತಾಯಿಯೊಂದಿಗೆ ವಾಸವಿದ್ದಳು. ಬುಧವಾರ ತಾಯಿ ತನ್ನ ಗಂಗೊಳ್ಳಿಗೆ ತೆರಳಿದ್ದ ಸಮಯದಲ್ಲಿ ಕಾಲೇಜಿಗೆ ತೆರಳುವುದಾಗಿ ಹೇಳಿದ್ದ ಆಕೆ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಡೆತ್ನೋಟ್ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಬೇರೆ ಯಾರು ಕಾರಣರಲ್ಲ, ಜೀವ ಹಾಗೂ ಜೀವನದಲ್ಲಿ ಜಿಗುಪ್ಸೆ ಬಂದು ಬದುಕಲಿಕ್ಕೆ ಇಷ್ಟವಿಲ್ಲದೆ ಸಾಯುವ ನಿರ್ದಾರ ಮಾಡಿದ್ದೇನೆ. ತಾನು ಹಾಕಿಕೊಂಡಿರುವ ಉಡುಗೆಯಲ್ಲಿಯೇ ನನ್ನ ಅಂತ್ಯಕ್ರಿಯೆ ನಡೆಸಬೇಕು ಎಂದು ಬರೆದುಕೊಂಡಿದ್ದಾಳೆ.ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಕೆ ಪ್ರಗತಿಯಲ್ಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕು ರಚನೆಯಾಗಬೇಕೆಂಬ ನಾಲ್ಕು ದಶಕಗಳ ಕೂಗಿಗೆ ಸರಕಾರ ಸ್ಪಂದಿಸಿದ್ದು ಈ ಭಾರಿಯ ರಾಜ್ಯ ಸರಕಾರದ ಬಜೆಟ್ನಲ್ಲಿ ಬೈಂದೂರು ತಾಲೂಕು ಘೋಷಣೆ ಮಾಡಿದೆ. ಬೈಂದೂರು ತಾಲೂಕಾಗಬೇಕೆಂದು ಈ ಭಾಗದ ವಿವಿಧ ಸಂಘಟನೆಗಳು ನಿರಂತವಾಗಿ ಹೋರಾಟಗಳನ್ನು ಸಂಘಟಿಸಿ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು. ಒಂದೇರಡು ಸಮಿತಿಗಳೂ ಕೂಡ ದಶಕಗಳ ಹಿಂದೆಯೇ ಬೈಂದೂರು ತಾಲೂಕು ಆಗುವುದುರ ಅಗತ್ಯತೆಯನ್ನು ವರದಿಯಲ್ಲಿ ಸೂಚಿಸಿದ್ದವು. ಆದಾಗ್ಯೂ ಬೇರೆ ಬೇರೆ ಕಾರಣಗಳಿಂದಾಗಿ ತಾಲೂಕು ರಚನೆಗೆ ಹಿನ್ನಡೆಯುಂಟಾಗಿತ್ತು. ಹಿಂದಿನ ಬಿಜೆಪಿ ಸರಕಾರ ಕೂಡ ಬಜೆಟ್ನಲ್ಲಿ ತಾಲೂಕು ಘೋಷಣೆ ಮಾಡಿತ್ತಾದರೂ ಬಳಿಕ ಆದು ರದ್ದಾಗಿತ್ತು. ಈ ಭಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಜೆಟ್ನಲ್ಲಿ ತಾಲೂಕು ರಚನೆಗೆ ಹಸಿರು ನಿಶಾನೆ ದೊರೆತಿದೆ. ಬೈಂದೂರು ಕ್ಷೇತ್ರದ ಶಾಸಕರದ ಕೆ. ಗೋಪಾಲ ಪೂಜಾರಿ ಅವರ ಶ್ರಮ ಇದರ ಹಿಂದೆ ದೊಡ್ಡ ಮಟ್ಟದಲ್ಲಿಯೇ ಇದೆ ಎಂಬುದನ್ನು ಮರೆಯುವಂತಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರಿನಲ್ಲಿ ಸಂಭ್ರಮಾಚರಣೆ: ಬಜೆಟ್ನಲ್ಲಿ ತಾಲೂಕು ಘೋಷಣೆಯಾದ ಬೆನ್ನಲ್ಲೇ ಬೈಂದೂರಿನ ನಾಗರಿಕರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಕಾರ್ಮಿಕರ ಭವನದಲ್ಲಿ ನಡೆಯಿತು. ಕುಂದಾಪುರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಸೀರ್ ಹುಸೇನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ, ಇಂದು ಚಾಲಕರ ಮಕ್ಕಳು ತಮ್ಮಂತೆ ಚಾಲಕರಾಗಬೇಕೆಂದು ಯಾವ ತಣದೆಯು ಆಸೆ ಪಡೋದಿಲ್ಲ ಆದರೆ ಉನ್ನತ ಹುದ್ದೆಯಲ್ಲಿರುವ ತಂದೆ ತಾಯಿಯರು ತಮ್ಮ ಮಕ್ಕಳು ತಮ್ಮಂತೆ ಉನ್ನತ ಹುದ್ದೆಗೇರ ಬೇಕು ಎಂದು ಆಶೆ ಪಡುತ್ತಾರೆ.ಹಾಗಾಗಿ ಚಾಲಕರ ಮಕ್ಕಳಾದ ನೀವು ಒಳ್ಳೆಯ ವಿದ್ಯಾಭ್ಯಾಸ ಕಲಿತು ಮುಂದೆ ಒಳ್ಳೆಯ ಉದ್ಯೋಗದಲ್ಲಿ ಕೂರುವಂತಾರಗಬೇಕು ಮತ್ತು ಕ್ರೀಡೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಕೆ.ಲಕ್ಷಮಣ ಬರೇಕಟ್ಟು ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಕುಂದಾಪುರ ಅಧ್ಯಕ್ಷ ಉದಯ ಗಾಂವ್ಕರ್, ಸಂಘ ಗೌರವಾಧ್ಯಕ್ಷ ಎಚ್.ಕರುಣಕರ, ಸಲಹೆಗಾರ ಚಂದ್ರ ವಿ., ವಿದ್ಯಾರ್ಥಿ ವೇತನ ಸಮಿತಿಯ ಸಂಚಾಲಕ ಮಲ್ಲಿಕಾರ್ಜುನ ಶೆಟ್ಟಿಗಾರ್, ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ವಿ., ಶೇಖರ ವಿ. ದೋಣಿಮ ಉಪಸ್ಥಿತರಿದ್ದರು.…
ಕಲರ್ಸ್ ಆಫ್ ದಿ ರೈನ್ ಬೋ’ ಪುಸ್ತಕ ಬಿಡುಗಡೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಾಲ್ಯದಿಂದಲೂ ಜೀವನದಲ್ಲಿ ಪಡೆದ ನಿರಂತರ ಶ್ರಮ, ಪಡೆದ ಅನುಭವ, ಪ್ರಾಮಾಣಿಕತೆ, ವಿಶೇಷ ಸಾಧನೆ ಮಾಡಲು ಶಕ್ತಿ, ಸ್ಪೂರ್ತಿ ಒದಗಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿದ್ದ ಕುಟುಂಬದ ವಿದ್ಯಾರ್ಥಿಗಳಲ್ಲಿ ಕೆಲವರು ಹತ್ತಾರು ಮೈಲಿ ನಡೆದು, ಊಟ, ಬಟ್ಟೆ ಪರಿವೆ ಇಲ್ಲದೇ ಕಷ್ಟಪಟ್ಟು ಶಿಕ್ಷಣ ಪಡೆದುದರಿಂದ ಅವರಲ್ಲಿ ಹಲವರು ಮಹತ್ ಸಾಧನೆ ಮಾಡಿದರು. ಕುಂದಾಪುರದ ಡಾ|ಉಮೇಶ್ ಭಟ್ ಅವರೂ ಹಳ್ಳಿ ಬೆಳಗೋಡಿನಿಂದ ಬಳ್ಳಾರಿ ಮೆಡಿಕಲ್ ಕಾಲೇಜಿಗೆ ತಲುಪಲು ಪಟ್ಟ ಶ್ರಮ, ಆನಂತರ ಪಡೆದ ಅನುಭವ, ಶಸ್ತ್ರ ಚಿಕಿತ್ಸಾ ತಜ್ಞರಾಗಿ ತೋರಿಸಿದ ಕರ್ತವ್ಯ ನಿಷ್ಠೆ ಅವರು ಯಶಸ್ವಿಯಾಗಲು ಸಾಧ್ಯವಾಯಿತು ಎಂದು ಖ್ಯಾತ ಚಿತ್ರನಟ, ಮಾಜಿ ಶಾಸಕ ಬಿ,ಸಿ.ಪಾಟೀಲ್ ಹೇಳಿದರು. ಕುಂದಾಪುರದಲ್ಲಿ ಡಾ| ಉಮೇಶ್ ಭಟ್ ಅವರ ಆಂಗ್ಲಭಾಷಾ ಕಾದಂಬರಿ ಕಲರ್ಸ್ ಆಫ್ ದಿ ರೈನ್ ಬೋ ಬಿಡುಗಡೆ ಮಾಡುತ್ತಾ ಹೇಳಿದರು. ಮಣಿಪಾಲ ಯುನಿವರ್ಸಿಟ ಪ್ರೆಸ್ ಹಾಗೂ ಕುಂದಪ್ರಭ ಕುಂದಾಪುರ ಆಶ್ರಯದಲ್ಲಿ ಕುಂದಾಪುರದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆನಂದ ಬಿಲ್ಲವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ಗಂಗೊಳ್ಳಿಯ ಪ್ರಧಾನ ಕಛೇರಿಯಲ್ಲಿ ಜರಗಿದ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ಸಭೆಯಲ್ಲಿ ಇವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹಿರಿಯ ನಿರ್ದೇಶಕ ವಾಸುದೇವ ಶೇರುಗಾರ್ ಅವರು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಆನಂದ ಬಿಲ್ಲವ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಾಸುದೇವ ಶೇರುಗಾರ್ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಇವರಿಬ್ಬರು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಸುಧೀರ್ ಕುಮಾರ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಬ್ಯಾಂಕಿನ ನಿರ್ದೇಶಕರಾದ ಕೆ.ಮಾಧವ ಖಾರ್ವಿ, ಹರೀಶ ಮೇಸ್ತ, ಸುಭಾಶ್ಚಂದ್ರ ಪೂಜಾರಿ, ಶ್ರೀನಿವಾಸ ಜತ್ತನ್, ಚಂದ್ರಶೇಖರ ಪೂಜಾರಿ, ನಾಗರಾಜ ಪೂಜಾರಿ, ಗೋಪಾಲ ನಾಯ್ಕ್ ಜಿ., ಆಶಾಲತಾ, ಯಮುನಾ, ನಾಗರಾಜ ಎಂ., ಲಕ್ಷ್ಮಣ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಗಾಣಿಗ…
