ಬಜೆಟ್‌ನಲ್ಲಿ ಬೈಂದೂರು ತಾಲೂಕು ಘೋಷಣೆ. ಮುಗಿಲು ಮಟ್ಟಿದ ಸಂಭ್ರಮಾಚರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು ರಚನೆಯಾಗಬೇಕೆಂಬ ನಾಲ್ಕು ದಶಕಗಳ ಕೂಗಿಗೆ ಸರಕಾರ ಸ್ಪಂದಿಸಿದ್ದು ಈ ಭಾರಿಯ ರಾಜ್ಯ ಸರಕಾರದ ಬಜೆಟ್‌ನಲ್ಲಿ ಬೈಂದೂರು ತಾಲೂಕು ಘೋಷಣೆ ಮಾಡಿದೆ.

Call us

Click Here

ಬೈಂದೂರು ತಾಲೂಕಾಗಬೇಕೆಂದು ಈ ಭಾಗದ ವಿವಿಧ ಸಂಘಟನೆಗಳು ನಿರಂತವಾಗಿ ಹೋರಾಟಗಳನ್ನು ಸಂಘಟಿಸಿ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು. ಒಂದೇರಡು ಸಮಿತಿಗಳೂ ಕೂಡ ದಶಕಗಳ ಹಿಂದೆಯೇ ಬೈಂದೂರು ತಾಲೂಕು ಆಗುವುದುರ ಅಗತ್ಯತೆಯನ್ನು ವರದಿಯಲ್ಲಿ ಸೂಚಿಸಿದ್ದವು. ಆದಾಗ್ಯೂ ಬೇರೆ ಬೇರೆ ಕಾರಣಗಳಿಂದಾಗಿ ತಾಲೂಕು ರಚನೆಗೆ ಹಿನ್ನಡೆಯುಂಟಾಗಿತ್ತು. ಹಿಂದಿನ ಬಿಜೆಪಿ ಸರಕಾರ ಕೂಡ ಬಜೆಟ್‌ನಲ್ಲಿ ತಾಲೂಕು ಘೋಷಣೆ ಮಾಡಿತ್ತಾದರೂ ಬಳಿಕ ಆದು ರದ್ದಾಗಿತ್ತು. ಈ ಭಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಜೆಟ್‌ನಲ್ಲಿ ತಾಲೂಕು ರಚನೆಗೆ ಹಸಿರು ನಿಶಾನೆ ದೊರೆತಿದೆ. ಬೈಂದೂರು ಕ್ಷೇತ್ರದ ಶಾಸಕರದ ಕೆ. ಗೋಪಾಲ ಪೂಜಾರಿ ಅವರ ಶ್ರಮ ಇದರ ಹಿಂದೆ ದೊಡ್ಡ ಮಟ್ಟದಲ್ಲಿಯೇ ಇದೆ ಎಂಬುದನ್ನು ಮರೆಯುವಂತಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರಿನಲ್ಲಿ ಸಂಭ್ರಮಾಚರಣೆ:
ಬಜೆಟ್‌ನಲ್ಲಿ ತಾಲೂಕು ಘೋಷಣೆಯಾದ ಬೆನ್ನಲ್ಲೇ ಬೈಂದೂರಿನ ನಾಗರಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಬೈಂದೂರು ತಾಲೂಕು ಹೋರಾಟ ಸಮಿತಿಯ ಪ್ರಮುಖರಾದ ಜಗನ್ನಾಥ ಶೆಟ್ಟಿ, ಎಸ್. ರಾಜು ಪೂಜಾರಿ, ವೆಂಕಟೇಶ ಕಿಣಿ, ಮದನ್‌ಕುಮಾರ್, ನಾಗರಾಜ ಗಾಣಿಗ ಬಂಕೇಶ್ವರ, ವಿಜಯ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಇದನ್ನೂ ಓದಿ:

► ಬೈಂದೂರು ತಾಲೂಕು ರಚನೆಯಾಗಬೇಕೆಂಬ ದಶಕಗಳ ಕೂಗನ್ನು ಕೇಳುವವರ್ಯಾರು? http://kundapraa.com/?p=2202

Click here

Click here

Click here

Click Here

Call us

Call us

Leave a Reply