ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೈಕಾಡಿ ಬಳಿ ಚಲಿಸುತ್ತಿದ್ದ ಬಸ್ಸಿನಿಂದ ಕೆಳಕ್ಕೆ ಬಿದ್ದ ಮಹಿಳೆಯೋರ್ವವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಹಾಲಾಡಿ ಗ್ರಾಮದ ಕಾಸಾಡಿ ನಿವಾಸಿ ನಾಗರಾಜ ದಾಮ್ಲೆ ಎಂಬುವವರ ಪತ್ನಿ ಸರೋಜಾ ಯಾನೆ ರೋಹಿಣಿ(೪೨) ಮೃತ ದುರ್ದೈವಿ. ಮಗ ಮೋಹಿತ್‌ನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದ ಸರೋಜಾ, ಹಾಲಾಡಿಯಲ್ಲಿ ಬಸ್ಸು ಹತ್ತಿ ಮುಂದಿನ ಬಾಗಿಲಿನ ಬಳಿ ನಿಂತಿದ್ದರು. ಹೈಕಾಡಿ ಬಳಿ ಬಸ್ಸು ರಸ್ತೆಯಲ್ಲಿದ್ದ ಹೊಂಡವನ್ನು ಜೀಕಿ ಮುಂದಕ್ಕೆ ಸಾಗಿದ್ದರಿಂದ ನಿಯಂತ್ರಣ ಕೊಳೆದುಕೊಂಡ ಮಹಿಳೆ ಬಸ್ಸಿಂದ ಕೆಳಕ್ಕೆ ಬಿದ್ದಿದ್ದು ಚರಂಡಿಗೆ ತಲೆ ಅಪ್ಪಳಿಸಿ ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ ಕುಳಿತುಕೊಂಡಿದ್ದ ಮಗನ ಕಣ್ಣೆದುರೇ ತಾಯಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದು ಇತರ ಪ್ರಯಾಣಿಕರಿಗೂ ಆಘಾತವನ್ನುಂಟುಮಾಡಿತ್ತು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿಯ ವಿಶಿಷ್ಟ, ವಿಶೇಷ ಪರಂಪರೆ ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್‌ರ ಹೆಸರಿನಲ್ಲಿ ಕೊಡ ಮಾಡುವ ೨೦೧೬-೧೭ರ ಸಾಲಿನ ಪ್ರಶಸ್ತಿಯನ್ನು ನಾಡಿನ ಯಕ್ಷಗಾನ ಕ್ಷೇತ್ರದ ಖ್ಯಾತ ಕಲಾವಿದ, ಏಕವ್ಯಕ್ತಿ ಪ್ರದರ್ಶನದ ರೂವಾರಿ ಮಂಟಪ ಪ್ರಭಾಕರ ಉಪಾಧ್ಯರಿಗೆ ನೀಡಲು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಬಳಗ ಆಯ್ಕೆ ಮಾಡಿದೆ. ಮಂಟಪ ಪ್ರಭಾಕರ ಉಪಾಧ್ಯರು ಯಕ್ಷಗಾನ ಕ್ಷೇತ್ರದಲ್ಲಿ ಸಾಧಿಸಿದ ಗಣನೀಯ ಸೇವೆ, ಅದರಲ್ಲೂ ಏಕವ್ಯಕ್ತಿ ಪ್ರದರ್ಶನದ ನೂತನ ಕಲ್ಪನೆಗೆ ಜೀವ ತುಂಬಿ ದೇಶ-ವಿದೇಶಗಳಲ್ಲಿ ನಿರಂತರ ತನ್ನ ಛಾಪನ್ನು ಮೂಡಿಸಿ ಅಸಂಖ್ಯಾತ ಅಭಿಮಾನಿಗಳ ಹೃನ್ಮನಗಳನ್ನು ತಣಿಸಿರುವ ನೆಲೆಯಲ್ಲಿ ಪ್ರಶಸ್ತಿ ಸಮಿತಿ ಇವರ ಹೆಸರನ್ನು ಅಂತಿಮಗೊಳಿಸಿದೆ. ಹಾಗೇ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಎರಡನೇ ವಾರ್ಷಿಕೋತ್ಸವ ಎಪ್ರಿಲ್ ೧೬ ನೇ ತಾರೀಕಿನಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಭಾಗವಹಿಸುವ ಗಣ್ಯರಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಕಟಣೆಯಲ್ಲಿ…
ಕುಂದಾಪ್ರ ಡಾಟ್ ಕಾಂ ವಿಡಿಯೋ ನೋಡಿ ಎಸ್ಪಿ ರವಿ ಚನ್ನಣ್ಣನವರ್ ನಟ ಕಿಚ್ಚ ಸುದೀಪ್ ಹಾಗೂ ಕನ್ನಡಿಗರ ಬಗ್ಗೆ ಏನಂದ್ರು ಗೊತ್ತಾ?
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಉಡುಪಿ ನೃತ್ಯನಿಕೇತನ ಆಶ್ರಯದಲ್ಲಿ ಡಾ.ಮಾಳವಿಕ ಹೆಬ್ಬಾರ್ ರಂಗಪ್ರವೇಶ ಮಾರ್ಚ್ ೫, ಸಂಜೆ ೫ಕ್ಕೆ ಭಂಡಾರ್‌ಕಾರ‍್ಸ್ ಕಾಲೇಜು ಆರ್. ಎನ್. ಶೆಟ್ಟಿ ಹಾಲ್‌ನಲ್ಲಿ ನಡೆಯಲಿದೆ ಎಂದು ಡಾ. ಎಚ್. ಆರ್. ಹೆಬ್ಬಾರ್ ತಿಳಿಸಿದರು. ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜ್‌ನಲ್ಲಿ ಮೆಡಿಕಲ್ ಜೆನೆಟಿಕ್ಸ್ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಡಾ.ಮಾಳವಿಕಾ ಹೆಬ್ಬಾರ್ ತನ್ನ ವ್ಯಾಸಂಗದ ಜೊತೆಗೆ ಲಲಿತಕಲಾಪ್ರಕಾರಕ್ಕೂ ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತ ಉಡುಪಿ ನೃತ್ಯನಿಕೇತನ ವಿದುಷಿ ಲಕ್ಷ್ಮೀಗುರುರಾಜರಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಾಹಿತಿ ಮತ್ತು ರಂಗನಿರ್ದೇಶಕ ಪ್ರೊ.ಉದ್ಯಾವರ ಮಾಧವ ಆಚಾರ್ಯ ಭಾಗವಹಿಸಲಿದ್ದು, ಜಿಲ್ಲಾ ನ್ಯಾಯಧೀಶ ರಾಜಶೇಖರ ವಿ.ಪಟೀಲ್, ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೆಡಿಕಲ್ ಜೆನೆಟಿಕ್ಸ್ ವಿಭಾಗ ಡಾ.ಗಿರೀಶ್ ಕಟ್ಟ ಭಾಗವಹಿಸಲಿದ್ದಾರೆ. ವಿದುಷಿ ಲಕ್ಷ್ಮೀ ಗುರುರಾಜ, ವಿದುಷಿ ಶೃದ್ದಾ ಎನ್ ಭಟ್, ವಸಂತಿ ಶ್ರೀನಿವಾಸ ಆಚಾರ್ಯ, ಪ್ರದೀಪ ಆಚಾರ್ಯ ಅವರ ಸನ್ಮಾನಿಸಲಾಗುವುದು ಎಂದರು. ಶಾಸ್ತ್ರೀಯ ನೃತ್ಯ-ಭರತನಾಟ್ಯದ ವಿದ್ಯಾರ್ಥಿಯ ಪದೋನ್ನತಿಯನ್ನು ’ಆರಂಗೇಟ್ರ’ ಅಥವಾ ’ರಂಗಪ್ರವೇಶ’ಎಂದು ಕರೆಯುತ್ತಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 6 ಹೊಸ ವೋಲ್ವೋ ಬಸ್ಗಳು ಮಂಗಳೂರು ಭಟ್ಕಳ ಮಾರ್ಗದಲ್ಲಿ ಮಾ.5ರಿಂದ ಸಂಚರಿಸಲಿದ್ದು ಪ್ರತಿದಿನ 9 ಟ್ರಿಪ್ಗಳನ್ನು ನಿರ್ವಹಿಸಲು ಯೋಜಿಸಲಾಗಿದೆ. ಮಂಗಳೂರು ಭಟ್ಕಳದ ಪ್ರಮುಖ ಸ್ಥಳಗಳ ದರಗಳು: ಮಂಗಳೂರು- ಭಟ್ಕಳ 225ರೂ, ಮಂಗಳೂರು-ಕುಂದಾಪುರ 160 ರೂ, ಮಣಿಪಾಲ ಉಡುಪಿ-ಕುಂದಾಪುರ 65 ರೂ, ಕುಂದಾಪುರ-ಬೈಂದೂರು 45ರೂ. ಕುಂದಾಪ್ರ ಡಾಟ್ ಕಾಂ. ಸಮಯ: ಬೆಳಿಗ್ಗೆ 6:45ಕ್ಕೆ ಮಂಗಳೂರಿನಿಂದ ಹೊರಟು 9:45ಕ್ಕೆ ಭಟ್ಕಳ ತಲುಪಲಿದೆ. ಇದರಂತೆ ಬೆಳಿಗ್ಗೆ 7:15, 7:45, 10:00, 10:30, 11:00 ಅಪರಾಹ್ನ 2:45, 3:15, 3:45ಕ್ಕೆ ಮಂಗಳೂರಿನಿಂದ ಭಟ್ಕಳಕ್ಕೆ ಹೊರಡಲಿದೆ. ಭಟ್ಕಳದಿಂದ ಬೆಳಿಗ್ಗೆ 6:30, 7:00, 10:45, 11:15, 11:45, ಅಪರಾಹ್ನ 2:00, 20, 3:00ಕ್ಕೆ ಹೊರಡಲಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಮಣಿಪಾಲ ಮೂಲ್ಕಿ, ಸುರತ್ಕಲ್ ಬಸ್ ನಿಲುಗಡೆಯಿದ್ದು ಸಾರ್ವಜನಿಕರು ನೂತನ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 6 volvo…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಜಾಲತಾಣಕ್ಕೆ ಹ್ಯಾಕರ್‌ಗಳು ಲಗ್ಗೆ ಇಟ್ಟಿದ್ದು, ವೆಬ್‌ಸೈಟ್ ಹ್ಯಾಕ್ ಮಾಡಿರುವುದಲ್ಲದೇ ’ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಪ್ರಕಟಿಸಿ ಉದ್ದಟತನ ಪ್ರದರ್ಶಿಸಿದ್ದಾರೆ. ಕುಂಭಾಶಿಯ ಶ್ರೀ ವಿನಾಯಕ ದೇವಸ್ಥಾನದ ಮಾಹಿತಿಗಳುಳ್ಳ ಜಾಲತಾಣ ಆನೆಗುಡ್ಡೆ.ಇನ್ ಹೋಮ್ ಪೇಜ್ ಸರಿಯಾಗಿಯೇ ತೆರೆದುಕೊಳ್ಳುತ್ತಿದೆ. ಆದರೆ ಇವೆಂಟ್ಸ್ ಮೇಲೆ ಕ್ಲಿಕ್ ಮಾಡಿದರೇ ಹ್ಯಾಕರ‍್ಸ್‌ಗಳು ವಿನ್ಯಾಸಗೊಳಿಸಿದ ಪುಟ ತೆರೆದುಕೊಳ್ಳುತ್ತಿದೆ. ಅಲ್ಲಿ ’ಪಾಕಿಸ್ತಾನ ಜಿಂದಾಬಾದ್’ ಹ್ಯಾಕಡ್ ಬೈ ‘ಡಿ3 ಡ್ಯಾಸಿನ್’ ಎಂದು ಹೇಳಿಕೊಂಡಿದ್ದಾರೆ. ವೆಬ್ಸೈಟ್ ಹ್ಯಾಕ್ ಆಗಿರುವುದನ್ನು ಗಮನಿಸಿದ ದೇವಳದ ಭಕ್ತರೋರ್ವರು ’ಕುಂದಾಪ್ರ ಡಾಟ್ ಕಾಂ’ಗೆ ಮಾಹಿತಿ ನೀಡಿದ್ದರು. ಆದರೆ ಇದು ದೇವಸ್ಥಾನದ ಅಧಿಕೃತ ವೆಬ್ಸೈಟ್ ಅಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಆದಾಗ್ಯೂ ಹ್ಯಾಕ್ ಆಗಿದ್ದ ದೇವಳದ ವೆಬ್ಸೈಟ್ ಪುಟವನ್ನು ಒಂದು ದಿನದ ಬಳಿಕ ತಂತ್ರಜ್ಞರು ಸರಿಪಡಿಸಿದ್ದಾರೆ. anegudde shri vinayaka temple website hacked and ut pakistana zindabad slogan
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಳ್ಕೂರು ಕಾರಿಕುದ್ರು, ಗುಲ್ವಾಡಿ, ಕಂಡ್ಲೂರು ನಡುವೆ ವರಾಹಿ ನದಿಯಲ್ಲಿರುವ ನೈಸರ್ಗಿಕ ಕುದ್ರುವಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಮಾರು ೩೦ ಎಕರೆ ಪ್ರದೇಶದಲ್ಲಿರುವ ಬೆಲೆಬಾಳುವ ಮರಮಟ್ಟುಗಳು ಬೆಂಕಿಗಾಹುತಿಯಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಸುತ್ತಲೂ ನೀರಿನಿಂದಾವೃತವಾಗಿರುವ ಹಿನ್ನೆಲೆ ಈ ಸ್ಥಳಕ್ಕೆ ಅಗ್ನಿಶಾಮಕ ವಾಹನ ತೆರಳಲು ಸಾಧ್ಯವಾಗದೇ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿರಲಿಲ್ಲ. ನಂತರ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ಬೆಂಕಿ ಸತತ ಎರಡು ಗಂಟೆಗಳ ಕಾರ‍್ಯಾಚರಣೆ ನಡೆಸಿದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಅಕ್ರಮ ಮರಳುಗಾರಿಕೆ ನಡೆಸುವವರ ಸಂಚು? ಕುದ್ರಿವಿನಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಮರಳುಗಾರಿಕೆಗೆ ಗಿಡ ಗಂಟಿಗಳು ತೊಂದರೆ ನೀಡುತ್ತದೆ ಎನ್ನುವ ಕಾರಣಕ್ಕೆ ಮರಳು ಕಾರ್ಮಿಕರ ಮೂಲಕ ದಂಧೆಕೋರರು ಇಡೀ ಕುದ್ರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ಅಲ್ಲಿದ್ದ ಕಾರ್ಮಿಕರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ಬಿಡುಗಡೆಗೊಳಿಸಿದೆ. ತನಿಕೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವತ್ತಿನಕಟ್ಟೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿಸಿದ ತಾಮ್ರದ ಹೊದಿಕೆಯ ಗರ್ಭಗುಡಿಯಲ್ಲಿ ನಾಗದೇವರ ಪುನಃಪ್ರತಿಷ್ಠೆ ಜರುಗಿತು. ಶ್ರೀ ಮಹಾಸತಿ ಅಮ್ಮನವರ ವರ್ಧಂತಿ ಮತ್ತು ನಾಗಮಂಡಲೋತ್ಸವದ ವರ್ಧಂತಿ ಪ್ರಯುಕ್ತ ಗುರುವಾರ ಬೆಳಿಗ್ಗೆ ಅಮ್ಮನವರ ಸನ್ನಿಧಿಯಲ್ಲಿ ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂತಿ ನಾವಡರ ನೇತೃತ್ವದಲ್ಲಿ ಕಲಶಾಭಿಷೇಕ, ಕಲಾತತ್ವಹೋಮ, ಚಂಡಿಕಾಹೋಮ, ಮಹಾಪೂಜೆ ನಂತರ ಮಹಾಅನ್ನಸಂತರ್ಪಣೆ ನಡೆಯಿತು. ಸಂಜೆ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಹಾಗೂ ತನುತರ್ಪಣ ಸೇವೆ ನಡೆಯಿತು. ಶ್ರೀ ಮಹಾಸತಿ ಅಮ್ಮನವರ ಸೇವಾ ಸಮಿತಿ ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರಾದ ಶ್ರೀನಿವಾಸ ಕುಮಾರ್, ಶಂಕರ ಮೊಗವೀರ, ಮಂಜುನಾಥ ಆಚಾರ್ಯ, ಸತ್ಯಪ್ರಸನ್ನ, ಬಿ. ಮಾಧವ ರಾವ್, ದರ್ಶನ ಪಾತ್ರಿ ಅಣ್ಣಪ್ಪ ಪೂಜಾರಿ ಮೊದಲಾದವರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸ್ವಂತ ಮನೆ ಭೂಮಿ ಇಲ್ಲದವರಿಗೆ ನಿವೇಶನ ಹಕ್ಕು ಪತ್ರ ಕೊಡಲು ಸರಕಾರವನ್ನು ಒತ್ತಾಯಿಸಿ ಗ್ರಾಮಾಂತರ ಪ್ರದೇಶದಲ್ಲಿ ನಿವೇಶನ ರಹಿತರ ಸಮಾವೇಶವನ್ನು ಅಯೋಜಿಸಲಾಗಿದ್ದು, ಬೈಂದೂರು ಮತ್ತು ಕುಂದಾಪುರ ಶಾಸಕರ ಮನೆ ಮುಂದೆ ಭೂಮಿ ಹಕ್ಕಿಗಾಗಿ ಧರಣಿ ಮುಷ್ಕರ ನಡೆಸುವುದಕ್ಕೆ ಪೂರ್ವಭಾವಿ ಸಭೆಯನ್ನು ಕುಂಭಾಶಿ ಗ್ರಾಮ ಪಂಚಾಯತ್ ಕಛೇರಿ ಬಳಿ ಅಂಬೇಡ್ಕರ್ ಭವನ ವಠಾರದಲ್ಲಿ ನಡೆಸಲಾಯಿತು. ಮನೆ ನಿವೇಶನ ರಹಿತರ ಬೃಹತ್ ಸಮಾವೇಶವನ್ನು ಕೃಷಿ ಕೂಲಿಕಾರರ ಸಂಘದ ನಾಗರತ್ನ ನಾಡರವರು ಉದ್ಘಾಟಿಸಿ ಮಾತನಾಡುತ್ತಾ, ಶಾಸಕರ ಮನೆ ಮುಂದೆ ಜರಗಲಿರುವ ಧರಣಿ ಮುಷ್ಕರವನ್ನು ಯಶಸ್ವಿಗೊಳಿಸಲು ಕರೆಕೊಟ್ಟರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ನಿವೇಶನ ರಹಿತರು ನಿವೇಶನ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ಮೂರು ವರ್ಷ…
ಮದುವೆ ನಡೆಯಬೇಕಿದ್ದ ಮನೆಯಲ್ಲಿ ಮಸಣ ಮೌನ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ೬೬ರ ಬಸ್ರೂರು ಮೂರುಕೈ ಬಳಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಯುವಕನಿಗೆ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ. ಕಟ್ಕೆರಿ ರಾಜೀವ ಎಂಬುವವರ ಪುತ್ರ ದೀಪಕ್ (26) ಮೃತ ದುರ್ದೈವಿ. ಕೆಲಸ ನಿಮಿತ್ತ ಕುಂದಾಪುರಕ್ಕೆ ತೆರಳಿದ್ದ ದೀಪಕ್ ಸಂಜೆ ಮನೆಗೆ ಹಿಂದಿರುಗಲು ಬಸ್ರೂರು ಮೂರುಕೈ ಬಳಿ ರಸ್ತೆ ದಾಟುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಮಾಚ್.6ರಂದು ದೀಪಕ್ ಅವರ ಮದುವೆ ನಿಶ್ಚಯವಾಗಿತ್ತು. ಮದುವೆಗೆ ನಾಲ್ಕು ದಿನವಿರುವಾಗಲೇ ಈ ದುಘಟನೆ ನಡೆದಿರುವುದು ಕುಟುಂಬಿಕರಿಗೆ ತೀವ್ರ ಆಘಾತವನ್ನುಂಟುಮಾಡಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
