ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವತ್ತಿನಕಟ್ಟೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿಸಿದ ತಾಮ್ರದ ಹೊದಿಕೆಯ ಗರ್ಭಗುಡಿಯಲ್ಲಿ ನಾಗದೇವರ ಪುನಃಪ್ರತಿಷ್ಠೆ ಜರುಗಿತು.
ಶ್ರೀ ಮಹಾಸತಿ ಅಮ್ಮನವರ ವರ್ಧಂತಿ ಮತ್ತು ನಾಗಮಂಡಲೋತ್ಸವದ ವರ್ಧಂತಿ ಪ್ರಯುಕ್ತ ಗುರುವಾರ ಬೆಳಿಗ್ಗೆ ಅಮ್ಮನವರ ಸನ್ನಿಧಿಯಲ್ಲಿ ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂತಿ ನಾವಡರ ನೇತೃತ್ವದಲ್ಲಿ ಕಲಶಾಭಿಷೇಕ, ಕಲಾತತ್ವಹೋಮ, ಚಂಡಿಕಾಹೋಮ, ಮಹಾಪೂಜೆ ನಂತರ ಮಹಾಅನ್ನಸಂತರ್ಪಣೆ ನಡೆಯಿತು. ಸಂಜೆ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಹಾಗೂ ತನುತರ್ಪಣ ಸೇವೆ ನಡೆಯಿತು.
ಶ್ರೀ ಮಹಾಸತಿ ಅಮ್ಮನವರ ಸೇವಾ ಸಮಿತಿ ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರಾದ ಶ್ರೀನಿವಾಸ ಕುಮಾರ್, ಶಂಕರ ಮೊಗವೀರ, ಮಂಜುನಾಥ ಆಚಾರ್ಯ, ಸತ್ಯಪ್ರಸನ್ನ, ಬಿ. ಮಾಧವ ರಾವ್, ದರ್ಶನ ಪಾತ್ರಿ ಅಣ್ಣಪ್ಪ ಪೂಜಾರಿ ಮೊದಲಾದವರು ಇದ್ದರು.