ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆ ಬಸ್ಸಿನಿಂದ ಬಿದ್ದು ಸಾವು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹೈಕಾಡಿ ಬಳಿ ಚಲಿಸುತ್ತಿದ್ದ ಬಸ್ಸಿನಿಂದ ಕೆಳಕ್ಕೆ ಬಿದ್ದ ಮಹಿಳೆಯೋರ್ವವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಹಾಲಾಡಿ ಗ್ರಾಮದ ಕಾಸಾಡಿ ನಿವಾಸಿ ನಾಗರಾಜ ದಾಮ್ಲೆ ಎಂಬುವವರ ಪತ್ನಿ ಸರೋಜಾ ಯಾನೆ ರೋಹಿಣಿ(೪೨) ಮೃತ ದುರ್ದೈವಿ.

Call us

Click Here

ಮಗ ಮೋಹಿತ್‌ನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದ ಸರೋಜಾ, ಹಾಲಾಡಿಯಲ್ಲಿ ಬಸ್ಸು ಹತ್ತಿ ಮುಂದಿನ ಬಾಗಿಲಿನ ಬಳಿ ನಿಂತಿದ್ದರು. ಹೈಕಾಡಿ ಬಳಿ ಬಸ್ಸು ರಸ್ತೆಯಲ್ಲಿದ್ದ ಹೊಂಡವನ್ನು ಜೀಕಿ ಮುಂದಕ್ಕೆ ಸಾಗಿದ್ದರಿಂದ ನಿಯಂತ್ರಣ ಕೊಳೆದುಕೊಂಡ ಮಹಿಳೆ ಬಸ್ಸಿಂದ ಕೆಳಕ್ಕೆ ಬಿದ್ದಿದ್ದು ಚರಂಡಿಗೆ ತಲೆ ಅಪ್ಪಳಿಸಿ ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ ಕುಳಿತುಕೊಂಡಿದ್ದ ಮಗನ ಕಣ್ಣೆದುರೇ ತಾಯಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದು ಇತರ ಪ್ರಯಾಣಿಕರಿಗೂ ಆಘಾತವನ್ನುಂಟುಮಾಡಿತ್ತು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply