ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜೀವನದಲ್ಲಿ ಯಶಸ್ಸು ಕೇವಲ ಗುರಿಯಲ್ಲ,ಪ್ರತಿಯೊಂದು ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಾಗ ನಿಜವಾದ ಗುರಿ ಹಾಗೂ ಯಶಸ್ಸನ್ನು ಪಡೆಯಲು ಸಾಧ್ಯ. ಎಲ್ಲ ಕಾರ್ಯ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿ ಕೊಂಡು ಸಮಾಜದ ಎಲ್ಲ ಜನರ ಪ್ರೀತಿಗೆ ಪಾತ್ರರಾಗಿರುವುದರೊಂದಿಗೆ ಪ್ರತಿ ಕ್ಷೇತ್ರದಲ್ಲೂ ಯಶಸ್ಸನ್ನು ಕಂಡಿರುವ ವಿಶ್ವಕರ್ಮರು ಸಮಾಜದ ಒಂದು ಅವಿಭಾಜ್ಯ ಆಸ್ತಿ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಕುಂದಾಪುರ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಇದರ ರಜತ ಮಹೋತ್ಸವದ ಅಂಗವಾಗಿ ವಿಶ್ವಬ್ರಾಹ್ಮಣ ಯುವಕ ಸಂಘ ಹಾಗೂ ವಿಶ್ವಬ್ರಾಹ್ಮಣ ಮಹಿಳಾ ಸಂಘ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಜರಗಿದ ವಿಶ್ವಕರ್ಮ ಯುವ ಸಂಗಮ -2017 ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು,ಬದುಕಿನಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು ಪ್ರತಿ ಮನೆಯಲ್ಲಿ ಎಲ್ಲರೂ ಒಂದೇ ಉದ್ಯೋಗನ್ನು ನೆಚ್ಚಿಕೊಳ್ಳದೆ ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಸೂಸುವಲ್ಲಿ ಇಂತಹ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಫೆ27: ತಾಲೂಕಿನ ವಂಡ್ಸೆ ಚಕ್ರಾ ನದಿಯಲ್ಲಿ ವಿವಾಹಿತ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದ್ದು, ಮೃತರನ್ನು ವಂಡ್ಸೆ ನಿವಾಸಿ ರವಿ ಪೂಜಾರಿ ಅವರ ಪತ್ನಿ ಸುಪ್ರಿತಾ ಪೂಜಾರಿ (25) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದ ಸುಪ್ರಿತಾ ಕೊನೆಗೂ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೇರಳಕಟ್ಟೆ ಮೂಲದವರಾದ ಸುಪ್ರಿತಾ ಏಳು ವರ್ಷದ ಹಿಂದೆ ವಂಡ್ಸೆಯ ರವಿ ಪೂಜಾರಿ ಅವರನ್ನು ವಿವಾಹವಾಗಿದ್ದು, ದಂಪತಿಗಳಿಗೆ ಐದು ವರ್ಷದ ಒಬ್ಬ ಮಗನಿದ್ದ. ಸುಪ್ರಿತಾ ಮನೆಯ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿ ತೆರಳಿದ್ದರು. ಬೆಳಿಗ್ಗೆ ಎದ್ದಾಗ ನೆರಮನೆಯವರ ಸಹಾಯದಿಂದ ಬಾಗಿಲ ಚಿಲಕ ತೆಗೆಸಿ ಆಕೆಗಾಗಿ ಹುಡುಕಾಟ ನಡೆಸಿ ಪೊಲೀಸರಿಗೂ ದೂರು ನೀಡಿದ್ದರು. ಮಧ್ಯಾಹ್ನದ ವೇಳೆಗೆ ಸ್ಥಳೀಯರು ವಂಡ್ಸೆಯ ಚಕ್ರಾ ನದಿಯ ಬಳಿ ತೆಲುತ್ತಿರುವುದನ್ನು ಗಮನಿಸಿ ಆಕೆಯ ಶವ ಎಂಬುದನ್ನು ಗುರುತಿಸಿದ್ದಾರೆ. ಅರೆನಗ್ನ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ವಿವಾಹೇತರ ಸಂಬಂಧ ಹೊಂದಿದ್ದ ಈಕೆ ಈ ಹಿಂದೆಯೂ ಮನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಒಬ್ಬರಿಗೆ ಒಂದು ದಿನದ ಆಹಾರ ನೀಡಿ ಸಹಾಯ ಮಾಡುವುದಕ್ಕಿಂತ ಆತನ ಜೀವನ ಪರ್ಯಂತ ಸುಖಮಯ ಜೀವನ ನಡೆಸಲು ಸಾಧ್ಯ ವಾಗುವಂತಹ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಆತನ ಇಡೀ ಸಂಸಾರಕ್ಜೆ ಆಧಾರಸ್ತಂಭವಾಗಿ ನಿಲ್ಲಲು ರೋಟರಿಯಂತಹ ಸೇವಾ ಸಂಸ್ಥೆ ಆಸರೆಯಾಗುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ರೊ.ಡಿ.ಎಸ್ ರವಿ ಅಭಿಪ್ರಾಯ ಪಟ್ಟರು. ರೋಟರಿ ಉಡುಪಿ ಮಣಿಪಾಲ ಸಂಸ್ಥೆಗೆ ಜಿಲ್ಲಾ ಗವರ್ನರ್ ರವರ ಅಧಿಕೃತ ಭೇಟಿ ಸಂದರ್ಭದಲ್ಲಿ ಮಣಿಪಾಲದ ರೋಟರಿ ಸಭಾಂಗಣದಲ್ಲಿ ಸುಮಾರು ಇಪ್ಪತ್ತು ಹೊಲಿಗೆ ಮೆಷೀನ್ ಗಳನ್ನು ವಿತರಿಸುತ್ತಾ ಮಹಿಳಾ ಸಬಲೀಕರಣ ಬರೀ ಮಾತಿನಲ್ಲಿ ಉಳಿಯದೆ ಕೃತಿಯಲ್ಲಿ ಕಂಡುಬಂದಿದ್ದು ಮಹಿಳೆ ಹಾಗು ಮಕ್ಕಳ ಏಳಿಗೆಗೆ ಜಾಸ್ತಿ ಪ್ರಾಮುಖ್ಯತೆ ಕೊಡುತ್ತಿರುವ ಸಂಸ್ಥೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪಂಚನಬೆಟ್ಟು ಅಂಗನವಾಡಿಗೆ ಸುಮಾರು ೫೦೦೦೦ ರೂಗಳನ್ನು ಶೌಚಾಲಯ ನಿರ್ಮಾಣಕ್ಕೆ ಹಾಗು ಸುಮಾರು ೨೦೦೦೦ ರೂಗಳ ವೆಚ್ಚದಲ್ಲಿ ಪುಟಾಣಿಗಳಿಗೆ ಶಾಲಾ ಸಮವಸ್ತ್ರ ವಿತರಿಸಲಾಯಿತು. ಸುತ್ತುಮುತ್ತಲಿನ ಇಂಟರ‍್ಯಾಕ್ಟ್ ಮಕ್ಕಳಿಗೆ ೫೦೦೦೦ ರೂಗಳ ವಿದ್ಯಾರ್ಥಿ ವೇತನ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮರವಂತೆ, ನಾವುಂದ, ಗುಜ್ಜಾಡಿ ಮತ್ತು ಹೊಸಾಡು ಗ್ರಾಮ ಪಂಚಾಯತ್‌ಗಳ ಸಂಯುಕ್ತ ಆಶ್ರಯದಲ್ಲಿ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯದ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರವು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನಡೆಯಿತು. ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ ಶಿಬಿರವನ್ನು ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಕಾಲಕಾಲಕ್ಕೆ ಆರೋಗ್ಯ ತಪಾಣೆ ಮಾಡಿಸಿಕೊಳ್ಳುವುದರಿಂದ ವಿವಿಧ ಕಾರಣಗಳಿಂದ ಆರೋಗ್ಯದಲ್ಲಿ ಆಗುವ ಏರುಪೇರುಗಳನ್ನು ವಾಸಿಮಾಡಿಕೊಳ್ಳಬಹುದು. ಆರೋಗ್ಯ ಕೇಂದ್ರ ವ್ಯಾಪ್ತಿಯ ಕೊರಗ ಕಾಲನಿಗಳಲ್ಲಿ ಈಗ ನಿಯತಕಾಕಲಿಕವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆ ವೇಳೆಯಲ್ಲಿ ಕುಟುಂಬದ ಎಲ್ಲ ಜನರು ಹಾಜರಿದ್ದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಹೊಸಾಡು ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಗುಜ್ಜಾಡಿ ಅಧ್ಯಕ್ಷ ಹರೀಶ ಮೇಸ್ತ, ಮರವಂತೆಯ ಮಾಜಿ ಅಧ್ಯಕ್ಷ ಎಸ್.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆಧುನಿಕ ತಂತ್ರಜ್ಞಾನಗಳ ಫಲವಾಗಿ ವಿಶ್ವದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದರೂ ಮನುಷ್ಯ ಮನುಷ್ಯನ ನಡುವಿನ ಪ್ರೀತಿ ಭಾಂದವ್ಯ, ನೈತಿಕ ಮೌಲ್ಯಗಳು ಕುಸಿಯುತ್ತಿದೆ. ಮೊ ಮೊಬೈಲ್, ಟಿವಿಯ ಕಾರಣದಿಂದ ಕಲೆಯ ಆಸ್ವಾದನೆಯಿಂದ ವಿಮುಖರಾಗುತ್ತಿರುವುದೂ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ ಕುಮಾರ್ ಹೇಳಿದರು ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಸಂಸ್ಥೆಯ ೧೭ನೇ ವರ್ಷದ ಸಂಭ್ರಮದೊಂದಿಗೆ ಆಯೋಜಿಸಿದ ಸುರಭಿ ಜೈಸಿರಿ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ ಬದುಕಿನಲ್ಲಿ ಕಲೆ ಒಡನಾಟ ಇಲ್ಲದಿದ್ದರೆ ನಮ್ಮಲ್ಲಿ ಒಳ್ಳೆಯ ಮನೋಭಾವ ಬೆಳೆಯದು. ಕಲೆ ಬದುಕಿನ ಪಾಠವನ್ನು, ಬದುಕುವ ರೀತಿಯನ್ನು ಕಲಿಸಿಕೊಡುತ್ತದೆ ಎಂದರು. ಚಿತ್ರ ಕಲಾವಿದ ಮಂಜುನಾಥ ಮಯ್ಯ ಉಪ್ಪುಂದ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಭರತನಾಟ್ಯ ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಹಾಗೂ ಯಕ್ಷಗಾನ ಗುರು ಪ್ರಶಾಂತ್ ಮಯ್ಯ ದಾರಿಮಕ್ಕಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಗ್ರಾಮದ ಯಡಾಡಿ ಮತ್ಯಾಡಿ ಗ್ರಾಮದ ಹಳನೀರು ಪ್ರದೇಶದಲ್ಲಿ ವಾರಾಹಿ ನೀರಾವರಿ ನಿಗಮ ನಿಯಮಿತ ಉಪಕಾಲುವೆ 31ರಲ್ಲಿ ಗುತ್ತಿಗೆದಾರರು ನಿಯಮಗಳನ್ನು ಗಾಳಿಗೆ ತೂರಿ ಕಾಲುವೆಯಲ್ಲಿ ಎದುರಾದ ಬಂಡೆಗಳನ್ನು ನ್ಪೋಟಿಸಿದ್ದರಿಂದ ಸುಮಾರು 1ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವವರಿಗೆ ತೊಂದರೆ ಉಂಟಾಗಿದೆ ಎಂದು ಗ್ರಾಮಸ್ಥರು ಉಗ್ರವಾಗಿ ಪ್ರತಿಭಟಿಸಿದರು. ಕಾಮಗಾರಿಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಒಮ್ಮೆಲೆ 3-4 ಕಂಪ್ರಸರ್ ಒಟ್ಟಾಗಿ ಸುಮಾರು 100ರಿಂದ 200 ಗುಳಿಗಳನ್ನು ನಿಯಮದಂತೆ ಮಾಡದೆ ಅದಕ್ಕಿಂತಲೂ ಹೆಚ್ಚಿನ ಆಳದ ಗುಳಿಗಳನ್ನು ತೋಡಿ ಸ್ಫೋಟಿಸಿದ್ದರಿಂದ ತೊಂದರೆ ಆಗುತ್ತಿರುವ ಬಗ್ಗೆ ಗ್ರಾಮಸ್ಥರು ದೂರಿದ್ದಾರೆ. ಸ್ಫೋಟದ ವೇಳೆ ಗುಳಿಗಳನ್ನು ಮರಳು ಚೀಲದಿಂದ ಮುಚ್ಚದೆ ಏಕಾಏಕಿ ಸ್ಫೋಟಿಸಿರುವುದರಿಂದ ಅಪಾಯ ಹೆಚ್ಚು ಎನ್ನುವುದು ಗ್ರಾಮಸ್ಥರ ಅಭಿಪ್ರಾಯ. ಪ್ರತಿಭಟನೆಯಲ್ಲಿ ತಾ.ಪಂ. ಅಧ್ಯಕ್ಷೆ ಜಯಶ್ರೀ ಸುಧಾಕರ, ತಾ.ಪಂ. ಮಾಜಿ ಸದಸ್ಯ ರಮೇಶ ಶೆಟ್ಟಿ ಹಾಲಾಡಿ, ಹೊಂಬಾಡಿ ಮಂಡಾಡಿ ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಪೂಜಾರಿ, ಗ್ರಾ.ಪಂ. ಸದಸ್ಯ ಬಿ. ಅರುಣ ಕುಮಾರ ಹೆಗ್ಡೆ, ಮಾಜಿ ಗ್ರಾ.ಪಂ ಅಧ್ಯಕ್ಷ ಗಣೇಶ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಂಸ್ಕೃತಿಕ ಶೈಕ್ಷಣಿಕವಾಗಿ ಹಾಗೂ ಹಲವಾರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುವ ಮೂಲಕ ರಾಜ್ಯ ಯುವ ಪ್ರಶಸ್ತಿಯನ್ನು ಪಡೆದ ಹೆಮ್ಮೆಯ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಇಂಜಿನಿಯರ್ ಕೆ.ರವೀಂದ್ರ ಕಾವೇರಿ ಹೇಳಿದರು. ಅವರು ಶ್ರೀ ಮೈಲಾರೇಶ್ವರ ಯುವಕ ಮಂಡಲ (ರಿ) ಇದರ 40 ರ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬೈಂದೂರು ಉದ್ಯಮಿ ಬಿ.ವೆಂಕಟರಮಣ ಬಿಜೂರು, ಕೋಟೇಶ್ವರ ಶ್ರೀ ರಾಮಕ್ಷತ್ರೀಯ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷರಾದ ವಿಶ್ವನಾಥ ಬರಗೆರೆ, ಕೊಲ್ಲುರು ಉದ್ಯಮಿ ಮಂಜುನಾಥ ಶೇರೆಗಾರ, ಗುತ್ತಿಗೆದಾರರಾದ ರಮಾನಾಥ ನಾಯ್ಕ್, ರಮೇಶ ರಾವ್ ಪಡುಕೇರಿ, ಅಂಕಣಕಾರ ಕೋ ಶಿವಾನಂದ ಕಾರಂತ, ಬೈಂದೂರು ರಾಮಕ್ಷತ್ರಿಯ ಸಂಘದ ಆಡಳಿತ ಸದಸ್ಯರಾದ ವಸಂತಿ ನಾರಾಯಣ ಮದ್ದೋಡಿ, ಸಂಸ್ಥೆಯ ಗೌರವ ಅಧ್ಯಕ್ಷರಾದ ಕೆ.ಪಿ.ಶಿವಪ್ರಸಾದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕ್ರತರಾದ ಮಾಲತಿ ಡಿ.ಕೆ, ಹೊಸನಗರ ತಾಲೂಕಿನ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಆಶಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಒಳಚರಂಡಿ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಹಾಗೂ ಯೋಜನೆಯ ಕಾಮಗಾರಿಯ ನಿರ್ವಹಣೆ, ಗುಣಮಟ್ಟದ ಬಗ್ಗೆ ಪುರಸಭೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಜಲಮಂಡಳಿಯ ಅಧಿಕಾರಿಗಳು ಹಾಗೂ ಸಾರ್ವಜನಿಕ ಸಭೆಯನ್ನು ಹತ್ತು ದಿನದೊಳಗೆ ಕರೆಯಬೇಕೆಂದು ಮನವಿ ಮಾಡಿದ್ದರೂ ತನಕ ಸಭೆ ಕರೆಯದೇ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದ ಒಳಗೆ ಸಭೆಯನ್ನು ಕರೆಯದೇ ಇದ್ದಲ್ಲಿ ಮಾ. ೩ರಂದು ಪುರಸಭೆಯ ಎದುರು ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ಕುಂದಾಪುರದ ಪ್ರಜಾ ಜಾಗೃತಿ ವೇದಿಕೆ ಅಧ್ಯಕ್ಷ ರಾಮಕೃಷ್ಣ ಹೇರ್ಳೆ ತಿಳಿಸಿದ್ದಾರೆ. ಈ ಕುರಿತು ಕುಂದಾಪುರ ಪುರಸಭೆಯ ಅಧ್ಯಕ್ಷರಿಗೆ ಸಮಿತಿಯ ಕಾರ್ಯದರ್ಶಿ ಬಿ. ಕಿಶೋರ್ ಕುಮಾರ್ ಅವರನ್ನೊಳಗೊಂಡು ಸಮಿತಿಯ ಸದಸ್ಯರು ಸದಸ್ಯರು ಮನವಿಯನ್ನು ಸಲ್ಲಿಸಿದರು.
ಕಲಾಸಂಸ್ಥೆಗಳಿಂದ ಕಲೆಯ ಅಳಿವಿನ ಆತಂಕ ದೂರ: ದೀಪಾ ರವಿಶಂಕರ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲೆಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾಯಿಸುವ ಕೆಲಸ ಬಹುಮುಖ್ಯವಾದುದು. ನಮ್ಮ ಸಂಸ್ಕೃತಿ ಹಾಗೂ ಕಲಾ ಪ್ರಕಾರವನ್ನು ಮುಂದಿನ ಜನಾಂಗ ಕಲಿಯಲಾರವು ಎಂಬ ಆತಂಕ ದೂರವಾಗಿಸುವ ಮಾಧ್ಯಮವಾಗಿ ಕಲಾ ಸಂಸ್ಥೆಗಳ ಕಾರ್ಯನಿರ್ವಹಿಸುತ್ತವೆ ಎಂದು ಲೇಖಕಿ, ನಟಿ ದೀಪಾ ರವಿಶಂಕರ್ ಬೆಂಗಳೂರು ಹೇಳಿದರು ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಸಂಸ್ಥೆಯ ೧೭ನೇ ವರ್ಷದ ಸಂಭ್ರಮದೊಂದಿಗೆ ಆಯೋಜಿಸಿದ ಮೂರು ದಿನಗಳ ಕಾರ್ಯಕ್ರಮ ಸುರಭಿ ಜೈಸಿರಿ ಉದ್ಘಾಟಿಸಿ ಮಾತನಾಡಿದರು. ಭಾರತೀಯರ ಮೇಲೆ ಹಲವು ಪರಕೀಯ ದಾಳಿಗಳು ನಡೆದ ಬಳಿಕವೂ ಪ್ರದರ್ಶನ ಕಲೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಭಾರತೀಯ ಕಲೆಗಳನ್ನು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿದೆ. ಇಂದಿನ ಪೀಳಿಗೆ ಕಲೆಯನ್ನು ಮುಂದುವರಿಸುತ್ತಾರೋ ಬಿಡುತ್ತಾರೋ ಎಂಬುದಕ್ಕಿಂತ ಅವುಗಳು ಅವರ ಮನಸ್ಸಿನೊಳಕ್ಕೆ ಹೊಕ್ಕು ಕೂರುತ್ತದೆ. ಕಲೆಯನ್ನು ಕಲಿಸುವ ಕಾರ್ಯ ನಿರಂತರವಾಗಿ ನಡೆಸುವುದು ಬಹುಮುಖ್ಯವಾದುದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಮೇಲ್‌ಗಂಗೊಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನದ ಪ್ರಾಯೋಜಿತ ಓಂ ಶ್ರೀ ಮಾತೃ ಮಂಡಳಿ ನೇತೃತ್ವದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಕಾರ್ಯಕ್ರಮ ಸಂಜೆ ಗೋಧೂಳಿ ಲಗ್ನ ಸುಮೂರ್ಹತದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಿತು. ಶಿವ ಪಾರ್ವತಿಯ ವಿಗ್ರಹವನ್ನು ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನದ ಬಳಿಯಿಂದ ವೈಭವೋಪಿತ ಪುರಮೆರವಣಿಗೆಯಲ್ಲಿ ತರಲಾಯಿತು. ವೇದಮೂರ್ತಿ ಶ್ರೀಪತಿ ಭಟ್ ಮಂಕಿ ನೇತೃತ್ವದಲ್ಲಿ ಪುರೋಹಿತರು ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಧು ನಿರೀಕ್ಷಣೆ, ಅರಶಿನ ಕುಂಕುಮ ಸಮರ್ಪಣೆ, ಧಾರೆಮಣಿ ಕಟ್ಟುವಿಕೆ, ಶಿವನಿಗೆ ಮಧುಪರ್ಕ ಸಮರ್ಪಣೆ, ಮಾಲಾಧಾರಣೆ, ಕನ್ಯಾದಾನ, ಕಂಕಣ ಮಾಂಗಲ್ಯ ಸೂತ್ರ ಧಾರಣೆ, ಚಿನ್ನಾಭರಣಾಧಿ ಕಪ್ಪ ಕಾಣಿಕೆಗಳ ಸಮರ್ಪಣೆ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳ ಮೂಲಕ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಭಕ್ತಿ ಶ್ರದ್ಧಾಪೂರ್ವಕ ನೆರವೇರಿಸಲಾಯಿತು. ಓಂ ಶ್ರೀ ಮಾತೃ ಮಂಡಳಿಯ ಅಧ್ಯಕ್ಷೆ ಸುಶೀಲ ಸಿ., ಗೌರವಾಧ್ಯಕ್ಷೆ ಪದ್ಮಾವತಿ, ಪ್ರಧಾನ ಕಾರ್ಯದರ್ಶಿ ಪ್ರೇಮ, ಕಾರ್ಯದರ್ಶಿ ಜ್ಯೋತಿ, ದೇವಸ್ಥಾನದ ಮೊಕ್ತೇಸರ ಈಶ್ವರ ಜಿ., ತಾಪಂ…
