ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರ 350ನೇ ಪ್ರತಿಷ್ಠಾ ಮಹೋತ್ಸವದ ಸವಿನೆನಪಿಗಾಗಿ ಗಂಗೊಳ್ಳಿಯ ಗೌಡ ಸಾರಸ್ವತ ಸಮಾಜದ ಹನ್ನೊಂದು ಮಂದಿ ಗಂಗೊಳ್ಳಿಯಿಂದ ತಿರುಪತಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಯಾತ್ರಾರ್ಥಿಗಳು ತಿರುಪತಿಯ ಶ್ರೀ ತಿಮ್ಮಪ್ಪನ ಸನ್ನಿಧಾನಕ್ಕೆ ಪಾದಯಾತ್ರೆ ಆರಂಭಿಸಿದರು. ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರ 350ನೇ ಪ್ರತಿಷ್ಠಾ ಮಹೋತ್ಸವದ ಸವಿನೆನಪಿಗಾಗಿ, ಗೌಡ ಸಾರಸ್ವತ ಸಮಾಜದ ಉನ್ನತಿ, ಗ್ರಾಮದ ಶ್ರೇಯೋಭಿವೃದ್ಧಿ, ಮತ್ಸ್ಯಕ್ಷಾಮ ನಿವಾರಣೆ ಹಾಗೂ ಗ್ರಾಮದಲ್ಲಿ ಸರ್ವರಿಗೂ ಸುಖಶಾಂತಿ ಲಭಿಸುವಂತಾಗಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕರಮಣ ಆಚಾರ್ಯ ನೇತೃತ್ವದಲ್ಲಿ ಮಹಾಪ್ರಾರ್ಥನೆ ನಡೆಯಿತು. ದೇವಳದ ಆಡಳಿತ ಮಂಡಳಿಯ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ, ಜಿ.ವೆಂಕಟೇಶ ನಾಯಕ್, ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ, ಬಿ.ರಾಘವೇಂದ್ರ ಪೈ, ಎನ್.ರವೀಂದ್ರ ನಾಯಕ್, ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್, ಕೆ.ಶಾಂತಾರಾಮ ನಾಯಕ್, ಜಿ.ರವೀಂದ್ರ ಶೆಣೈ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಡಿ ಬ್ಯಾರೀಸ್ ಯುವ ರೆಡ್ ಕ್ರಾಸ್ ಘಟಕ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಇದರ ವತಿಯಿಂದ ಆರೋಗ್ಯಕರ ಜೀವನ ಶೈಲಿ ಎಂಬ ವಿಷಯದ ಬಗ್ಗೆ ಉಪನ್ಯಾಸವ ಬ್ಯಾರೀಸ್ ಕನ್‌ವೆನ್ಶನ್ ಹಾಲ್‌ನಲ್ಲಿ ಏರ್ಪಡಿಸಲಾಯಿತು. ಕಾರ್ಯಕ್ರಮದ ಮುಖ್ಯ ಆತಿಥಿಯಾಗಿ ಭಾಗವಹಿಸಿದ ಡಾ. ಸೋನಿ ಮೆಡಿಕಲ್ ಪ್ರಾಕ್ಟೀಶನರ್ ಕುಂದಾಪುರ ಇವರು ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಕ್ಕಾಗಿ ಯಾವ ರೀತಿಯ ಮಾರ್ಗವನ್ನು ಅನುಸರಿಸಬೇಕು ಎಂಬ ಕುರಿತಾಗಿ ಮಾಹಿತಿಯನ್ನು ನೀಡದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹಾಜಿ. ಮಾಸ್ಟರ್ ಮಹಮ್ಮೂದ್ ಇವರು ವಹಿಸಿದರು. ಅಥಿತಿಗಳಾಗಿ ಎಸ್. ಜಯಕರ ಶೆಟ್ಟಿ, ಅಧ್ಯಕ್ಷರು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ, ಸೀತಾರಾಮ ಶೆಟ್ಟಿ ಕಾರ್ಯದರ್ಶಿ ಯುವ ರೆಡ್‌ಕ್ರಾಸ್ , ಶಿವರಾಮ ಶೆಟ್ಟಿ ಕೋಶಾಧಿಕಾರಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮತ್ತು ಗಣೇಶ್ ಆಚಾರ್ಯ, ಮುತ್ತಯ್ಯ ಶೆಟ್ಟಿ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಉಪಸ್ಥಿತರಿದ್ದರು. ಬ್ಯಾರೀಸ್ ಯುವ ರೆಡ್‌ಕ್ರಾಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಭಾನುವಾರ ಬೆಳಿಗ್ಗೆ ಉಡುಪಿಯ ಅಜ್ಜರಕಾಡು ಮೈದಾನದ ಸಮೀಪದಲ್ಲಿ ಜಿಲ್ಲಾ ಭಾರತ್ ಸೇವಾದಳ ಸಮಿತಿಯ ಕೇಂದ್ರ ಕಚೇರಿಯಲ್ಲಿ ನಡೆದ ಉಡುಪಿ ಜಿಲ್ಲಾ ಭಾರತ್ ಸೇವಾದಳ ಸಮಿತಿಯ ನೂತನ ಪದಾಧಿಕಾರಿಗಳ ಚುನಾವಣಾ ಪ್ರಕ್ರೀಯೆಯಲ್ಲಿ ಜಿಲ್ಲಾ ಅಧ್ಯಕ್ಷ ಹಾಗೂ ರಾಜ್ಯ ಪ್ರತಿನಿಧಿಯಾಗಿ ಮಾಜಿ ಶಾಸಕ ಯು.ಆರ್.ಸಭಾಪತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ಪತ್ರಕರ್ತ ರಾಜೇಶ್ ಕೆ.ಸಿ ಕುಂದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆರೂರು ತಿಮ್ಮಪ್ಪ ಶೆಟ್ಟಿ, ಕೋಶಾಧ್ಯಕ್ಷರಾಗಿ ಟಿ.ಗೋಪಾಲಕೃಷ್ಣ ಶೆಟ್ಟಿ ಉಡುಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಉಪನಿಬಂಧಕರಾದ ಪ್ರವೀಣ್ ನಾಯಕ್ ಅವರ ನೇತ್ರತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಿಲ್ಲಾ ಭಾರತ್ ಸೇವಾದಳದ ಜಿಲ್ಲಾ ಸಮಿತಿಯ ಸದಸ್ಯರಾದ ಅಂಡಾರು ದೇವಿಪ್ರಸಾದ ಶೆಟ್ಟಿ, ಸುವರ್ಧನ್ ನಾಯಕ್ ಉಡುಪಿ, ಮೇಟಿ ಮುದಿಯಪ್ಪ, ಎಂ.ಸಿ.ಆಚಾರ್ಯ ಕಾರ್ಕಳ, ಗಿರೀಶ್ ಅಂಚನ್ ಉಡುಪಿ, ಸಂಜೀವ ದೇವಾಡಿಗ ಕಾರ್ಕಳ ಹಾಗೂ ಅಶೋಕ ಮಾಡ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವು ಚಿಕ್ಕವರಿದ್ದಾಗ ಋತುಗಳ ಕಲ್ಪನೆಯನ್ನು ಹಿರಿಯರು ಸೊಗಸಾಗಿ ತಿಳಿಸುತ್ತಿದ್ದರು. ಮಗ್ಗಿ ಪುಸ್ತಕದಲ್ಲಿ ಎಲ್ಲಾ ಮಾಹಿತಿಯೂ ದೊರೆಯುತ್ತಿತ್ತು. ಆದರೆ ಈಗ ಅದೆಲ್ಲವೂ ಮರೆಯಾಗುತ್ತಿದೆ. ಋತುಗಳ ವಿಶೇಷತೆಯನ್ನು ತಿಳಿದುಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಋತುಗಳ ಮಹತ್ವನ್ನು ಹಾಗೂ ಅದಕ್ಕೆ ತಕ್ಕಂತೆ ನಾವು ಅಳವಡಿಸಿಕೊಳ್ಳಬಹುದಾದ ಜೀವನ ಶೈಲಿಯನ್ನು ರೂಡಿಸಿಕೊಳ್ಳಲು ಪುಸ್ತಕದ ಮೂಲಕ ಜ್ಞಾನ ಪಸರಣ ಅಗತ್ಯ ಎಂದು ಸಾಹಿತಿ ಯು. ವರಮಹಾಲಕ್ಷ್ಮೀ ಹೊಳ್ಳ ಹೇಳಿದರು. ಅವರು ಉಪ್ಪುಂದ ಶಂಕರ ಕಲಾಮಂದಿರದ ಕುಂದ ಅಧ್ಯಯನ ಕೇಂದ್ರದಲ್ಲಿ ಜರುಗಿದ ಸುವಿಚಾರ ಬಳಗದ ತಿಂಗಳ ಕಾರ್ಯಕ್ರಮದಲ್ಲಿ ವೈದ್ಯೆ ಹಾಗೂ ಲೇಖಕಿ ಡಾ. ಅನುರಾಧಾ ಕಾಮತ್ ಅವರು ಬರೆದಿರುವ ’ಋತು ವೈಭವ’ ಋತು ಸಂಬಂಧಿ ವಿಶೇಷತೆಗಳು ಹಾಗೂ ಆರೋಗ್ಯ ಮಾಹಿತಿಯುಳ್ಳ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಋತುಗಳು ನಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಯಾವ ಖಾಯಿಲೆ ಬರಬಹುದು, ನಮ್ಮ ಆಹಾರ ವಿಹಾರ ಹೇಗಿರಬೇಕು. ಈ ಸಂದರ್ಭದಲ್ಲಿ ಯಾವ ಯೋಗಾಭ್ಯಾಸ ಉತ್ತಮ. ಯಾವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ನೃತ್ಯ ವಸಂತ ನಾಟ್ಯಾಲಯದ ವಿದ್ಯಾರ್ಥಿನಿ ಬಿ. ಯುಕ್ತಿ ಉಡುಪ ಅವರು ಗೋಪೀನಾಥದಾಸ ನ್ಯಾಸ’ ನೃತ್ಯ ಮತ್ತು ಸಂಗೀತ ಸಂಸ್ಥೆ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಯುಕ್ತಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ತರಗತಿಯಲ್ಲಿ ಓದುತ್ತಿದ್ದು, ನೃತ್ಯ ವಸಂತ ನಾಟ್ಯಾಲಯ ಕುಂದಾಪುರದ ವಿದೂಷಿ ಪ್ರವಿತಾ ಅಶೋಕ್ ಅವರ ಶಿಷ್ಯೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಸರ್ಕಾರ ಮೀನುಗಾರರಿಗೆ ಸೀಮೆಎಣ್ಣೆ ಸಬ್ಸಿಡಿಯನ್ನು ಆರ್‌ಟಿಜಿಎಸ್ ಮೂಲಕ ಜಮೆ ಮಾಡಲು ಉದ್ದೇಶಿಸಿದ್ದು, ಇದರಿಂದ ಬಡ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಖರೀದಿಸಲು ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರ ಈ ಹಿಂದೆ ನೀಡುತ್ತಿದ್ದ ಸೀಮೆಎಣ್ಣೆ ಸಬ್ಸಿಡಿಯನ್ನು ಮುಂದುವರೆಸುವಂತೆ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಮೀನುಗಾರಿಕಾ ಸಚಿವ ಪ್ರಮೋದ ಮಧ್ವರಾಜ್, ರಾಜ್ಯಸಭಾ ಸದಸ್ಯ ಆಸ್ಕರ ಫೆರ್ನಾಂಡಿಸ್ ಸಮ್ಮುಖದಲ್ಲಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಉಪಾಧ್ಯಕ್ಷ ಗುರುನಾಥ ಪಟೇಲ್, ನಾಗಪ್ಪಯ್ಯ ಪಟೇಲ್, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸೋಮಶೇಖರ ಕೆ.ಎಂ., ಮಾಜಿ ಅಧ್ಯಕ್ಷ ಬಿ.ಎಚ್.ಕುಮಾರ್, ಕೋಶಾಧಿಕಾರಿ ಅಣ್ಣಯ್ಯ ಖಾರ್ವಿ ನೇತೃತ್ವದ ಮೀನುಗಾರರ ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅವರ ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದೆ. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸ್ತುತ ಮಾಧ್ಯಮಗಳ ಗುಣಮಟ್ಟದಲ್ಲಿ ಇಳಿಮುಖವಾಗುತ್ತಿದ್ದು ಹಿರಿಯರ ಮಾರ್ಗದಲ್ಲಿ ಅವರ ಆದರ್ಶದೊಂದಿಗೆ ಕಿರಿಯ ಪತ್ರಕರ್ತರು ಮುನ್ನಡೆದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಭಿಪ್ರಾಯ ಪಟ್ಟರು. ಅವರು ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲಾ ಘಟಕ ಪತ್ರಿಕಾ ದಿನದ ಗೌರವವನ್ನು ಮುನ್ನಾ ದಿನವಾದ ಶುಕ್ರವಾರ ಕಡಿಯಾಳಿಯ ಸ್ವಗೃಹದಲ್ಲಿ ಪ್ರದಾನಿಸಿ ಮಾತನಾಡಿದರು. ಸುಶೀಲಾ ದಾಮೋದರ್ ಐತಾಳ ಸಹಿತ ದಂಪತಿಯನ್ನು ಗೌರವಿಸಲಾಯಿತು. ಸರಳ ಮತ್ತು ನೇರ ಜೀವನ ನಡೆಸಿದ ದಾಮೋದರ ಐತಾಳರು ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಬಳಕೆದಾರ ವೇದಿಕೆಯ ಮೂಲಕ ಅವರ ಸೇವೆ ಅಮೂಲ್ಯವಾದುದು ಎಂದು ಅವರು ಅಭಿನಂದಿಸಿದರು. ಗ್ರಾಮೀಣ ಪತ್ರಕರ್ತರಿಗೆ ಕನಿಷ್ಟ ಗೌರವಧನ ಪಾವತಿಯಾಗಬೇಕು, ತುಳುವಿನಲ್ಲಿ ಉಪಗ್ರಹ ವಾಹಿನಿ, ತುಳು ದೈನಿಕ ಆರಂಭವಾಗ ಬೇಕು. ಪ್ರಾದೇಶಿಕ ಮತ್ತು ವೃತ್ತಿ ಪರ ಅಸಮತೋಲನ ತಪ್ಪ ಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ಶೇಖರ ಅಜೆಕಾರು ಹೇಳಿದರು. ಐತಾಳರಂತಹ ಅಪೂರ್ವ ವ್ಯಕ್ತಿಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೈತರಲ್ಲಿ ಹಾಗೂ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಡೆದಿದೆ. ಕೃಷಿ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದ ರೈತರನ್ನು ಪುನ: ಕೃಷಿ ಚಟುವಟಿಕೆಗಳಲ್ಲಿ ತೊಡಗಿಸುವಲ್ಲಿ ಯೋಜನೆ ಯಶಸ್ವಿಯಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯೋಜನೆಯ ಪಾತ್ರ ಬಹುಮುಖ್ಯ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ತ್ರಾಸಿಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಶ್ರೀ ಅಂಬಾ ಕಾಂಪ್ಲೆಕ್ಸ್‌ನಲ್ಲಿ ಜರಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ಇದರ ಕುಂದಾಪುರ ತಾಲೂಕಿನ ಬೈಂದೂರು ವಿಭಾಗದ ನೂತನ ಯೋಜನಾ ಕಛೇರಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರದ ಸಹಭಾಗಿತ್ವದೊಂದಿಗೆ ಸರಕಾರದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಉತ್ತಮ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಗ್ರಾಮದ ಅಭ್ಯುದಯದ ಜೊತೆಗೆ ದುರ್ಬಲ ವರ್ಗದವರ ಸಬಲೀಕರಣದ ಉದ್ದೇಶ ಹೊಂದಿರುವ ಡಾ.ಡಿ.ವೀರೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಡಿಮೆಯಾಗುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಗುರುತರವಾದ ಉದ್ದೇಶವನ್ನು ಹೊಂದಿದ್ದೇನೆ. ಹೊರತು ಅಧಿಕಾರಿಗಳಲ್ಲಿ ಭಯ ಹುಟ್ಟಿಸುವುದು ಹಾಗೂ ಅನಗತ್ಯ ಪ್ರಚಾರಗಿಟ್ಟಿಸುವುದು ನಮ್ಮ ಧ್ಯೇಯವಲ್ಲ ಎಂದು ರಾಜ್ಯ ಲೋಕಾಯುಕ್ತ ನ್ಯಾಯಮೂತಿ ಪಿ. ವಿಶ್ವನಾಥ ಶೆಟ್ಟಿ ಹೇಳಿದರು. ಅವರು ಕುಂದಾಪುರ ನ್ಯಾಯಾಲಯ ಸಂಕೀರ್ಣದಲ್ಲಿ ಬಾರ್ ಅಸೋಸಿಯೇಶನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಎಲ್ಲ ಬಾರ್ ಅಸೋಸಿಯೇಶನ್‌ಗಳಿಗೆ ಬೇಟಿ ನೀಡಿ ನ್ಯಾಯವಾದಿಗಳನ್ನು ಹಾಗೂ ಸಾರ್ವಜನಿಕರನ್ನು ಬೇಟಿ ಮಾಡಬೇಕು ಎನ್ನುವ ಉದ್ದೇಶ ಇದ್ದರೂ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಪ್ರಥಮ ಪ್ರಾಶಸ್ರ್ಯ ನೀಡುವ ಉದ್ದೇಶವಿದೆ. ಸಾಕಷ್ಟು ಪೂರ್ವ ಸಿದ್ದತೆಯಿಂದ ನ್ಯಾಯದಾನದ ವಿಷಯದಲ್ಲಿ ತೊಡಗಿಸಿಕೊಳ್ಳುವ ನ್ಯಾಯವಾದಿಗೆ ಯಶಸ್ಸು ಖಂಡಿತ ಇದೆ. ಜನಪರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರಗಳ ಸರಕಾರಗಳ ಯೋಜನೆಗಳು ಸಮಾಜದ ಸಾಮಾನ್ಯ ಜನರಿಗೂ ದೊರಕಬೇಕು ಎನ್ನುವುದು ನಮ್ಮ ಧ್ಯೇಯವಾಗಿದೆ ಎಂದರು. ಈ ಸಂದರ್ಭ ರಾಜ್ಯ ಲೋಕಾಯುಕ್ತ ನ್ಯಾಯಮೂತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಕುಂದಾಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ೨೦೧೭-೧೮ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿನವರಿಂದ ಬಂದ, ಎಲ್ಲರೂ ಒಂದಾಗಿ ಬಾಳೋಣ ಎಂಬ ಕಲ್ಪನೆಗಳು ಶಾಲೆಯಲ್ಲಿ ಮಾತ್ರ ಸಾಧ್ಯ. ಕಿವಿಯಿಂದ ಕೇಳಿದ ಪಾಠ ಮನಸ್ಸಿನೊಳಗೆ ಹೋಗದಿದ್ದರೆ ಏನೂ ಪ್ರಯೋಜನವಾಗದು. ಭಗವಂತ ಕೊಟ್ಟ ಸೂಕ್ಷ್ಮ ಅಂಗಾಗಗಳಲ್ಲಿ ಸಮರ್ಪಕ ವ್ಯವಸ್ಥೆಯಿದೆ. ಪ್ರತಿಯೊಂದನ್ನು ಶೃದ್ಧೆಯಿಂದ ಕಲಿತು ವಿಷಯಗಳನ್ನು ಸ್ವೀಕರಿಸಿ ಪುನಃ ಜಗತ್ತಿಗೆ ನೀಡುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ತನ್ನ ಅಧಿಕಾರದ ಅವಧಿಯಲ್ಲಿ ದೇವಳದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತೇನೆ ಎಂದರು. ಕಾಲೇಜಿನ ಪ್ರಾಂಶುಪಾಲ ಅರುಣಪ್ರಕಾಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಕಾಲೇಜಿನ ಹಳೆವಿದ್ಯಾರ್ಥಿಗಳಾದ ಜಯಂತ್ ಮತ್ತು ವೀರೇಂದ್ರ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ನೂತನ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ…
